An unconventional News Portal.

ಮಣ್ಣಲ್ಲಿ ಮಣ್ಣಾದ ರಾಕೇಶ್ ಸಿದ್ಧರಾಮಯ್ಯ

ಮಣ್ಣಲ್ಲಿ ಮಣ್ಣಾದ ರಾಕೇಶ್ ಸಿದ್ಧರಾಮಯ್ಯ

39 ವರ್ಷಗಳ ತುಂಬು ಜೀವನ ಬಾಳಿದ ರಾಕೇಶ್ ಸಿದ್ಧರಾಮಯ್ಯ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಮೈಸೂರಿನ ಟಿ.ಕಾಟೂರಿನ ತೋಟದ ಮನೆಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮೈಸೂರಿನ ವರುಣಾ ಕ್ಷೇತ್ರ ಮತ್ತು ಸಿದ್ಧರಾಮಯ್ಯನವರ ಹುಟ್ಟೂರು ಸಿದ್ಧರಾಮನ ಹುಂಡಿಯಿಂದ ಬಂದ ಅಭಿಮಾನಿಗಳು ಹಾಗೂ ನಾಡಿನ ಅಪಾರ ಜನಸ್ತೋಮ ರಾಕೇಶ್ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಸಾಕ್ಷಿಯಾಯಿತು. ಮಠಾಧೀಶರು, ರಾಜಕಾರಣಿಗಳು, ಸಿನಿಮಾ ನಟರು ಅಂತಿಮ ನಮನ ಸಲ್ಲಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ರಾಕೇಶ್ ಅವರ ಮೃತದೇಹ ಬೆಲ್ಜಿಯಂನಿಂದ ಸೌದಿ ಮಾರ್ಗವಾಗಿ ಸೋಮವಾರ ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿಂದ ನಾಲ್ಕು ವಿಶೇಷ ವಿಮಾನಗಳಲ್ಲಿ ಪಾರ್ಥಿವ ಶರೀರದೊಂದಿಗೆ ಕುಟುಂಬಸ್ಥರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದರು. ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅಂತಿಮ ದರ್ಶನದ ನಂತರ ಶರೀರವನ್ನು ಅಂತ್ಯಸಂಸ್ಕಾರ ಮಾಡಲಾಯಿತು.

ರಾಕೇಶ್ ಅವರ ಅಂತಿಮ ಯಾತ್ರೆ ಹೀಗಿತ್ತು,

9:10 ರಾಕೇಶ್ ಸಿದ್ದರಾಮಯ್ಯ ಮೃತದೇಹ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಆಗಮನ. ಅಲ್ಲಿಂದ ಐದು ವಿಮಾನಗಳಲ್ಲಿ ಕುಟುಂಬಸ್ಥರೊಂದಿಗೆ ಪಾರ್ಥಿವ ಶರೀರ ಮೈಸೂರಿಗೆ ರವಾನೆ.

11:24 ಪಾರ್ಥಿವ ಶರೀರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ. ವಿಶೇಷ ವಿಮಾನದಲ್ಲಿ ಆಮಿಸಿದ ಮುಖ್ಯಮಂತ್ರಿ ಮತ್ತು ಕುಟುಂಬಸ್ಥರು. ವಿಮಾನ ನಿಲ್ದಾಣದಲ್ಲೇ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯಿಂದ ಸಿದ್ದರಾಮಯ್ಯರಿಗೆ ಸಾಂತ್ವಾನ.

12:18 ವಿಮಾನ ನಿಲ್ದಾಣದಿಂದ ದಸರಾ ವಸ್ತು ಪ್ರದರ್ಶನ ಮೈದಾನದತ್ತ ಆ್ಯಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ರವಾನೆ.

12:48 ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಪಾರ್ಥಿವ ಶರೀರ ಆಗಮನ. ಅಂತಿಮ ದರ್ಶನಕ್ಕೆ ನೂಕು ನುಗ್ಗಲು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ.rakesh siddaramayy

12:59 ಗಣ್ಯರಿಂದ ಅಂತಿಮ ನಮನ ಸಲ್ಲಿಕೆ. ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವರಾದ ಸದಾನಂದ ಗೌಡ, ಮಾಜಿ ಕೇಂದ್ರ ಸಚಿವರಾದ ವೀರಪ್ಪ ಮೋಯ್ಲಿ, ಮುನಿಯಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ರಾಜ್ಯಪಾಲ ವಜೂಭಾಯಿ ವಾಲಾ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ ಕುಮಾರ ಸ್ವಾಮಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿ ಸಚಿವರು, ಶಾಸಕರು, ಮಠಾಧೀಶರು ಹಾಗೂ ಸಿನಿಮಾ ಕಲಾವಿದರಿಂದ ಅಂತಿಮ ನಮನ ಸಲ್ಲಿಕೆ. ಈ ಸಂದರ್ಭ ಪಾರ್ಥಿವ ಶರೀರದ ಬಳಿ ಮುಖ್ಯಮಂತ್ರಿಗಳು ಅಳುತ್ತಾ ನಿಂತಿದ್ದರು. ಮಗನ ಸಾವಿನ ನೋವು ಅವರ ಮುಖದಲ್ಲಿ ಕಂಡು ಬಂತು. ತಂದೆ ಸಿದ್ದರಾಮಯ್ಯನವರ ದುಖಃಕ್ಕೆ ಸದಾನಂದ ಗೌಡ ಸೇರಿದಂತೆ ಹಲವರು ಜತೆಯಾದರು. ಎಲ್ಲರ ಮುಖದಲ್ಲೂ ಕಣ್ಣೀರು ಹರಿಯುತ್ತಿರುವುದು ಕಂಡು ಬಂತು.

1:10 ಸಾರ್ವಜನಿಕರಿಂದ ಪಾರ್ಥಿವ ಶರೀರದ ಅಂತಿಮ ದರ್ಶನ. ನಾಡಿನ ಮೂಲೆ ಮೂಲೆಯಿಂದ ಬಂದ ಸಾವಿರಾರು ಜನರಿಂದ ಅಂತಿಮ ನಮನ ಸಲ್ಲಿಕೆ.

2:40 ಟಿ.ಕಾಟೂರಿನತ್ತ ಪಾರ್ಥಿವ ಶರೀರದ ಅಂತಿಮ ಯಾತ್ರೆ.

4:30 ರ ಸುಮಾರಿಗೆ ಹಾಲುಮತ ಸಂಪ್ರದಾಯದಂತೆ ಟಿ ಕಾಟೂರಿನ ತೋಟದ ಮನೆಯಲ್ಲಿ ಅಂತ್ಯ ಸಂಸ್ಕಾರ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಮಗ ಧವನ್ ರಾಕೇಶ್ ರಿಂದ ಅಂತ್ಯ ಸಂಸ್ಕಾರ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top