An unconventional News Portal.

50 ಕೋಟಿ ಡೀಲಿಗೆ ಸಹಿ ಹಾಕಿದ ಬೆಳ್ಳಿ ತಾರೆ ಸಿಂಧು

50 ಕೋಟಿ ಡೀಲಿಗೆ ಸಹಿ ಹಾಕಿದ ಬೆಳ್ಳಿ ತಾರೆ ಸಿಂಧು

ಒಲಂಪಿಕ್ಸಿನಲ್ಲಿ ಬೆಳ್ಳಿ ಪದಕ ಗೆದ್ದು ಕೋಟ್ಯಾಂತರ ರೂಪಾಯಿ ಬಹುಮಾನ ಜೇಬಿಗಿಳಿಸಿಕೊಂಡಿದ್ದ ಪಿ.ವಿ ಸಿಂಧು ಈಗ ಮತ್ತೊಂದು ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬೇಸ್ ಲೈನ್ ಎಂಬ ಕ್ರೀಡಾ ಮ್ಯಾನೇಜ್ ಮೆಂಟ್ ಕಂಪೆನಿ ಜೊತೆಗೆ 3 ವರ್ಷಗಳ ಗುತ್ತಿಗೆಗೆ ಬ್ಯಾಡ್ಮಿಂಟನ್ ಆಟಗಾರ್ತಿ ಸಹಿ ಹಾಕಿದ್ದು 50 ಕೋಟಿ ಹಣ ಪಡೆಯಲಿದ್ದಾರೆ ಎನ್ನಲಾಗಿದೆ.

ದೇಶದಲ್ಲಿ ಕ್ರಿಕೆಟಗರನ್ನು ಹೊರತಾಗಿ ಇಷ್ಟು ದೊಡ್ಡ ಮೊತ್ತದ ಡೀಲ್ ಪಡೆಯುತ್ತಿರುವ ಮೊದಲ ಕ್ರೀಡಾಪಟು ಎಂಬ ಕೀರ್ತಿಗೂ ಸಿಂಧು ಪಾತ್ರವಾಗಿದ್ದಾರೆ.

‘ಟೈಮ್ಸ್ ಆಫ್ ಇಂಡಿಯಾ’ ಜೊತೆ ಮಾತನಾಡಿರುವ ಬೇಸ್ ಲೈನ್ ವ್ವಸ್ಥಾಪಕ ನಿರ್ದೇಶಕ ತುಹಿನ್ ಮಿಶ್ರಾ, “ಆಕೆಯ (ಸಿಂಧು) ಜನಪ್ರಿಯತೆ ಹಲವು ಕಂಪೆನಿಗಳನ್ನು ಸೆಳೆದಿದೆ. ಮುಂದಿನ ಮೂರು ವರ್ಷಗಳಲ್ಲಿ ಆಕೆಯ ಮೌಲ್ಯ ಹೆಚ್ಚಿಸಲು ನಾವು ಶ್ರಮಿಸಲಿದ್ದೇವೆ. ಇಷ್ಟು ದೊಡ್ಡ ಸಾಧನೆ ಮಾಡಿಯೂ ಆಕೆ ತೋರುತ್ತಿರುವ ನಮ್ರತೆ, ಮಹಿಳೆಯರಿಗೆ ಆಕೆ ತಂದುಕೊಟ್ಟ ಶಕ್ತಿ ಬಣ್ಣಿಸಲಸಾಧ್ಯ,” ಎಂದು ಹೇಳಿದ್ದಾರೆ.

ಸಿಂಧು ಒಲಂಪಿಕ್ಸಿನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಒಟ್ಟು 16 ಕಂಪೆನಿಗಳು ಪ್ರಚಾರ ರಾಯಭಾರಿಯಾಗಿ ಸ್ವೀಕರಿಸಲು ಮುಂದೆ ಬಂದಿದ್ದವು. ಇವುಗಳಲ್ಲಿ 9 ಕಂಪೆನಿಗಳು ಈಗಾಗಲೇ ತಮ್ಮ ನಿರ್ಧಾರವನ್ನು ಅಂತಿಮಗೊಳಿಸಿದ್ದು ಅವುಗಳ ಜೊತೆ ಸದ್ಯದ್ಲಲೇ ಸಿಂಧು ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಆಕೆಯ ಗುರು ಗೋಪಿಚಂದ್ ಮಾರ್ಗದರ್ಶನದ ಮೇರೆಗೆ ಯುವಕರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕೆಲವು ಉತ್ಪನ್ನಗಳಿಗೆ ಮಾತ್ರ ಪ್ರಚಾರಕಿಯಾಗಲು ಸಿಂಧು ಒಪ್ಪಿಕೊಂಡಿಲ್ಲ.

“ಸದ್ಯಕ್ಕೆ ನಾವು ಕೆಲವು ಫೈನಾನ್ಸ್ ಕಂಪೆನಿಗಳು, ಮಹಿಳೆಯರ ಬಳಕೆಯ ಉತ್ಪನ್ನ ತಯಾರಿಸುವ ಕಂಪೆನಿಗಳ ಜತೆ ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ. ಆದರೆ ಈಗವೇ ಅದನ್ನೆಲ್ಲಾ ಬಹಿರಂಗಪಡೆಸಲು ಸಾಧ್ಯವಿಲ್ಲ,” ಎಂದು ತುಹಿನ್ ಮಿಶ್ರಾ ತಿಳಿಸಿದ್ದಾರೆ. ಆಕೆ ತುಂಬ ಕಡಿಮೆ ಸಮಯವನ್ನು ಜಾಹಿರಾತಿಗಾಗಿ ಮೀಸಲಿಟ್ಟಿದ್ದಾರೆ. ಇದರಿಂದ ಆಕೆಯ ತರಬೇತಿಗೇನೂ ತೊಂದರೆಯಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸಿಂಧು ಎಷ್ಟು ಮೊತ್ತದ ಡೀಲ್ ಪಡೆದಿದ್ದಾರೆ ಎಂಬುದನ್ನು ಮಿಶ್ರಾ ಬಹಿರಂಗಪಡಿಸಿಲ್ಲ. ಬದಲಿಗೆ “ಕ್ರಿಕೆಟೇತರ ಆಟಗಾರರು ಪಡೆಯುವ ಅತ್ಯುತ್ತಮ ಡೀಲ್” ಇದು ಎಂದಷ್ಟೇ ಹೇಳಿದ್ದಾರೆ. ಕಂಪೆನಿ ಒಂದಷ್ಟು ಹಣವನ್ನು ಪ್ರತೀವರ್ಷ ಆಕೆಗೆ ನೀಡಲಿದೆ. ಉಳಿದ ಹಣ ಆಕೆ ಪಡೆಯುವ ಜಾಹೀರಾತನ್ನು ಅವಲಂಬಿಸಿದೆ.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top