An unconventional News Portal.

ವಿಜಯ್ ಮಲ್ಯ ಹಸ್ತಾಂತರಕ್ಕೆ ಒಲ್ಲೆ ಎಂದ ಬ್ರಿಟನ್

ವಿಜಯ್ ಮಲ್ಯ ಹಸ್ತಾಂತರಕ್ಕೆ ಒಲ್ಲೆ ಎಂದ ಬ್ರಿಟನ್

ಸಾರ್ವಜನಿಕ ವಲಯದ ಬ್ಯಾಂಕುಗಳ 9000 ಕೋಟಿ ಸಾಲ ಮರುಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ಬಿಟ್ಟು ಪರಾರಿಯಾದ ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಒಪ್ಪಿಸುವಂತೆ ಮಾಡಿಕೊಂಡ ಮನವಿಯನ್ನು ಬ್ರಿಟನ್ ನಿರಾಕರಿಸಿದೆ.

ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಏಪ್ರಿಲ್ 29ರಂದು ಬ್ರಿಟನ್ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಲ್ಯ ಅವರನ್ನು ಗಡಿಪಾರು ಮಾಡಲು ಪ್ರಯತ್ನಿಸುವುದಾಗಿ ಬ್ರಿಟನ್ ಸರಕಾರ ಹೇಳಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ವಿಜಯ್ ಮಲ್ಯ ಪ್ರಕರಣದ ಗಂಭೀರತೆಯನ್ನು ತಾನು ಪರಿಗಣಿಸಿದ್ದೇನೆ; ಅಂತೆಯೇ ಈ ವಿಷಯದಲ್ಲಿ ತಾನು ಭಾರತ ಸರಕಾರದೊಂದಿಗೆ ಸಂಪೂರ್ಣವಾಗಿ ಸಹಕರಿಸಲಿದ್ದೇನೆ ಎಂದು ಬ್ರಿಟನ್ ಸರಕಾರ ಹೇಳಿರುವುದಾಗಿ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.

ವಿದೇಶ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ವಿಕಾಸ್ ಸ್ವರೂಪ್ ಅವರು, “1971ರ ವಲಸೆ ಕಾಯಿದೆ ಪ್ರಕಾರ ಬ್ರಿಟನ್ ಪ್ರವೇಶದ ಸಂದರ್ಭದಲ್ಲಿ ವ್ಯಕ್ತಿಯ ಊರ್ಜಿತದಲ್ಲಿರುವ ಪಾಸ್ಪೋರ್ಟ್ ಗೆ ಅನುಗುಣವಾಗಿ ಆತ ಬ್ರಿಟನ್ನಲ್ಲಿ ಇರಲು ಬಯಸುವಷ್ಟು ಕಾಲ ವಾಸ್ತವ್ಯದಲ್ಲಿರುವುದಕ್ಕೆ ಅಥವಾ ಬ್ರಿಟನ್ ನಿಂದ ನಿರ್ಗಮಿಸುವುದಕ್ಕೆ ವ್ಯಕ್ತಿಗೆ ಪ್ರತ್ಯೇಕ ಪಾಸ್ಪೋರ್ಟ್ ಬೇಕಾಗಿಲ್ಲ. ಹಾಗಿದ್ದರೂ ವಿಜಯ್ ಮಲ್ಯ ಅವರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಭಾರತ ಸರಕಾರದೊಂದಿಗೆ ಸಂಪೂರ್ಣವಾಗಿ ನಾವು ಸಹಕರಿಸುತ್ತೇವೆ.” ಎಂದು ಬ್ರಿಟನ್ ಸರಕಾರ ಹೇಳಿದೆ.

ಆದರೆ ವಿಜಯ್ ಮಲ್ಯ ಅವರನ್ನು ಬ್ರಿಟನ್ ಸರಕಾರದಿಂದ ಭಾರತಕ್ಕೆ ನೇರವಾಗಿ ಗಡೀಪಾರು ಮಾಡಿಸಿಕೊಳ್ಳುವ ಸಾಧ್ಯತೆಗಳನ್ನೇ ವಿದೇಶ ವ್ಯವಹಾರಗಳ ಸಚಿವಾಲಯ ಅನ್ವೇಷಿಸುತ್ತಿದೆ; ಏಕೆಂದರೆ ಈ ಕ್ರಮದಲ್ಲಿ ಯಾವುದೇ ದೀರ್ಘ ಕಾನೂನು ಪ್ರಕ್ರಿಯೆಗಳು ಒಳಗೊಳ್ಳುವುದಿಲ್ಲ ಎಂದು ವಿಕಾಸ್ ಸ್ವರೂಪ್ ಹೇಳಿದರು.

Top