An unconventional News Portal.

‘ಸಾಮಾಜಿಕ’ ಅವಹೇಳನ: ‘ಟ್ವಿಟರ್’ಗೆ ಪತ್ರಕರ್ತ ರಾಜ್ದೀಪ್ ಗುಡ್ ಬೈ!

‘ಸಾಮಾಜಿಕ’ ಅವಹೇಳನ: ‘ಟ್ವಿಟರ್’ಗೆ ಪತ್ರಕರ್ತ ರಾಜ್ದೀಪ್ ಗುಡ್ ಬೈ!

ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ನಡೆದ ಬೆಳವಣಿಗೆಯೊಂದರಲ್ಲಿ, ‘ಇಂಡಿಯಾ ಟುಡೆ’ ಸಂಪಾದಕೀಯ ವಿಭಾಗದ ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ, ‘ಟ್ವಿಟರ್’ನಿಂದ ಹೊರ ಬಂದಿದ್ದಾರೆ.

ದೇಶದ ನೇರ ನುಡಿಯ ಪತ್ರಕರ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ರಾಜ್ದೀಪ್, ನರೇಂದ್ರ ಮೋದಿ ಅಭಿಮಾನಿಗಳಿಂದ ಆಗಾಗ್ಗೆ ಟೀಕೆಗೆ ಒಳಗಾಗುತ್ತಲೇ ಬಂದವರು. ಈ ಹಿಂದೆ, ‘ಟ್ವಿಟರ್ ಮೂಲಕ ವೈಯುಕ್ತಿಕ ಅಭಿಪ್ರಾಯಗಳಿಗೆ ಕೀಳು ಮಟ್ಟದ ಪ್ರತಿಕ್ರಿಯೆ ಮಾಡುತ್ತಿರುವವರು, ದೇಶದ ನಾಯಕ ನರೇಂದ್ರ ಮೋದಿ ಅವರ ಅಭಿಮಾನಿಗಳು’ ಎಂದು ನೇರವಾಗಿಯೇ ಆರೋಪ ಮಾಡಿದ್ದರು.

ಇದೀಗ, ಅವರು ಟ್ವಿಟರ್ ಬಳಕೆಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ‘ಎಲ್ಲವಕ್ಕೂ ಒಂದು ಮಿತಿ ಇರುತ್ತದೆ’ ಎಂದು ತಮ್ಮ ಕೊನೆಯ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

rajdeep-final-tweet

ಈ ಹಿಂದೆಯೂ ರಾಜ್ದೀಪ್ ತಮ್ಮ ವಿರುದ್ಧ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಟೀಕೆಗಳು ಬರುತ್ತಿವೆ ಎಂದು ದೂರಿದ್ದರು. ಒಂದು ಪ್ರಕರಣದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರು. ತಮ್ಮ ಮೊಬೈಲ್ ನಂಬರನ್ನು ಬಹಿರಂಗಗೊಳಿಸಿದ ಯುವಕನ ವಿರುದ್ಧ ದೂದು ದಾಖಲಿಸಿದ್ದರು. ಇದೀಗ, ರಾಜ್ದೀಪ್ ಟ್ವಿಟರ್ ನಿಂದಲೇ ಹೊರ ನಡೆಯುವುದಾಗಿ ಪ್ರಕಟಿಸಿದ್ದಾರೆ.

ಅವರು ಕೆಲವು ಟ್ವಿಟರ್ ಖಾತೆಗಳಿಗೆ ಪ್ರತಿಕ್ರಿಯೆ ರೂಪದಲ್ಲಿ ಕೆಟ್ಟದಾಗಿ ಮೆಸೇಜ್ ಕಳಿಸಿದ್ದಾರೆ ಎಂದು ಟ್ವಿಟರ್ನಲ್ಲಿ ಆರೋಪಿಸಲಾಗುತ್ತಿದೆ. ಇವುಗಳ ಸತ್ಯಾಸತ್ಯತೆಯನ್ನು ಇನ್ನೂ ಪರಿಶೀಲಿಸಬೇಕಿದೆ.

rajdeep-reaction-1 rajdeep-reaction-2

ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ನಡೆಯುತ್ತಿದ್ದ ಸೈದ್ಧಾಂತಿಕ ಕದನ ವೈಯುಕ್ತಿಕ ಮಟ್ಟಕ್ಕೆ ಇಳಿದಿದೆ. ಪರಿಣಾಮ ರಾಜ್ದೀಪ್ ಸರ್ದೇಸಾಯಿತಮ್ಮ ಖಾತೆಯನ್ನು ಇವತ್ತಿಗೆ ಬಂದ್ ಮಾಡಲಿದ್ದಾರೆ.

Top