An unconventional News Portal.

‘ಒಂಟಿ ತೋಳ’ಗಳ ಮನಸ್ಸು ಅರಿಯಲು ಮುಂದಾದ ಎಂಐ-5: ಭಯೋತ್ಪಾದನಾ ಕೃತ್ಯಗಳ ತಡೆಗೆ ಹೊಸ ವಿಧಾನ!

‘ಒಂಟಿ ತೋಳ’ಗಳ ಮನಸ್ಸು ಅರಿಯಲು ಮುಂದಾದ ಎಂಐ-5: ಭಯೋತ್ಪಾದನಾ ಕೃತ್ಯಗಳ ತಡೆಗೆ ಹೊಸ ವಿಧಾನ!

ಆತ್ಮಹತ್ಯಾ ಬಾಂಬ್ ದಾಳಿಯಂತಹ ಭಯೋತ್ಪಾದನಾ ಕೃತ್ಯಗಳನ್ನು ಎಸಗುವ ಮುನ್ನವೇ ತಡೆಯುವ ನಿಟ್ಟಿನಲ್ಲಿ ಯುಕೆ ಮೂಲಕ ಗುಪ್ತಚರ ದಳ ಎಂಐ-5 ಹೊಸ ವಿಭಾಗವೊಂದನ್ನು ತೆರೆದಿದೆ.

‘ಬಿಹೇವಿಯರಲ್ ಸೈನ್ಸ್ ಯೂನಿಟ್’ ಎಂದು ಕರೆಯುವ ಈ ನಿಗೂಢ ತಂಡದಲ್ಲಿ ಅಪರಾಧ ಶಾಸ್ತ್ರಜ್ಞರು ಮತ್ತು ಮನಶಾಸ್ತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಎಷ್ಟು ಜನ ಈ ತಂಡದಲ್ಲಿ ಇದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ, ಕಳೆದ ಒಂದು ವರ್ಷದಲ್ಲಿ ಶೇ. 60ರಷ್ಟು ಭಯೋತ್ಪಾದನಾ ದಾಳಿಗಳನ್ನು ಈ ತಂಡದ ತಜ್ಞರು ಗುರುತಿಸಿ, ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಏನಿದು ಹೊಸ ವಿಭಾಗ:

ಭಯೋತ್ಪಾದನಾ ಕೃತ್ಯಗಳು ಹೆಚ್ಚಿದಂತೆಲ್ಲಾ ಆಯಾ ದೇಶಗಳ ಭಯೋತ್ಪಾದನಾ ನಿಗ್ರಹ ಪಡೆಗಳಲ್ಲಿ ಹೊಸ ತನಿಖಾ ವಿಧಾನಗಳು ಜಾರಿ ತರಲಾಗಿದೆ. ಇದರ ಭಾಗವಾಗಿ ಯುಕೆಯ ಎಂಐ- 5 ಕೂಡ ಮನುಷ್ಯನ ನಡವಳಿಕೆಗಳ ಆಧಾರದ ಮೇಲೆ ಸಂಭವನೀಯ ಕೃತ್ಯಗಳನ್ನು ಗುರುತಿಸುವ ಕೆಲಸಕ್ಕೆ ಕೈ ಹಾಕಿದೆ.

ಇತ್ತೀಚೆಗೆ ಯುರೋಪಿನ ದೇಶಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳ ಹಿಂದೆ ಇರುವುದು ‘ಲೋನ್ ವೂಲ್ಫ್’ ಎಂದು ಕರೆಯುವ ಒಬ್ಬಂಟಿ ಯುವಕರು. ಅಂದರೆ, ಇವರಿಗೂ ಭಯೋತ್ಪಾದನಾ ದಾಳಿಯನ್ನು ಸಂಘಟಿಸುವ ಸಂಘಟನೆಗಳಿಗೂ ಸಂಬಂಧವೇ ಇರುವುದಿಲ್ಲ. ಇವರು ಒಬ್ಬಂಟಿಯಾಗಿರುತ್ತಾರೆ ಮತ್ತು ಕೊನೆಯ ಕ್ಷಣಗಳಲ್ಲಿ ತಮಗೆ ತಲುಪಿದ ಕಚ್ಚಾ ವಸ್ತುಗಳನ್ನು ಉಪಯೋಗಿಸಿಕೊಂಡು ದಾಳಿಗಳನ್ನು ನಡೆಸುತ್ತಾರೆ. ಇವರ ಕುರಿತು ತನಿಖೆ ನಡೆಸಿದರೆ, ಹೆಚ್ಚಿನ ಸುಳುವುಗಳು ಲಭ್ಯವಾಗುವುದಿಲ್ಲ.

