An unconventional News Portal.

‘ನಿರ್ದಿಷ್ಟ ದಾಳಿ’ ನಡೆಸಲು ಭಾರತ ಎಷ್ಟು ಶಕ್ತ?: ಅನುಮಾನಗಳಿಗೆ ಎಡೆಮಾಡಿದ ‘ತಾಂತ್ರಿಕ’ ವಿವರಗಳು!

‘ನಿರ್ದಿಷ್ಟ ದಾಳಿ’ ನಡೆಸಲು ಭಾರತ ಎಷ್ಟು ಶಕ್ತ?: ಅನುಮಾನಗಳಿಗೆ ಎಡೆಮಾಡಿದ ‘ತಾಂತ್ರಿಕ’ ವಿವರಗಳು!

ಕೃಪೆ: ಡಿಪ್ಲೊಮಾಟ್.ಕಾಂ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯ ಒಳಗೆ ‘ನಿರ್ದಿಷ್ಟ ದಾಳಿ’ ನಡೆಸಲಾಗಿದೆ ಎಂದು ಭಾರತ ಗುರುವಾರ ಹೇಳಿಕೊಂಡಿದೆ. ಇದನ್ನು ಪಾಕಿಸ್ತಾನ ತಳ್ಳಿ ಹಾಕಿದ್ದು, ಗಡಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ತನ್ನಿಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದಿದೆ.

“ಮಿಥ್ಯಾರೋಪಗಳನ್ನು ಸೃಷ್ಟಿಸುವ ಸಲುವಾಗಿ ಭಾರತ ಭಯೋತ್ಪಾದಕ ನೆಲೆಗಳ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಮಾಡಿದ್ದಾಗಿ ಹೇಳಿಕೊಳ್ಳುತ್ತಿದೆ. ಇದೊಂದು ಭ್ರಮೆ,” ಎಂದು ಪಾಕಿಸ್ತಾನ ಸೇನಾ ಪ್ರಕಟಣೆ ತಿಳಿಸಿದೆ.

ಭಾರತದ ಮಿಲಿಟರಿ ಕಾರ್ಯಚರಣೆಯ ಪ್ರಧಾನ ನಿರ್ದೇಶಕ ಲೆ. ಜ. ರಣಭೀರ್ ಸಿಂಗ್‌, ದಾಳಿಯ ನಡೆಸಿರುವುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ. “ಜಮ್ಮು ಮತ್ತು ಕಾಶ್ಮೀರದ ಒಳಗೆ ಹಾಗೂ ದೇಶದ ಕೆಲವು ಮಹಾನಗರಗಳ ಮೇಲೆ ದಾಳಿ ನಡೆಸಲು ಕೆಲವು ಭಯೋತ್ಪಾದಕರು ಸನ್ನದ್ಧರಾಗಿದ್ದ ನಿಖರ ಹಾಗೂ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಲಾಗಿದೆ,” ಎಂದು ಅವರು ತಿಳಿಸಿದ್ದಾರೆ.

ಭಾರತದ ‘ನಿರ್ದಿಷ್ಟ ದಾಳಿ’ಯ ಕುರಿತು ಕೆಲವು ಮಾಹಿತಿ ಹಂಚಿಕೊಂಡಿದೆ. ಆದರೆ ಮೂಲಗಳು ನೀಡುವ ಮಾಹಿತಿ ಪ್ರಕಾರ, ವಾಯುಪಡೆಯ ತುಕಡಿ ಮತ್ತು ವಿಶೇಷ ತಂಡ ಗಡಿ ರೇಖೆ ರೇಖೆಯಿಂದ 2- 3 ಕಿ. ಮೀ ಒಳಗೆ ನುಸಳಿಕೊಂಡು ಹೋಗಿ 7 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಭಾರತದ ಈ ಹೇಳಿಕೆಯನ್ನು ಪಾಕಿಸ್ತಾನ ಅಲ್ಲಗೆಳೆದಿದೆ. “ಗಡಿ ಅಂಚಿನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಇದು ಸಾಮಾನ್ಯ ವಿದ್ಯಮಾನ ಎಂದು ಹೇಳಿದೆ,” ಎಂದು ಪಾಕ್ ಸೇನೆ ಹೇಳಿಕೆ ಹೇಳಿಕೊಂಡಿದೆ.

