An unconventional News Portal.

ಅಮೆರಿಕಾದ ಡ್ರೋಣ್ ದಾಳಿಗೆ ಭಟ್ಕಳ ಮೂಲದ ಐಸಿಸ್ ಯುವಕ ಬಲಿ

ಅಮೆರಿಕಾದ ಡ್ರೋಣ್ ದಾಳಿಗೆ ಭಟ್ಕಳ ಮೂಲದ ಐಸಿಸ್ ಯುವಕ ಬಲಿ

ಸಿರಿಯಾದಲ್ಲಿ ಕೆಲ ದಿನಗಳ ಹಿಂದೆ  ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಕರ್ನಾಟಕದ ಉಗ್ರನೊಬ್ಬ ಹತನಾಗಿದ್ದಾನೆ.

ಮೃತ ಉಗ್ರ 26 ವರ್ಷದ ಮಹಮ್ಮದ್ ಶಫಿ ಆರ್ಮರ್ ಕರ್ನಾಟಕದ ಭಟ್ಕಳ ಮೂಲದವನು ಎಂದು ತಿಳಿದುಬಂದಿದೆ. ಈತ ಭಾರತದಲ್ಲಿ ಐಸಿಸ್ ಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.

ಭಟ್ಕಳ ಮೂಲದ 26 ವರ್ಷದ ಆರ್ಮರ್, ಐಸಿಸ್ ಸಂಘಟನೆಯ ಪ್ರಮುಖನಾಗಿದ್ದ ಅಬೂಬಕ್ಕರ್ ಬಾಗ್ದಾದಿಯೊಂದಿಗೆ ಆತ್ಮೀಯನಾಗಿದ್ದ. ಮೊದಲಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಅರ್ಮರ್, ನಂತರದಲ್ಲಿ ಐಸಿಸ್ ಗೆ ಭಾರತೀಯ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿದ್ದ. ಭಾರತದ ಸುಮಾರು 700 ಯುವಕರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದ ಎಂದು ವರದಿಯಾಗಿದೆ.

ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್ ಬಗ್ದಾದಿಯ ಮಿತ್ರನಾಗಿದ್ದ ಮಹಮ್ಮದ್ ಶಫಿ ಭಾರತದ ಎಲ್ಲಾ ರಾಜ್ಯಗಳಲ್ಲಿ ಐಸಿಸ್ ಸಂಘಟನೆಯ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದ್ದ. ಈತ ಫೇಸ್‍ಬುಕ್, ವಾಟ್ಸಪ್, ಸ್ಕೈಪ್ ಮೂಲಕ ಭಾರತೀಯ ಯುವಕರೊಂದಿಗೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗ್ತಿದೆ.

ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಈತನ ಹಿರಿಯ ಸಹೋದರ ಸುಲ್ತಾನ್ ಅರ್ಮರ್ 2015ರಲ್ಲಿ ಇದೇ ರೀತಿ ಸಾವನ್ನಪ್ಪಿದ್ದ. ಸುಲ್ತಾನ್ ಹತ್ಯೆಯಾದ ಬಳಿಕ, ಶಫಿ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ. ಈ ಇಬ್ಬರು ಸಹೋದರರು ಮೊದಲು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಐಎಸ್‍ಐ ಸಂಘಟನೆ ಅಡಿಯಲ್ಲಿ ಕೆಲಸ ಮಾಡಲು ಒಪ್ಪದ ಇವರು ಅದರಿಂದ ಹೊರಬಂದಿದ್ದರು. ಭಾರತದಲ್ಲಿ ಇತ್ತೀಚೆಗೆ ಐಸಿಸ್ ಪರ ಕೆಲಸ ಮಾಡುತ್ತಿದ್ದ ಉಗ್ರರನ್ನು ಬಂಧಿಸಿದ ಬಳಿಕ ಶಫಿ ಅರ್ಮರ್ ಹೆಸರು ಕೇಳಿ ಬಂದಿತ್ತು.

ಈತನ ಸಹೋದರ ಸುಲ್ತಾನ್ ಎಂಬಾತ 2015 ರ ಮಾರ್ಚ್ ನಲ್ಲಿ ಹತ್ಯೆಯಾಗಿದ್ದ. ಇದೀಗ, ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಡ್ರೋಣ್ ದಾಳಿಯಲ್ಲಿ ಮಹಮ್ಮದ್ ಆರ್ಮರ್ ಮೃತಪಟ್ಟಿದ್ದಾನೆ.

Top