An unconventional News Portal.

‘ಗೋ ರಕ್ಷಣೆ ನೆಪದಲ್ಲಿ ನಡೆದಿದ್ದು ಎರಡೇ ಕೃತ್ಯ’: ಇದು ಪೊಲೀಸ್ ಇಲಾಖೆ ಮಾಹಿತಿ ಎಂದ ಅಧಿಕಾರಿ

‘ಗೋ ರಕ್ಷಣೆ ನೆಪದಲ್ಲಿ ನಡೆದಿದ್ದು ಎರಡೇ ಕೃತ್ಯ’: ಇದು ಪೊಲೀಸ್ ಇಲಾಖೆ ಮಾಹಿತಿ ಎಂದ ಅಧಿಕಾರಿ

“ನಾವು ಕಾನೂನು ಏನು ಹೇಳಿದೆಯೋ, ಅದನ್ನು ಫಾಲೋ ಮಾಡಿದ್ದೀವಿ. 1964ರಿಂದ ಇದ್ದ ಕಾನೂನು ಅದು. ಅದರಲ್ಲಿ ನ್ಯೂನತೆಗಳಿವೆ ಎಂದು ಈಗ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಎರಡೇ ದೌರ್ಜನ್ಯ ಕೃತ್ಯಗಳು ನಡೆದಿವೆ. ಹಾಗಂತ ಪೊಲೀಸ್‌ ಇಲಾಖೆ ನೀಡಿದ ಮಾಹಿತಿಯನ್ನು ನಾವು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆಗೆ ಮುನ್ನ, ಕಾನೂನು ಇಲಾಖೆಯಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೆ ಅನುಮತಿ ಪಡೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ನಾವು ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ…”

ಹೀಗಂತ ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು ಪಶು ಸಂಗೋಪನೆ ಇಲಾಖೆಯ ಹೆಚ್ಚವರಿ ನಿರ್ದೇಶಕ ಆರ್‌. ಕೆ. ಚೆಲುವಯ್ಯ. ಅವರು ಇತ್ತೀಚೆಗೆ ಸುಪ್ರಿಂ ಕೋರ್ಟ್‌ನಲ್ಲಿ ಸರಕಾರದ ಪರವಾಗಿ ಸಲ್ಲಿಸಿರುವ ಅಫಿಡವಿಟ್ ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ನಾನಾ ಜಿಲ್ಲೆಗಳಲ್ಲಿ ‘ಗೋ ರಕ್ಷಣೆ’ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ವಿಫಲವಾಗಿದೆ. ಮೇಲಾಗಿ ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ ಮಾಡುವ ಮೂಲಕ ಪರೋಕ್ಷವಾಗಿ ‘ಗೋ ರಾಜಕೀಯ’ ಮಾಡುವವರ ರಕ್ಷಣೆಗೆ ಮುಂದಾಗಿದೆ ಎಂದು ಟೀಕೆಗಳು ಕೇಳಿ ಬರುತ್ತಿವೆ. ಜತೆಗೆ, ರಾಜ್ಯದಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ತಲಾ ಒಂದರಂತೆ, ಕೇವಲ ಎರಡು ಗೋ ರಕ್ಷಣೆ ನೆಪದಲ್ಲಿ ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂಬ ಸುಳ್ಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಒಳಗೊಂಡಿದೆ ಎಂದು ದೂರುಗಳು ಕೇಳಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಸರಕಾರದ ಪರವಾಗಿ, ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಅಧಿಕಾರಿ ಚಲುವಯ್ಯ ಅವರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ಗೋ ರಕ್ಷಣೆ ಮಾಡಲು 1964ರಲ್ಲಿಯೇ ರಚನೆಗೊಂಡ ಕಾನೂನು ಅನುವು ಮಾಡಿಕೊಡುತ್ತಿದೆ. ಆದರೆ ಎಲ್ಲಿಯೂ ಗೋ ರಕ್ಷಣೆ ಹೆಸರಿನಲ್ಲಿ ದೈಹಿಕ ಅಥವಾ ಮಾನಸಿಕ ದೌರ್ಜನ್ಯ ಎಸಗಬೇಕು ಎಂದು ತಿಳಿಸಿಲ್ಲ. ಅಂತಹ ಘಟನೆಗಳು ನಡೆದರೆ, ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು. ಅದನ್ನೇ ನಾವು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದೀವಿ,” ಎಂದರು.