ಈ ಸಮಯದಲ್ಲಿ, ‘ನಿರ್ದಿಷ್ಟ ದಾಳಿ’ಯಂತ ಅತ್ಯಾಧುನಿಕ ಹಾಗೂ ಪೂರ್ವಯೋಜಿತ ದಾಳಿ ನಡೆಸಲು ಭಾರತದ ಪಡೆಗಳು ತಾಂತ್ರಿಕವಾಗಿ ಶಕ್ತವಾಗಿವಿಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ‘ನಿರ್ದಿಷ್ಟ ದಾಳಿ’ ನಡೆಸಲು ವಾಯು ಪಡೆ ಹಾಗೂ ಭೂಮಿಯ ಮೇಲೆ ದಾಳಿ ನಡೆಸುವ ತಂಡಗಳ ಅಗತ್ಯವಿದೆ. ಇವೆರಡನ್ನೂ ಹೊಂದಾಣಿಕೆ ಮಾಡಲು ಖಚಿತವಾಗಿ ಗುಪ್ತಚರ ಮಾಹಿತಿ ಕಲೆ ಹಾಕುವ ತಂತ್ರಜ್ಞಾನ ಮತ್ತಿತರ ಅಂಶಗಳ ಅಗತ್ಯವಿರುತ್ತದೆ.

ಭಾರತದ ಪಡೆಗಳು ಇವತ್ತಿಗೂ ಹಳೆಯ ಕಾಲದ ಯುದ್ಧದ ತರಭೇತಿಯನ್ನು ಪಡೆದುಕೊಳ್ಳುತ್ತಿವೆ. ಅಸಾಂಪ್ರದಾಯಿಕವಾಗಿ ಹಾಗೂ ಅತ್ಯಾಧುನಿಕವಾಗಿ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸಲು ಭಾರತ ಇನ್ನೂ ಸಿದ್ಧತೆ ಮಾಡಿಕೊಳ್ಳುವ ಹಂತದಲ್ಲಿದೆ. ಹಳೆದ ಒಂದು ದಶಕದಲ್ಲಿ, ಚಾಲಕ ರಹಿತ ವಿಮಾನ ವಾಹನ (ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ಸ್- ಯುಎವಿ) ಗಳನ್ನು ಸ್ಥಳೀಯವಾಗಿ ರೂಪಿಸಲು ಯೋಜನೆ ಜಾರಿಯಲ್ಲಿದೆ. ರುಸ್ತುಂ-1 ಹಾಗೂ ರುಸ್ತುಂ- 2 ಗಳು ಭಾರತದ ಪಡೆಗಳು ನಿರ್ದಿಷ್ಟ ಪ್ರದೇಶದ ಮೇಲೆ ವಾಯು ದಾಳಿ ನಡೆಸಲು ಸಹಾಯ ಮಾಡಬಲ್ಲವು. ಆದರೆ, ಇವಿನ್ನೂ ಅಭಿವೃದ್ಧಿಪಡಿಸುವ ಹಂತದಲ್ಲಿವೆ. ರುಸ್ತುಂ- 2 ಇದೇ ಬೇಸಿಗೆಯಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ಭಾರತದ ಡ್ರೋಣ್ ಯೋಜನೆ ಇನ್ನೂ ಭ್ರೂಣಾವಸ್ಥೆಯಲ್ಲಿದೆ.

ಆರ್ಟಿಯರಿ ವಿಚಾರಕ್ಕೆ ಬರುವುದಾದರೆ, 2015ರಲ್ಲಿ ಭಾರತ ಮತ್ತು ಬಿಎಇ (ಬ್ರಿಟಿಷ್ ಮಲ್ಟಿನ್ಯಾಷನಲ್ ಸೆಕ್ಯುರಿಟಿ ಅಂಡ್ ಏರೋಸ್ಪೇಸ್ ಕಂಪನಿ) ಗಳು ಜಿಪಿಎಸ್ ತಂತ್ರಜ್ಞಾನ ಬಳಸಿಕೊಂಡು ದಾಳಿ ನಡೆಸುವ ‘ಎಂ777 155 ಎಂಎಂ’ (ಶಾರ್ಟ್ ಗನ್ ಶೆಲ್ಸ್)ನ್ನು ಅಭಿವೃದ್ಧಿ ಪಡಿಸಲು ಒಪ್ಪಂದ ಮಾಡಿಕೊಂಡಿದೆ. ಆದರೆ, ಇದರ ಅಭಿವೃದ್ಧಿ ಮತ್ತು ಉತ್ಪಾದನೆ 2018ರಿಂದ ಆರಂಭವಾಗಲಿದೆ.

