An unconventional News Portal.

‘ಟಿಓಐ’ ಜಾಹೀರಾತಿನ ಫಲಶೃತಿ ವರದಿ ಮಾಡಿದ ‘ಐಇ’: ಪೈಪೋಟಿ ಆಚೆಗೆ ಸೌಜನ್ಯ ಮೆರೆದ ಪತ್ರಿಕೋದ್ಯಮ!

‘ಟಿಓಐ’ ಜಾಹೀರಾತಿನ ಫಲಶೃತಿ ವರದಿ ಮಾಡಿದ ‘ಐಇ’: ಪೈಪೋಟಿ ಆಚೆಗೆ ಸೌಜನ್ಯ ಮೆರೆದ ಪತ್ರಿಕೋದ್ಯಮ!

ನಾವು ಇವತ್ತು ಹೇಳಲು ಹೊರಟಿರುವ ಕಥೆ ಭಾರತದ ಎರಡು ಪ್ರತಿಸ್ಪರ್ಧಿ ಮಾಧ್ಯಮಗಳದ್ದು. ಒಂದು ‘ಟೈಮ್ಸ್ ಆಫ್ ಇಂಡಿಯಾ’; ಇನ್ನೊಂದು ‘ದಿ ಇಂಡಿಯನ್ ಎಕ್ಸ್’ಪ್ರೆಸ್’. ಎರಡೂ ದೈತ್ಯ ಕಂಪೆನಿಗಳು, ಮತ್ತು ವ್ಯವಹಾರದಲ್ಲಿ ಆಜನ್ಮ ವಿರೋಧಿಗಳು. ಹೀಗಿದ್ದೂ ಬಿಗುಮಾನ ಬದಿಗಿಟ್ಟು ‘ಟೈಮ್ಸ್ ಆಫ್ ಇಂಡಿಯಾ’ದ ಯಶಸ್ಸಿನ ಕಥೆಯನ್ನು ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿ ಮಾಧ್ಯಮಗಳ ಆರೋಗ್ಯಕರ ಸ್ಪರ್ಧೆಗೆ ಹೊಸ ಆಯಾಮ ನೀಡಿದೆ.

‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಪುಟದ ಮೂಲೆಯಲ್ಲಿ ಪ್ರಕಟವಾದ ಕ್ಲಾಸಿಫೈಡ್ ಜಾಹೀರಾತೊಂದು ಅಪರಿಚಿತ ಮೃತ ವ್ಯಕ್ತಿಯ ಗುರುತು ಪತ್ತೆಗೆ ಹೇಗೆ ನೆರವಾಯ್ತು ಎಂಬುದು ಎಕ್ಸ್’ಪ್ರೆಸ್ ಪ್ರಕಟಿಸಿದ್ದ ವರದಿಯ ತಿರುಳು. ಆದರೆ ವಿಷಯ ಏನೆಂದರೆ ಎರಡೂ ಪರಸ್ಪರ ಪ್ರತಿಸ್ಫರ್ಧಿಗಳಾಗಿದ್ದೂ ಟೈಮ್ಸ್ ಹೆಸರು ಹಾಕಿಯೇ ಈ ವರದಿ ಪ್ರಕಟಿಸಿದ್ದು ಎಕ್ಸ್’ಪ್ರೆಸ್ನ ಅಪರೂಪದ ನಡೆ.

25dfc62f-82ef-49bb-8795-0b2c1acdc121

ನಡೆದಿದ್ದಿಷ್ಟು..

ಮುಂಬೈ ಪೊಲೀಸರು ತಮಗೆ ಸಿಕ್ಕಿದ ಅಪರಿಚಿತ ವ್ಯಕ್ತಿಯ ಮೃತ ದೇಹದ ಗುರುತು ಪತ್ತೆಗಾಗಿ ಯತ್ನಿಸಿ ಕೈಚೆಲ್ಲಿದರು. ಕೊನೆಗೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ಬಂತು.

