An unconventional News Portal.

Latest News
    ...

    ಕೋಲ್ಕತ್ತಾದಲ್ಲಿ ಮೇಲ್ಸೇತುವೆ; ಬೆಂಗಳೂರಲ್ಲಿ ಮೆಟ್ರೋ ನಿಲ್ದಾಣ: IVRCL ಎಂಬ ವಂಚಕ ಕಂಪನಿಯ ಹಿಂದೆ ರಾಜಶೇಖರ್ ರೆಡ್ಡಿ ಕುಟುಂಬದ ‘ಕೈ’!

    ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಗುರುವಾರ ಕುಸಿದು ಬೀಳುವ ಮೂಲಕ ‘ಐವಿಆರ್ ಸಿಎಲ್’ ಎಂಬ ಹೈದ್ರಾಬಾದ್ ಮೂಲದ ವಂಚಕ ಕಂಪನಿಯ ವಂಚನೆಗಳು ಒಂದೊಂದಾಗಿ ಹೊರ ಬರತೊಡಗಿವೆ. ಇಲ್ಲಿನ ಬುರ್ರಾ ಬಝಾರ್ ಏರಿಯಾದ ವಿವೇಕಾನಂದ ರಸ್ತೆಯಲ್ಲಿ2.2 ಕಿ. ಮೀ ಮೇಲ್ಸೇತುವೆಯ ನಿರ್ಮಾಣದ ಗುತ್ತಿಗೆಯನ್ನು ಕಂಪನಿ ಪಡೆದಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ 250 ಮೀಟರ್ ಉದ್ದದ ಕಾಂಕ್ರಿಟ್ ಸೇತುವೆ ಕುಸಿದು ಬಿದ್ದು 24 ಜನ ಮೃತಪಟ್ಟರು. ಕಂಪನಿಯು, “ಇದು ದೇವರ ಕೆಲಸ,” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿತ್ತು. ಸದ್ಯ ಪಶ್ಚಿಮ ಬಂಗಾಳದಲ್ಲಿ […]

    April 2, 2016
    ...

    ‘ಹುಚ್ಚರ ಕೈಗೆ ಅಣ್ವಸ್ತ್ರ ಸಿಗದಂತೆ ಎಚ್ಚರಿಕೆ ವಹಿಸಿ’: ಒಬಾಮ ಕರೆ

    ತಮ್ಮ ಅಧ್ಯಕ್ಷಾವಧಿಯ ಕೊನೆಯ ದಿನಗಳಲ್ಲಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಐಸಿಸ್ ತಹರದ ‘ಹುಚ್ಚು ಜನ’ಗಳ ಕೈಗೆ ಅಣ್ವಸ್ತ್ರ ಸಿಗದಂತೆ ತಡೆಯಬೇಕು ಎಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಶನಿವಾರ ಮುಕ್ತಾಯಗೊಂಡ ನಾಲ್ಕನೆ ಹಾಗೂ ಕೊನೆಯ ‘ನ್ಯೂಕ್ಲಿಯರ್ ಸೇಫ್ಟಿ ಸಮಿತ್’ನ ಉದ್ದೇಶಿಸಿ ಅವರು ಮಾತನಾಡಿದರು. “ಐಸಿಸ್ ಹಾಗೂ ಅಂತಹ ಮಾನವ ವಿರೋಧಿ ಸಂಘಟನೆಗಳಿಂದ ಅಣ್ವಸ್ತ್ರವನ್ನು ರಕ್ಷಿಸಬೇಕಿದೆ. ಈಗಾಗಲೇ 102 ದೇಶಗಳು ಈ ಕುರಿತು ಒಪ್ಪಂದಕ್ಕೆ ಸಹಿ ಮಾಡಿವೆ,” ಎಂದರು. ಇದರ ಜತೆಗೆ, ಸಭೆಯಲ್ಲಿ ಪಾಲ್ಗೊಂಡ ಭಾರತ ಪ್ರಧಾನಿ ನರೇಂದ್ರ […]

    April 2, 2016
    ...