ಸದ್ಯ, ರಷ್ಯಾ ನಿರ್ಮಿತ ‘ಕ್ರಾಸ್ನೋಪೋಲ್’ ಎಂಬ ಜಿಪಿಎಸ್ ಆಧಾರಿತ ಆಯುಧವನ್ನು ಬಳಸುತ್ತಿದೆ. ಇದು ಕೇವಲ 30- 40 ಕಿ. ಮೀ ಸುತ್ತಳತೆಯಲ್ಲಿ ಮಾತ್ರವೇ ಬಳಸಬಹುದಾಗಿದ್ದು, ಇದರ ಗುರಿಯ ನಿಖರತೆಯ ಬಗ್ಗೆ ಅನುಮಾನಗಳಿವೆ. ನಿರ್ದಿಷ್ಟ ಜಾಗದ ಮೇಲೆ ದಾಳಿ ನಡೆಸುವ ಮಿಸೈಲ್ ‘ಹೆಲ್ ಫೈರ್’ (ಎಟಿಜಿಎಂ) ಅನ್ನು ಇತ್ತೀಚೆಗೆ ಭಾರತ ಅಮೆರಿಕಾದಿಂದ ಖರೀದಿಸಿದೆ. ಸದ್ಯ ಇದನ್ನು ಅಮೆರಿಕಾ ಸೇನಾ ಪಡೆಗಳು ಮಾತ್ರವೇ ಬಳಸಿಕೊಳ್ಳುತ್ತಿವೆ. ಸ್ಥಳೀಯವಾಗಿಯೇ, ‘ಹೆಲಿನಾ’ ಹೆಸರಿನ ಆಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ)ಅನ್ನು ಭಾರತ ಅಭಿವೃದ್ಧಿ ಪಡಿಸಿದ್ದು, ಇನ್ನೂ ಪರೀಕ್ಷೆಯ ಹಂತದಲ್ಲಿದೆ.

ಇನ್ನೊಂದು ಮಾತನಿಲ್ಲಿ ಹೇಳುವುದಾದರೆ, ಭಾರತ ಅಸಾಂಪ್ರದಾಯಿಕ ದಾಳಿಗಳನ್ನು ನಡೆಸಲು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಹಂತದಲ್ಲಿದೆ. ಮೇಲೆ ನೀಡಿದ ಉದಾಹರಣೆಗಳು ಸಮಗ್ರ ಅಂತ ಹೇಳಲು ಸಾಧ್ಯವಿಲ್ಲವಾದರೂ, ಭಾರತದ ಸೇನಾ ಪಡೆಗಳು ಸಂಪೂರ್ಣ ಅಭಿವೃದ್ಧಿ ಹೊಂದಿಲ್ಲ ಎಂಬುದನ್ನು ಸಾಭೀತುಪಡಿಸುತ್ತವೆ.

ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ನಡೆಸಿದ ‘ನಿರ್ದಿಷ್ಟ ದಾಳಿ’ಯ ಕುರಿತು ಭಾರತ ಅತ್ಯಂತ ಕಡಿಮೆ ಮಾಹಿತಿಯನ್ನು ಬಹಿರಂಗಪಡಿಸಿದೆ. ದಾಳಿಯು ಗಡಿ ಅಂಚಿನ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಲಾಗಿದೆಯೇ ಹೊರತು ಪಾಕಿಸ್ತಾನದ ಮೇಲೆ ಅಲ್ಲ. ಇದು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತ ದೊಡ್ಡ ಮಟ್ಟದ ಬದಲಾವಣೆ ಮಾಡಿಕೊಂಡಿರುವುದನ್ನು ಖಾತ್ರಿಪಡಿಸುತ್ತದೆ. ಜತೆಗೆ, ಅಸಾಂಪ್ರದಾಯಿಕ ಯುದ್ಧದ ವಿಚಾರದಲ್ಲಿ ಭಾರತ ಶಕ್ತಿಯ ಬಗ್ಗೆ ಇದ್ದ ಭಾವನೆಗಳನ್ನು ಈ ‘ನಿರ್ದಿಷ್ಟ ದಾಳಿ’ಯ ವಿಚಾರ ತಳ್ಳಿ ಹಾಕುತ್ತಿದೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top