An unconventional News Portal.

ಮಿಸ್ ಹೊಡೆದ ‘ಮ್ಯಾಟ್ರಿಮೋನಿ ಮ್ಯಾಚ್’: ಪೊಲೀಸ್ ಠಾಣೆ ಮೆಟ್ಟಿಲೇರಿತು ಪ್ರಕರಣ

ಮಿಸ್ ಹೊಡೆದ ‘ಮ್ಯಾಟ್ರಿಮೋನಿ ಮ್ಯಾಚ್’: ಪೊಲೀಸ್ ಠಾಣೆ ಮೆಟ್ಟಿಲೇರಿತು ಪ್ರಕರಣ

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ವರಾನ್ವೇಷಣೆ ಮುಗಿಸಿ, ಮದುವೆಯಾಗಿ ಮೋಸ ಹೋದ ಪ್ರಕರಣವೊಂದು ಈಗ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಇಂಟೀರಿಯರ್ ಡಿಸೈನರ್ ಒಬ್ಬರು ಮದುವೆಯಾಗಲು ಗಂಡು ಬೇಕು ಎಂದು 5 ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಒಂದರ ಮೊರೆ ಹೋಗಿದ್ದರು. ಅದಕ್ಕಾಗಿ ಹಣವನ್ನೂ ತೆತ್ತು ತಮ್ಮ ಖಾತೆಯನ್ನು ತೆರೆದಿದ್ದರು.

ಈ ಸಮಯದಲ್ಲಿ ಐಬಿಎಂ ಉದ್ಯೋಗಿ ಎಂದು ಹೇಳಿಕೊಂಡು ಬಂದ ಯುವಕನೊಬ್ಬನ ಪರಿಚಯವನ್ನು ಸದರಿ ವೆಬ್ ಸೈಟ್ ಮಾಡಿಸಿತ್ತು. ಮುಂದೆ ಅವರಿಬ್ಬರು ಮದುವೆಯಾದರು.

ಮದುವೆಯ ನಂತರ ಗೊತ್ತಾಗಿದ್ದೇನು ಎಂದರೆ, ಮ್ಯಾಟ್ರಿಮೋನಿಯಲ್ಲಿ ‘ಸಿಂಗಲ್’ ಎಂದು ಹೇಳಿಕೊಂಡಿದ್ದ ಯುವಕನಿಗೆ ಆಗಲೇ ಎರಡು ಮದುವೆಯಾಗಿದ್ದವು. ಇಂಟೀರಿಯರ್ ಡಿಸೈನರ್ ಮೂರನೇ ಪತ್ನಿಯಾಗಿದ್ದರು.

ಇದು ಗೊತ್ತಾದ ಮೇಲೆ ಕೌಟುಂಬಿಕ ಕಲಹ ಒಂದಷ್ಟು ದಿನ ನಡೆದಿತ್ತಾರೂ, ಸಂಸಾರ ಸಾಗಿತ್ತು. ಮಕ್ಕಳೂ ಆಗಿದ್ದರು.

ಇದೀಗ, ಐಬಿಎಂ ಯುವಕ ನಾಲ್ಕನೇ ಮದುವೆಗೆ ಹುಡುಗಿ ಹುಡುಕಲು ಶುರುಮಾಡಿದ್ದಾನೆ ಎಂಬುದು ಮೂರನೇ ಪತ್ನಿಯ ಆರೋಪ. ಪ್ರಕರಣವೀಗ ಹನುಮಂತನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

girl-cheated-1

ಕಾನೂನಿಗೆ ವಿರೋಧ:

ಇತ್ತೀಚೆನ ದಿನಗಳಲ್ಲಿ ನಗರದಲ್ಲಿರುವ, 30ರ ಆಸುಪಾಸಿನ ಯುವಕ- ಯುವತಿಯರು ಮದುವೆಗಾಗಿ ಮ್ಯಾಟ್ರಿಮೋನಿ ವೆಬ್ ಸೈಟ್ಗಳನ್ನು ಮೊರೆ ಹೋಗುವುದು ಸಾಮಾನ್ಯವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಇಂತಹ ವೆಬ್ ಸೈಟ್ಗಳಲ್ಲಿ ನೋಂದಣಿ ಮಾಡಿಕೊಳ್ಳುವವರು ಕಡ್ಡಾಯವಾಗಿ ಗುರುತಿನ ಪ್ರಮಾಣ ಪತ್ರವನ್ನು ಲಗತ್ತಿಸಬೇಕು ಎಂದು ಕಾನೂನು ಹೊರಡಿಸಿತ್ತು.

ಇದಕ್ಕೆ ಜೀವನ್ ಸಾಥಿ, ಭಾರತ್ ಮ್ಯಾಟ್ರಿಮೋನಿ, ಜೀವನ್ ಸಾಥಿ ವೆಬ್ ಸೈಟ್ಗಳು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದವು. ಈ ಸಮಯದಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಮಾಡಿದ ವರದಿ ಪ್ರಕಾರ, “ದಿನಕ್ಕೆ 6 ಸಾವಿರದಿಂದ 7 ಸಾವಿರ ಜನ ಮದುವೆಗಾಗಿ ಸೂಕ್ತ ವರ ಹಾಗೂ ವಧು ಅನ್ವೇಷಣೆಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇವರ ಎಲ್ಲರ ಗುರುತಿನ ಪ್ರಮಾಣವನ್ನು ನೀಡುವುದು ಕಷ್ಟ,” ಎಂದು ಆನ್ ಲೈನ್ ಮದುವೆ ಮಧ್ಯವರ್ತಿ ಉದ್ಯಮದಲ್ಗಲಿ ಇರುವವರು ವಿರೋಧ ವ್ಯಕ್ತಪಡಿಸಿದ್ದರು.

“ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಪ್ರೊಫೈಲ್ಗಳನ್ನು ಸೃಷ್ಟಿಸಲು ಈ ವೆಬ್ಸೈಟ್ಗಳು ಅವಕಾಶ ಮಾಡಿಕೊಡುತ್ತವೆ. ಇದರಿಂದ ವಂಚನೆ ಪ್ರಮಾಣ ಹೆಚ್ಚುತ್ತದೆ,” ಎನ್ನುತ್ತಾರೆ ಬೆಂಗಳೂರಿನ ಬಳಕೆದಾರರೊಬ್ಬರು. “ಕಳೆದ ವರ್ಷ ಮ್ಯಾಟ್ರಿಮೋನಿಯಲ್ಲಿ ನನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದೆ. ನನಗೆ ಬಂದ ಬಹುತೇಕ ಮ್ಯಾಚ್ಗಳಲ್ಲಿ ಏನೋ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಹೀಗಾಗಿ, ವೆಬ್ ಸೈಟ್ಗಳ ಸಹವಾಸವನ್ನೇ ಬಿಟ್ಟೆ,” ಎಂದು ಅವರು ತಿಳಿಸುತ್ತಾರೆ.

Top