An unconventional News Portal.

ಬರೊಬ್ಬರಿ 256 ವರ್ಷ ಬದುಕಿದ ಈತ ಸಾಯುವ ಮುನ್ನ ಬಿಚ್ಚಿಟ್ಟಿದ್ದ ಆಯಸ್ಸಿನ ಸಿಕ್ರೇಟ್ !

ಬರೊಬ್ಬರಿ 256 ವರ್ಷ ಬದುಕಿದ ಈತ ಸಾಯುವ ಮುನ್ನ ಬಿಚ್ಚಿಟ್ಟಿದ್ದ ಆಯಸ್ಸಿನ ಸಿಕ್ರೇಟ್ !

ಜಗತ್ತಿನಲ್ಲಿ ಮನುಷ್ಯರು ಅತೀ ಹೆಚ್ಚು ಅಂದರೆ ಎಷ್ಟು ವರ್ಷ ಬದುಕಬಹುದು? 110, 115… ಅಲ್ಲಾ.. ನಾವಿವತ್ತು ನಿಮಗೆ 256 ವರ್ಷ ಜೀವನ ಮಾಡಿದ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಸ್ತೀವಿ. ಅಂದಾಗೆ ಈತ ಪುರಾಣದ ಕಥೆಯ ಪಾತ್ರವಲ್ಲ ಅಥವಾ ಕಟ್ಟು ಕಥೆಯ ನಾಯಕ ಅಲ್ವೇ ಅಲ್ಲ. ಚೀನಾದ ಅತೀ ದೀರ್ಘ ಕಾಲ ಬದುಕಿದ ವ್ಯಕ್ತಿಯೊಬ್ಬನ ನೈಜ ಕಥೆ ಇದು.

ಹೀಗೆ 256 ವರ್ಷಗಳ ಕಾಲ ಬದುಕಿದ ವ್ಯಕ್ತಿಯ ಹೆಸರು ಲಿ ಚಿಂಗ್ ಯೆನ್. 1930 ರಲ್ಲಿ ಚೀನಾದ ಚೆಂಗಾಡು ಯುನಿವರ್ಸಿಟಿಯ ಪ್ರೊಫೆಸರ್ ವು ಚುಂಗ್ ಚೇ ಎಂಬವರು ಅಧ್ಯಯನ ನಡೆಸಿದ ಚೀನಾದ ಸರಕಾರಿ ದಾಖಲೆಯ ಪ್ರಕಾರ ಈ ವ್ಯಕ್ತಿಗೆ 150ನೇ ವರ್ಷ ಆಯ್ತು ಎಂಬ ಮಾಹಿತಿಯನ್ನು ಹೊರಗೆಡವಿದ್ದರು. ಇದು ಅಂದಿನ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲೂ ವರದಿಯಾಗಿತ್ತು. ಆದರೆ ಅದಾಗಿ ಐವತ್ತು ವರ್ಷಗಳ ಬಳಿಕ ಅಂದರೆ 1877ರಲ್ಲಿ 200 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಾಗಲೂ ಲಿ ಚಿಂಗ್ ಜೀವಂತವಾಗಿದ್ದರು ಎಂಬುದಕ್ಕೆ ದಾಖಲೆಗಳು ಇದೆ.

ಇನ್ನು ಲಿ ಚಿಂಗ್ ವಾಸ ಮಾಡ್ತಿದ್ದ ಪ್ರದೇಶವನ್ನು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ವರದಿಗಾರ ಸಂದರ್ಶಿದ್ದ. ಆ ವೇಳೆ ಅಲ್ಲಿ ಸುತ್ತ ಮುತ್ತಲಿನ ಜನ ಲಿ ಚಿಂಗ್ ನನ್ನು ತಮ್ಮ ತಾತಂದಿರು ಎಳೆ ವಯಸ್ಸಿನಲ್ಲೇ ನೋಡ್ತಿದ್ದುಗಾಗಿ ಹೇಳಿಕೊಂಡಿದ್ದರು ಹಾಗೂ ಆ ವೇಳೆಗಾಗಲೇ ಲಿ ಚಿಂಗ್ ಮಧ್ಯವಯಸ್ಸನ್ನು ದಾಟಿದ್ರು ಎಂದು ಹೇಳುತ್ತಿದ್ದದನ್ನು ಸ್ಥಳೀಯರು ವರದಿಗಾರನಲ್ಲಿ ಹೇಳಿಕೊಂಡಿದ್ದನ್ನು ಪತ್ರಿಕೆ ವರದಿ ಮಾಡಿತ್ತು. ಅವರೆಲ್ಲಾ ವಯಸ್ಸಾಗಿ ತೀರಿಕೊಂಡಿದ್ದರೂ ಲಿ ಚುಂಗ್ ಇನ್ನೂ ಹಾಗೇ ಇದ್ದರು. 1933ರ ಮೇ 6 ರಂದು ಲಿ ಚಿಂಗ್ ಮೃತರಾದರು.

ಆರೋಗ್ಯಪೂರ್ಣ ನೈಸರ್ಗಿಕ ಆಹಾರ ಮತ್ತು ನಿಯಮಿತ ವ್ಯಾಯಾಮ ಆಯಸ್ಸನ್ನು ಹೆಚ್ಚು ಮಾಡುತ್ತದೆ ಎಂಬ ನಂಬಿಕೆ ಚೀನದಲ್ಲಿ ಹಿಂದಿನಿಂದಲೂ ಇದೆ.

