An unconventional News Portal.

ಮಂಚ ಏರಿದ ಐಎಎಸ್ ಅಧಿಕಾರಿ ಕಾಲು: ಹಿಂದೆಯೇ ಬಂತು ಟೀಕೆಗಳ ಸಾಲು!

ಮಂಚ ಏರಿದ ಐಎಎಸ್ ಅಧಿಕಾರಿ ಕಾಲು: ಹಿಂದೆಯೇ ಬಂತು ಟೀಕೆಗಳ ಸಾಲು!

ಛತ್ತೀಸಗಢದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಆಸ್ಪತ್ರೆಯ ಮಂಚದ ಮೇಲೆ ತನ್ನ ಶೂ ಧರಿಸಿದ್ದ ಕಾಲನ್ನು ಇಟ್ಟಿರುವ ಫೊಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದವನ್ನು ಹುಟ್ಟಿಹಾಕಿದೆ.

ಸ್ವತಃ ಎಂಬಿಬಿಎಸ್ ವೈದ್ಯರಾಗಿರುವ, 2013ನೇ ಬ್ಯಾಚ್ ಅಧಿಕಾರಿ ಜಗದೀಶ್ ಸೋಂಕರ್ ತಮ್ಮ ವಿಚಿತ್ರ ನಡೆಯಿಂದ ಸಾರ್ವಜನಿಕ ಟೀಕೆಗೆ ಗುರಿಯಾದ ಅಧಿಕಾರಿ. ‘ಇದು ಅಧಿಕಾರಿ ರೋಗಿಗಳಿಗೆ ಅಗೌರವ ಸೂಚಿಸುವ ನಡೆ ಮಾತ್ರವಲ್ಲ, ಬದಲಿಗೆ ಆಸ್ಪತ್ರೆಯ ಸ್ವಚ್ಚತೆ ದೃಷ್ಟಿಯಿಂದಲೂ ಈ ನಡವಳಿಕೆ ಸರಿಯಲ್ಲ’ ಎಂದು ಟೀಕೆಗಳು ಆರಂಭವಾಗಿವೆ.

sonkar-1

ಅಧಿಕಾರಿ ಸೋಂಕರ್, ಸರಕಾರ ನಡೆಸುತ್ತಿರುವ ಅಪೌಷ್ಠಿಕತೆ ನಿವಾರಣಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ತನ್ನ ಎಡಗಾಲವನ್ನು ಬಾಣಂತಿ ದಾಖಲಾಸಿದ್ದ ಮಂಚದ ಮೇಲೆ ಇಟ್ಟುಕೊಂಡು ಆರೋಗ್ಯ ವಿಚಾರಿಸುತ್ತಿದ್ದ ಫೊಟೋವನ್ನು ‘ಹಿಂದೂಸ್ತಾನ್ ಟೈಮ್ಸ್’ ಪ್ರಕಟಿಸಿದೆ. ಅದೀಗ ಸಾಮಾಜಿಕ ಜಾಲತಾಣ ಟ್ವಿಟರ್ ಹಾಗೂ ಇತರೆ ಕಡೆಗಳಲ್ಲಿ ಜನ ಹಂಚಿಕೊಳ್ಳುತ್ತಿದ್ದು, ಅಧಿಕಾರಿಯ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.

ಅಧಿಕಾರಿಯ ನಡೆಗೆ ಐಎಎಸ್ ಅಸೋಸಿಯೇಶನ್, ದಿಗ್ಭ್ರಮೆ ವ್ಯಕ್ತಪಡಿಸಿದೆ. ಈ ನಡೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದೆ.

sonkar-ias-asso

 

ಘಟನೆ ಬಹಿರಂಗವಾಗುತ್ತಿದ್ದಂತೆ ರಾಮನುಜಗಂಜ್ ಉಪವಲಯ ಮ್ಯಾಜಿಸ್ಟ್ರೇಟ್ ಸಮಜಾಷಿಯಿಸಿ ನೀಡಿದ್ದು, “ಇದೊಂದು ಉದ್ದೇಶಪೂರ್ವಕವಲ್ಲದ ನಡವಳಿಕೆ,” ಎಂದಿದ್ದಾರೆ.

ಇನ್ನೊಂದಡೆ, ಅಧಿಕಾರಿ ಸೋಂಕರ್, ಶಿಷ್ಟಾಚಾರ ಬದಿಗೊತ್ತಿ ರೋಗಿಗಳಿಗೆ ವೈದ್ಯ ಸೇವೆ ನೀಡುತ್ತಿರುವ ಚಿತ್ರಗಳನ್ನೂ ಕೆಲವರು ಹಂಚಿಕೊಂಡಿದ್ದಾರೆ. ಅಧಿಕಾರಿಯು ಅದೇ ಆಸ್ಪತ್ರೆಯಲ್ಲಿ ಎರಡೂವರೆ ಗಂಟೆಗಳ ಕಾಲ ಹೆಚ್ಚುವರಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

sonkar-treat-2

ಉನ್ನತ ಸ್ಥಾನದಲ್ಲಿರುವವರ ಮನಃಪೂರ್ವಕವಲ್ಲದ ಸಹಜ ನಡಳಿಕೆಗಳು ಟೀಕೆಗೆ ಕಾರಣವಾಗಬಲ್ಲವು ಎಂಬುದಕ್ಕೆ ಈ ಘಟನೆ ಉದಾಹರಣೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top