An unconventional News Portal.

‘ಸಿಸೋಡಿಯಾ v/s ಅರ್ನಾಬ್ ಗೋಸ್ವಾಮಿ’: ಫಿನ್ಲೆಂಡ್ ಟೂರ್ ಸುತ್ತ ಏನಿದು ಹೊಸ ವಿವಾದ?

‘ಸಿಸೋಡಿಯಾ v/s ಅರ್ನಾಬ್ ಗೋಸ್ವಾಮಿ’: ಫಿನ್ಲೆಂಡ್ ಟೂರ್ ಸುತ್ತ ಏನಿದು ಹೊಸ ವಿವಾದ?

ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿದೇಶಿ ಪ್ರವಾಸದ ವಿಚಾರದಲ್ಲಿ ಎಎಪಿ v/s ‘ಟೈಮ್ಸ್ ನೌ’ ಸಂಪಾದಕ ಅರ್ನಾಬ್ ಗೋಸ್ವಾಮಿ ನಡುವೆ ನೇರ ಯುದ್ಧ ಆರಂಭವಾಗಿದೆ.

‘ಟೈಮ್ಸ್ ನೌ ಹಾಗೂ ಸುದರ್ಶನ ಟಿವಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿಗಳಂತೆ ವರ್ತಿಸುತ್ತಿರುವುದಿಂದ ಅವರ ಪ್ಯಾನಲ್ ಡಿಬೇಟ್ಗಳಿಂದ ದೂರ ಇರಿ’ ಎಂದು ಆಮ್ ಆದ್ಮಿ ಪಕ್ಷ ತನ್ನ ಸ್ವಯಂ ಸೇವಕರಿಗೆ ಕರೆ ನೀಡಿದೆ. ಈ ಮೂಲಕ ಕೇಜ್ರಿವಾಲ್ ವರ್ಸಸ್ ಮೋದಿ ಕದನ ಕಣವೀಗ, ಮನೀಶ್ ಸಿಸೋಡಿಯಾ ವರ್ಸಸ್ ಅರ್ನಾಬ್ ಗೋಸ್ವಾಮಿ ನಡುವೆ ನೇರ ವಾಗ್ವಾದವಾಗಿ ಬದಲಾಗಿದೆ. ದೇಶದ ರಾಜಧಾನಿ ದಿಲ್ಲಿಯಲ್ಲಿ ಕಳೆದ ಎರಡು ವರ್ಷಗಳ ಅಂತರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಬೆಳವಣಿಗೆಗಳ ಮುಂದುವರಿದ ಭಾಗವಾಗಿ ಇದು ಕಾಣಿಸುತ್ತಿದೆ.

ಏನಿದು ಹೊಸ ಬೆಳವಣಿಗೆ?: 

ದಿಲ್ಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಸ್ಥಳೀಯ ಸರಕಾರ ಮುಂದಾಗಿದೆ. ಇದರ ಭಾಗವಾಗಿ ‘ಶಾಲೆಗಳ ನಿರ್ವಹಣಾ ಸಮಿತಿ’ಗೆ ಪೋಷಕರನ್ನು ಮುಖ್ಯಸ್ಥರನ್ನಾಗಿ ನೇಮಿಸಿತ್ತು. ‘ಶಿಕ್ಷಣ ಹಕ್ಕು ಕಾಯ್ದೆ’ಯನ್ನು ತಳಮಟ್ಟದಲ್ಲಿ ಜಾರಿಗೆ ತರುವಲ್ಲಿ ಸರಕಾರ ಒಂದು ಮಟ್ಟಿಗೆ ಯಶಸ್ವಿಯಾಗಿದೆ. ಇದರ ಹಿಂದಿದ್ದವರು ಅಲ್ಲಿನ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ. “ದಿಲ್ಲಿಯಲ್ಲಿ ಇರುವ ಸಚಿವರುಗಳ ಪೈಕಿ ಹೆಚ್ಚು ಕೆಲಸ ಮಾಡುವವರು ಸಿಸೋಡಿಯಾ,” ಎನ್ನುತ್ತಾರೆ ದಿಲ್ಲಿ ಎಎಪಿಯ ಕಾರ್ಯಕರ್ತರೊಬ್ಬರು. ಸಿಸೋಡಿಯಾ ಇತ್ತೀಚಿಗೆ ಫಿನ್ಲೆಂಡ್ ದೇಶಕ್ಕೆ ಭೇಟಿ ನೀಡಿದ್ದರು. ವಿಶ್ವದಲ್ಲಿ ಇವತ್ತು ಶಿಕ್ಷಣದ ವಿಚಾರಕ್ಕೆ ಬಂದರೆ ‘ಸೂಪರ್ ಪವರ್’ ಅನ್ನಿಸಿಕೊಂಡಿರುವ ದೇಶ ಫಿನ್ಲೆಂಡ್. ಅಲ್ಲಿನ ಶಿಕ್ಷಣ ವ್ಯವಸ್ಥೆಯ ಕುರಿತು ಅಧ್ಯಯನ ಕೈಗೊಂಡಿದ್ದರು ಸಿಸೋಡಿಯಾ.

