An unconventional News Portal.

ಬಾರಮುಲ್ಲಾ ಸೇನಾ ನೆಲೆಯ ಮೇಲೆ ದಾಳಿ: ಓರ್ವ ಬಿಎಸ್ಎಫ್ ಜವಾನ ಸಾವು

ಬಾರಮುಲ್ಲಾ ಸೇನಾ ನೆಲೆಯ ಮೇಲೆ ದಾಳಿ: ಓರ್ವ ಬಿಎಸ್ಎಫ್ ಜವಾನ ಸಾವು

ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೇನಾ ನೆಲೆಯ ಮೇಲೆ ಭಾನುವಾರ ಮಧ್ಯರಾತ್ರಿ ಶಸ್ತ್ರಾಸ್ತ್ರ ದಾಳಿ ನಡೆದಿದ್ದು, ಓರ್ವ ಬಿಎಸ್ಎಫ್ ಜವಾನ ಸಾವನ್ನಪ್ಪಿದ್ದಾರೆ. ಸೇನೆ ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ಮುಂದುವರಿದೆ.

ಶ್ರೀನಗರದಿಂದ ಸುಮಾರು 50 ಕಿ. ಮೀ ದೂರದಲ್ಲಿರುವ 46 ರಾಷ್ಟ್ರೀಯ ರೈಫಲ್ಸ್ ನೆಲೆಯ ಮೇಲೆ ರಾತ್ರಿ 10. 30ರ ಸುಮಾರಿಗೆ ದಾಳಿ ನಡೆದಿದೆ. ದಾಳಿಗೂ ಮುಂಚೆ ಗ್ರೆನೇಡ್ಗಳನ್ನು ಎಸೆದು ನಂತರ ಗುಂಡಿನ ದಾಳಿ ನಡೆಸಲಾಯಿತು ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ.

ದಾಳಿ ಹೇಗೆ ನಡೆಯಿತು?: 

ಭಾರತೀಯ ರಾಷ್ಟ್ರೀಯ ರೈಫಲ್ಸ್ ಸೇನಾ ನೆಲೆಯ ಮೇಲೆ ಎರಡು ದಿಕ್ಕುಗಳಿಂದ ಮೊದಲು ಗ್ರೆನೇಡ್ಗಳನ್ನು ಎಸೆಯಲಾಯಿತು. ನಂತರ ಗುಂಡಿನ ದಾಳಿ ಆರಂಭವಾಯಿತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಸೇನೆ ಇಬ್ಬರು ದಾಳಿಕೋರರನ್ನು ಹೊಡೆದು ಹಾಕಿದೆ. ದಾಳಿಯಲ್ಲಿ ಓರ್ವ ಬಿಎಸ್ಎಫ್ ಜವಾನ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಎಂಬ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ.

ಕೆಲವು ದಿನಗಳ ಹಿಂದಷ್ಟೆ ಉರಿಯ ಸೇನಾ ನೆಲೆಯ ಮೇಲೆ ದಾಳಿ ನಡೆದಿತ್ತು. ಸುಮಾರು 19 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕಾರದ ರೂಪದಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ನೆಲೆಗಳ ಮೇಲೆ ‘ಸರ್ಜಿಕಲ್ ದಾಳಿ’ ನಡೆಸಿತ್ತು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top