ಆರೋಗ್ಯಪೂರ್ಣ ನೈಸರ್ಗಿಕ ಆಹಾರ ಮತ್ತು ನಿಯಮಿತ ವ್ಯಾಯಾಮ ಆಯಸ್ಸನ್ನು ಹೆಚ್ಚು ಮಾಡುತ್ತದೆ ಎಂಬ ನಂಬಿಕೆ ಚೀನದಲ್ಲಿ ಹಿಂದಿನಿಂದಲೂ ಇದೆ.

ಇನ್ನು ಲಿ ಚಿಂಗ್ ಇಷ್ಟು ವರ್ಷ ಜೀವಿಸೋದಿಕ್ಕೆ ಕಾರಣ ಏನು ಅನ್ನೋದೆ ಎಲ್ಲರಿಗೂ ಆಶ್ಚರ್ಯದ ಸಂಗತಿ. ಲಿ ಚುಂಗ್ ಅವರ ಜೀವನ ಶೈಲಿ ಅವರನ್ನು ಸುದೀರ್ಘ ಕಲಾ ಬದುಕುವಂತೆ ಮಾಡಿತ್ತು. ಲಿ ಚುಂಗ್ ತನ್ನ 10 ನೇ ವಯಸ್ಸಿಗೆ ಪರ್ವತ ಪ್ರದೇಶಗಳಿಂದ ಗಿಡ ಮೂಲಿಕೆಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ತೊಡಗಿಸಿಕೊಂಡಿದ್ದರು. ಮೊದಲ ನೂರು ವರ್ಷಗಳ ಕಾಲ ಲಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.  ಅಲ್ಲದೆ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವ ಸಲುವಾಗಿ ಕೆಲವೊಂದು ಪಥ್ಯಗಳನ್ನು ಲಿ ಚಿಂಗ್ ಮಾಡುತ್ತಿದ್ದರು.

ಲಿ ಚಿಂಗ್ ಅವರ ಶಿಷ್ಯಂದಿರ ಪ್ರಕಾರ ಲಿ ಚಿಂಗ್ ಮಾತ್ರ ದೀರ್ಘಾಯುಷ್ಯವನ್ನು ಹೊಂದಿಲ್ಲವಂತೆ. ಅಲ್ಲಿ 500 ವರ್ಷ ಬದುಕಿದವರೂ ಕೂಡ ಇದ್ದರಂತೆ. ಲಿ ಚಿಂಗ್ ಒಮ್ಮೆ 500 ವರ್ಷದ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದರಂತೆ. ಆಗ ಅವರಿಂದ ದೀರ್ಘಾಯುಷ್ಯ ಪಡೆಯಲು ಬೇಕಾದಂತಾ ಆಹಾರ ಪಥ್ಯ ವ್ಯಾಯಾಮಗಳನ್ನು ಕೇಳಿ ಅಭ್ಯಾಸ ಮಾಡಿಕೊಂಡರಂತೆ.

ಲಿ ಚಿಂಗ್ ಸಾವಿಗೆ ಸಮೀಪದಲ್ಲಿದ್ದಾಗ ಒಂದು ಸಾರಿ ಇಷ್ಟೊಂದು ದೀರ್ಘಾಯುಷ್ಯ ಜೀವನ ನಡೆಸಿದ್ದರ ಬಗ್ಗೆ ಕೇಳಿದಾಗ ಅವರಿಂದ ಬಂದ ಉತ್ತರ ಏನೆಂದರೆ ನಾನು ಈ ಜಗತ್ತಿನಲ್ಲಿ ಏನೆಲ್ಲಾ ಮಾಡಬೇಕಿತ್ತೋ ಅದೆಲ್ಲವನ್ನೂ ಮಾಡಿ ಮುಗಿಸಿದ್ದೇನೆ ಎಂಬುದು. ಅವರ ಜೀವನ ದಲ್ಲಿ ನಿಜಕ್ಕೂ ಸಾರ್ಥಕತೆಯಿತ್ತು. ಆ ಸಾರ್ಥಕತೆಯ ಬಳಿಕವೇ ಆತ ಸಾವಿಗೀಡಾಗಿದ್ದು.

ಇನ್ನು ಲಿ ಅವರು ತಮ್ಮ ದೀರ್ಘಾಯುಷ್ಯದ ಸೀಕ್ರೆಟನ್ನೂ ಕೂಡ ಬಿಚ್ಚಿದ್ದಾರೆ. ಹೃದಯವನ್ನು ಶಾಂತದಲ್ಲಿಟ್ಟುಕೊಳ್ಳುವುದು, ಆಮೆಯ ಹಾಗೇ ಕುಳಿತುಕೊಂಡು, ಪಾರಿವಾಳದ ರೀತಿಯಲ್ಲಿ ಚಟುವಟಿಕೆಯಿಂದ ಹಾಗೂ ನಾಯಿಯಂತೆ ನಿದ್ರಿಸುವ ಅಭ್ಯಾಸವನ್ನು ಇಟ್ಟುಕೊಂಡಿರಬೇಕು ಎಂದು ತಮ್ಮ ಸಲಹೆಯನ್ನು ನೀಡಿದ್ದಾರೆ. ಭಾರತದಲ್ಲಿ ನಾಗರೀಕರ ಸರಾಸರಿ ಜೀವಿತಾವಧಿ 66 ವರ್ಷ  ಮಾತ್ರ.  ಹೀಗಿರುವಾಗ ಓರ್ವ ವ್ಯಕ್ತಿ 256 ವರ್ಷ ಬದುಕಿದ ಕತೆ ನಿಸರ್ಗದ ಜತೆ ಹೊಂದಬೇಕಿರುವ ಸಂಬಂಧದ ಪಾಠವನ್ನು ಹೇಳುತ್ತಿದೆ.

Leave a comment

Top