    ಪತ್ರಕರ್ತರ ಮೇಲೆ ಹಲ್ಲೆ: ಹಾಸನದಲ್ಲಿ ಇಂದು ಪ್ರತಿಭಟನೆ

    ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿಷೇಧಿಸಿದ್ದರ ಬಗ್ಗೆ ವರದಿ ಮಾಡಲು ತೆರಳಿದ್ದ ವರದಿಗಾರರ ಮೇಲೆ ನಡೆದ ಹಲ್ಲೆ ಖಂಡಿಸಿ ಶನಿವಾರ ಸಂಜೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಂಜೆ 5 ಗಂಟೆಗೆ ಕಪ್ಪು ಪಟ್ಟಿ ಧರಿಸಿ ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸುವ ಸಾಂಕೇತಿಕ ಪ್ರತಿಭಟನೆಗೆ ಪ್ರಗತಿಪರ ಸಂಘಟನೆಗಳು ಕರೆ ನೀಡಿವೆ. ಘಟನೆಯಲ್ಲಿ ಶಾಸಕ ರೇವಣ್ಣರ ಪಾತ್ರದ ಬಗ್ಗೆಯೂ ಅನುಮಾನಗಳು ಎದ್ದಿದ್ದು, ಅವರ ಕುತಂತ್ರವೇ ಇಷ್ಟಕ್ಕೆಲ್ಲಾ ಕಾರಣ ಎಂದು […]

    April 2, 2016
    ...

    ಪತ್ರಕರ್ತರಿಗೆ ರಾಜಧಾನಿಯಲ್ಲಿ ಹೊಡೆತ ಬಿದ್ರೆ ಮಾತ್ರ ಅನ್ಯಾಯನಾ ರಂಗಣ್ಣ?

    ಮಾಧ್ಯಮಗಳ ಜತೆ ಸಂಬಂಧ ಹಳಸಿದರೆ ಏನಾಗಬಹುದು ಎಂಬುದರ ಹೊಸ ಸ್ಯಾಂಪಲ್ ಒಂದು ಶುಕ್ರವಾರ ರಾತ್ರಿ ಕರ್ನಾಟಕದ ಜನರಿಗೆ ಪರಿಚಯಿಸಲಾಯಿತು. ಈ ಬಾರಿ ಸುದ್ದಿಕೇಂದ್ರದಲ್ಲಿ ಇರುವವರು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್. ರಂಗನಾಥ್ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ. ರಂಗಣ್ಣ ನೇತೃತ್ವದ ಪಬ್ಲಿಕ್ ಟಿವಿ ಮತ್ತು ರಾಘವೇಶ್ವರ ಸ್ವಾಮಿ ನಡುವೆ ಎರಡು ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ತಾರಕ್ಕೇರಿದೆ. ಇದಕ್ಕೆ ಕಾರಣ ಗುರುವಾರ ಸೆಷನ್ಸ್ ಕೋರ್ಟ್ ರಾಘವೇಶ್ವರ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನೀಡಿದ ಆದೇಶ. ಸ್ವಾಮಿ ವಿರುದ್ಧ […]

    April 1, 2016
    ...

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಬೇಟೆ ಆರಂಭಿಸಿದ ಸಿಐಡಿ

    ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯಲ್ಲಿ ಕೊನೆಗೂ ಸಿಐಡಿ ಪೊಲೀಸರು ಬೇಟೆ ಆರಂಭಿಸಿದ್ದಾರೆ. ‘ಶಿಕ್ಷಣ ಕ್ಷೇತ್ರದ ಮಾಫಿಯಾಗಳ ತವರುಮನೆ’, ಬೆಂಗಳೂರಿನ ರಾಜಾಜಿನಗರದಿಂದ ಇಬ್ಬರು ಉಪನ್ಯಾಸಕರು ಹಾಗೂ ಓಬಳೇಶ್ ಎಂಬಾತನನ್ನು ಶುಕ್ರವಾರ ರಾತ್ರಿ 10. 30ರ ಸುಮಾರಿಗೆ ವಿಚಾರಣೆಗಾಗಿ ಕರೆತಂದಿದ್ದಾರೆ. ಸಿಐಡಿ ಗುರುತಿಸಿರುವ ಆರೋಪಿ ಕಿರಣ್ ಸಹಚರ ಎನ್ನಲಾಗುತ್ತಿರುವ ಓಬಳೇಶ್ ಎಂಬಾತನ್ನು ಸಿಐಡಿ ಕೇಂದ್ರ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಮುಂದುವರಿದ ವಿಚಾರಣೆ: ರಾಜಾಜಿನಗರದ ಕಿರಣ್ ಎಂಬಾತ ಹಿಂದಿನಿಂದಲೂ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ದಂಧೆ ನಡೆಸುತ್ತಿದ್ದ […]

    April 1, 2016
    ...

