An unconventional News Portal.

ಕಾಂಗ್ರೆಸ್ಗೆ ಗೆಲುವಿನ ನಗೆ, ಬಿಜೆಪಿಗೆ ಸಮಾಧಾನ, ಜೆಡಿಎಸ್ಗೆ ಮಾತ್ರ ನಿರೀಕ್ಷಿತ ಆಘಾತ

ಕಾಂಗ್ರೆಸ್ಗೆ ಗೆಲುವಿನ ನಗೆ, ಬಿಜೆಪಿಗೆ ಸಮಾಧಾನ, ಜೆಡಿಎಸ್ಗೆ ಮಾತ್ರ ನಿರೀಕ್ಷಿತ ಆಘಾತ

ಇಂದು (ಶನಿವಾರ) ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಒಂದು ಸ್ಥಾನ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದು ಎಂದಿನಂತೆ ಜೆಡಿಎಸ್ ಮುಖಭಂಗ ಅನುಭವಿಸಿದೆ.  ಜೆಡಿಎಸ್ ಪಕ್ಷದ ಎಂಟು ಶಾಸಕರು ವಿಪ್ ಉಲ್ಲಂಘಿಸಿ ಮತ ಚಲಾಯಿಸುವ ಮೂಲಕ  ಕಾಂಗ್ರೆಸ್‍ನ ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿಯನ್ನು ಗೆಲ್ಲಿಸಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಏನು? ಎಲ್ಲರಿಗೂ ಗೊತ್ತಿರುವಂತೆ ಮತ್ತದೇ ಕುದುರೆ ವ್ಯಾಪಾರ.

ಕಾಂಗ್ರೆಸ್ ಪಕ್ಷದ ಹೆಚ್ಚುವರಿ ಮತಗಳು, ಪಕ್ಷೇತರರ ಮತಗಳು, ಜೆಡಿಎಸ್ ಬಂಡಾಯ ಮತಗಳನ್ನು ಒಟ್ಟಾಗಿಸಿ ರಾಮಮೂರ್ತಿ ಭರ್ಜರಿ 52 ಮತಗಳಿಂದ ಗೆಲ್ಲುವ ಮೂಲಕ ತಮ್ಮ ‘ಬಲ’ ಪ್ರದರ್ಶಿಸಿದ್ದಾರೆ. ಇನ್ನು ಆಸ್ಕರ್ ಫರ್ನಾಂಡಿಸ್ 46, ಮತ್ತು ಜಯರಾಮ್ ರಮೇಶ್ 46 ಮತಗಳಿಂದ ಕಾಂಗ್ರೆಸ್ನಿಂದ ಗೆದ್ದ ಮತ್ತಿಬ್ಬರು ಸದಸ್ಯರಾಗಿದ್ದಾರೆ.

ವಿಪ್ ಉಲ್ಲಂಘಿಸಿದ 8 ಮಂದಿ ಶಾಸಕರು ಯಾರು?

ಭೀಮಾ ನಾಯ್ಕ್, ಅಖಂಡ ಶ್ರೀನಿವಾಸ ಮೂರ್ತಿ, ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಜಮೀರ್ ಅಹ್ಮದ್, ಬಂಡೀಸಿದ್ದೆಗೌಡ, ಇಕ್ಬಾಲ್ ಅನ್ಸಾರಿ, ಮತ್ತು ಗೋಪಾಲಯ್ಯ ವಿಪ್ ಉಲ್ಲಂಘಿಸಿದವರಾಗಿದ್ದಾರೆ.

ಈ 8 ಶಾಸಕರ ಮತ ಅಸಿಂಧುಗೊಳಿಸುವಂತೆ ಜೆಡಿಎಸ್ ಚುನಾವಣಾ ಏಜೆಂಟ್ ರೇವಣ್ಣ ಮನವಿ ಮಾಡಿದ್ದರು. ಈ ಶಾಸಕರು ಕಾಂಗ್ರೆಸ್ ಗೆ ಮತದಾನ ಮಾಡಿದ್ದಾರೆ. ಹಾಗಾಗಿ 8 ಶಾಸಕರ ಮತವನ್ನು ಅಸಿಂಧುಗೊಳಿಸಬೇಕೆಂದು ಚುನಾವಣಾಧಿಕಾರಿಗೆ ಮನವಿ ಮಾಡಿದರು.

