An unconventional News Portal.

ರಾಕೇಶ್ ಸಿದ್ದರಾಮಯ್ಯ ‘ಸಾಮಾಜಿಕ’ ಅವಹೇಳನ: ‘ಜಾತಿ ನಿಂದನೆ’ ಅಡಿಯಲ್ಲಿ ಪ್ರಥಮ ಕೇಸು ದಾಖಲು

ರಾಕೇಶ್ ಸಿದ್ದರಾಮಯ್ಯ ‘ಸಾಮಾಜಿಕ’ ಅವಹೇಳನ: ‘ಜಾತಿ ನಿಂದನೆ’ ಅಡಿಯಲ್ಲಿ ಪ್ರಥಮ ಕೇಸು ದಾಖಲು

ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಮರಣಾನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸಿ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಯಚೂರು ಜಿಲ್ಲೆ, ಲಿಂಗಸೂಗೂರು ಠಾಣೆಯಲ್ಲಿ ನವೀನ್ ಕುಮಾರ್ ಹಾಗೂ ಶರಣ ಬಸವ ಎಂಬ ಇಬರಬು ಯುವಕರ ವಿರುದ್ಧ ಐಪಿಸಿ ಸೆಕ್ಷನ್ಸ್ 153-ಎ, 504, 34 ಅಡಿಯಲ್ಲಿ ಪ್ರಕರಣಗಳು ದಾಖಲಿಸಲಾಗಿದೆ. ಜಾತಿ ನಿಂದನೆ, ಉದ್ದೇಶ ಪೂರ್ವಕವಾಗಿ ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಗುಂಪಾಗಿ ಅಪರಾಧ ಚಟುವಟಿಕ ನಡೆಸದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ.

ದೂರಿನ ಸಾರಾಂಶ:

ರಾಯಚೂರು ಜಿಲ್ಲೆಯ ಕುರುಬ ಜಾತಿಗೆ ಸೇರಿದ ವಿದ್ಯಾರ್ಥಿ ಗದ್ದನಗೌಡ ಎಂಬುವವರು ಜು. 31ರಂದು ಠಾಣೆಗೆ ಹೋಗಿ ಇಬ್ಬರ ವಿರುದ್ಧ ದೂರು ಸಲ್ಲಿಸಿದ್ದಾರೆ. ಪೊಲೀಸರು ದಾಖಲಿಸಿಕೊಂಡಿರುವ ಪ್ರಥಮ ಮಾಹಿತಿ ವರದಿ ಪ್ರಕಾರ, ‘ಆರೋಪಿಗಳು ಲಿಂಗಸೂಗೂರು ಹುಡುಗರ ವಾಟ್ಸಾಪ್ ಗುಂಪಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ರಾಕೇಶ್ ಇವರಿಗೆ ಅವಹೇಳನಕಾರಿಯಾಗುವ ಅಶ್ಲೀಲ ಶಬ್ಧಗಳನ್ನು ಉಪಯೋಗಿಸಿ 10- 12 ಸಂದೇಶ ಕಳುಹಿಸಿದ್ದಾರೆ. ದೂರುದಾರರು ಕರೆ ಮಾಡಿ ಬುದ್ಧಿ ಹೇಳಿದಾಗ, ನೀವು ಕುರುಬರು; ಎಲ್ಲರ ಮೇಲೆ ಕೇಸು ಮಾಡುತ್ತೀರಿ ಎಂದು ಅವ್ಯಾಚ್ಯ ಶಬ್ಧಗಳಿಂದ ಬೈದು, ಕುರುಬ ಜನಾಂಗದ ಮುಖ್ಯಮಂತ್ರಿಗಳಿಗೆ ಮತ್ತು ಅವರ ಮಗನಿಗೆ ಅವಮಾನ ಮಾಡಿ ಕುರುಬ ಜನಾಂಗದವರ ಮನಸ್ಸಿಗೆ ನೋವುಂಡು ಮಾಡಿದ್ದಾರೆ’ ಎಂದು ನವೀನ್ ಕುಮಾರ್ ಮತ್ತು ಶರಣ ಬಸವ ಅಲಿಯಾಸ್ ಗಿಬ್ಸ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಅಭಿವ್ಯಕ್ತಿ- ಅಶ್ಲೀಲ:

ಬೆಲ್ಜಿಯಂಗೆ ಜುಲೈ ತಿಂಗಳ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಪುತ್ರ ರಾಕೇಶ್ ಸಿದ್ದರಾಮಯ್ಯ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದರು. ಅಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲಿ ಅವರನ್ನು ನೋಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬೆಲ್ಜಿಯಂಗೆ ತೆರಳಿದ್ದರು. ಈ ಹೊತ್ತಿಗಾಗಲೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಸ್ವರೂಪ ಪಡೆದುಕೊಂಡಿರು. ಜು. 28ರಂದು ರಾಕೇಶ್ ಮೃತಪಟ್ಟ ಸುದ್ದಿ ಹೊರಬೀಳುತ್ತಿದ್ದಂತೆ ನಾನಾ ಆಯಾಮಗಳಲ್ಲಿ ಫೇಸ್ ಬುಕ್ ಮತ್ತು ವಾಟ್ಸಾಪ್ ಬಳಕೆದಾರರು ಅಭಿಪ್ರಾಯಳನ್ನು ಹಂಚಿಕೊಳ್ಳಲು ಶುರುಮಾಡಿದ್ದರು.

ಇದು ಒಂದು ಹಂತದಲ್ಲಿ ವಿಕೋಪಕ್ಕೆ ಹೋದಾಗ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ರಾಕೇಶ್ ಸಿದ್ದರಾಮಯ್ಯ ಕುರಿತು ಅಸಭ್ಯವಾಗಿ ಸಂದೇಶಗಳನ್ನು ಹಂಚುತ್ತಿರುವವರ ಬಗ್ಗೆ ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದರು.

Dinesh amin rakesh

ಇದನ್ನು ವಿರೋಧಿಸಿ ಕೆಲವು ಪತ್ರಕರ್ತರು ಸೇರಿದಂತೆ, ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಮಾತುಗಳನ್ನು ಹೇಳಿದ್ದರು.

Chiru Bhat Rakesh

ಇದೀಗ ಇದೇ ವಿಚಾರದಲ್ಲಿ ‘ಜಾತಿ ನಿಂದನೆ’ ಪ್ರಕರಣ ದಾಖಲಾಗುವ ಮೂಲಕ ‘ಸಾಮಾಜಿಕ ಅವಹೇಳನ’ಗಳ ವಿರುದ್ಧ ಮೊದಲ ಕಾನೂನಾತ್ಮಕ ನಡೆ ಇಟ್ಟಂತಾಗಿದೆ.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top