An unconventional News Portal.

‘ಮೇಡಂ, ನಿಮ್ಮ ಪತಿಯನ್ನೇಕೆ ಫಾಲೋ ಮಾಡಲ್ಲ?’; ಸುಷ್ಮಾಗೆ ಕೇಳಿದ ಪ್ರಶ್ನೆಗೆ ಸ್ವರಾಜ್ ಚಟಾಕಿ!

‘ಮೇಡಂ, ನಿಮ್ಮ ಪತಿಯನ್ನೇಕೆ ಫಾಲೋ ಮಾಡಲ್ಲ?’; ಸುಷ್ಮಾಗೆ ಕೇಳಿದ ಪ್ರಶ್ನೆಗೆ ಸ್ವರಾಜ್ ಚಟಾಕಿ!

ಟ್ವಿಟ್ಟರಿನಲ್ಲಿ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಹಿಂಬಾಲಿಸುವವರಿಗೆ ಅವರೆಂಥಾ ಹಾಸ್ಯ ಪ್ರಜ್ಞೆಯ ಮಹಿಳೆ ಎನ್ನುವ ಅರಿವಿರುತ್ತೆ. ಆದರೆ ಆಕೆಯ ಗಂಡ, ವಕೀಲ ಸ್ವರಾಜ್ ಕೌಶಲ್ ಕೂಡಾ ಅವರಂತೆಯೇ ವಿಟ್ ಇರುವ ಮನುಷ್ಯ ಎಂದು ಗೊತ್ತಾಗಿದ್ದು ಈ ಟ್ವೀಟ್ನಿಂದ.

ಸ್ವರಾಜ್ ಮತ್ತು ಸುಷ್ಮಾ ಇಬ್ಬರೂ ಬಹಳ ಕಾಲದಿಂದ ಟ್ವಿಟ್ಟರ್ ಬಳಸುತ್ತಾರೆ. ಆದರೆ ವಿಚಿತ್ರವೆಂದರೆ ಸ್ವರಾಜ್ ಸುಷ್ಮಾ ಹಿಂಬಾಲಕರಲ್ಲಿ ಸೇರಿದ್ದರೂ, ಸುಷ್ಮಾ ಯಾವತ್ತೂ ಪತಿಯ ಫಾಲೋವರ್ಸ್ ಗುಂಪು ಸೇರಿಲ್ಲ.sushma-swaraj-tweet

ಮದುವೆಯಲ್ಲಿ ಸುಷ್ಮಾ ಮತ್ತು ಸ್ವರಾಜ್

ಮದುವೆಯಲ್ಲಿ ಸುಷ್ಮಾ ಮತ್ತು ಸ್ವರಾಜ್

ಕೊನೆಗೊಬ್ಬರು ಕುತೂಹಲ ತಡೆಯಲಾಗದೆ, ಇದೇ ಪ್ರಶ್ನೆಯನ್ನು ಮಾನ್ಯ ವಿದೇಶಾಂಗ ಮಂತ್ರಿಗಳ ಮುಂದಿಟ್ಟಿದ್ದಾರೆ. ಸಂದೇಶಗಳನ್ನು ಹಂಚಿಕೊಳ್ಳುವ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರಿನಲ್ಲಿ ಶಿಶಿರ್ ನಾಯಕ್ ಎನ್ನುವ ವ್ಯಕ್ತಿ, “ಮೇಡಮ್ ಸುಷ್ಮಾ ಸ್ವರಾಜ್ ನಿಮ್ಮನ್ನು ಸ್ವರಾಜ್ ಕೌಶಲ್ ಟ್ವಿಟ್ಟರಿನಲ್ಲಿ ಫಾಲೋ ಮಾಡುತ್ತಿದ್ದಾರೆ. ಆದರೆ ನೀವ್ಯಾಕೆ ಸ್ವರಾಜ್ ಅವರನ್ನು ಫಾಲೋ ಮಾಡುತ್ತಿಲ್ಲ,” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸುಷ್ಮಾ ಉತ್ತರಿಸುವ ಬದಲು ಈ ಭಾರಿ ಕೀ ಬೋರ್ಡ್ ಕೈಗೆತ್ತಿಕೊಂಡು ಸ್ವರಾಜ್ ಕೌಶಲ್ ಉತ್ತರಿಸಿದ್ದಾರೆ. “ನಾನು ಆಕೆಯನ್ನು 45 ವರ್ಷಗಳಿಂದ ಫಾಲೋ ಮಾಡುತ್ತಿದ್ದೇನೆ. ಅದನ್ನ ಈಗ ಬದಲಾಯಿಲು ಸಾಧ್ಯವಿಲ್ಲ,” ಎಂದು ಚಟಾಕಿ ಹಾರಿಸಿದ್ದಾರೆ.

ಕೌಶಲ್ ಹೀಗೆ ಟ್ವೀಟ್ ಮಾಡುತ್ತಿದ್ದಂತೆ ಅವರ ಅರ್ಧಾಂಗಿ ಸುಷ್ಮಾ ಕೂಡಾ ಇದನ್ನು ರೀ ಟ್ವೀಟ್ ಮಾಡಿದ್ದಾರೆ.

ಅಂದ ಹಾಗೆ ಜುಲೈ 13ರಂದು ಇವರ ಮದುವೆ ವಾರ್ಷಿಕೊತ್ಸವ. ಅವತ್ತು ಸುಷ್ಮಾ ತಮ್ಮ ಮದುವೆಯ ಹಳೇ ಫೋಟೋ ಶೇರ್ ಮಾಡಿದ್ದಾರೆ. ಮದುವೆ ಉಡುಗೆಯಲ್ಲಿ ಪತಿ ಪತ್ನಿಯ ಫೊಟೋ ಶೂಟ್ ಬಾವಚಿತ್ರವಿದು. ಇದಾಗಿ ಸ್ವಲ್ಪ ದಿನಕ್ಕೆ ಸ್ವರಾಜ್ ತಮ್ಮ ಪತಿ ಪಾರ್ಲಿಮೆಂಟಿನಲ್ಲಿ ಭೇಟಿಯಾದ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಎರಡೂ ಫೋಟೋಗಳು ಈಗ ಟ್ವಿಟ್ಟರಿನಲ್ಲಿ ಎಲ್ಲೆಂದರಲ್ಲಿ ಹರಿದಾಡುತ್ತಿವೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top