An unconventional News Portal.

ಓದಿಗಾಗಿ ನಿಗದಿಯಾಗಿದ್ದ ಮದುವೆ ನಿರಾಕರಣೆ: ಹಾಸನ ಯುವತಿಯ ದಿಟ್ಟ ನಡೆ

ಓದಿಗಾಗಿ ನಿಗದಿಯಾಗಿದ್ದ ಮದುವೆ ನಿರಾಕರಣೆ: ಹಾಸನ ಯುವತಿಯ ದಿಟ್ಟ ನಡೆ

  • ಅರಕಲಗೂಡು ಜಯಕುಮಾರ್

ಮದುವೆ ಬಂಧನಕ್ಕೆ ಒಳಗಾಗಬೇಕಿದ್ದ ಯುವತಿ ಶಿಕ್ಷಣ ಮುಂದುವರಿಸುವ ಹಂಬಲದಿಂದ ನಿಗದಿಯಾಗಿದ್ದ ಮದುವೆಯನ್ನೇ ಮುರಿದುಕೊಂಡ ಘಟನೆ ಅರಕಲಗೂಡು ತಾಲೂಕಿನಲ್ಲಿ ಬುಧವಾರ ನಡೆದಿದೆ.

ಏಪ್ರಿಲ್ 27ರಂದು ಹಸೆಮಣೆ ಏರಬೇಕಿದ್ದ ತಾಲೂಕಿನ ಮೇನಕ (ಹೆಸರು ಬದಲಿಸಿದೆ) ಮದುವೆಯನ್ನು ನಿರಾಕರಿಸಿದ ಯುವತಿ. ಅಧಿಕಾರಿಗಳ ಮಧ್ಯ ಪ್ರವೇಶಿಸುವಂತೆ ಯುವತಿ ಕೋರಿದ ಹಿನ್ನೆಲೆಯಲ್ಲಿ ಮದುವೆ ನಿಂತು ಹೋಗಿದೆ. ಕೊನೆಗೆ, ಪೋಷಕರನ್ನೂ ಕರೆಸಿ ಮಾತನಾಡಿದ ಅಧಿಕಾರಿಗಳು ಮಗಳನ್ನು ಅವರ ಬಳಿ ಕಳಿಸಿಕೊಟ್ಟಿದ್ದಾರೆ. ಪದವಿ ಓದಿಸುವ ಭರವಸೆ ಸಿಕ್ಕ ನಂತರ ಯುವತಿ ಮನೆಗೆ ಹಿಂತಿರುಗಿದ್ದಾಳೆ.

ಘಟನೆ ವಿವರ: 

ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನಿಂದ ವಲಸೆ ಬಂದ ಬಡ ರೈತ ಕಾರ್ಮಿಕ ಕುಟುಂಬದ ಹೆಣ್ಣು ಮಗಳು ಮೇನಕಾ. ಆಕೆಗೆ 18 ವರ್ಷ ತುಂಬುತ್ತಲೇ ಮನೆಯವರು ಶ್ರೀಮಂತ ಕುಟುಂಬದ ವರನನ್ನು ನೋಡಿ ಮದುವೆ ಗೊತ್ತು ಮಾಡಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಮೇನಕಾ, ಮದುವೆಯಿಂದ ತಪ್ಪಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾಳೆ. ಏ.25 ರಂದುಸಂಜೆ ಹುಡುಗಿಯ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯಬೇಕಿತ್ತು. ಆದರೆ, ಅವತ್ತು ಬೆಳಗ್ಗೆ ಕಾಲೇಜಿನಲ್ಲಿ ಪರೀಕ್ಷೆಯಿದೆ ಎಂದು ತಂದೆಯಿಂದಲೇ ಡ್ರಾಪ್ ಪಡೆದುಕೊಂಡಿದ್ದಾಳೆ.

