An unconventional News Portal.

ವಿಮಾನದಲ್ಲಿಯೇ ರೋಚಕ ದರೋಡೆಯೊಂದನ್ನು ನಡೆಸಿದ ಆತ ಇವತ್ತಿಗೂ ನಿಗೂಢವಾಗಿಯೇ ಉಳಿದು ಹೋದ!

ವಿಮಾನದಲ್ಲಿಯೇ ರೋಚಕ ದರೋಡೆಯೊಂದನ್ನು ನಡೆಸಿದ ಆತ ಇವತ್ತಿಗೂ ನಿಗೂಢವಾಗಿಯೇ ಉಳಿದು ಹೋದ!

ಧೂಮ್ ಸರಣಿ ಚಿತ್ರಗಳನ್ನು ನೋಡುತ್ತಿರುವ ತಲೆಮಾರು ಇದು. ಹೈಟೆಕ್ ಆಗಿ ದರೋಡೆ ಮಾಡುವುದು, ಕನ್ನ ಹಾಕುವುದು ಹಾಗೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡು ಹೋಗುವುದನ್ನು ರೋಚಕವಾಗಿ ತೋರಿಸಿದ ಚಿತ್ರಗಳವು. ಈ ಸಮಯದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವತ್ತಿಗೂ ತನಿಖಾ ಸಂಸ್ಥೆಗಳಿಗೆ ತಲೆಬಿಸಿ ಮಾಡುತ್ತಿರುವ, ನಾಲ್ಕು ದಶಕಗಳ ಹಿಂದೆಯೇ ಭಿನ್ನ ರೀತಿಯ ದರೋಡೆ ನಡೆಸಿದ ಒಬ್ಬ ವ್ಯಕ್ತಿ ಧೂಮ್ ಸಿನೆಮಾ ಚಿತ್ರಕತೆಯನ್ನೂ ಮೀರಿಸುವಂತಹ ನೈಜ ಕತೆಯೊಂದನ್ನು ಜಾಗತಿಕ ಅಪರಾಧಗಳ ಪಟ್ಟಿಯಲ್ಲಿ ಉಳಿಸಿ ಹೋಗಿದ್ದಾನೆ.

DB-Cooper-and-Rich_3510448bಆತನ ಹೆಸರು ಡ್ಯಾನ್ ಕೂಪರ್. ಮಾಧ್ಯಮಗಳ ವರದಿಯಿಂದಾಗಿ ಆತನನ್ನು ಜಗತ್ತು ಡಿ. ಬಿ. ಕೂಪರ್ ಎಂದು ಗುರುತಿಸುತ್ತದೆ. ಅದು 1971ರ ನವೆಂಬರ್ 24ನೇ ತಾರೀಖು. ಕೂಪರ್ ಸಾಮಾನ್ಯ ಪ್ರಯಾಣಿಕನಂತೆ ಪೋರ್ಟ್ ಲ್ಯಾಂಡ್ ವಿಮಾನ ನಿಲ್ದಾಣದಿಂದ ವಾಷಿಂಗ್ಟನ್ ಮಾರ್ಗದಲ್ಲಿ ಹೊರಟಿದ್ದ ಬೋಯಿಂಗ್ 727 ವಿಮಾನವನ್ನು ಏರಿದ್ದ. ಅಲ್ಲಿಯವರೆಗೂ ಎಲ್ಲವೂ ಮಾಮೂಲಿಯಾಗಿಯೇ ನಡೆಯಿತು. ಒಮ್ಮೆ ವಿಮಾನ ಹಾರಾಟ ಶುರು ಮಾಡುತ್ತಿದ್ದಂತೆ ಕೂಪರ್ ತನ್ನ ಸೂಟ್ ಕೇಸೊಂದನ್ನು ಮುಂದಿಟ್ಟು ಇದರಲ್ಲಿ ಬಾಂಬಿದೆ ಎಂದು ಪ್ರಯಾಣಿಕರನ್ನು, ವಿಮಾನದ ಸಿಬ್ಬಂದಿಯನ್ನು ತನ್ನ ಹತೋಟಿಗೆ ತೆಗೆದುಕೊಂಡ.

