An unconventional News Portal.

ವಿಶ್ವ ದಾಖಲೆ ಬರೆದ ಇಸ್ರೋ: 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಬಾಹ್ಯಾಕಾಶ ಸಂಸ್ಥೆ

ವಿಶ್ವ ದಾಖಲೆ ಬರೆದ ಇಸ್ರೋ: 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಬಾಹ್ಯಾಕಾಶ ಸಂಸ್ಥೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಂದೇ ಬಾರಿಗೆ 104 ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ಮೂಲಕ ಬುಧವಾರ ವಿಶ್ವದಾಖಲೆ ಬರೆದಿದೆ. ಈ ಹಿಂದೆ ರಷ್ಯಾ ಹೊಂದಿದ್ದ ದಾಖಲೆಯನ್ನು ಇದು ಅಳಿಸಿ ಹಾಕಿದೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಪಿಎಸ್‌ಎಲ್‌ವಿ- ಸಿ 37 ಹೆಸರಿನ ಬಾಹ್ಯಕಾಶ ನೌಕೆಯು ಬೆಳಗ್ಗೆ 9. 28ಕ್ಕೆ ಸರಿಯಾಗಿ ಶ್ರೀಹರಿಕೋಟದ ಬಾಹ್ಯಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತೊಯ್ದಿತು. ಇದರಲ್ಲಿ 101 ಉಪಗ್ರಹಗಳ ವಿದೇಶಗಳಿಗೆ ಸೇರಿದ್ದಾಗಿವೆ. ಇದರಲ್ಲಿ 95 ಅಮೆರಿಕಕ್ಕೆ ಸೇರಿದವಾಗಿದ್ದು, ಇನ್ನುಳಿದವು ಇಸ್ರೇಲ್, ಕಜಕಿಸ್ತಾನ, ಹಾಲೆಂಡ್, ಸ್ವಿಜರ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳ ಉಪಗ್ರಹಗಳಾಗಿವೆ.

 

“ಭಾರತದ ಪಾಲಿಗೆ ಇದು ಮಹತ್ವದ ಮೈಲುಗಲ್ಲು.  ಉಡ್ಡಯನ ಪ್ರಕ್ರಿಯೆ 28 ನಿಮಿಷಗಳಲ್ಲಿ ಪೂರ್ಣಗೊಂಡಿತು. ಇದಕ್ಕಾಗಿ ನಾಲ್ಕು ಹಂತಗಳಲ್ಲಿ ಕೆಲಸ ಮಾಡಲಾಗಿತ್ತು. ನ್ಯಾನೋ ಉಪಗ್ರಹಗಳಲ್ಲಿ ಅವುಗಳ ಕಕ್ಷೆಯನ್ನು ಸೇರಿಸುವುದರಲ್ಲಿ ಯಶಸ್ವಿಯಾಗಿದ್ದೇವೆ,” ಎಂದು ಇಸ್ರೋದ ಅಜಯ್ ಲೀಲೆ ತಿಳಿದರು.

 

ಉಡ್ಡಯನಗೊಂಡಿರುವ ಉಪಗ್ರಹಗಳ ಪೈಕಿ ಮೊದಲು ಬಾಹ್ಯಕಾಶ ನೌಕೆಯಿಂದ ಕಕ್ಷೆಯನ್ನು ಸೇರಿದ್ದ ಕಾರ್ಟೊಸ್ಯಾಟ್- 2 ಉಪಗ್ರಹ. ಪಾಕಿಸ್ತಾನ ಮತ್ತು ಚೈನಾ ಗಡಿ ಭಾಗಗಳ ಮೇಲೆ ಹದ್ದಿನ ಕಣ್ಣಿಡುವ ಈ ಉಪಗ್ರಹದಿಂದ ಸೇನೆಯ ಪರಿವೀಕ್ಷಣೆಗೆ ಸಹಾಯವಾಗಲಿದೆ.

ಇದರ ಜತೆಗೆ ಭಾರತದ್ದೇ ಆದ ಐಎನ್‌ಎಸ್- 1ಎ, ಐಎನ್‌ಎಸ್- 1ಬಿ ಹೆಸರಿನ ಎರಡು ನ್ಯಾನೋ ಉಪಗ್ರಹಗಳೂ ಕಕ್ಷೆಯನ್ನು ಸೇರಿವೆ. ಇವುಗಳಿಂದ ಇಸ್ರೋದ ಮುಂದಿನ ಅಧ್ಯಯನಗಳುಗೆ ಪೂರಕ ಮಾಹಿತಿ ಲಭ್ಯವಾಗಲಿದೆ.

ಉಡ್ಡಯನ ಪ್ರಕ್ರಿಯೆಗೆ ಇಸ್ರೋ ಅಧ್ಯಕ್ಷ ಎ. ಎಸ್. ಕಿರಣ್ ಕುಮಾರ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು. ನಿನ್ನೆ ಸಂಜೆ 5. 28ರಿಂದಲೇ ವಿಶ್ವದಾಖಲೆ ಬರೆದ ಈ ಬಾಹ್ಯಕಾಶ ಕಾರ್ಯಚರಣೆಗೆ ಕ್ಷಣಗಣನೆ ಆರಂಭವಾಗಿತ್ತು.

ಉಪಗ್ರಹಗಳು ಹಾಗೂ ಅವುಗಳನ್ನು ಹೊತ್ತೊಯ್ದ ಬಾಹ್ಯಕಾಶ ನೌಕೆ ಸೇರಿ ಒಟ್ಟು 1328 ಕೆ. ಜಿ ತೂಕವನ್ನು ಹೊಂದಿದ್ದವು. ಭೂಮಿಯಿಂದ 520 ಕಿ. ಮೀ ದೂರದ ಕಕ್ಷೆಯಲ್ಲಿ ಸದ್ಯ ಯಶಸ್ವಿಯಾಗಿ ಉಪಗ್ರಹಗಳು ಸ್ಥಾಪನೆಗೊಂಡಿವೆ.

ಇಸ್ರೋದ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

Leave a comment

Top