An unconventional News Portal.

ದಿಲ್ಲಿ ಪೊಲೀಸರಿಗೆ ಯೋಗಾಭ್ಯಾಸ ಕಡ್ಡಾಯ: ನೆರವಿಗೆ ಆಯುಷ್ ಪತ್ರ

ದಿಲ್ಲಿ ಪೊಲೀಸರಿಗೆ ಯೋಗಾಭ್ಯಾಸ ಕಡ್ಡಾಯ: ನೆರವಿಗೆ ಆಯುಷ್ ಪತ್ರ

ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ದೇಹವನ್ನ ಬಗ್ಗಿಸಿ ಯೋಗ ಮಾಡುವುದನ್ನು ನೋಡುವ ಕಾಲ ಹತ್ತಿರದಲ್ಲೇ ಇದೆ.

ಹೆಚ್ಚುತ್ತಿರುವ ಕೆಲಸದೊತ್ತಡದಿಂದ ಪೊಲೀಸರು ಖಿನ್ನತೆಗೆ ಒಳಗಾಗುತ್ತಿದ್ದು, ಇದನ್ನ ತಪ್ಪಿಸಲು ಯೋಗ ಅಭ್ಯಾಸ ಮಾಡುವಂತೆ ದಿಲ್ಲಿ ಪೊಲೀಸ್ ಇಲಾಖೆಗೆ ಕೇಂದ್ರ ಆಯುಷ್ ಸಚಿವಾಲಯದಿಂದ ಪತ್ರ ಬಂದಿದೆ.

ಇತ್ತೀಚೆಗೆ ಪೊಲೀಸರು ಖಿನ್ನತೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಯೋಗ ತರಬೇತಿ ತರಗತಿಗಳನ್ನ ತೆರೆಯುವ ಆಶಯವನ್ನ ಇಲಾಖೆ ವ್ಯಕ್ತಪಡಿಸಿದೆ.

ಮೂಲಗಳ ಪ್ರಕಾರ, ಬಾಬಾ ರಾಮ್ ದೇವ್ ಅವರನ್ನ ಪೊಲೀಸ್ ಠಾಣೆಗಳಿಗೆ ಸ್ಟಾರ್ ಟ್ರೈನರ್ ಆಗಲು ಮನವಿ ಮಾಡಲಾಗಿದೆಯಂತೆ. “ಅವರು ಒಪ್ಪಿದರೆ ಆಗಿದ್ದಾಂಗ್ಗೆ ಠಾಣೆಗಳಿಗೆ ಭೇಟಿ ನೀಡಿ ಯೋಗ ತರಗತಿಗಳನ್ನ ನಡೆಸಿಕೊಡಬಹುದು,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಯೋಗ ತರಗತಿಗಳಿಗೆಂದೇ ಕೇಂದ್ರ ಸರಕಾರ ಪ್ರತಿ ಜಿಲ್ಲೆಗೆ ವಾರ್ಷಿಕ ತಲಾ 7 ಲಕ್ಷ ರೂಪಾಯಿ ಅನುದಾನ ನೀಡಿದೆ. ಇದರಲ್ಲಿ ಯೋಗ ತರಬೇತುದಾರರ ಸಂಬಳ ಮತ್ತಿತರ ಖರ್ಚುಗಳೂ ಸೇರಿರುತ್ತವೆ.

“ಇದೀಗ ಪೊಲೀಸರಿಗೆ ಯೋಗ ಶಿಕ್ಷಣ ತರಬೇತಿ ನೀಡಲು ಬಾಬಾ ರಾಮ್ ದೇವ್ ಅವರನ್ನು ಸಂರ್ಪಸಲಾಗಿದೆ. ಅವರು ಒಪ್ಪಿದರೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತರಬೇತಿ ಏರ್ಪಡಿಸಲಾಗುವುದು. ಯೋಗಾಭ್ಯಾಸದಿಂದ ಪೊಲೀಸರ ಕಾರ್ಯಕ್ಷಮತೆ ವೃದ್ಧಿಸಲಿದೆ,” ಎಂದು ದಿಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸರಿಗೆ ಯೋಗ ತರಬೇತಿ ನೀಡುವಂತೆ ಮತ್ತು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಯೋಗಭ್ಯಾಸ ಕಡ್ಡಾಯಗೊಳಿಸುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ಎಲ್ಲಾ ಪೊಲೀಸರಿಗೆ ಯೋಗಾಭ್ಯಾಸದ ತರಬೇತಿ ನೀಡಲು ಮುಂದಾಗಿದೆ. ಕೇಂದ್ರ ಸರಕಾರ ಪ್ರತಿ ಜಿಲ್ಲೆಯಲ್ಲಿ ಯೋಗ ತರಬೇತಿ ನೀಡಲು ವಾರ್ಷಿಕ 7 ಲಕ್ಷ ರೂ ಅನುದಾನ ನೀಡಲಿದೆ ಎಂದು ಆಯುಷ್ ಇಲಾಖೆ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

Leave a comment

Top