An unconventional News Portal.

ಅಪೊಲೋದಲ್ಲಿ 74ನೇ ದಿನ: ಎಐಎಡಿಎಂಕೆ ನಾಯಕಿ ಜಯಲಲಿತಾಗೆ ಹೃದಯಾಘಾತ

ಅಪೊಲೋದಲ್ಲಿ 74ನೇ ದಿನ: ಎಐಎಡಿಎಂಕೆ ನಾಯಕಿ ಜಯಲಲಿತಾಗೆ ಹೃದಯಾಘಾತ

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಸಂಜೆ ವೇಳೆಗೆ ಹೃದಯಾಘಾತವಾಗಿದೆ ಎಂದು ಚೆನ್ನೈ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಕಳೆದ 73 ದಿನಗಳಿಂದ ಅನಾರೋಗ್ಯದ ಕಾರಣಕ್ಕೆ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ‘ಅಮ್ಮ’ಗೆ ಇದು ಮೂರನೇ ಬಾರಿಗೆ ಆಗುತ್ತಿರುವ ಹೃದಯಾಘಾತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಕಾರ್ಯಕರ್ತರು, ಅಮ್ಮ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಭಾನುವಾರ ಬೆಳಗ್ಗೆಯಷ್ಟೆ ಜಯಲಲಿತಾ ಆರೋಗ್ಯ ಸ್ಥಿತಿ ಸುಧಾರಿಸಿದೆ. ಅವರು ಮನೆಗೆ ಮರಳಲು ಸದೃಢರಾಗಿದ್ದಾರೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ ತಿಳಿಸಿತ್ತು. ಇದಾಗಿ ಕೆಲವೇ ಗಂಟೆಗಳಲ್ಲಿ ಜಯಲಲಿತಾಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹೊರಬಿತ್ತು. ರಾತ್ರಿ 10. 45ಕ್ಕೆ ಬಾಂಬೆಯಲ್ಲಿದ್ದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಆಸ್ಪತ್ರೆಗೆ ದೌಡಾಯಿಸಿದರು. ಜತೆಗೆ, ಆಸ್ಪತ್ರೆಯಲ್ಲಿಯೇ ತುರ್ತು ಸಂಪುಟ ಸಭೆಯಲ್ಲಿ ಎಐಎಡಿಎಂಕೆ ಸಚಿವರು ನಡೆಸಿದರು ಎಂದು ವರದಿಗಳು ಹೇಳುತ್ತಿವೆ.

ಜಯಾಗಾಗಿ ಪ್ರಾರ್ಥನೆ:

ಜಯಾ ಆರೋಗ್ಯದಲ್ಲಿ ಹಠಾತ್ ಬದಲಾವಣೆಯಿಂದ ಅಮ್ಮ ಅಭಿಮಾನಿಗಳು ಕಂಗೆಟ್ಟಿದ್ದಾರೆ. ಶೋಕಸಾಗರದಲ್ಲಿ ಮುಳುಗಿರುವ ಅವರು ಜಯಾ ಆರೋಗ್ಯಕ್ಕಾಗಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಸುದ್ದಿ ಹೊರಬೀಳುತ್ತಿದ್ದಂತೆ ಕಾರ್ಯಕರ್ತರು ಆಸ್ಪತ್ರೆ ಕಡೆಗೆ ಓಡಿ ಬರುತ್ತಿರುವ ಈ ದೃಶ್ಯ, ಅಮ್ಮ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಂತಿದೆ.

ಅಕ್ಟೋಬರ್ ಎರಡನೇ ವಾರದಲ್ಲಿಯೇ ರಾಜ್ಯಪಾಲ ವಿದ್ಯಾಸಾಗರ್ ರಾವ್ ಜಯಲಲಿತಾ ಕೈಲಿದ್ದ ಸಂವಿಧಾನದತ್ತಾ ಅಧಿಕಾರವನ್ನು ಪಕ್ಷದ ಎರಡನೇ ಹಂತದ ನಾಯಕರ ಕೈಗೆ ವರ್ಗಾಯಿಸಿದ್ದರು. ಜಯಲಲಿತಾ ಉತ್ತರಾಧಿಕಾರಿಯಾಗಿ ಓ. ಪನೀರ್ ಸೆಲ್ವಂ ಅವರನ್ನು ನೇಮಕ ಮಾಡಿದ್ದರು. ಆದರೆ, ಜಯಲಲಿತಾ ಅವರ ಇಶಾರೆ ಮೇಲೆಯೇ ಆಡಳಿತ ನಡೆಯುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಒಂದು ತಿಂಗಳ ಅಂತರದಲ್ಲಿ ಎಐಎಡಿಎಂಕೆ ಪಕ್ಷದ ಟ್ವೀಟ್ಗಳು ‘ಅಮ್ಮ’ನ ಆಣತಿಯನ್ನು ಪಾಲಿಸುತ್ತಿರುವುದಾಗಿ ಹೇಳುತ್ತಿದ್ದವು.

ಸದ್ಯ, ಅವರ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಮುಂದಿನ ನಡೆಗಳ ಕುರಿತು ಪ್ರಶ್ನೆಗಳು ಎದ್ದಿವೆ. ಎಐಎಡಿಎಂಕೆಯಲ್ಲಿ ಜಯಲಲಿತಾ ನಂತರದ ಸ್ಥಾನದಲ್ಲಿ ಪನೀರ್ ಸೆಲ್ವಂ ಸೇರಿದಂತೆ ಮೂರ್ನಾಲ್ಕು ನಾಯಕರಿದ್ದಾರೆ. ಸದ್ಯ ಪನೀರ್ ಸೆಲ್ವಂ ಉತ್ತರಾಧಿಕಾರಿಯಾಗಿದ್ದರೂ, ಅವರು ಎಐಎಡಿಎಂಕೆ ಒಳಗೆ ಪ್ರಶ್ನಾತೀತ ನಾಯಕರಲ್ಲ ಎಂಬುದು ಗಮನಾರ್ಹ.

ಶೀಘ್ರ ಗುಣಮುಖರಾಗಲಿ: 

ಜಯಾ ಅನಾರೋಗ್ಯದ ವರದಿ ಹೊರಬೀಳುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ರಾಜಕೀಯ ನಾಯಕರು ಜಯಾ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top