An unconventional News Portal.

ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಷ್ಟ್ರೀಯ ಪತ್ರಕರ್ತರ ‘ಸಾಮಾಜಿಕ ಅವಹೇಳನ’

ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಷ್ಟ್ರೀಯ ಪತ್ರಕರ್ತರ ‘ಸಾಮಾಜಿಕ ಅವಹೇಳನ’

ಹಿರಿಯ ಪತ್ರಕರ್ತ, ಇಂಡಿಯಾ ಟುಡೇ ಗ್ರೂಪ್ ಸಂಪಾದಕೀಯ ಸಲಹೆಗಾರ ರಾಜ್ ದೀಪ್ ಸರ್ದೇಸಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಮೊಬೈಲ್ ನಂಬರನ್ನು ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಲಾಗಿದೆ ಎಂದು  ಚಂದನ್ ಪಟಿಹಾಸ್ಟ್ ಎಂಬಾತನ ವಿರುದ್ಧ ಪೊಲೀಸ್ ಗೆ ದೂರು ನೀಡಿದ್ದಾರೆ. ಈತ ಹಿಂದೂ ಪರ ಸಂಘಟನೆ ಸದಸ್ಯನಾಗಿದ್ದು, ಎಎಪಿಯ ಹೆಸರಿನಲ್ಲಿ ಪೇಸ್ ಬುಕ್ ಅಕೌಂಟ್ ಹೊಂದಿದ್ದ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ.

ಅದು ಮಾರ್ಚ್ 23 ರಾತ್ರಿ. ದೆಹಲಿಯಲ್ಲಿ ದಂತವೈದ್ಯ ಡಾ ಪಂಕಜ್ ನಾರಂಗ್ ರನ್ನು ಮನೆಯಿಂದ ಹೊರಗೆಳೆದ ಗುಂಪೊಂದು, ಕ್ರಿಕೆಟ್ ಬ್ಯಾಟ್, ಹಾಕಿ ಸ್ಟಿಕ್ ನಿಂದ ಅಮಾನವೀಯವಾಗಿ ಹಲ್ಲೆ ನಡೆಸಿ ಕೊಂದು ಹಾಕಿತ್ತು. ಈ ಕೊಲೆ ಘಟನೆಯನ್ನು ವಿವಿಧ ಮಾಧ್ಯಮಗಳು ಬೇರೆ ಬೇರೆ ರೀತಿಯಲ್ಲಿ ವರದಿ ಮಾಡಿದವು.