ದಿನದಿಂದ ದಿನಕ್ಕೆ ಈ ರೀತಿಯ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಂಐ-5 ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿಕೊಂಡಿದೆ. ಬಿಹೇವಿಯರಲ್ ಸೈನ್ಸ್ ಯೂನಿಟ್ ಹೆಸರಿನಲ್ಲಿ, ಗುಪ್ತಚರ ದಳಗಳು ನೀಡುವ ಮಾಹಿತಿ ಮತ್ತು ಸಾರ್ವಜನಿಕರಿಂದ ಲಭ್ಯ ಮಾಹಿತಿಯನ್ನು ಪಡೆದುಕೊಂಡು ಶಂಕಾಸ್ಮದ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಲಾಗುತ್ತದೆ.

ಸುಳಿವು ಬಿಟ್ಟುಕೊಡುವ ತೋಳಗಳು: 

ಲಂಡನ್ನಿನಲ್ಲಿರುವ ಎಂಐ- 5 ಕೇಂದ್ರ ಕಚೇರಿ.

ಲಂಡನ್ನಿನಲ್ಲಿರುವ ಎಂಐ- 5 ಕೇಂದ್ರ ಕಚೇರಿ.

ಹಿಂದೆ ನಡೆದ ಹಲವು ಭಯೋತ್ಪಾದನಾ ದಾಳಿಗಳ ಸಮಯದಲ್ಲಿ, ಒಂಟಿ ತೋಳಗಳು ಎಂದು ಕರೆಸಿಕೊಳ್ಳುವ ದಾಳಿಕೋರರು ಕೃತ್ಯಕ್ಕೂ ಮುನ್ನವೇ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದು ಈ ಅಧ್ಯಯನಕ್ಕೆ ನೆರವಾಗಿದೆ. ದಾಳಿ ನಡೆಸುವ ಮುನ್ನ ಅವರ ಮನಸ್ಥಿತಿಯಲ್ಲಿ ಏರುಪೇರುಗಳಾಗುತ್ತವೆ. ಅವರು ಬಳಸುವ ಸಾಮಾಜಿಕ ಜಾಲತಾಣಗಳ ಅಕೌಂಟ್ಗಳಲ್ಲಿ ಈ ಕುರಿತು ಅವರು ಸುಳಿವುಗಳನ್ನು ನೀಡುತ್ತಾರೆ.

ಇದನ್ನು ಎಂಐ- 5 ತಜ್ಞರ ತಂಡ ಕಲೆ ಹಾಕಿ ಅಧ್ಯಯನ ನಡೆಸುತ್ತದೆ. ಒಂದು ಹಂತದಲ್ಲಿ ಇವರು ದಾಳಿಗೆ ಸಜ್ಜಾಗಿದ್ದಾರೆ ಎಂಬ ಸುಳಿವು ಸಿಕ್ಕರೆ ತಕ್ಷಣ ರಕ್ಷಣಾ ಪಡೆಗಳಿಗೆ ಮಾಹಿತಿ ರವಾನಿಸಿ, ಸಂಶಯಾತ್ಮಕ ವ್ಯಕ್ತಿಗಳ ಬಂಧನಕ್ಕೆ ನೆರವಾಗುತ್ತಾರೆ. ಹೀಗೆ ಶೇ. 60 ಭಯೋತ್ಪಾದನಾ ಕೃತ್ಯಗಳನ್ನು ತಡೆಯಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

2004ರಲ್ಲಿಯೇ ಹೀಗೊಂದು ನಿಗೂಢ ವಿಭಾಗವನ್ನು ಎಂಐ- 5 ಹೊಂದಿತ್ತು. ಈವರೆಗೆ ಸುಮಾರು 400 ಯುವಕರ ಮೇಲೆ ಈ ವಿಭಾಗ ನಿಗಾ ಇಟ್ಟಿದೆ ಎಂದು ‘ಯುಕೆ ಎಕ್ಸ್ಪ್ರೆಸ್’ ವರದಿ ಮಾಡಿದೆ.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top