An unconventional News Portal.

ಆರ್ಥಿಕ ಮುಗ್ಗಟ್ಟಿನಲ್ಲಿ ಶ್ರೀಮಂತ ಉಗ್ರ ಸಂಘಟನೆ ಐಸಿಲ್!

ಆರ್ಥಿಕ ಮುಗ್ಗಟ್ಟಿನಲ್ಲಿ ಶ್ರೀಮಂತ ಉಗ್ರ ಸಂಘಟನೆ ಐಸಿಲ್!

ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆ ಎಂದು ಬಿಂಬಿಸಿದ್ದ  ಐಸಿಲ್, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಐಸಿಲ್ ಆದಾಯ ತೀವ್ರ ಕುಸಿತವಾಗಿದೆ. ಆದಾಯ ಹೆಚ್ಚಿಸಿಕೊಳ್ಳವ ನಿಟ್ಟಿನಲ್ಲಿ ತನ್ನ ನಿಯಂತ್ರಣ ಇರುವ ಪ್ರದೇಶಗಳಲ್ಲಿ ಕಂಡ ಕಂಡಿದ್ದಕ್ಕೆಲ್ಲಾ ಟ್ಯಾಕ್ಸ್ ಹಾಕುವ ಪರಿಪಾಠವನ್ನು ಸಂಘಟನೆ ಆರಂಭಿಸಿದ ಎಂದು ವರದಿಯಾಗಿದೆ.

ತಾಲಿಬಾನ್, ಆಲ್ ಕೈದಾ ನಂತರ ಐಸಿಲ್ ಶ್ರೀಮಂತ ಉಗ್ರ ಸಂಘಟನೆಯಾಗಿ ಹೊರ ಹೊಮ್ಮಿತ್ತು. ಅದು ನೀಡುತ್ತಿದ್ದ ಭಾರೀ ವೇತನಕ್ಕಾಗಿಯೇ ಸಂಘಟನೆ ಸೇರುವವರ ಸಂಖ್ಯೆಯೂ ಹೆಚ್ಚಿತ್ತು. ಇರಾಕ್, ಸಿರಿಯಾ ಮೊದಲಾದ ಕಡೆಗಳಲ್ಲಿ ತೈಲೋತ್ಪನ್ನಗಳ ಮೇಲೆ ಹಿಡಿತ ಸಾಧಿಸಿದ್ದ ಐಸಿಲ್ ಉಗ್ರರು ಉತ್ತಮ ಆದಾಯ ಹೊಂದಿದ್ದರು. 2015ರ ಮಧ್ಯಭಾಗದಲ್ಲಿ 80 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿದ್ದ ಐಸಿಸ್, ಈಗ ಹಿನ್ನಡೆ ಅನುಭವಿಸಿದೆ. ತೈಲದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, 2016ರ ಮಾರ್ಚ್ 15ಕ್ಕೆ ಐಸಿಸ್ ಆದಾಯ 56 ಮಿಲಿಯನ್ ಡಾಲರ್ಗೆ ಇಳಿದಿದೆ ಎಂದು ಮೂಲಗಳು ವರದಿ ಮಾಡಿವೆ.

ಹೀಗೆ ಶೇ. 30 ರಷ್ಟು ಆದಾಯ ಕಡಿಮೆ ಆಗಿರುವುದರಿಂದ ಐಸಿಸ್ ತನ್ನ ಕಾಲಾಳುಗಳಿಗೆ ವೇತನ ಕೊಡಲೂ ಹಣವಿಲ್ಲದೇ ಪರದಾಡುತ್ತಿದೆ. ಹೀಗಾಗಿ ತಮ್ಮ ಹಿಡಿತದಲ್ಲಿರುವ ಪ್ರದೇಶದಲ್ಲಿ ಸಣ್ಣಪುಟ್ಟದ್ದಕ್ಕೂ ತೆರಿಗೆ, ದಂಡ ವಿಧಿಸುತ್ತಿದೆ. ಡಿಶ್ ಹಾಕಿಸಿದರೆ, ಕುರಾನ್ ತಪ್ಪಾಗಿ ಹೇಳಿದರೆ, ಹೊರಗಡೆ ಹೋಗಬೇಕೆಂದರೆ ಹೀಗೆ ಹಲವು ಸಣ್ಣಪುಟ್ಟ ಕಾರಣಗಳಿಗೂ ದಂಡ ಹಾಕಲಾಗುತ್ತಿದೆ. ಇದು ಶಾಲೆಯಲ್ಲಿ ಮಕ್ಕಳು ಸಣ್ಣ ಕಾರಣಗಳಿಗೆ ಫೈನ್ ಕಟ್ಟಿದಂತಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ಲೇವಡಿ ಮಾಡುತ್ತಿವೆ.

ಐಸಿಸ್ ಬೆಳೆಯಲು ಕಾರಣವಾಗಿದ್ದು ಅದಕ್ಕೆ ಹರಿದು ಬಂದ ಸಿರಿಯಾ ತೈಲ ಘಟಕಗಳಲ್ಲಿದ್ದ ಕಚ್ಚಾ ತೈಲ. ಇದನ್ನು ಟರ್ಕಿ ಮೂಲಕ ಅಮೆರಿಕಾ ಮಾರುಕಟ್ಟೆಗೆ ಮಾರಾಟ ಮಾಡಿ, ಐಸಿಸ್ ಹಣ ಮಾಡುತ್ತಿದೆ ಎಂದು ರಷ್ಯಾ ಈ ಹಿಂದೆ ಆರೋಪ ಮಾಡಿತ್ತು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top