An unconventional News Portal.

ಕಾಲು ಕಳೆದುಕೊಳ್ಳುವ ಹಂತದಲ್ಲಿದ್ದ ಯುವಕನಿಗೆ ಚಿಕಿತ್ಸೆಯ ಭರವಸೆ

ಕಾಲು ಕಳೆದುಕೊಳ್ಳುವ ಹಂತದಲ್ಲಿದ್ದ ಯುವಕನಿಗೆ ಚಿಕಿತ್ಸೆಯ ಭರವಸೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲಕ ಕನ್‌ಸ್ಟ್ರಕ್ಷನ್ ಕಂಪನಿಯ ರಸ್ತೆ ಕೆಲಸದಲ್ಲಿ ಕಾಲಿಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದ ಯುವಕನಿಗೆ ಕೊನೆಗೂ ಚಿಕಿತ್ಸೆಯ ಭರವಸೆ ಸಿಕ್ಕಿದೆ.

2015 ಆಗಸ್ಟ್ ತಿಂಗಳಿನಲ್ಲಿ ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಂಪನಿಗೆ ಸೇರಿದ ಕಂಪನಿಯಲ್ಲಿ ರಸ್ತೆ ಕೆಲಸ ಮಾಡುತ್ತಿದ್ದಾಗ ಜಿಲ್ಲೆಯ ಗಾಜನೂರು ಮೂಲದ ಯುವಕ ನಾಗರಾಜ ಕಾಲಿಗೆ ಗಾಯ ಮಾಡಿಕೊಂಡಿದ್ದರು. “ಕಬ್ಬಿಣದ ರಾಡುಗಳನ್ನು ತುಂಡು ಮಾಡುವ ಯಂತ್ರದಿಂದ ನಾಗರಾಜನ ಕಾಲು ಗಾಯವಾಗಿತ್ತು. ಈ ಸಮಯದಲ್ಲಿ ಚಿಕಿತ್ಸೆ ಕೊಡಿಸುವುದಾಗಿ ನಿರ್ಮಾಣ ಕಂಪನಿಯ ಕಡೆಯವರು ಹೇಳಿದ್ದರೂ ಯಾವುದೇ ನೆರವು ಸಿಕ್ಕಿರಲಿಲ್ಲ. ಸೋಮವಾರ ನಿರ್ಮಾಣ ಕಂಪನಿಯ ಮುಖ್ಯಸ್ಥ ಷರೀಫರನ್ನು ಭೇಟಿ ಮಾಡಿ ಬಂದೆವು. ಅವರು ಸೂಕ್ತ ಚಿಕಿತ್ಸೆ ಹಾಗೂ ನಂತರ ಕೆಲಸದ ಪರಿಹಾರ ನೀಡಲು ಒಪ್ಪಿಕೊಂಡಿದ್ದಾರೆ,” ಎಂದು ಕಿರಣ್ ಗಾಜನೂರು ‘ಸಮಾಚಾರ’ಕ್ಕೆ ತಿಳಿಸಿದರು.

ಭಾನುವಾರ ತೀರ್ಥಹಳ್ಳಿ ಭಾಗದಲ್ಲಿ ನಡೆಯುತ್ತಿರುವ ಕಲ್ಲು ಕ್ರಷರ್ ಹಾಗೂ ಟಾರ್ ಮಿಕ್ಸರ್‌ ಘಟಕದಿಂದ ಸ್ಥಳೀಯ ಮಟ್ಟದಲ್ಲಿ ಆಗುತ್ತಿರುವ ಹಾನಿಯನ್ನು ‘ಸಮಾಚಾರ’ ಜನರ ಮುಂದಿಟ್ಟಿತ್ತು.

ಇದಾದ ನಂತರ ಕಿರಣ್ ಇದೇ ಕಂಪನಿಯಿಂದ ಕಾಲು ಕಳೆದುಕೊಳ್ಳುವ ಹಂತ ತಲುಪಿರುವ ಯುವಕನ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಂಪೂರ್ಣವಾಗಿ ಅಂಗಾಲು ತೂತವಾಗಿ ಹೋಗಿದ್ದ ಯುವಕನ ಚಿತ್ರಗಳು ಹಲವರ ಮನ ಕಲುಕಿದ್ದವು. ಇದೀಗ ಅವರು ಕಂಪನಿ ಮಾಲೀಕರ ಜತೆ ನಡೆದ ಮಾತುಕತೆ ಆಶಾದಾಯಕವಾಗಿತ್ತು ಎಂದಿದ್ದಾರೆ.

kiran-status-stone-rush

“ಇಂದು ಬೆಳಗ್ಗೆ ತೀರ್ಥಹಳ್ಳಿಯ ಷರೀಫರ ಕಚೇರಿಯಲ್ಲಿ ಮಾತುಕತೆ ನಡೆಸಿದೆವು. ಅವರು ಪರಿಹಾರ ನೀಡಲು ಒಪ್ಪಿಕೊಂಡಿದ್ದಾರೆ,” ಎಂದು ಗಾಜನೂರು ಅಗ್ರಹಾರದ ಯುವಕ ಸಂಘದ ಪರವಾಗಿ ಕಿರಣ್ ಮಾಹಿತಿ ನೀಡಿದ್ದಾರೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top