An unconventional News Portal.

‘ಗೋ ಸಂದರ್ಶನ’ಕ್ಕೆ ಮುಂದಾದ ಪಾಕಿಸ್ತಾನದ ಪತ್ರಕರ್ತ: ಅಪರೂಪದ ವರದಿಯನ್ನು ಮಿಸ್ ಮಾಡದೆ ನೋಡಿ!

‘ಗೋ ಸಂದರ್ಶನ’ಕ್ಕೆ ಮುಂದಾದ ಪಾಕಿಸ್ತಾನದ ಪತ್ರಕರ್ತ: ಅಪರೂಪದ ವರದಿಯನ್ನು ಮಿಸ್ ಮಾಡದೆ ನೋಡಿ!

ಟಿವಿ ಪತ್ರಕರ್ತನಿಗೆ ಸಂದರ್ಶನ ನೀಡಿದ ಗೋವು.. ತನ್ನ ಬ್ಯುಸಿ ಶೆಡ್ಯೂಲ್ ಮಧ್ಯೆ ಸಂದರ್ಶನಕ್ಕಾಗಿ ಬಿಡುವು ಮಾಡಿಕೊಂಡ ದನ… ಹೀಗೊಂದು ಬ್ರೇಕಿಂಗ್ ನ್ಯೂಸ್ ನಿಮ್ಮ ಟಿವಿಯಲ್ಲಿ ಬಂದರೆ ಹೌಹಾರಿ ಬಿಡುತ್ತೀರಿ ಅಲ್ವಾ? ಆದರೆ, ನಮ್ಮ ಪಕ್ಕದ ಪಾಕಿಸ್ತಾನದಲ್ಲಿ ಹೀಗೊಂದು ಸಾಧ್ಯತೆಯನ್ನು ಟಿವಿ ಪತ್ರಕರ್ತರೊಬ್ಬರು ಅನ್ವೇಷಣೆ ಮಾಡಿದ್ದಾರೆ. ಅಕ್ಷರಶಃ ದನಕ್ಕೆ ಮೈಕ್ ಹಿಡಿದು ಅದರ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಈ ಮೂಲಕ ಲಾಹೋರಿನ ಹೆದ್ದಾರಿಯನ್ನು ದಾಡಲು ದಿನಾಲೂ ಜಾನುವಾರುಗಳು ಪಡುತ್ತಿರುವ ಕಷ್ಟದ ಕುರಿತು ಸ್ಟೋರಿಯೊಂದನ್ನು ತೆರೆದಿಟ್ಟಿದ್ದಾರೆ. ಇತ್ತಿಚಿನ ದಿನಗಳಲ್ಲಿ ಜಗತ್ತಿನ ಗಮನ ಸೆಳೆದ ವರದಿಗಳಲ್ಲಿ ಇದೂ ಕೂಡ ಸೇರಿಹೋಗಿದೆ.

ಏನಿದು ಬೆಳವಣಿಗೆ?:

ಪಾಕಿಸ್ತಾನದ ‘ಜಿಯೋ ನ್ಯೂಸ್’ ವಾಹಿನಿ ವರದಿಗಾರ ಅಮೀನ್ ಹಫೀಜ್ ಆಕಳನ್ನು ಸಂದರ್ಶನ ಮಾಡಿ ವಿಶ್ವ ಪ್ರಸಿದ್ಧರಾಗಿದ್ದಾರೆ. ಸಂದರ್ಶನ ನಡೆದಿರುವುದು ಲಾಹೋರಿನಲ್ಲಿ. ಇಲ್ಲಿನ ಹೈವೆಯಲ್ಲಿ ಬೆಂಗಳೂರಿನ ಕೆ. ಆರ್. ಮಾರ್ಕೆಟ್ ರಸ್ತೆಗಳಂತೆ ದನಗಳ ಗ್ಯಾಂಗ್ ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ರಸ್ತೆ ದಾಟುತ್ತಿದ್ದ ದನಗಳು ಸಾವನ್ನಪ್ಪುವುದು, ಸಂಚಾರಕ್ಕೆ ದನಗಳು ನಿರಂತರ ಅಡ್ಡಿ ಪಡಿಸುತ್ತಿದ್ದರಿಂದ ಟ್ರಾಫಿಕ್ ಪೊಲೀಸರು ಕೋಲು ಹಿಡಿದು ದನಗಳನ್ನು ಓಡಿಸುವುದರಲ್ಲಿಯೇ ಹೈರಾಟಾಗಿ ಹೋಗುತ್ತಿದ್ದರು. ಕೊನೆಗೆ ರಸ್ತೆ ಮಧ್ಯೆ ದನಗಳು ಹಾರದಂತೆ ಎತ್ತರದ ಗೋಡೆಗಳನ್ನು ಕಟ್ಟಲಾಯಿತು. ಜನಸಂಚಾರಕ್ಕೆ ಅಲ್ಲಿನ ನಗರಾಡಳಿತ ಸ್ಕೈವಾಕ್ ನಿರ್ಮಾಣ ಮಾಡಿತು.

