An unconventional News Portal.

56 ದಿನಗಳಲ್ಲಿ 200 ಭಾಷಣ: ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಅಗ್ನಿ ದೇವತೆ’!

56 ದಿನಗಳಲ್ಲಿ 200 ಭಾಷಣ: ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಅಗ್ನಿ ದೇವತೆ’!

ಪಶ್ಚಿಮ ಬಂಗಾಳ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ.

ಕಳೆದ 56 ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಭಾರಿ ಚುನಾವಣಾ ಪ್ರಚಾರ ಸಭೆಗಳ ಪೈಕಿ ಸ್ಟಾರ್ ಕ್ಯಾಂಪೇನರ್ ಆಗಿ ಮಿಂಚುತ್ತಿದ್ದಾರೆ ಮಮತಾ ಬ್ಯಾನರ್ಜಿ.

ಕಾಂಗ್ರೆಸ್ ಪಕ್ಷದಿಂದ ಸಿಡುದು ಬಂದು, ಸ್ವತಂತ್ರವಾಗಿ ಪಕ್ಷವನ್ನು ಕಟ್ಟಿ, 36 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಭದ್ರಕೋಟೆಯನ್ನು ಒಡೆದು, ಕಳೆದ ಬಾರಿ ರಾಜ್ಯದ ಚುಕ್ಕಾಣಿಯನ್ನು ಹಿಡಿದ ಹಠಯೋಗಿ ರಾಜಕಾರಣಿ ಮಮತಾ. ಇಂಡಿಯಾ ಟುಡೇ ಹಾಗೂ ಸಿ- ವೋಟರ್ ಜಂಟಿ ಸಮೀಕ್ಷೆ, ಈ ಬಾರಿಯೂ ಮಮತಾ ಬಹುಮತದಿಂದ ಅಧಿಕಾರಕ್ಕೇರಲಿದ್ದಾರೆ ಎಂದು ಹೇಳಿದೆ. ಸಹಜವಾಗಿಯೇ, ಮಮತಾ ಬ್ಯಾನರ್ಜಿ ಸುತ್ತ ರಾಜಕೀಯ ಆಸಕ್ತರ ಚಿತ್ತ ನೆಟ್ಟಿದೆ.

mamata-banerjee-2ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಬೆಳಗ್ಗೆ, ರಾಜ್ಯದ ಉತ್ತರ ಭಾಗದಲ್ಲಿ ಮಮತಾ ಬ್ಯಾನರ್ಜಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದು ಕಳೆದ 56 ದಿನಗಳಲ್ಲಿ ಅವರು ನಡೆಸುತ್ತಿರುವ 200ನೇ ಬಹಿರಂಗ ಸಭೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡಿತ್ತು.

“ನಾವು ಈಗಾಗಲೇ ಚುನಾವಣೆಯನ್ನು ಗೆದ್ದು ಆಗಿದೆ. ಇನ್ನೇನಿದ್ದರು, ಎಷ್ಟು ಅಂತರದಲ್ಲಿ ಗೆಲ್ಲುತ್ತಿವಿ ಎಂಬುದಷ್ಟೆ ಪ್ರಶ್ನೆಯಾಗಿದೆ,’’ ಎನ್ನುತ್ತಲೇ ಮಾತು ಶುರು ಮಾಡಿದರು ಮಮತಾ.

ತೃಣಮೂಲ ಕಾಂಗ್ರೆಸ್ ಈ ಬಾರಿ ಸ್ವತಂತ್ರವಾಗಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸೆಣಸುತ್ತಿದೆ. ಬಿಜೆಪಿ ಪಕ್ಷದಲ್ಲಿ ಸ್ಟಾರ್ ಕ್ಯಾಂಪೇನರ್ಗಳಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪರವಾಗಿ ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ. ತಳಮಟ್ಟದಲ್ಲಿ ಅಸ್ಥಿತ್ವವನ್ನು ಹೊಂದಿರುವ ಸಿಪಿಎಂ ಪಕ್ಷದ ಕಡೆಯಿಂದ ಸೀತಾರಾಂ ಯಚೂರಿ, ಮಹಮದ್ ಸಲೀಂ ಮತ್ತಿತರರು ಮಮತಾ ವಿರುದ್ಧ ಭಾರಿ ಸಭೆಗಳನ್ನು ನಡೆಸಿದ್ದಾರೆ. ಹಾಗೆ ನೋಡಿದರೆ, ಮಮತಾ ತೃಣಮೂಲ ಪಕ್ಷದ ಪಾಲಿಗಿರುವ ಏಕೈಕ ಜನಾಕರ್ಷಣೆಯ ನಾಯಕಿ.

ಬೆಳಗ್ಗೆ ದಿನ್ಹಟಾ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಮಮತಾ, “ಇಂದು ಪ್ರಚಾರದ ಕೊನೆಯ ದಿನ. ಚುನಾವಣೆ ಪ್ರಕ್ರಿಯೆ ಹಲವು ದಿನಗಳನ್ನು ನುಂಗಿ ಹಾಕುತ್ತಿದೆ. ಇದರಿಂದ ಸಾಮಾನ್ಯ ಜನರ ಬದುಕು ಕಷ್ಟವಾಗಿದೆ. ಆದರೆ, ಕೊನೆಯಲ್ಲಿ ನಾವು ವಿಜಯಿಗಳಾಗಿ ಹೊರಹೊಮ್ಮಲಿದ್ದೇವೆ,’’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯ ನಡುವೆಯೇ ಮಹಿಳೆಯೊಬ್ಬರು ಕುಸಿದು ಬಿದ್ದರು. ಆಗ ಮಾತು ನಿಲ್ಲಿಸಿದ ಮಮತಾ, ತಮ್ಮ ಬಳಕೆಗೆಂದು ಇಟ್ಟುಕೊಂಡಿದ್ದ ನೀರಿನ ಬಾಟೆಲ್ ಎಸೆದು, ಆಕೆಯನ್ನು ಆರೈಕೆ ಮಾಡುವಂತೆ ಸೂಚಿಸಿದರು. ಇದಕ್ಕೆ ಜನ ಭಾರಿ ಕರತಾಡನದ ಮೂಲಕ ಸ್ಪಂದಿಸಿದರು ಎಂದು ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಮಮತಾ ಅವರನ್ನು ‘ಅಗ್ನಿ ದೇವತೆ’, ‘ನಮ್ಮ ದೇವರು’, ‘ನಮ್ಮ ನಾಯಕಿ’ ಎಂಬ ಅನ್ವರ್ಥನಾಮಗಳಿಂದ ಕರೆಯುತ್ತಿದ್ದಾರೆ. ಇಡೀ ಚುನಾವಣೆಯ ಬಹಿರಂಗ ಸಭೆಗಳ ಉದ್ದಕ್ಕೂ, ಬಂಗ್ಲಾರ್ ಅಗ್ನಿ ಕನ್ಯಾ (ಬೆಂಗಾಳದ ಅಗ್ನಿ ದೇವತೆ) ಎಂಬ ಜಯಘೋಷಗಳು ಮೊಳಗುತ್ತಿದ್ದವು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top