An unconventional News Portal.

‘ರಾಜಕಾಲುವೆ ಬಚಾವೋ’: ಒತ್ತುವರಿ ವಿಚಾರದಲ್ಲಿ ಮಧ್ಯಮ ವರ್ಗದ ಬುಡಕ್ಕೆ ಕೈ ಇಟ್ಟ ಬಿಬಿಎಂಪಿ!

‘ರಾಜಕಾಲುವೆ ಬಚಾವೋ’: ಒತ್ತುವರಿ ವಿಚಾರದಲ್ಲಿ ಮಧ್ಯಮ ವರ್ಗದ ಬುಡಕ್ಕೆ ಕೈ ಇಟ್ಟ ಬಿಬಿಎಂಪಿ!

ಈ ಹಿಂದೆ ಒತ್ತುವರಿ ತೆರವು ವಿಚಾರ ಬಂದಾಗೆಲ್ಲಾ ಕೊಳೆಗೇರಿಗಳಿಗೆ ಸೀಮಿತವಾಗಿದ್ದ ಬಿಬಿಎಂಪಿ, ಕೊನೆಗೂ ಮಧ್ಯಮ ವರ್ಗದ ಅಪಾರ್ಟ್ಮೆಂಟ್ಗಳಿಗೆ ಕೈ ಇಟ್ಟಿದೆ. ಶನಿವಾರ ಮುಂಜಾನೆ ಬೊಮ್ಮನಹಳ್ಳಿ, ಮಹದೇವಪುರ ವ್ಯಾಪ್ತಿಯ ಕಸವನಹಳ್ಳಿಯಿಂದ ಚೋಳನಹಳ್ಳಿವೆರೆಗೆ, ಕೈಗೊಂಡನಹಳ್ಳಿ, ಕೋಡಿ ಚಿಕ್ಕನಹಳ್ಳಿ, ಅನುಗ್ರಹ ಬಡಾವಣೆ, ಅವನಿ ಶೃಂಗೇರಿ ನಗರ, ಯಲಹಂಕ ವ್ಯಾಪ್ತಿಯ ಶಿವನಹಳ್ಳಿ, ಮಡಿವಾಳ, ಬಿಟಿಎಂ ಲೇಔಟ್, ಬನ್ನೇರುಘಟ್ಟದ ಅರಕೆರೆ ವಾರ್ಡ್ ವ್ಯಾಪ್ತಿಯಲ್ಲಿ ಅಕ್ರಮ ನಿವೇಶನ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ಅಪಾರ್ಟ್ಮೆಂಟ್ಗಳನ್ನು ಜೆಸಿಬಿಗಳು ನೆಲಸಮ ಮಾಡುತ್ತ ಮುಂದುವರಿದಿದ್ದು, ಮಧ್ಯಮ ವರ್ಗದವರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ; ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 1.1 ಕಿಲೋಮೀಟರ್ ಉದ್ದದ ರಾಜಕಾಲುವೆಯಲ್ಲಿ 7500 ಚದರ ಅಡಿ ಜಾಗವನ್ನು ತೆರವು ಮಾಡುವ ಕಾರ್ಯಾಚರಣೆ ಜಾರಿಯಲ್ಲಿದೆ.

ಜುಲೈ 29 ರಂದು ಬೆಂಗಳೂರಿನಲ್ಲಿ ಸುರಿದ ಮಳೆಗೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಈಗ ಇದಾಗಿ 8 ದಿನಗಳ ನಂತರ ಬಿಬಿಎಂಪಿ ಕಠಿಣ ನಿರ್ಧಾರ ತಾಳಿದ್ದು ರಾಜ ಕಾಲುವೆ ಒತ್ತುವರಿ ತೆರವಿಗೆ ಮುಂದಾಗಿದೆ. ಶನಿವಾರ ಕಂದಾಯ ಇಲಾಖೆ, ಸರ್ವೆ ಇಲಾಖೆ, ಬಿಎಂಟಿಎಫ್ ಅಧಿಕಾರಿಗಳ ಸಹಾಯದೊಂದಿಗೆ ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ನೂರಕ್ಕೂ ಹೆಚ್ಚು ಪೊಲೀಸರ ರಕ್ಷಣೆಯಲ್ಲಿ, ಬಿಬಿಎಂಪಿ ಸಿಬ್ಬಂದಿ ಮತ್ತು ಜೆಸಿಬಿ ಯಂತ್ರಗಳಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

“ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶದ ಮೇರೆಗೆ ಈ ತೆರವು ಕೆಲಸ ಕೈಗೆತ್ತಿಕೊಂಡಿದ್ದೇವೆ,” ಎಂದು ಮೇಯರ್ ಮಂಜುನಾಥ ರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.  ಈ ಸಂದರ್ಭ ಅವರು “ಯಾರೇ ಒತ್ತುವರಿ ಮಾಡಿದ್ದರೂ ಬಿಡುವುದಿಲ್ಲ, ತೆರವು ಮಾಡಿಯೇ ಸಿದ್ಧ,” ಎಂದಿದ್ದಾರೆ.

ನೋಟಿಸ್ ನೀಡುವ ಅವಶ್ಯಕತೆ ಇಲ್ಲದಿದ್ದರೂ, ಬಿಬಿಎಂಪಿಯಿಂದ ಮನೆಗಳನ್ನು ಗುರುತು ಮಾಡಿ, 32 ಕಡೆಗಳಲ್ಲಿ ಎರಡು ದಿನ ಹಿಂದೆಯೇ ನೋಟಿಸ್ ಜಾರಿ ಮಾಡಲಾಗಿತ್ತು. ಹೀಗಿದ್ದೂ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯೀತು.

ಮಾಧ್ಯಮದವರ ಮೇಲೆ ಹಲ್ಲೆ ಯತ್ನ

BBMP land encroachmentತೆರವು ಕಾರ್ಯಾಚರಣೆ ವೀಡಿಯೋ ಮಾಡಲು ಬಂದ ದೃಶ್ಯ ಮಾಧ್ಯಮದ ಮೇಲೆ ಹೆಣ್ಣು ಮಕ್ಕಳು ಹಲ್ಲೆ ಯತ್ನ ನಡೆಸಿದರು. ವೀಡಿಯೋ ರೆಕಾರ್ಡ್ ಮಾಡುವುದನ್ನು ಆಕ್ಷೇಪಿಸಿದ ಯುವತಿಯರು ಬೈಯುತ್ತಾ ತಡೆಯುವ ಪ್ರಯತ್ನ ನಡೆಸಿದರು. ಕೊನೆಗೆ ಪೊಲೀಸರು ಮಧ್ಯ್ರವೇಶಿಸಿ ಯುವತಿಯರನ್ನು ತಡೆದರು.

ಬಿಬಿಎಂಪಿ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಮತ್ತು ಮುನಿವೀರಪ್ಪ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಯುತ್ತಿದೆ.

ಈವರೆಗೆ ಬಿಬಿಎಂಪಿ ಸ್ಲಂ ಮಾತ್ರ ಖಾಲಿ ಮಾಡುತ್ತಿದ್ದರಿಂದ ಮಧ್ಯಮವರ್ಗದ ಜನರು ನಿರುಮ್ಮಳವಾಗಿದ್ದರು. ಆದರೆ ಈಗ ಮಧ್ಯಮವರ್ಗದವರೂ ತಾವೂ ವಾಸ ಮಾಡುತ್ತಿರುವ ಜಾಗದ ಬಗ್ಗೆ ಒಮ್ಮೆಯಾದರೂ ಯೋಚಿಸುವಂತೆ ಮಾಡಿದೆ ಬಿಬಿಎಂಪಿ ಅಧಿಕಾರಿಗಳ ಈ ಕೆಲಸ.

ಚಿತ್ರ ಕೃಪೆ: ಉದಯವಾಣಿ (ಸಾಂದರ್ಭಿಕ ಚಿತ್ರ), ಜನಶ್ರೀ ಸ್ಕ್ರೀನ್ ಗ್ರಾಬ್.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top