ಹಿನ್ನೆಲೆ:

‘ಗೋ ರಕ್ಷಣೆ’ ನೆಪದಲ್ಲಿ ಗುಂಪುಗಳು ದೇಶಾದ್ಯಂತ ಹಲ್ಲೆ, ದೌರ್ಜನ್ಯಗಳಲ್ಲಿ ತೊಡಗಿವೆ. ಹೀಗಾಗಿ ಅವುಗಳನ್ನು ನಿಷೇಧಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.ಇದನ್ನು ಸಲ್ಲಿಸಿದವರು ತಹಸೀನ್ ಎಸ್ ಪೂನವಾಲಾ. ಈ ಅರ್ಜಿಯಲ್ಲಿ ‘ಗೋ ರಕ್ಷಕ’ರು ಹಿಂಸೆ ಹಾಗೂ ದಲಿತರು ಮತ್ತು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವುದಲ್ಲಿ ನಿರತರಾಗಿದ್ದಾರೆ ಎಂದು ದೂರಿದ್ದರು. ಮಾತ್ರವಲ್ಲ ಈ ಗುಂಪುಗಳನ್ನು ನಿಷೇಧಿಸಬೇಕು ಎಂದು ಕೇಳಿಕೊಂಡಿದ್ದರು.

ಈ ಅರ್ಜಿಗೆ ಕೇಂದ್ರ ಸರಕಾರ ಹಾಗೂ ಇತರ ಆರು ರಾಜ್ಯ ಸರಕಾರಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಇದರಲ್ಲಿಕರ್ನಾಟಕವೂ ಸೇರಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಎಲ್ಲಾ ಪ್ರತಿವಾದಿಗಳಿಗೆ ಏಪ್ರಿಲ್ 7ರಂದು ನೊಟೀಸ್ ಜಾರಿ ಮಾಡಿ ಮೂರು ವಾರದಲ್ಲಿ ಉತ್ತರಿಸುವಂತೆ ತಿಳಿಸಿತ್ತು. ಮಾತ್ರವಲ್ಲ ಯಾಕೆ ಈ ಗೋ ರಕ್ಷಕರ ಗುಂಪುಗಳನ್ನು ನಿಷೇಧ ಮಾಡಬಾರದು ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಕೇಳಿತ್ತು.

ರ್ನಾಟಕದ ವಾದ:

ಹೀಗೆ ಪ್ರತಿವಾದಿಯ ನೆಲೆಯಲ್ಲಿ ಸುಪ್ರೀಂ ಕೋರ್ಟಿಗೆ ಪ್ರತಿಕ್ರಿಯೆ ನೀಡಿಕರ್ನಾಟಕ ತನ್ನ ರಾಜ್ಯದಲ್ಲಿ ಜಾರಿಯಲ್ಲಿರುವಕರ್ನಾಟಕ ಗೋ ವಧೆ ಮತ್ತು ಜಾನುವಾರ ಸಂರಕ್ಷಣಾ ಕಾಯ್ದೆ-1964′ನ್ನು ಸಮರ್ಥನೆ ಮಾಡಿಕೊಂಡಿತು. ಲ್ಲಿಗೆ ವಿವಾದ ಆರಂಭವಾಯಿತು. ಕರ್ನಾಟಕ ಬಿಟ್ಟರೆ ಉಳಿದ ಯಾವ ಬಿಜೆಪಿ ಆಡಳಿತವಿರುವ ರಾಜ್ಯಗಳೂ ಇದಕ್ಕೆ ತಮ್ಮ ವಾದ ಮಂಡಿಸಲೇ ಇಲ್ಲ.