    ಅಸ್ಸಾಂ ಅತಂತ್ರ; ಕೇರಳದಲ್ಲಿ ಕೆಂಬಾವುಟ; ತಮಿಳುನಾಡು; ಪ.ಬಂಗಾಳದಲ್ಲಿ ಯಥಾಸ್ಥಿತಿ: ಇಂಡಿಯಾ ಟಿವಿ- ಸಿ ವೋಟರ್ ಸಮೀಕ್ಷೆ

    ಅಸ್ಸಾಂ ಅತಂತ್ರ, ಕೇರಳದಲ್ಲಿ ಎಡಪಕ್ಷಗಳ ಮೈತ್ರಿಕೂಟ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಯಥಾಸ್ಥಿತಿಯ ಮುಂದುವರಿಕೆ… ಇದು ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನ ಪೂರ್ವ ಸಮೀಕ್ಷೆಯ ಮುಖ್ಯಾಂಶಗಳು. ಇಂಡಿಯಾ ಟಿವಿ- ಸಿ ವೋಟರ್ ಜಂಟಿ ಸಮೀಕ್ಷೆಯ ವರದಿ ಶುಕ್ರವಾರ ರಾತ್ರಿ ಹೊರಬಿದ್ದಿದೆ. ಸದರಿ ರಾಜ್ಯಗಳಲ್ಲಿ ಪಕ್ಷಗಳ ಬಲಾಬಲ ಹೀಗಿದೆ: ಅಸ್ಸಾಂ ಬಿಜೆಪಿ ಮೈತ್ರಿ ಪಕ್ಷಗಳು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿವೆ. 126 ಸದಸ್ಯ ಬಲದ ವಿಧಾನ ಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ+ ಗೆ, 55 ಹಾಗೂ ಕಾಂಗ್ರೆಸ್ […]

    April 1, 2016
    ...

    ಕೋಲ್ಕತ್ತಾ ಪ್ಲೈ ಓವರ್ ಕುಸಿತ: ರಾಜಕೀಯ ಬೇಳೆ ಬೇಯಿಸುವತ್ತ ಎಲ್ಲರ ಚಿತ್ತ!

    ಕೋಲ್ಕತ್ತಾದ ಬುರ್ರಾ ಬಝಾರ್ ಈಗ ರಾಜಕೀಯ ಚದುರಂಗದಾಟದಲ್ಲಿ ಪ್ರಮುಖ ಪಾತ್ರದಾರಿಯಾಗಿ ಬದಲಾಗಿದೆ. ಒಟ್ಟು ಆರು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತ ಪ್ರಕರಣ ರಾಜಕೀಯ ಪಕ್ಷಗಳಿಗೆ ಹೊಸ ತಂತ್ರ ಹೆಣೆಯಲು ಅನುವು ಮಾಡಿಕೊಡುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮೇಲ್ಸೇತುವೆ ಕುಸಿತ ಪ್ರಕರಣದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೇಲೊಂದು ಪಕ್ಷಿನೋಟಿ ಇಲ್ಲಿದೆ:   ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ […]

    April 1, 2016
    ...