ಸಿಸೋಡಿಯಾ ಅಲ್ಲಿಗೆ ಭೇಟಿ ನೀಡಿದ ಸಮಯದಲ್ಲಿಯೇ, ದಿಲ್ಲಿಯಲ್ಲಿ ಡೆಂಗ್ಯು ಜ್ವರಕ್ಕೆ ಸರಣಿ ಸಾವುಗಳು ಸಂಭವಿಸಿದವು. ಇದನ್ನೇ ನೆಪವಾಗಿಟ್ಟುಕೊಂಡ ‘ಟೌಮ್ಸ್ ನೌ’ ವಾಹಿನಿ, ಫಿನ್ಲೆಂಡ್ಗೆ ತನ್ನ ಪ್ರತಿನಿಧಿಯೊಬ್ಬರನ್ನು ಕಳುಹಿಸಿತು. ಮನೀಶ್ ಸಿಸೋಡಿಯಾ ರಜೆಯ ವಿರಾಮವನ್ನು ವಿದೇಶದಲ್ಲಿ ಕಳೆಯುತ್ತಿದ್ದಾರೆ ಎಂಬರ್ಥದಲ್ಲಿ ‘ಟೈಮ್ಸ್ ನೌ’ ಬಿಂಬಿಸಿಲು ಮುಂದಾಯಿತು.

ಫಿನ್ಲೆಂಡ್ನಲ್ಲಿ ‘ಟೈಮ್ಸ್ ನೌ’ ಪ್ರತಿನಿಧಿ ಜತೆ ಮಾತನಾಡಿದ ಮನೀಶ್ ಸಿಸೋಡಿಯಾ ನೇರವಾಗಿಯೇ ಅರ್ನಾಬ್ ಗೋಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು. ಕೊನೆಗೆ, ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಸರಣಿ ಟ್ವೀಟ್ಗಳನ್ನೂ ಮಾಡಿದರು.

arnub-ms-reaction

ಟ್ವಿಟರ್ ವಾರ್: 

ಮನೀಶ್ ಸಿಸೋಡಿಯಾ ಸರಣಿ ಟ್ವೀಟ್ಗಳ ಮೂಲಕ ಅರ್ನಾಬ್ ವಿರುದ್ಧ ತಿರುಗಿ ಬೀಳುತ್ತಿದ್ದಂತೆ, ಟ್ವಟರ್ನಲ್ಲಿ ಗುರುವಾರ ವಾಗ್ವಾದಗಳು ಶುರುವಾದವು. #arnubmodikakuttahai (ಅರ್ನಾಬ್ ಮೋದಿ ಸಾಕಿದ ನಾಯಿ) ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಶುರುವಾಯಿತು. ಸಾಕಷ್ಟು ಜನ ದಿಲ್ಲಿ ಸರಕಾರದ ವಿಚಾರದಲ್ಲಿ ಅರ್ನಾಬ್ ತೆಗದುಕೊಳ್ಳುವ ನಿಲುವುಗಳನ್ನು ಟೀಕಿಸಿದರು. ‘ಟೈಮ್ಸ್ ನೌ’ ವಾಹಿನಿ ಪ್ರಧಾನಿ ಮೋದಿ ವಿಚಾರದಲ್ಲಿ ಮೃದು ನಿಲುವು ಹೊಂದಿದೆ ಎಂದು ಟೀಕಿಸಿದರು.

arnub-tweet-1 arnub-tweet-2 arnub-tweet-3

ಮರೆಯಾದ ಕಾಳಜಿ:

ಹಾಗೆ ನೋಡಿದರೆ, ಇವತ್ತು ದಿಲ್ಲಿ ಮಾತ್ರವಲ್ಲ ಇಡೀ ದೇಶದ ಶಿಕ್ಷಣ ವ್ಯವಸ್ಥೆಗೆ ಪರ್ಯಾಯದ ಹುಡುಕಾಟವೊಂದು ಬೇಕಿದೆ. ಅದಕ್ಕೆ ಫಿನ್ಲೆಂಡ್ ಶಾಲೆಗಳು ದಾರಿದೀಪವಾಗುವ ಗುಣಲಕ್ಷಣಗಳನ್ನು ಹೊಂದಿವೆ. ರಾಜ್ಯವೊಂದರ ಉಪಮುಖ್ಯಮಂತ್ರಿ ಅದನ್ನು ಪರಿಶೀಲಿಸಲು ತೆರೆಳಿದಾಗ, ಶಿಕ್ಷಣ ವ್ಯವಸ್ಥೆಯ ಕುರಿತು ಒಂದಷ್ಟು ಚರ್ಚೆಗಳನ್ನು ಮಾಧ್ಯಮಗಳು ಹುಟ್ಟು ಹಾಕಬೇಕಿತ್ತು. ಆದರೆ, ವೈಯುಕ್ತಿಕ ಮಟ್ಟಕ್ಕೆ ಇಳಿದು, ಹೀಗಳೆಯಲು ಹೊರಟಾಗ ಇವತ್ತಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಎಂಥಹ ಪ್ರತಿಕ್ರಿಯೆ ಬರಬಹುದು ಎಂಬುದಕ್ಕೆ ಉದಾಹರಣೆಯೊಂದು ಇಲ್ಲಿ ಸಿಕ್ಕಿದೆ.

ಇಲ್ಲೀವರೆಗೆ, ದಿಲ್ಲಿ ಸರಕಾರ ವರ್ಸಸ್ ಮೋದಿ- ಲೆಫ್ಟಿನೆಂಟ್ ಗೌವರ್ನರ್‌ ಅಂತಿದ್ದ ರಾಜಕೀಯ ಕದನ ಕಣದಲ್ಲಿ ಅರ್ನಾಬ್ ಗೋಸ್ವಾಮಿ ಹೆಸರು ತಳುಕು ಹಾಕಿಕೊಂಡಿದೆ. ರಾಷ್ಟ್ರೀಯ ಪತ್ರಿಕೋದ್ಯಮದ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ ಅಂತು ಅಲ್ಲ.

Top