ತಂದೆ ವಾಪಾಸಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲೀಸ್ ಠಾಣೆ ಮತ್ತು ಮಹಿಳಾ ಆಯೋಗಕ್ಕೆ ಮೂರು ಪುಟಗಳ ಪತ್ರ ಬರೆದ ಯುವತಿ, “ಶಿಕ್ಷಣ ಮುಂದುವರೆಸಬೇಕು, ಮದುವೆ ಇಷ್ಟವಿಲ್ಲ, ಮದುವೆ ಬೇಡ ಎಂದರೆ ಪೋಷಕರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಾರೆ, ನನಗೆ ರಕ್ಷಣೆ ನೀಡಿ ಮದುವೆ ತಪ್ಪಿಸಿ, ಶಿಕ್ಷಣ ಮುಂದುವರೆಸಲು ಅವಕಾಶ ಮಾಡಿಕೊಡಿ,” ಎಂದು ಅರಕಲಗೂಡು ಪಟ್ಟಣದ ಶಿಶು ಅಭಿವೃದ್ದಿ ಯೋಜನಾ ಕಛೇರಿ ಮೆಟ್ಟಿಲು ಹತ್ತಿದ್ದಾಳೆ. ತನ್ನನ್ನು ರಕ್ಷಣೆ ನೀಡದೇ ವಾಪಾಸ್ ಕಳಿಸಿದರೆ ವಿಷ ಕುಡಿಯುತ್ತೇನೆ ಎಂದು ಹೆದರಿಕೆ ಹುಟ್ಟು ಹಾಕಿದ್ದಾಳೆ.

ಸಂಧಾನ ಮಾತುಕತೆ: 

ಮಧ್ಯಾಹ್ನ ವೇಳೆಗೆ ವಿಷಯ ತಿಳಿದ ಪೋಷಕರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಪಟ್ಟಣದ ಕಛೇರಿಗೆ ಧಾವಿಸಿ ಯುವತಿಯನ್ನು ಕಳಿಸುವಂತೆ ಸಿಡಿಪಿಓ ಮಂಜುಳಾ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಅದೇ ವೇಳೆಗೆ, ಘಟನೆ ತಾಲೂಕು ಆಡಳಿತದ ಗಮನಕ್ಕೆ ಬಂದಿದ್ದರಿಂದ ಪ್ರಭಾರಿ ತಹಸೀಲ್ದಾರ್ ಪಾರ್ಥಸಾರಥಿ, ವೃತ್ತ ಆರಕ್ಷಕ ನಿರೀಕ್ಷಕ ಸುರೇಶ್ , ಕಾನೂನು ಸಲಹೆಗಾರ ಜಗದೀಶ್ ಸಮ್ಮುಖದಲ್ಲಿ ಪೋಷಕರು ಯುವತಿಯೊಂದಿಗೆ ಸಂಧಾನ ಮಾತುಕತೆ ನಡೆಸಿದರು. ಕೊನೆಗೂ ಯುವತಿ ಮದುವೆಗೆ ಒಪ್ಪದಿದ್ದಾಗ, ವರನ ಮನೆಯವರಿಗೆ ವಿಷಯ ಮುಟ್ಟಿಸಿದರು. ನಿಗದಿಯಾದ ದಿನಾಂಕದಲ್ಲಿಯೇ ಬೇರೆ ಯುವತಿ ಜತೆ ಮದುವೆಯಾವುದಾಗಿ ವರ ತಿಳಿಸಿದ ಹಿನ್ನೆಲೆಯಲ್ಲಿ ಮೇನಕಾ ಮದುವೆ ಬಂಧನದಿಂದ ಹೊರಬಂದಿದ್ದಾಳೆ.

ನಂತರ ಮಂಗಳವಾರ ತಡರಾತ್ರಿ ಪೋಷಕರ ಜೊತೆ ಗ್ರಾಮಕ್ಕೆ ಯುವತಿ ವಾಪಾಸಾಗಿದ್ದಾಳೆ. ಸದ್ಯ ಹುಡುಗಿಯ ಮದುವೆ ರದ್ದಾಗಿದೆ. ಇದರಿಂದ ಬೇಸರಗೊಂಡರೂ, ಮಗಳು ಮತ್ತೆ ನಮಗೆ ಸಿಕ್ಕಳಲ್ಲ ಎಂಬ ಸಂತೋಷವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಪದವಿ ಶಿಕ್ಷಣ ಮುಗಿಸುವವರೆಗೆ ಮದುವೆ ಆಗೊಲ್ಲ ಎನ್ನುವ ಮೂಲಕ ಮೇನಕಾ ಮಾದರಿಯಾಗಿದ್ದಾಳೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top