An unconventional News Portal.

NDTV ಇಂಡಿಯಾ ಸ್ಥಗಿತಕ್ಕೆ ಶಿಫಾರಸು: ಅಸೂಕ್ಷ್ಮ ವರದಿ ಭಿತ್ತರ ಆರೋಪ

NDTV ಇಂಡಿಯಾ ಸ್ಥಗಿತಕ್ಕೆ ಶಿಫಾರಸು: ಅಸೂಕ್ಷ್ಮ ವರದಿ ಭಿತ್ತರ ಆರೋಪ

ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ವೇಳೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಸುದ್ದಿಯನ್ನು ಭಿತ್ತರಿಸಿದ ಆರೋಪದ ಮೇಲೆ ಎನ್ ಡಿಟಿವಿ ಸಮೂಹದ ಹಿಂದಿ ಸುದ್ದಿ ವಾಹಿನಿ, ಎನ್ಡಿಟಿವಿ ಇಂಡಿಯಾ ವಿರುದ್ಧ ಕೇಂದ್ರ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ.

ಹೀಗಂತ, ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ‘ನ್ಯೂಸ್ ಮಿನಿಟ್’ ವರದಿ ಮಾಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ನ. 9ನೇ ತಾರೀಖು ಎನ್ಡಿಟಿವಿ ಇಂಡಿಯಾ ಒಂದು ದಿನ ಮಟ್ಟಿಗೆ ‘ಆನ್ ಏರ್’ನಿಂದ ನಾಪತ್ತೆಯಾಗಲಿದೆ.

ಹಿನ್ನೆಲೆ:

ಇದೇ ವರ್ಷ ಜನವರಿಯಲ್ಲಿ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಶಸ್ತ್ರಾಸ್ತ್ರ ದಾಳಿ ನಡೆದಿತ್ತು. ಇದು ಪಾಕ್ ಕುಮ್ಮಕ್ಕಿನಿಂದಲೇ ನಡೆದಿದ್ದು ಎಂದು ಭಾರತ ಆರೋಪಿಸಿತ್ತು. ಈ ಸಮಯದಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ ಎನ್ಡಿಟಿವಿ ಇಂಡಿಯಾ, ಸೈನ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿತ್ತು ಎಂಬ ಆರೋಪಕ್ಕೆ ಗುರಿಯಾಗಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಂತರಿಕ ಸಮಿತಿಯೊಂದನ್ನು ರಚಿಸಿ, ವಿಚಾರಣೆ ನಡೆಸುವಂತೆ ತಿಳಿಸಿತ್ತು.

ಇದೀಗ ಸಮಿತಿಯು ವರದಿ ನೀಡಿದ್ದು, “ಭಯೋತ್ಪಾದಕರ ವಿರುದ್ಧ ಸಮರ ಸಾರುವ ವಿಚಾರದಲ್ಲಿ ಸೇನೆಯ ನೆಲೆಗಳಲ್ಲಿ ಯಾವ್ಯಾವ ಆಯುಧಗಳಿವೆ ಎಂಬ ಬಗ್ಗೆ ವಾಹಿನಿ ಸುದ್ದಿಯನ್ನು ಭಿತ್ತರಿಸಿತ್ತು. ಇದರಿಂದ ಭಯೋತ್ಪಾದಕರಿಗೆ ನೆರವಾಗಿ, ನಾಗರಿಕರು ಹಾಗೂ ಸೈನಿಕರ ಪ್ರಾಣಾಪಾಯವಾಗುವ ಸಾಧ್ಯತೆಗಳಿದ್ದವು.  ಜತೆಗೆ ದೇಶದ ಭದ್ರತೆಗೂ ಅಪಾಯಕಾರಿಯಾಗಿತ್ತು,” ಎಂದು ಹೇಳಿದೆ.

ಇದಕ್ಕೂ ಮೊದಲು ಆಂತರಿಕ ಸಮಿತಿ ನೀಡಿದ ನೋಟಿಸ್ಗೆ ವಾಹಿನಿ ಪ್ರತ್ಯತ್ತರ ನೀಡಿತ್ತು. ‘ಅವಾಗಾಗಲೇ ಸಾರ್ವಜನಿಕವಾಗಿ ಲಭ್ಯವಿದ್ದ ಮಾಹಿತಿಯನ್ನಷ್ಟೆ ವಾಹಿನಿ ಭಿತ್ತರಿಸಲಾಗಿತ್ತು’ ಎಂದು ಹೇಳಿತ್ತು.

ಆಂತರಿಕ ಸಮಿತಿ ನೀಡಿರುವ ವರದಿಯಲ್ಲಿ ‘ವಾಹಿನಿ(ಎನ್ಡಿಟಿವಿ ಇಂಡಿಯಾ)ಯನ್ನು ಒಂದು ದಿನ ಮಟ್ಟಿಗೆ ಸ್ಥಗಿತಗೊಳಿಸಲು ಶಿಫಾರಸು ಮಾಡಿದೆ’ ಎಂದು ಪಿಟಿಐ ವರದಿ ಮಾಡಿದೆ.

ಒಂದು ವೇಳೆ, ಆಂತರಿಕ ಸಮಿತಿಯ ಶಿಫಾರಸುಗಳನ್ನು ಐ&ಬಿ ಮಿನಿಸ್ಟ್ರಿ ಒಪ್ಪಿಕೊಂಡರೆ, ಭಯೋತ್ಪಾದನ ಪ್ರಕರಣದಲ್ಲಿ ಅಪಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗುತ್ತಿರುವ ಮೊದಲ ವಾಹಿನಿ ಎನ್ಡಿಟಿವಿ ಇಂಡಿಯಾ ಆಗಲಿದೆ. ಇದರ ನಡುವೆ, ವಾಹಿನಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.

ಮುಂಬೈ ದಾಳಿ ನಂತರ ಭಯೋತ್ಪಾದನಾ ದಾಳಿಗಳ ಸಮಯದಲ್ಲಿ ಸುದ್ದಿಗಳನ್ನು ಭಿತ್ತರಿಸುವ ವಿಚಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ನೀಡಿದೆ.

 

ENTER YOUR E-MAIL

Name
Email *
May 2017
M T W T F S S
« Apr    
1234567
891011121314
15161718192021
22232425262728
293031  

Top