ನ್ನ ಅಫಿಡವಿಟ್ ನಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ಗೋವಧೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ –1964′ರ ಪರಿಚ್ಛೇಧ 15ರ ಅಡಿಯಲ್ಲಿ ನಾವು ಗೋ ರಕ್ಷಕರಿಗೆ ವಿನಾಯಿತಿ ನೀಡಿದ್ದೇವೆ. ಆದರೆ ಕಾನೂನು ರೀತಿ ರಚಿಸಲಾದ ಗುಂಪು ಅಥವಾ ಈ ಕಾನೂನಿನಡಿ ಕ್ರಮ ಕೈಗೊಳ್ಳಬಹುದಾದ ಅಧಿಕಾರವುಳ್ಳ ವ್ಯಕ್ತಿಗಳು ‘ಉತ್ತಮ ಉದ್ದೇಶದಿಂದ’ ಗೋ ರಕ್ಷಣೆ ಮಾಡಿದರೆ ಮಾತ್ರ ವಿನಾಯಿತಿ ನೀಡಿದ್ದೇವೆ; ಅದೂ ಕಾನೂನಿನ ಚೌಕಟ್ಟಿನಲ್ಲಿ ಎಂದು ಹೇಳಿತು. ಗೋ ರಕ್ಷಣೆ ಹೆಸರಿನಲ್ಲಿ ಹಿಂಸೆ ಹಾಗೂ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಗೋ ರಕ್ಷಕರಿಗೆ ಕಾನೂನಿನಡಿ ಯಾವುದೇ ರಕ್ಷಣೆ ಇಲ್ಲ ಎಂದು ಇದರಲ್ಲಿ ಸ್ಪಷ್ಟಪಡಿಸಿತ್ತು ಕೂಡ. 

ಈ ಕುರಿತು ವರದಿಗಳು ಹೊರಬೀಳುತ್ತಿದ್ದಂತೆ, ಕಾಂಗ್ರೆಸ್ ಸರಕಾರದ ಮೃದು ಧೋರಣೆ ಕುರಿತು ಟೀಕೆಗಳು ವ್ಯಕ್ತವಾದವು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆಗಳು ಹುಟ್ಟುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಾತೆಯಿಂದ ಪ್ರತಿಕ್ರಿಯೆಯೊಂದನ್ನು ಅಲ್ಲಿಯೇ ನೀಡುವ ಪ್ರಯತ್ನವೂ ಕಂಡು ಬಂತು.

ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಕೆಲವರು ಸರಕಾರ ಸಲ್ಲಿಸಿರುವ ಅಫಿಡವಿಟ್ ಕುರಿತು ಪ್ರಶ್ನೆಗಳನ್ನು ಮುಂದಿಟ್ಟರು:

ರಾಜ್ಯದ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ‘ಗೋ ರಕ್ಷಣೆ’ ನೆಪದಲ್ಲಿ ಹಲವು ದಾಳಿಗಳು ನಡೆಯುತ್ತಿವೆ. ಆದರೆ ಅಫಿಡವಿಟ್‌ನಲ್ಲಿ ಕೇವಲ ಎರಡು ಘಟನೆಗಳನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯ ವರದಿಯನ್ನು ಅಧಿಕಾರಿಗಳು ಮುಂದಿಡುತ್ತಿದ್ದಾರೆ. ನಿಜಕ್ಕೂ ‘ಗೋ ರಕ್ಷಣೆ’ ಕೃತ್ಯಗಳು ಕಡಿಮೆಯಾಗಿವೆಯಾ? ಇಲ್ಲಾ, ದಾಖಲು ಮಾಡುವ ಪ್ರಕ್ರಿಯೆ ನಿಂತು ಹೋಗಿದೆಯಾ? ಇದು ಕೇಳಬೇಕಿರುವ ಅಸಲಿ ಪ್ರಶ್ನೆ.

Top