ಜಿಯೋ ನ್ಯೂಸ್ ಮೈಕಿನೊಂದಿಗೆ ಅಮೀನ್ ಹಫೀಜ್

ಜಿಯೋ ನ್ಯೂಸ್ ಮೈಕಿನೊಂದಿಗೆ ಅಮೀನ್ ಹಫೀಜ್

ಇದರಿಂದ ಜಾನುವಾರುಗಳ  ಸಮಸ್ಯೆಯಾಗುತ್ತಿರುವುದನ್ನು ಜನರ ಮುಂದಿಡುವ ಪ್ರಯತ್ನಕ್ಕೆ ಕೈ ಹಾಕಿದರು ಪತ್ರಕರ್ತ ಅಮೀನ್ ಹಫೀಸ್. ಅದರಲ್ಲೂ ಪ್ರತಿ ದಿನ ಜಾನುವಾರುಗಳ ಮಾಲೀಕರು ಹೆದ್ದಾರಿಯನ್ನು ದಾಟಿಸಲು ಜನರಿಗಾಗಿ ನಿರ್ಮಿಸಿದ ಸ್ಕೈವಾಕ್ ಬಳಸುತ್ತಿರುವುದನ್ನು ಪ್ರತ್ಯಕ್ಷ ವರದಿ ಮಾಡಿದರು. ಹೀಗೆ ವರದಿ ಮಾಡುವಾಗ ಸ್ಥಳದಿಂದ ಜನರಿಂದ ಬೈಟ್ ತೆಗೆದುಕೊಳ್ಳುವುದು ವರದಿಗಾರರ ವೃತ್ತಿ ಧರ್ಮ. ಅವರು ಇದನ್ನು ಪೂರೈಸಲೇಬೇಕಾಗಿತ್ತು. ಆದರೆ ದನಗಳ ಪರವಾಗಿ ಹೇಳಲು ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ದನದ ಬಾಯಿಗೆ ಮೈಕ್ ಹಿಡಿದೇ ಬಿಟ್ಟರು.

ನಮ್ಮ ಕನ್ನಡದ ಟಿವಿ ಚಾನಲ್ಲೊಂದು ಮೇಕೆಯನ್ನು ಸ್ಟುಡಿಯೋಗೆ ಕರೆಸಿಕೊಂಡು ಬಿಸಿ ಬಿಸಿ ಚರ್ಚೆ ನಡೆಸಿದ್ದು ಈ ಸಂದರ್ಭ ಜ್ಞಾಪಕಕ್ಕೆ ಬಂದರೆ ಅದು ನಮ್ಮ ತಪ್ಪಲ್ಲ. ವರದಿಗಾರ ಜಾನುವಾರಿನ ಜೊತೆ ಚಿಟ್ ಚಾಟ್ ಮಾಡಿದರು. “ನಿಮಗೆ ಯಾವ ರೀತಿ ಸಮಸ್ಯೆಗಳಾಗಿವೆ? ಸ್ಕೈ ವಾಕ್ ಬಗ್ಗೆ ಏನು ಹೇಳುತ್ತೀರಿ?,” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಅದು ಸಾವಕಾಶವಾಗಿ ‘ಅಂಬೋ’ ಎಂದು ಉತ್ತರಿಸಿತು. ಭಾಷೆ ಬರದ ಜನರಿಗೆ ಇದನ್ನು ವಿವರಿಸಲು ಅವರು ದನ ಹೇಳಿದ್ದನ್ನು, ದನದ ಭಾವನೆಯನ್ನು ಅರ್ಥ ಮಾಡಿಕೊಂಡು ತರ್ಜುಮೆ ಮಾಡಿ ಸುದ್ದಿ ನೀಡಿಯೇ ಬಿಟ್ಟರು.

“ಡಿವೈಡರ್ ದಾಟಲು ಸಾಧ್ಯವಿಲ್ಲ. ಸ್ಕೈವಾಕ್ ಹತ್ತುವುದು ಕಷ್ಟವಾಗುತ್ತದೆ, ಆದರೆ ಇದೇ ಸುರಕ್ಷಿತ,” ಎಂದು ದನ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಅಮೀನ್ ಜನರಿಗೆ ತಿಳಿಸಿದರು. ದನದ ಭಾಷೆಯನ್ನು ಮೊದಲ ಬಾರಿಗೆ ತರ್ಜುಮೆ ಮಾಡಿ ಸುದ್ದಿ ಕೊಟ್ಟ ಮೊದಲಿಗ ಎನ್ನುವ ದಾಖಲೆ ಬಹುಶಃ ಅಮೀನ್ ಅವರುಗೆ ಸಲ್ಲಬೇಕು.

ಅಂದಹಾಗೆ ಅವರು ಮಾಡಿದ ವರದಿಯ ವಿಡಿಯೋ ಈ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಅಪರೂಪದ ವರದಿ ಇಲ್ಲಿದೆ ನೋಡಿ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top