An unconventional News Portal.

ರೈಲು ಬೋಗಿಯ ಮೇಲೆ ಸುಸಜ್ಜಿತ ಆಸ್ಪತ್ರೆ: ದೇಶದ ಜನಾರೋಗ್ಯದ ಜತೆ ಅಂತ್ಯಗೊಂಡ 25ವರ್ಷಗಳ ಪಯಣ!

ರೈಲು ಬೋಗಿಯ ಮೇಲೆ ಸುಸಜ್ಜಿತ ಆಸ್ಪತ್ರೆ: ದೇಶದ ಜನಾರೋಗ್ಯದ ಜತೆ ಅಂತ್ಯಗೊಂಡ 25ವರ್ಷಗಳ ಪಯಣ!

ಮನೆಬಾಗಿಲಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಕಲ್ಪನೆಯೊಂದು ಸಾಕಾರವಾಗಿದೆ. ‘ಲೈಫ್ ಲೈನ್ ಎಕ್ಸ್‌ಪ್ರೆಸ್‌’ ಎಂಬ ರೈಲು, 25 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ ಆರೋಗ್ಯ ಸೇವೆ ನೀಡಿದೆ. ಆರ್ಥಿಕವಾಗಿ ಕಷ್ಟದಲ್ಲಿ ಇರುವವರಿಗೆ ಶಸ್ತ್ರ ಚಿಕಿತ್ಸೆ, ಔಷಧೋಪಚಾರ, ಡಯಗ್ನಾಸ್ಟಿಕ್ಸ್ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಎರಡೂವರೆ ದಶಕಗಳ ಕಾಲ ನೀಡಿದ ಕೀರ್ತಿ ಇದರದ್ದು.

‘ಇಂಪ್ಯಾಕ್ಟ್ ಇಂಡಿಯಾ ಫೌಂಡೇಷನ್’ ಹಾಗೂ ರೈಲ್ವೆ ಇಲಾಖೆ ಸಹಯೋಗದಲ್ಲಿ ರೈಲು ಹಳಿಗಳ ಮೇಲೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆ ಬೋಗಿಗಳ ಕಲ್ಪನೆ ಇದು. ಇದಕ್ಕೆ ಆರೋಗ್ಯ ಇಲಾಖೆ, ‘ಇಂಪ್ಯಾಕ್ಸ್ ಯುಕೆ’, ಭಾರತದ ಕಾರ್ಪೋರೇಟ್ ಸಂಸ್ಥೆಗಳು, ದಾನಿಗಳೂ ನೆರವು ನೀಡಿದ್ದಾರೆ.

ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಚಿಸುವ ತಜ್ಞ ವೈದ್ಯರು ಮತ್ತು ಸಹಾಯಕ ಸಿಬ್ಬಂದಿಗಳು ಇಲ್ಲಿದ್ದರು. ಅತ್ಯಾಧುನಿಕ ಸೌಲಭ್ಯಗಳಿರುವ, ನೂರಾರು ಕಿಲೋಮೀಟರ್ ಸಂಚರಿಸಿದ ಈ ಯೋಜನೆಯಲ್ಲಿ ಅವರೆಲ್ಲಾ ಪಾಲ್ಗೊಂಡಿದ್ದರು. ಇದು ದೇಶದ ಜನಾರೋಗ್ಯದ ಜತೆಗಿನ ಅಪರೂಪದ ಪಯಣ.

1991ರ ಜುಲೈ 16ರಂದು ವಿಶ್ವದಲ್ಲೇ ಮೊದಲ ರೈಲ್ವೇ ಆಸ್ಪತ್ರೆ ಆರಂಭವಾಯಿತು. ಅಲ್ಲಿಂದ ಇಲ್ಲಿವರೆಗೆ ಜನಾರೋಗ್ಯದ ಜತೆಗಿನ ಪಯಣ 25 ವರ್ಷ ಪೂರೈಸಿದೆ. 2015, ಜುಲೈ 16ರ ಹೊತ್ತಿಗೆ 24 ವರ್ಷಗಳಲ್ಲಿ 10 ಲಕ್ಷಕ್ಕೂ ಅಧಿಕ ಗ್ರಾಮೀಣ ಭಾರತೀಯರಿಗೆ ಸೇವೆ ನೀಡಿದೆ. ಇದಕ್ಕಾಗಿ ಲಕ್ಷಕ್ಕೂ ಅಧಿಕ ಸರ್ಜನ್ಗಳು ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ.