ಆದರೆ ಕುದುರೆ ವ್ಯಾಪಾರವನ್ನು ಎಂದಿನಂತೆ ಜಮೀರ್ ಅಹಮದ್ ಸೇರಿದಂತೆ ಜೆಡಿಎಸ್ ಶಾಸಕರು ನಿರಾಕರಿಸಿದ್ದಾರೆ. ನಾವು ತುಂಬಾ ನೊಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇವೆ. ಕಾಂಗ್ರೆಸ್ ಪರ ಮತ ಹಾಕುವುದಾಗಿ ನಿನ್ನೆಯೇ ಹೇಳಿದ್ದೆವು. ನಾವು 8 ಮಂದಿ ಕಾಂಗ್ರೆಸ್ ಗೆ ಮತ ಹಾಕಿದ್ದೇವೆ ಎಂದು ಜೆಡಿಎಸ್ ಶಾಸಕರು ಹೇಳಿದ್ದಾರೆ.

ಈ ರಾಜಕೀಯ ಮೇಲಾಟದಲ್ಲಿ ಆಡಳಿತಾರೂಢ ಕಾಂಗ್ರೆಸ್‍ನ ತಂತ್ರ ಫಲಿಸದಂತಾಗಿದೆ. ಪ್ರತಿಪಕ್ಷ ಜೆಡಿಎಸ್ ಕೊನೆ ಕ್ಷಣದಲ್ಲಿ ಎಡವಿದ ಪರಿಣಾಮ ತನ್ನ ಅಭ್ಯರ್ಥಿ ಬಿ. ಎ. ಫಾರೂಕ್ ಕೇವಲ 33 ಮತಗಳನ್ನು ಪಡೆದು ಮುಖಭಂಗ ಅನುಭವಿಸಿದ್ದಾರೆ. ಇನ್ನು ಎಚ್ಚರಿಕೆಯ ಹೆಜ್ಜೆಯನ್ನಿಟ್ಟ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.  ಬಿಜೆಪಿಯ ನಿರ್ಮಲಾ ಸೀತರಾಮನ್ 47 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಜೆಡಿಎಸ್‍ನ ಎಂಟು ಶಾಸಕರು ವಿಪ್ ಉಲ್ಲಂಘಿಸಿ, ಪಕ್ಷದ ಏಜೆಂಟರಾದ ಎಚ್.ಡಿ.ರೇವಣ್ಣ ಻ವರಿಗೆರಿಗೆ ತೋರಿಸಿಯೇ ಮತ ಚಲಾವಣೆ ಮಾಡಿದರು. ಅವರು ಸ್ಥಳದಲ್ಲಿಯೇ ನೋಟಿಸ್ ನೀಡಿದರೂ ಲೆಕ್ಕಿಸದೆ ಮತ ಚಲಾಯಿಸಿ ಹೊರಗೆ ಬಂದರು. ನಂತರ ಮಾತನಾಡಿದ ಚಲುವರಾಯಸ್ವಾಮಿ ನಾವು ಎಂಟು ಶಾಸಕರು ವಿಪ್ ಉಲ್ಲಂಘಿಸಿಯೇ ಮತ ಹಾಕಿದ್ದೇವೆ. ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ನೀವೇ ಊಹಿಸಿಕೊಳ್ಳಿ ಎಂದು ಹೇಳಿದರು.

ಕಳೆದ ಬಾರಿ ನಮ್ಮೆಲ್ಲರೊಂದಿಗೆ ಚರ್ಚಿಸಿ ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈ ಬಾರಿ ಪಕ್ಷೇತರರು ಸಹಿ ಹಾಕಿದ್ದಾರೆಂದು ನಮ್ಮನ್ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಕಾರಣ ನಾವು ಹಿಂದೆ ಸರಿದಿದ್ದೆವು.

ಅಂತು ಇಂತೂ ರಾಜಕೀಯ ಚದುರಂಗದಾಟದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಆಂತರಿಕ ಕಚ್ಚಾಟದಿಂದ ಸೋತಿದ್ದು, ಇದರ ಲಾಭ ಕಾಂಗ್ರೆಸ್‍ಗೆ ಲಭಿಸಿದೆ. ಇನ್ನು ಕರ್ನಾಟಕದಿಂದ ಹೊರಗೆ ಹೋಗಿ ರಾಜಸ್ಥಾನದಲ್ಲಿ ಚುನಾವಣೆಗೆ ನಿಂತಿದ್ದ ಎಂ ವೆಂಕಯ್ಯ ನಾಯ್ಡು ಮತ್ತೆ ನಾಲ್ಕನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ.

Leave a comment

Top