An unconventional News Portal.

ಮುಕ್ತ ಸಮಾಜದ ಕನಸು ಕಂಡಿದ್ದ ಈಕೆ ಪಾಲಿಗೆ ಧರ್ಮಾಂಧ ಅಣ್ಣನೇ ಕಂಟಕನಾದ!

ಮುಕ್ತ ಸಮಾಜದ ಕನಸು ಕಂಡಿದ್ದ ಈಕೆ ಪಾಲಿಗೆ ಧರ್ಮಾಂಧ ಅಣ್ಣನೇ ಕಂಟಕನಾದ!

ಪಾಕಿಸ್ತಾನದಲ್ಲಿ ಭಾರಿ ವಿವಾದ ಹುಟ್ಟು ಹಾಕಿದ್ದ ಸೆಲೆಬ್ರಿಟಿ ಕ್ವಾಂಡಿಲ್ ಬಲೋಚ್ ದುರಂತ ಅಂತ್ಯ ಕಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪೋಸ್ಟ್ ಗಳು ಮತ್ತು ಹಸಿಬಿಸಿ ಚಿತ್ರಗಳಿಂದಲೇ ಸುದ್ದಿಯಾಗಿದ್ದ ಆಕೆಯನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ.

‘ಕ್ವಾಂಡಿಲ್ ಬಲೋಚ್ರನ್ನು ಆಕೆಯ ಸಹೋದರನೇ ಕೊಲೆ ಮಾಡಿದ್ದಾನೆ. ಇದೊಂದು ‘ಮರ್ಯಾದಾ ಹತ್ಯೆ’ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.13221676_846253725519381_8786855684113120491_n

26 ವರ್ಷದ ಕ್ವಾಂಡಿಲ್ ಬಲೋಚ್ ತನ್ನ ಪೋಸ್ಟ್ ಗಳು ಮತ್ತು ಗಮನ ಸೆಳೆಯುವ ಚಿತ್ರಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದಾಕೆ. ಕಳೆದ ಟಿ-20 ವಿಶ್ವಕಪ್ ವೇಳೆ ಭಾರತ ವಿರುದ್ಧ ಪಾಕಿಸ್ತಾನ ಗೆದ್ದಿದ್ದೇ ಆದರೆ ತಾನು ನಗ್ನಳಾಗುತ್ತೇನೆ ಎಂದು ಪೂನಂ ಪಾಂಡೆ ಶೈಲಿಯಲ್ಲಿ ಹೇಳಿಕೆ ನೀಡಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಆಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಚಿತ್ರವೊಂದು ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಮುಸ್ಲಿಂ ಧರ್ಮಗುರು ಮುಫ್ತಿ ಕ್ವಾವಿ ಜತೆಗಿನ ಆ ಫೋಟೋ ಈಗ ಆಕೆಯ ಜೀವವನ್ನೇ ಬಲಿ ತೆಗೆದುಕೊಂಡಿದೆ.

‘ಮನೆ ಮರ್ಯಾದೆ ಕಳೆಯುತ್ತಾರೆ’ ಎಂಬ ಕಾರಣಕ್ಕೆ ಪಾಕಿಸ್ತಾನದಲ್ಲಿ ಮಹಿಳೆಯರನ್ನು ಕುಟುಂಬದ ಸದಸ್ಯರೇ ಹತ್ಯೆ ಮಾಡುವ ಘಟನೆಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ. ಇದಕ್ಕೆ ಕ್ವಾಂಡಲ್ ಬಲೋಚ್ ಕೊಲೆ ಮತ್ತೊಂದು ಸೇರ್ಪಡೆ.

ಆಕೆಯ ಸಾವನ್ನು ಕುಟುಂಬಸ್ಥರು ಖಚಿತ ಪಡಿಸಿದ್ದಾರೆ. “ಕಳೆದ ರಾತ್ರಿ ವಾಸಿಮ್ (ಆಕೆಯ ಅಣ್ಣ) ಜಗಳದ ನಂತರ ಕೊಂದಿದ್ದಾನೆ,” ಎಂದು ಪೋಷಕರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಆಕೆಯ ದೇಹದಲ್ಲಿ ಯಾವುದೇ ಹಿಂಸೆಯ ಗುರುತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ಕಾರಣ ತಿಳಿದು ಬರಬೇಕಾಗಿದೆ. ಶವವನ್ನು ಮುಲ್ತಾನ್ನ ನಿಶ್ತಾರ್ ಆಸ್ಪತ್ರೆಗೆ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರನ್ನು ಬಂಧಿಸಲಾಗಿದೆ.

ಈಕೆಯನ್ನು ಪಾಕಿಸ್ತಾನದ ಕಿಮ್ ಕರ್ದಾಶಿಯನ್ ಎಂದೇ ಕರೆಯಲಾಗುತ್ತಿತ್ತು. ತನ್ನ ಜೀವಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಆಕೆ ಕರಾಚಿಯಿಂದ ಪಂಜಾಬ್ ಪ್ರಾಂಥ್ಯಕ್ಕೆ ವಲಸೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಅಣ್ಣ ಆಕೆಗೆ ಮಾಡೆಲಿಂಗ್ ತೊರೆಯುವಂತೆ ಹೇಳಿದ್ದ ಎಂದು ಕುಟುಂಬದ ಮೂಲಗಳು ಹೇಳಿವೆ. ವಾಸಿಮ್, ಆಕೆ ವಿವಾದಾತ್ಮಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದರ ಬಗ್ಗೆ ಹತಾಶನಾಗಿದ್ದು. ಈ ಬಗ್ಗೆ ಆಕೆಗೆ ಎಚ್ಚರಿಕೆಯನ್ನೂ ನೀಡಿದ್ದನಂತೆ. ಸದ್ಯ ವಾಸೀಮ್ ತಲೆ ಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

13077066_839415556203198_3570295189072488896_n

2014ರಲ್ಲಿ ಬಲೂಚ್ ಬಿಡುಗಡೆ ಮಾಡಿದ ವಿಡಿಯೋವೊಂದು ಪಾಕಿಸ್ತಾನದಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಈಕೆಯ ಹಾಟ್ ಚಿತ್ರಗಳು ಮೇಲಿಂದ ಮೇಲೆ ವೈರಲ್ ಆಗಿ ಈಕೆಗೆ ಸೆಲೆಬ್ರಿಟಿ ಪಟ್ಟ ತಂದುಕೊಟ್ಟಿತ್ತು. ಆಕೆಗೆ ಫೇಸ್ ಬುಕ್ನಲ್ಲಿ ಏಳು ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದರು. ಇತ್ತೀಚೆಗೆ ಆಕೆ ಪಾಕಿಸ್ತಾನದ ಪುರುಷ ಪ್ರಧಾನ ಸಮಾಜದ ವಿರುದ್ಧವೂ ಧ್ವನಿ ಎತ್ತಿದ್ದರು.

‘ಮೂರು ವಾರಗಳ ಹಿಂದಷ್ಟೇ ಆಕೆ ರಕ್ಷಣೆಗಾಗಿ ಪೊಲೀಸರಿಗೆ ಬೇಡಿಕೆ ಸಲ್ಲಿಸಿದ್ದರು. ಆದರೆ ಅದನ್ನು ಪೊಲೀಸರು ನಿರ್ಲಕ್ಷಿಸಿದರು,’ ಎಂದು ಪಾಕಿಸ್ತಾನಿ ಪತ್ರಿಕೆ ‘ಡಾನ್’ ವರದಿ ಮಾಡಿದೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top