    ಭಯೋತ್ಪಾದಕರಿಂದ ಅಣ್ವಸ್ತ್ರ ರಕ್ಷಣೆಗೆ ಪಣ: ಭಾರತ ಕೂಡ ಅಮೆರಿಕಾ ಬಣ

    ಅಮೆರಿಕಾದ ವಾಷಿಂಗ್ಟನ್ನಲ್ಲಿ ಗುರುವಾರ ಹಾಗೂ ಶುಕ್ರವಾರ ನಡೆದ ನಾಲ್ಕನೇ ಹಾಗೂ ಕೊನೆಯ ನ್ಯೂಕ್ಲಿಯರ್ ಸೇಫ್ಟಿ ಸಮಿಟ್ (ಎನ್ಎಸ್ಎಸ್) ಭಯೋತ್ಪಾದಕರ ಕೈಗೆ ಅಣ್ವರ್ಥ ಹೋಗದಂತೆ ತಡೆಯುವ ಆಶಯವನ್ನು ವ್ಯಕ್ತಪಡಿಸಲಿದೆ. ಒಟ್ಟು 56 ದೇಶಗಳು ಹಾಗೂ 4 ಅಂತರಾಷ್ಟ್ರೀಯ ಸಂಸ್ಥೆಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ. ಆದರೆ, ಇದರಿಂದ ಹೊರಗೆ ಉಳಿದಿರುವ ರಷ್ಯಾ, ‘ಈಗಿರುವ ಅಣ್ವಸ್ತ್ರ ರಕ್ಷಣಾ ಮಾರ್ಗಗಳೇ ಸಾಕು,’ ಎಂದಿದೆ. ಹೀಗಾಗಿ, ಎನ್ಎಸ್ಎಸ್ನಿಂದ ಹೊರಗುಳಿಯುವುದಾಗಿ ಘೋಷಿಸಿದೆ. ಇತ್ತೀಚೆಗೆ ಉತ್ತರ ಕೋರಿಯಾ ಅಂತರಾಷ್ಟ್ರೀಯ ಅಣ್ವಸ್ತ್ರ ನೀತಿಗಳನ್ನು ಬದಿಗೆ ಸರಿಸಿ ವಿನಾಶಕಾರಿ ಆಯುಧದ ಪ್ರಯೋಗವನ್ನು […]

    March 31, 2016
    ...

    ಟ್ರಾಫಿಕ್ ಜಂಗುಳಿ ಮೇಲೆ ಕುಸಿದು ಬಿದ್ದ ಮೇಲ್ಸೇತುವೆ: 22 ಜನರ ಸಾವು

    ಕೋಲ್ಕತ್ತಾದ ಬುರ್ರಾ ಬಝಾರ್ ಎರಿಯಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.  ಇಲ್ಲಿನ ವಿವೇಕಾನಂದ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ 2.2 ಕಿ.ಮೀ ಉದ್ದ ಪ್ಲೈ ಓವರ್ ಹಠಾತ್ತನೆ ಟ್ರಾಫಿಕ್ ಜಂಗುಳಿಯ ಮೇಲೆಯೇ ಕುಸಿದು ಬಿತ್ತು. ಘಟನೆಯಲ್ಲಿ ಸುಮಾರು 22 ಜನ ಸಾವಿಗೆ ಈಡಾಗಿದ್ದು, ನೂರಾರು ಜನ ಅಡಿಯಲ್ಲಿ ಸಿಲುಕಿದ್ದಾರೆ. ಘಟನೆ ತಕ್ಷಣ ಸ್ಪಂದಿಸಿದ ಅಗ್ನಿ ಶಾಮಕ ದಳದ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸೇನೆ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಶುರುಮಾಡಿದರು. ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ಮಧ್ಯಾಹ್ನದ […]

    March 31, 2016
    ...

    ಮತ್ತೆ ಮಿಸ್ ಹೊಡೆದ ಪಿಯು ಬೋರ್ಡ್ ‘ಕೆಮಿಸ್ಟ್ರಿ’; ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಬಹಿರಂಗ

    ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಗುರುವಾರ ಮತ್ತೊಮ್ಮೆ ಸೋರಿಕೆಯಾಗುವ ಮೂಲಕ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮಾ. 21ರಂದು ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಪಿಯು ಮಂಡಳಿ ಮರು ಪರೀಕ್ಷೆಯನ್ನು ಮಾ. 30ಕ್ಕೆ ಮುಂದೂಡಿತ್ತು. ರಾಜ್ಯಾದ್ಯಂತ ಸುಮಾರು 1. 45 ಲಕ್ಷ ವಿದ್ಯಾರ್ಥಿಗಳು ರಸಾಯನ ಶಾಸ್ತ್ರ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಪರೀಕ್ಷೆ ಆರಂಭಕ್ಕೂ ಮುನ್ನವೇ ಮಧ್ಯರಾತ್ರಿ ಮೂರು ಗಂಟೆ ವೇಳೆಗೆ ಬೆಂಗಳೂರು, ತುಮಕೂರುಗಳಲ್ಲಿ ಕೈ ಬರಹದಲ್ಲಿ ಬರೆದ ಪ್ರಶ್ನೆ ಪತ್ರಿಕೆ ಹರಿದಾಡಲಾರಂಭಿಸಿತು. ಬೆಳಗೆ ನಸಕು ಹರಿಯುವ […]

    March 31, 2016

Top