2016ರ ಏಪ್ರಿಲ್ ನಲ್ಲಿ ಈ ಲೈಫ್ ಲೈನ್ ಎಕ್ಸ್‌ಪ್ರೆಸ್‌ ‘ಗೊಂಡಿಯಾ’ ಎಂಬ ಮಹಾರಾಷ್ಟ್ರದ ಊರಿನಲ್ಲಿ ನಾಲ್ಕು ವಾರಗಳ ಕಾಲ ಸೇವೆ ನೀಡಿತ್ತು. ಸುಮಾರು 1,76,000 ಜನಸಂಖ್ಯೆಯ, ಮುಖ್ಯವಾಗಿ ಕಬ್ಬು ಮತ್ತು ಹೊಗೆಸೊಪ್ಪು ಬೆಳೆಯುವ ರೈತರಿರುವ ಊರು ಗೊಂಡಿಯಾ. ಮುಂಬೈನಿಂದ ರೈಲಿನಲ್ಲಿ 15 ಗಂಟೆಯ ಸುದೀರ್ಘ ಪ್ರಯಾಣದ ನಂತರ ಈ ಊರು ಸಿಗುತ್ತದೆ.

ಸದ್ಯ ಭಾರತದಲ್ಲಿ ಆರೋಗ್ಯ ಸೇವೆಯ ಕೊರತೆಯಿದೆ. ಸಾವಿರ ಜನರಿಗೆ ಓರ್ವ ವೈದ್ಯರೂ ಇಲ್ಲದ ಪರಿಸ್ಥಿತಿ ನಮ್ಮದು. ಒಂದು ಸಣ್ಣ ಆರೋಗ್ಯ ಸೇವೆ ಪಡೆಯಲು ನಮ್ಮ ಕರ್ನಾಟಕವೂ ಸೇರಿದಂತೆ ದೇಶದ ಅಸಂಖ್ಯಾತ ಹಳ್ಳಿಗಳ ಜನ ನೂರಾರು ಕಿ. ಮೀ ಸಂಚರಿಸಿ ನಗರಗಳನ್ನು ಅರಸಿ ಬರಬೇಕಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆಲ್ಲಾ ‘ಜನರಿಕ್ ಮೆಡಿಸಿನ್’ ಪೂರೈಸುವ ಭಾರತ ಮಾತ್ರ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಇನ್ನು ಹಿಂದುಳಿದಿರುವುದಕ್ಕೆ ಎದ್ದು ಕಾಣುತ್ತಿರುವ ಕುರುಹು ಇದು.

ಇಂತಹ ಸಮಯದಲ್ಲಿಯೇ ‘ಲೈಫ್ ಲೈನ್ ಎಕ್ಸ್‌ಪ್ರೆಸ್‌’ ರೈಲಿನ ಆಸ್ಪತ್ರೆ ಬೋಗಿಗಳು, ಗೊಂಡಿಯಾದಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಷ್ಟೇ ಇರುವ ಪಟ್ಟಣಗಳ ಜನರಿಗೆ ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಅವರಿಗೆ ಎಟಕುವ ದರದಲ್ಲಿ ನೀಡುತ್ತಿದೆ.

ಲೈಫ್ ಲೈನ್ ಎಕ್ಸ್‌ಪ್ರೆಸ್‌  ರೈಲಿನಲ್ಲಿ ಎರಡು ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಕೋಣೆಗಳಿವೆ. ವೈದ್ಯರು ಇಲ್ಲಿ ಕಣ್ಣು ಪರೀಕ್ಷೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ದಂತ ಚಿಕಿತ್ಸೆ ಹೀಗೆ ಹಲವು ಮೂಲಭೂತ ಸೇವೆಗಳನ್ನು ನೀಡುತ್ತಾರೆ.

ಈ ಆಸ್ಪತ್ರೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕ್ಯಾಮೆರಾಮನ್ ಜೀನ್ ಫ್ರಾಂಕ್ ‘ಅಲ್ ಜಝೀರಾ’ಗಾಗಿ ತೆಗೆದ ಈ ಕೆಳಗಿನ ಚಿತ್ರಗಳು ವಿವರಿಸುತ್ತವೆ.

