An unconventional News Portal.

‘ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಆದರೂ ಸೋನಿಯಾ ಗಾಂಧಿಯನ್ನು ಉಳಿಸಬೇಕಿದೆ’!

‘ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಆದರೂ ಸೋನಿಯಾ ಗಾಂಧಿಯನ್ನು ಉಳಿಸಬೇಕಿದೆ’!

ಆಗಸ್ಟಾ ಹೆಲಿಕಾಪ್ಟರ್ ಖರೀದಿ ಅವ್ಯವಹಾರದದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ‘ಪ್ರಮುಖ ಪಾತ್ರಧಾರಿ’ ಎಂದು ಪತ್ರವೊಂದರಲ್ಲಿ ತಿಳಿಸಿದ್ದಾಗಿ ಮಧ್ಯವರ್ತಿ ಕ್ರಿಸ್ಟಿಯನ್ ಮೈಖೇಲ್ ‘ಎನ್ ಡಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.

ಆದರೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವೈಯುಕ್ತಿಕವಾಗಿ ಗೊತ್ತಿಲ್ಲ ಎಂದಿರುವ ಆತ, ”ನನ್ನನ್ನುಉಳಿಸಿಕೊಳ್ಳಲಾದರೂ, ನಾನು ಗಾಂಧಿ ಕುಟುಂಬವನ್ನು ಉಳಿಸಬೇಕಿದೆ,” ಎಂದು ಹೇಳಿಕೊಂಡಿದ್ದಾನೆ.

ಸದ್ಯ ಈತನಿಗಾಗಿ ಸಿಬಿಐ ಹುಡಕಾಟ ನಡೆಸುತ್ತಿದೆ. ಆದರೆ, ಈ ವಾರದ ಆರಂಭದಲ್ಲಿಯೇ ಕ್ರಿಸ್ಟಿಯನ್ ದುಬೈನಿಂದ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ನೀಡಿದ್ದಾನೆ.

“ಗಾಂಧಿ ಕುಟುಂಬವನ್ನು ಹೆಲಿಕಾಪ್ಟರ್ ಒದಗಿಸುವ ಸಂಬಂಧ ರಾಯಭಾರಿಗಳ ಮಟ್ಟದಲ್ಲಿ ಬಳಸಿಕೊಳ್ಳಲಾಗಿದೆ. ಹಾಗಂತ ಇಲ್ಲಿ ಲಂಚದ ರೂಪದಲ್ಲಿ ಹಣ ಸಂದಾಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ,” ಎಂದು ಆತ ಸಂದರ್ಶನದಲ್ಲಿ ಹೇಳಿದ್ದಾನೆ.

ಆಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯವರ್ತಿ ಮೂಲಕ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಹಗರಣ ಮುಂದುವರಿದ ಬಜೆಟ್  ಅಧಿವೇಶನದಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿತ್ತು.

ಕಾಂಗ್ರೆಸ್ ನಾಯಕಿಯ ಬಂಧನಕ್ಕೆ ಆಗ್ರಹಿಸಿ ಎಎಪಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಜತೆಗೆ, ಆಗಸ್ಟಾ ಕಂಪನಿಯನ್ನು ನಿಷೇಧಿಸುವ ಸಂಬಂಧ ಆಗ್ರಹಗಳು ಕೇಳಿ ಬಂದಿದ್ದವು.

ಸಂದರ್ಶನದಲ್ಲಿ ಕ್ರಿಸ್ಟಿಯನ್, “ಕಳೆದ ವರ್ಷ ಪ್ರಧಾನಿ ಮೋದಿ, ಇಟಲಿ ಪ್ರಧಾನಿಯನ್ನು ಅಮೆರಿಕಾದಲ್ಲಿ ಭೇಟಿ ಮಾಡಿದ್ದರು. ಈ ಸಮಯದಲ್ಲಿ ಕೊಲೆ ಆರೋಪದ ಮೇಲೆ ಭಾರತದ ಜೈಲಿನಲ್ಲಿರುವ ಇಬ್ಬರು ಇಟಲಿ ನಾವಿಕರನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಇದಕ್ಕೆ ಬದಲಾಗಿ ಆಗಸ್ಟಾ ಪ್ರಕರಣದ ಮಾಹಿತಿ ನೀಡುವ ಸಂಬಂಧ ಉಬಯ ನಾಯಕರು ಮಾತುಕತೆ ನಡೆಸಿದ್ದರು, ” ಎಂದು ಆತ ಪುನರುಚ್ಚರಿಸಿದ್ದಾನೆ.

Top