ಒತ್ತೆ ಹಣ ಕೇಳಿದ: 

ಒಮ್ಮೆ ವಿಮಾನ ತನ್ನ ಹಿಡಿತಕ್ಕೆ ಸಿಗುತ್ತಿದ್ದಂತೆ ಕೂಪರ್ 2 ಲಕ್ಷ ಒತ್ತೆ ಹಣದ ಬೇಡಿಕೆಯನ್ನು ಮುಂದಿಟ್ಟ. ಅದಕ್ಕಾಗಿ ಮಾರ್ಗ ಮಧ್ಯದಲ್ಲಿ ವಿಮಾನವನ್ನು ಇಳಿಸಿದ. ಅಲ್ಲಿ ಒತ್ತೆ ಹಣ ಹಾಗೂ ಪ್ಯಾರಾಚೂಟ್ ಪಡೆದುಕೊಂಡ ಕೂಪರ್, ಒಂದಿಷ್ಟು ಪ್ರಯಾಣಿಕರನ್ನು ಬಿಡುಗಡೆ ಮಾಡಿದ. ಮತ್ತೆ ವಿಮಾನವನ್ನು ಹಾರಿಸುವಂತೆ ಪೈಲಟ್ಗೆ ಬೆದರಿಕೆ ಹಾಕಿದ. ಇದು ನಾಲ್ಕು ದಶಕಗಳ ಹಿಂದಿನ ಅಮೆರಿಕಾ ವಿಮಾನಯಾನದ ಕತೆ. ಇವತ್ತಿನ ಹಾಗೆ, ಭಾರಿ ಭದ್ರತೆಯನ್ನು ಅಂದು ನಿರೀಕ್ಷಿಸುವುದು ಕಷ್ಟವಿತ್ತು. ಹೀಗಾಗಿ, ಕೂಪರ್ ಸೂಟುಕೇಸಿನಲ್ಲಿ ಬಾಂಬ್ ಇದೆ ಎಂದು ಎಲ್ಲರೂ ನಂಬಿದ್ದರು. ಪೈಲಟ್ ಮರು ಮಾತನಾಡದೆ ವಿಮಾನವನ್ನು ಮತ್ತೆ ಬಾನಿನೆಡೆಗೆ ಹಾರಾಸಿದ.

ಒಂದಷ್ಟು ದೂರು ಹೂಗುತ್ತಿದ್ದಂತೆ ಕೂಪರ್ ವಿಮಾನ ನಿಯಂತ್ರಣ ಕೊಠಡಿಗೆ ಹೋಗಿ, ಕೆಳ ಮಟ್ಟದಲ್ಲಿ ಹಾರಿಸುವಂತೆ ಸೂಚನೆ ನೀಡಿದ. ಜತೆಗೆ, ಪ್ಯಾರಾಚೂಟ್ ಧರಿಸಿಕೊಂಡು, 2 ಲಕ್ಷ ಡಾಲರ್ ಹಣವಿದ್ದ ಬ್ಯಾಗನ್ನು ಹಾಕಿಕೊಂಡು ನೋಡು ನೋಡುತ್ತಲೇ ವಿಮಾನದಿಂದ ಜಿಗಿದು ಬಿಟ್ಟಿದ್ದ ಕೂಪರ್.

ಎಲ್ಲಿ ಮಾಯವಾದ?:

ಅವತ್ತು ವಿಮಾನದಿಂದ ಹಣದ ಸಮೇತ ಜಿಗಿದ ಕೂಪರ್ ಏನಾದ ಎಂಬುದು ಇವತ್ತಿಗೂ ನಿಗೂಢವಾಗಿಯೇ ಉಳಿದು ಹೋಗಿದೆ. ಪ್ರಕರಣದ ತನಿಖೆ ಆರಂಭಿಸಿದ ಜಗತ್ತಿನ ಅತ್ಯುನ್ನತ ತನಿಖಾ ಸಂಸ್ಥೆ ಎನ್ನಿಸಿಕೊಂಡ ಎಫ್ ಬಿಐ ಕೂಡ ಯಾವುದೇ ಸುಳಿವು ಸಿಗದೆ ಕೈ ಚೆಲ್ಲಿ ಕುಳಿತುಕೊಂಡಿದೆ.

