An unconventional News Portal.

ಮೊದಲ ‘ಮೇಕ್ ಇನ್ ಇಂಡಿಯಾ’ ಆಕಾಶಯಾನಕ್ಕೆ ಸಜ್ಜಾಗುತ್ತಿರುವ ಇಸ್ರೋ

ಮೊದಲ ‘ಮೇಕ್ ಇನ್ ಇಂಡಿಯಾ’ ಆಕಾಶಯಾನಕ್ಕೆ ಸಜ್ಜಾಗುತ್ತಿರುವ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಲು ಹೊರಟಿದೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರೆಕ್ಕೆ ಹೊಂದಿದ ರಾಕೆಟ್ಗಳನ್ನು ಗಗನಕ್ಕೆ ಹಾರಿಸುವ ಯೋಜನೆ ಹಾಕಿಕೊಂಡಿದೆ.

ಅಂದುಕೊಂಡಂತೆ ನಡೆದರೆ ಪುನರ್ಬಳಕೆ ತಂತ್ರಜ್ಞಾನವನ್ನು ಒಳಗೊಂಡ ಆಕಾಶಯಾನ ಆರ್.ಎಲ್.ವಿ- ಟಿಡಿ, ಈ ತಿಂಗಳಾಂತ್ಯಕ್ಕೆ ಉಡಾವಣೆಯಾಗಲಿದೆ. ಒಂದೊಮ್ಮೆ ಇದು ಯಶಸ್ವಿಯಾದರೆ ವಿಶ್ವದಲ್ಲೇ ಮರುಬಳಕೆಯ ರಾಕೆಟ್ಗಳನ್ನು ಅಭಿವೃದ್ಧಿ ಪಡಿಸಿದಿ ಶ್ರೇಯಸ್ಸು ಇಸ್ರೋ ಪಾಲಾಗಲಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿ ಉಡ್ಡಯನ ವಾಹಕಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಸಂಪೂರ್ಣ ‘ಮೇಕ್ ಇನ್ ಇಂಡಿಯಾ’ ಪ್ರಯತ್ನದೊಂದಿಗೆ ನಿರ್ಮಿಸಲಾಗಿರುವ ನೌಕೆಯ ದೇಶೀ ಆವೃತ್ತಿಯ ಚೊಚ್ಚಲ ಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಿದ್ಧತೆ ನಡೆಸುತ್ತಿದೆ. ಬಹುತೇಕ ಕ್ರೀಡಾ ಬಳಕೆಯ ವಾಹನ(ಎಸ್‍ಯುವಿ)ದ ಗಾತ್ರ ಮತ್ತು ತೂಕವುಳ್ಳ ನುಣುಪಾದ ಹೊಳಪಿನ ರೆಕ್ಕೆಗಳನ್ನು ಈ ಬಾಹ್ಯಾಕಾಶ ನೌಕೆ ಹೊಂದಿದೆ.

ಈ ಉಡ್ಡಯನ ಒಂದೊಮ್ಮೆ ಯಶಸ್ವಿಯಾದರೆ ಇನ್ನು ಮುಂದೆ ಉಪಗ್ರಹಗಳ ಉಡಾವಣಾ ವೆಚ್ಚ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಜತೆಗೆ ಸಣ್ಣ ಪುಟ್ಟ ರಿಪೇರಿಗಳೊಂದಿಗೆ ಇದನ್ನು ಮರು ಬಳಕೆ ಮಾಡಬಹುದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂಗಾರು ಮಳೆ ಆರಂಭವಾಗುವುದೊರಳಗೆ ಬಂಗಾಳ ಕೊಲ್ಲಿ ತೀರದ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸ್ವದೇಶಿ ನಿರ್ಮಿತ ಮರುಬಳಕೆ ಉಡಾವಣಾ ವಾಹಕ ಉಡಾವಣೆಯಾಗಲಿದೆ.

ಭಾರತದ ಇಂಜಿನಿಯರ್‍ಗಳು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಒಯ್ಯುವ ವೆಚ್ಚ ತಗ್ಗಿಸಲು ಮಿತಿವ್ಯಯದ ಪರಿಹಾರ ಹುಡುಕುವುದರಲ್ಲಿ ಮಗ್ನರಾಗಿದ್ದು, ಈಗ ವಿನ್ಯಾಸಗೊಳಿಸಿರುವ ಮರುಬಳಕೆ ಮಾಡಬಹುದಾದ ದೇಶೀ ಆವೃತ್ತಿಯ ಗಗನ ನೌಕೆ ಪ್ರಯೋಗ ಯಶಸ್ವಿಯಾದಲ್ಲಿ ವೆಚ್ಚವನ್ನು ಹತ್ತು ಪಟ್ಟು ತಗ್ಗಿಸಬಹುದಾಗಿದೆ.

ಡೆಲ್ಟಾ ರೆಕ್ಕೆಗಳುಳ್ಳ ಈ ರಾಕೆಟ್ ಗಗನಕ್ಕೆ ಏರಿದ ಬಳಿಕ ಮರಳಿ ಬಂಗಾಳ ಕೊಲ್ಲಿಯಲ್ಲಿ ಬಂದಿಳಿಯಲಿದೆ.

Top