Train hospital

ರೈಲು ಯಾವಾಗ ಬರಲಿದೆ, ಯಾವೆಲ್ಲಾ ಸೇವೆಗಳನ್ನು ನೀಡುತ್ತದೆ ಎನ್ನುವ ಸಂಪೂರ್ಣ ವಿವರಗಳಿರುವ ವೇಳಾಪಟ್ಟಿಯ ಪೋಸ್ಟರ್ ಪಟ್ಟಣದ ತುಂಬಾ ಅಂಟಿಸಿ ಸ್ವಯಂ ಸೇವಾ ಸಂಸ್ಥೆ ಜನರಿಗೆ ಮೊದಲೇ ಮಾಹಿತಿ ನೀಡುತ್ತದೆ.

 ಗೊಂಡಿಯಾ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತಿರುವ ಲೈಫ್ ಲೈನ್ ಎಕ್ಸ್‌ಪ್ರೆಸ್‌. ಒಂದು ವರ್ಷದ ಮೊದಲೇ ಸ್ಥಳೀಯ ಅಗತ್ಯಗಳನ್ನು ಅರಿತುಕೊಂಡು ಸಂಸ್ಥೆ ತನ್ನ ಯೋಜನೆ ರೂಪಿಸುತ್ತದೆ.

ಗೊಂಡಿಯಾ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತಿರುವ ಲೈಫ್ ಲೈನ್ ಎಕ್ಸ್‌ಪ್ರೆಸ್‌. ಒಂದು ವರ್ಷದ ಮೊದಲೇ ಸ್ಥಳೀಯ ಅಗತ್ಯಗಳನ್ನು ಅರಿತುಕೊಂಡು ಸಂಸ್ಥೆ ತನ್ನ ಯೋಜನೆ ರೂಪಿಸುತ್ತದೆ.

ಮೊದಲಿಗೆ ನೂರಾರು ಜನರು ಸ್ಥಳೀಯ ಆಸ್ಪತ್ರೆಗಳಿಗೆ ಬರುತ್ತಾರೆ. ಅಲ್ಲಿ ಪೂರ್ವಭಾವಿ ಪರೀಕ್ಷೆಗಳ ನಂತರ ಯಾರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ, ಯಾವ ಚಿಕಿತ್ಸೆ ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ.

ಮೊದಲಿಗೆ ನೂರಾರು ಜನರು ಸ್ಥಳೀಯ ಆಸ್ಪತ್ರೆಗಳಿಗೆ ಬರುತ್ತಾರೆ. ಅಲ್ಲಿ ಪೂರ್ವಭಾವಿ ಪರೀಕ್ಷೆಗಳ ನಂತರ ಯಾರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ, ಯಾವ ಚಿಕಿತ್ಸೆ ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ.

ರೋಗಿಯ ಕಣ್ಣು ಪರೀಕ್ಷಿಸುತ್ತಿರುವ ವೈದ್ಯರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು 24 ಗಂಟೆ ಸ್ಥಳೀಯ ಆಸ್ಪತ್ರೆಯಲ್ಲಿ ಪರಿಶೀಲಿಸಿ ನಂತರ ಆ್ಯಂಬುಲೆನ್ಸಿನಲ್ಲಿ ಲೈಫ್ ಲೈನ್ ರೈಲಿಗೆ ಕರೆ ತರಲಾಗುತ್ತದೆ.

ರೋಗಿಯ ಕಣ್ಣು ಪರೀಕ್ಷಿಸುತ್ತಿರುವ ವೈದ್ಯರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು 24 ಗಂಟೆ ಸ್ಥಳೀಯ ಆಸ್ಪತ್ರೆಯಲ್ಲಿ ಪರಿಶೀಲಿಸಿ ನಂತರ ಆ್ಯಂಬುಲೆನ್ಸಿನಲ್ಲಿ ಲೈಫ್ ಲೈನ್ ರೈಲಿಗೆ ಕರೆ ತರಲಾಗುತ್ತದೆ.

ಆಸ್ಪತ್ರೆಗೆ ಬರಲು ಸಾಧ್ಯವಾಗದವರ ಮನೆಗಳಿಗೇ ವೈದ್ಯರು ತೆರಳಿ ಆರೋಗ್ಯ ಸೇವೆ ನೀಡುತ್ತಾರೆ.

ಆಸ್ಪತ್ರೆಗೆ ಬರಲು ಸಾಧ್ಯವಾಗದವರ ಮನೆಗಳಿಗೇ ವೈದ್ಯರು ತೆರಳಿ ಆರೋಗ್ಯ ಸೇವೆ ನೀಡುತ್ತಾರೆ.