dbcooperlettersent2aಕೂಪರ್ ಏನಾಗಿರಬಹುದು ಎಂಬ ಕುರಿತು ಹಲವು ಥಿಯರಿಗಳು ಹುಟ್ಟಿಕೊಂಡಿವೆ. ವಿಮಾನದಿಂದ ಹಾರಿದವನು ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿರಬಹುದು ಎಂದು ಕೆಲವು ವಿಶ್ಲೇಷಣೆಗಳು ಇವೆ. ಆದರೆ, ಆತನ ಶವ ಸಿಗದ ಹಿನ್ನೆಲೆಯಲ್ಲಿ ಈ ವಾದವನ್ನು ಒಪ್ಪುವುದು ಸ್ವಲ್ಪ ಕಷ್ಟ. ಪ್ರಕರಣ ನಡೆದು 9 ವರ್ಷಗಳ ನಂತರ, 1980ರಲ್ಲಿ ಕೊಲಂಬಿಯಾ ನದಿ ತೀರದಲ್ಲಿ ಬಾಲಕನೊಬ್ಬನಿಗೆ ಮೂರು ಕಟ್ಟುಗಳಲ್ಲಿ ಹಣ ಸಿಕ್ಕಿತ್ತು. ಈ ಹಣದಲ್ಲಿರುವ ಸೀರಿಯಲ್ ನಂಬರ್, ಕೂಪರ್ ಗೆ ನೀಡಿದ್ದ ಹಣದ ಸೀರಿಯಲ್ ನಂಬರ್ ಗೆ ತಾಳೆಯಾಗುತ್ತೆ ಎಂದು ಎಫ್ ಬಿಐ ಹೇಳಿಕೊಂಡಿತು. ಆದರೆ, ಅದನ್ನು ಸಾಕ್ಷಿ ಸಮೇತ ಮುಂದಿಡುವಲ್ಲಿ ತನಿಖಾ ಸಂಸ್ಥೆ ವಿಫಲವಾಯಿತು.
ವಿಮಾನವನ್ನು ಅಪಹರಿಸಿ, ಒತ್ತೆ ಹಣವನ್ನು ಪಡೆದು, ಮಧ್ಯದಲ್ಲಿಯೇ ವಿಮಾನದಿಂದ ಜಿಗಿದ ಕೂಪರ್ ನಡೆಸಿದ ಕಾರ್ಯಾಚರಣೆ ಸಿನಿಮಾ ದೃಶ್ಯಗಳಂತೆ ಕಾಡುತ್ತವೆ. ವಿಮಾನದಿಂದ ಜಿಗಿದ ಕೂಪರ್ ಏನಾಗಿರಬಹುದು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಆತನನ್ನು ನೋಡಿದ ಪ್ರಯಾಣಿಕರು ನೀಡಿದ ಸುಳಿವುಗಳ ಮೇಲೆ ಒಂದು ರೇಖಾ ಚಿತ್ರವನ್ನು ತಯಾರಿಸಲಾಗಿದೆ. ಅದನ್ನು ನೋಡಿ, ಕೆಲವರು ಕೂಪರ್ ಗೊತ್ತು ಎಂದರಾದರೂ, ಅದರಿಂದ ತನಿಖೆಗೆ ಏನೂ ಸಹಾಯವಾಗಲಿಲ್ಲ. ಸದ್ಯ, ನಿಗೂಢತೆಗಳ ಸಾಲಿನಲ್ಲಿ ಕೂಪರ್ ತನ್ನದೇ ಸ್ಥಾನವೊಂದನ್ನು ಪಡೆದುಕೊಂಡಿದ್ದಾನೆ.

 

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top