ಮಾಧ್ಯಮಗಳು ಘಟನೆಯನ್ನು ವರದಿ ಮಾಡಿದ ರೀತಿಗೆ ಆರಂಭದಲ್ಲೇ ಅಪಸ್ವರ ಕೇಳಿ ಬಂತು. ಮುಸ್ಲಿಂನನ್ನು ಕೊಂದರೆ ಹಿಂದೂ ಗುಂಪು ಕೊಲೆ ಮಾಡಿತು ಎನ್ನುತ್ತೀರಿ, ಇಲ್ಲೇಕೆ ಮುಸ್ಲೀಂ ಗುಂಪು ಕೊಲೆ ಮಾಡಿತು ಎನ್ನುತ್ತಿಲ್ಲ? ಎಂದು ಮಾಧ್ಯಮಗಳ ವರದಿಗಾರಿಕೆ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿಸಿದರು. ಆದರೆ, “ಬಂಧಿತ 9 ಆರೋಪಿಗಳಲ್ಲಿ 4 ಜನ ಹಿಂದೂಗಳು,” ಎಂದು ದಿಲ್ಲಿ ಪೊಲೀಸರು ಸಮಜಾಯಿಷಿ ನೀಡುವ ಮೂಲಕ ಗಾಳಿ ಸುದ್ದಿಯನ್ನು ತಡೆಯಲು ಪ್ರಯತ್ನ ನಡೆಸಿದರು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮತಮ್ಮ ಮೂಗಿನ ನೇರಕ್ಕೆ ಘಟನೆ ಕುರಿತು ಗಾಳಿ ಸುದ್ದಿ ಹಬ್ಬಿಸುವುದು ಮುಂದುವರಿಯಿತು. ಈ ಸಮಯದಲ್ಲಿ ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಮೊಬೈಲ್ ನಂಬರ್ ಫೇಸ್ ಬುಕ್ ನಲ್ಲಿ ಬಹಿರಂಗವಾಯ್ತು. ಇದೇ ವಿಷಯವಾಗಿ ತನ್ನ ಖಾಸಗಿ ಬದುಕಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ, ಫೇಸ್ ಬುಕ್ ಬಳಕೆದಾರನ ವಿರುದ್ಧ ದೂರು ದಾಖಲಿಸಿದರು ರಾಜ್ ದೀಪ್. ‘ನನ್ನ ನಂಬರನ್ನು ಫೇಸ್ ಬುಕ್ ನಲ್ಲಿ ಹಾಕಿರುವುದರಿಂದ ಬೆಳಗ್ಗೆಯಿಂದ ಕರೆಗಳು ಬರುತ್ತಿವೆ. ಇದರಿಂದ ನನ್ನ ವಯುಕ್ತಿಕ ಬದುಕಿಗೆ ಧಕ್ಕೆಯಾಗಿದೆ’ ಎಂದು ದೂರಿನಲ್ಲಿ ರಾಜ್ ದೀಪ್ ಹೇಳಿಕೊಂಡಿದ್ದರು. ಅದೇ ಆರೋಪಿ ಫೇಸ್ ಬುಕ್ ನಲ್ಲಿ ಆಜ್ ತಕ್ ವಾಹಿನಿಯ ಪತ್ರಕರ್ತ ಅಂಜಾನಾ ಓಮ್ ಕಶ್ಯಪ್ ನಂಬರ್ ಕೂಡಾ ಬಹಿರಂಗ ಪಡಿಸಿದ್ದಾನೆ. ಇನ್ನು ಎನ್ ಡಿವಿಯ ಪತ್ರಕರ್ತ ರವೀಶ್ ಕುಮಾರ್ ನಂಬರ್ ನೀಡಿ, ಅದನ್ನೂ ಬಹಿರಂಗ ಪಡಿಸುತ್ತೇನೆ ಎಂದು ಸವಾಲೆಸೆದಿದ್ದ.

ಇನ್ನು ಈ ಕುರಿತು ಟ್ವೀಟ್ ಮಾಡಿರುವ ರಾಜ್ ದೀಪ್ ಸರ್ದೇಸಾಯಿ, ‘ಬೆಳಗ್ಗೆಯಿಂದ ಫೋನ್ ಮಾಡಿ ಕಾಟ ಕೊಡ್ತಿದ್ದಾರೆ. ನನ್ನ ಖಾಸಗೀತನ ಏನಾಗಬೇಕು? ಡಾ ನಾರಂಗ್ ಹತ್ಯೆಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಬೇಡಿಕೆಯೂ ಆಗಿದೆ’ ಎಂದು ಹೇಳಿಕೊಂಡರು.

ಫೇಸ್ ಬುಕ್ ಬಳಕೆದಾರ ಚಂದನ್ ಪಟಿಹಾಸ್ಟ್ ಎಂದು ಅಕೌಂಟ್ ಹೇಳುತ್ತಿದೆ. ತಾನು ರಾಜಸ್ಥಾನದ ಕೋಟಾದ ಎಎಪಿ ವಿದ್ಯಾರ್ಥಿ ಘಟಕ ಸಿವೈಎಸ್ಎಸ್ ಅಧ್ಯಕ್ಷ ಎಂದು ಅಕೌಂಟ್ ನಲ್ಲಿದೆ. ಆದರೆ ‘ಅಲ್ಲಿ ತಮ್ಮ ಯಾವುದೇ ವಿದ್ಯಾರ್ಥಿ ಘಟಕ ಇಲ್ಲ. ಈತ ಸಂಘ ಪರಿವಾರಕ್ಕೆ ಸೇರಿದವನಾಗಿದ್ದು ಎಎಪಿ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾನೆ’ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಈ ಮೂಲಕ ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ #ಪ್ರೆಸ್ಟಿಟ್ಯೂಟ್ಸ್ ಎಂದು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ರಾಷ್ಟ್ರೀಯ ಪತ್ರಕರ್ತರು ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರುವ ಅನಿವಾರ್ಯತೆ ಎದುರಾಗಿದೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top