An unconventional News Portal.

‘ಲೋಕಾಯುಕ್ತ ಡೀಲ್ ಕೇಸ್’: ಪತ್ರಕರ್ತ ಶ್ರೀನಿವಾಸ್ ಗೌಡ ಸೇರಿ 13 ಜನರಿಗೆ ಜಾಮೀನು

‘ಲೋಕಾಯುಕ್ತ ಡೀಲ್ ಕೇಸ್’: ಪತ್ರಕರ್ತ ಶ್ರೀನಿವಾಸ್ ಗೌಡ ಸೇರಿ 13 ಜನರಿಗೆ ಜಾಮೀನು

ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಲೋಕಾಯುಕ್ತ ಲಂಚ ಪ್ರಕರಣದಲ್ಲಿ 13 ಜನರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನ್ಯಾ. ಡಾ. ವೈ. ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸೇರಿದಂತೆ ಒಟ್ಟು 13 ಆರೋಪಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿ ರತ್ನಕಲಾ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಜಾಮೀನು ಮಂಜೂರಾಗಿರುವ ಹಿನ್ನಲೆಯಲ್ಲಿ ಆರೋಪಿಗಳು ಮಂಗಳವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ವಿಶೇಷ ತನಿಖಾ ತಂಡ ದಾಖಲಿಸಿದ್ದ ಐದೂ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈಟಿವಿಯ ಮಾಜಿ ಪತ್ರಕರ್ತ ಶ್ರೀನಿವಾಸ್ ಗೌಡ, ಲೋಕಾಯುಕ್ತ ಮಾಜಿ ಜಂಟಿ ಆಯುಕ್ತ ಸಯ್ಯದ್ ರಿಯಾಜ್, ಅಶೋಕ್ ಕುಮಾರ್, ಶಂಕರೇಗೌಡ, ಆರ್ಟಿಐ ಕಾರ್ಯಕರ್ತ ಭಾಸ್ಕರ್, ಹೊಟ್ಟೆ ಕೃಷ್ಣ, ನರಸಿಂಹಮೂರ್ತಿ ಜೈಲಿನಿಂದ ಹೊರಬರಲಿದ್ದಾರೆ.

ಪ್ರಮುಖ ವ್ಯಕ್ತಿಯ ಸಾವು

ಇದೇ ವೇಳೆ ಇಡೀ ಪ್ರಕರಣದಲ್ಲಿ ಪ್ರಮುಖ ಆರೋಪ ಕೇಳಿ ಬಂದಿದ್ದ, ಆದರೆ ಸಾಕ್ಷ್ಯ ಕೊರತೆಯಿಂದ ಬಂಧನವಾಗದೇ ಉಳಿದಿದ್ದ ಇಂಜಿನಿಯರ್ ಮಾಗಡಿಯ ಮಹೇಶ್ ಸೋಮವಾರವೇ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಮೃತ ಮಹೇಶ್, ಶಂಕರೇಗೌಡ ಸಂಬಂಧಿಯಾಗಿದ್ದು, ಶಂಕರೇಗೌಡ, ಶ್ರೀನಿವಾಸ್ ಗೌಡ, ಅಶೋಕ್ ಕುಮಾರ್ ಗ್ಯಾಂಗಿನಲ್ಲೇ ಒಬ್ಬರಾಗಿದ್ದರು ಎನ್ನಲಾಗಿದೆ.

ಚಿತ್ರ ಕೃಪೆ: ಡೆಕ್ಕನ್ ಕ್ರಾನಿಕಲ್

Top