ರೈಲಿನ ಎರಡು ಬೋಗಿಗಳಲ್ಲಿ ಅತ್ಯಾಧುನಿಕ ಆಪರೇಶನ್ ಥಿಯೇಟರ್ ಇದೆ. ಇಲ್ಲಿ ಕಣ್ಣಿನ ಸೂಕ್ಷ್ಮ ಶಸ್ತ್ರ ಚಿಕಿತ್ಸೆಗಳು ಸೇರಿದಂತೆ ಹಲವು ಆಪರೇಶನ್ ನಡೆಸಲಾಗುತ್ತದೆ

ರೈಲಿನ ಎರಡು ಬೋಗಿಗಳಲ್ಲಿ ಅತ್ಯಾಧುನಿಕ ಆಪರೇಶನ್ ಥಿಯೇಟರ್ ಇದೆ. ಇಲ್ಲಿ ಕಣ್ಣಿನ ಸೂಕ್ಷ್ಮ ಶಸ್ತ್ರ ಚಿಕಿತ್ಸೆಗಳು ಸೇರಿದಂತೆ ಹಲವು ಆಪರೇಶನ್ ನಡೆಸಲಾಗುತ್ತದೆ.

ವೈದ್ಯ ಸೇವೆಯ ಜೊತೆಗೆ ಗ್ರಾಮಸ್ಥರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಾರೆ. ಉದಾಹರಣೆಗೆ ಗೊಂಡಿಯಾದಲ್ಲಿ ಮೂರ್ಛೆ ರೋಗದ ಬಗ್ಗೆ ಜನರಿಗ ಪ್ರಸೆಂಟೇಷನ್ ನೀಡಿ ಮಾಹಿತಿಯನ್ನು ನೀಡಲಾಗುತ್ತಿದೆ.

ರೈಲಿನಲ್ಲಿ ಸಿಬ್ಬಂದಿಗಳು ಮತ್ತು ವೈದ್ಯರಿಗೆ ವಿರಾಮದ ಕೋಣೆಗಳಿವೆ. ಆಪರೇಶನ್ ಮುಗಿಸಿದ ನಂತರ ವೈದ್ಯರು ಇಲ್ಲೇ ಊಟ ಮಾಡಿ ವಿರಾಮ ತೆಗೆದುಕೊಳ್ಳುತ್ತಾರೆ.

ರೈಲಿನಲ್ಲಿ ಸಿಬ್ಬಂದಿಗಳು ಮತ್ತು ವೈದ್ಯರಿಗೆ ವಿರಾಮದ ಕೋಣೆಗಳಿವೆ. ಆಪರೇಶನ್ ಮುಗಿಸಿದ ನಂತರ ವೈದ್ಯರು ಇಲ್ಲೇ ಊಟ ಮಾಡಿ ವಿರಾಮ ತೆಗೆದುಕೊಳ್ಳುತ್ತಾರೆ.

ರೈಲಿನಲ್ಲಿ ನಡೆಸುವ ಶಸ್ತಚಿಕಿತ್ಸೆಗಳಲ್ಲಿ ಕಣ್ಣಿನ ಪೊರೆಯ ಚಿಕಿತ್ಸೆಗಳೇ ಹೆಚ್ಚು.

ರೈಲಿನಲ್ಲಿ ನಡೆಸುವ ಶಸ್ತಚಿಕಿತ್ಸೆಗಳಲ್ಲಿ ಕಣ್ಣಿನ ಪೊರೆಯ ಚಿಕಿತ್ಸೆಗಳೇ ಹೆಚ್ಚು.

ಪ್ರತೀ ಆಪರೇಶನ್ ನಂತರವೂ ರೋಗಿಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆತರಲಾಗುತ್ತದೆ. ಅಲ್ಲಿ 24 ಗಂಟೆಗಳ ನಿಗಾದಲ್ಲಿಟ್ಟು ನಂತರ ಮನೆಗೆ ಕಳುಹಿಸುತ್ತಾರೆ. ಮನೆಗೆ ಹೋದ ನಂತರವೂ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ.

ಪ್ರತಿ ಆಪರೇಶನ್ ನಂತರವೂ ರೋಗಿಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆತರಲಾಗುತ್ತದೆ. ಅಲ್ಲಿ 24 ಗಂಟೆಗಳ ನಿಗಾದಲ್ಲಿಟ್ಟು ನಂತರ ಮನೆಗೆ ಕಳುಹಿಸುತ್ತಾರೆ. ಮನೆಗೆ ಹೋದ ನಂತರವೂ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ.

Leave a comment

Top