Times VS Expressಸಬ್ ಇನ್ಸ್ಪೆಕ್ಟರ್ ಸಂಜಯ್ ಶಿಸಾಲೆ ಏಪ್ರಿಲ್ 9ನೇ ತಾರಿಕು ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಇನ್ನೂ ಎರಡು ಪತ್ರಿಕೆಗಳಲ್ಲಿ ಕ್ಲಾಸಿಫೈಡ್ ಜಾಹೀರಾತು ನೀಡಿದ್ದರು. ಇದು ಪತ್ರಿಕೆಯ 12ನೇ ಪುಟದಲ್ಲಿ ಮೂಲೆಯಲ್ಲಿ ಅಚ್ಚಾಗಿತ್ತು. ‘ಅಂಬೋಲಿ ಪೊಲೀಸ್ ಠಾಣೆ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಮಿ. ಸುರೇಂದ್ರ ಮುಲ್ಚಂದ್ ದುರ್ವಾನಿ ಎಂಬ 60 ವಯಸ್ಸಿನ..’ ಎಂದು ಜಾಹೀರಾತು ಆರಂಭವಾಗಿತ್ತು. ಈ ಜಾಹೀರಾತನ್ನು ಚೆಂಬೂರ್’ನಲ್ಲಿರುವ  ದುರ್ವಾನಿಯ ಸೊಸೆ ನೋಡಿ ತಕ್ಷಣ ಪೊಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು.

ಹೀಗೆ ಪತ್ರಿಕೆಯ ಮೂಲೆಯಲ್ಲಿ ಪ್ರಕಟವಾಗಿದ್ದ ಜಾಹೀರಾತೊಂದು ವ್ಯಕ್ತಿಯ ಗುರುತು ಪತ್ತ ಹಚ್ಚಲು ನೆರವಾಗಿತ್ತು. ಇದನ್ನು ಮೊನ್ನೆ (23ನೇ ತಾರೀಖು) ಮುಂಬೈ ಆವೃತ್ತಿಯಲ್ಲಿ ದಿ ಇಂಡಿಯನ್ ಎಕ್’ಪ್ರೆಸ್ ವರದಿ ಮಾಡಿತ್ತು. ವರದಿಯಲ್ಲಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಹೆಸರನ್ವನು ನಮೋದಿಸಿತ್ತು.ಹಾಗೆ ನೋಡಿದರೆ ‘ಪನಾಮ ಪೇಪರ್ಸ್’ ತನಿಖಾ ವರದಿ ಹೊರ ಬಿದ್ದಾಗ ಸ್ಪರ್ಧಿಗಳು ಪ್ರತಿಸ್ಪರ್ಧಿಗಳೆನ್ನದೆ ಎಲ್ಲರೂ ಇಂಡಿಯನ್ ಎಕ್ಸ್’ಪ್ರೆಸ್ ಹೆಸರನ್ನು ಉಲ್ಲೇಖಿಸಬೇಕಾಗಿ ಬಂದಿತ್ತು.

ಪರಸ್ಪರ ಹೆಸರನ್ನು ಪ್ರಕಟಿಸಿ ಬೆಂಬಲಿಸುವ ಈ ರೀತಿಯ ಆರೋಗ್ಯಕರ ಸ್ಪರ್ಧೆಯನ್ನು ನಾವು ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕಾಣಬಹುದು. ಆದರೆ ಕನ್ನಡಕ್ಕೆ ಬಂದಾಗ ಪರಿಸ್ಥಿತಿ ಹೀಗಿಲ್ಲ. ಇಲ್ಲಿ ಎಷ್ಟೋ ಸಂದರ್ಭಗಳಲ್ಲಿ ಪಕ್ಕದ ಮಾಧ್ಯಮಗಳ ಸುದ್ದಿಯನ್ನೇ ಕದ್ದು ಪ್ರಕಟಣೆ/ಪ್ರಸಾರ ಮಾಡಿದಾಗಲೂ ಸಣ್ಣ ‘ಕರ್ಟಸಿ’ಯೂ ನೀಡದೆ ‘ಎಕ್ಸ್’ಕ್ಲೂಸಿವ್’ ಎಂದು ವರದಿ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ಮಾಧ್ಯಮ ಮಾರುಕಟ್ಟೆಯಲ್ಲಿ ಪೈಪೋಟಿ ಆಚೆಗೆ ವೃತ್ತಿಪರತೆ ಮತ್ತು ಪರಸ್ಪರ ವಿಶ್ವಾಸಗಳು ಅಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top