An unconventional News Portal.

ಇದು ಅವರ ‘ಎಂಪವರ್’ಗಾಗಿ ತೆರೆದ ಮೊದಲ ವಿಶ್ವವಿದ್ಯಾನಿಲಯ!

ಇದು ಅವರ ‘ಎಂಪವರ್’ಗಾಗಿ ತೆರೆದ ಮೊದಲ ವಿಶ್ವವಿದ್ಯಾನಿಲಯ!

ಜಗತ್ತಿನಾದ್ಯಂತ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವ ಮಹಿಳೆಯರು, ಯುವತಿಯರು ಹಾಗೂ ಮಕ್ಕಳ ಸಂಖ್ಯೆ ಇವತ್ತಿಗೆ, 1. 40 ಕೋಟಿ ಎಂಬುದು ವಿಶ್ವಸಂಸ್ಥೆ ವರದಿಯೊಂದು ಹೇಳುತ್ತದೆ. ಇದರಲ್ಲಿ 2.5 ಲಕ್ಷ ಲೈಂಗಿಕ ಕಾರ್ಯಕರ್ತೆಯರು ಥಾಯ್ಲೆಂಡ್ ದೇಶವೊಂದರಲ್ಲೇ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ಇರುವಂತೆಯೇ, ಇಲ್ಲಿಯೂ ಕೂಡ ಲೈಂಗಿಕ ಕಾರ್ಯಕರ್ತೆಯನ್ನು ಸಮಾಜದ ಪಿಡುಗು ಎಂಬಂತೆ ನೋಡುವ ಸಾಮಾಜಿಕ ವಾತಾವರಣವಿದೆ. ಇದನ್ನು ಹೋಗಲಾಡಿಸುವುದು ಸದ್ಯದ ಸ್ಥಿತಿಯಲ್ಲಿ ಸವಾಲು. ಆದರೆ, ಅಂತಹದೊಂದು ಸವಾಲನ್ನು ಸ್ವೀಕರಿದ ಗಟ್ಟಿಗಿತ್ತಿ ಇದ್ದಾರೆ- ಆಕೆಯ ಹೆಸರು ಚಂತವಿಪಾ ಅಪಿಸುಕ್.

ಆಕೆಯ ರೋಚಕ ಕತೆಯೊಂದನ್ನು ಹೇಳುವ ಮುನ್ನ ಚಿಕ್ಕದೊಂದು ರಿಕ್ಯಾಪ್ ಮಾಡಿಕೊಂಡು ಬರೋಣ. ಮೊನ್ನೆಯಷ್ಟೆ, ‘ಸಮಾಚಾರ ಪ್ಲಸ್’ನಲ್ಲಿ ಥಾಯ್ಲೆಂಡ್ ಹಾಗೂ ಅದರ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಲೈಂಗಿಕ ಕಾರ್ಯಕರ್ತೆಯರಾಗಿ ಹೇಗೆ ‘ಸೆಕ್ಸ್ ಟೂರಿಸಂ’ ಖೆಡ್ಡಾಗೆ ಬೀಳುತ್ತಿದ್ದಾರೆ ಎಂಬುದರ ಕುರಿತು ವರದಿಯೊಂದನ್ನು ಪ್ರಕಟಿಸಿದ್ದೆವು. ಇದು ಅದರ ಮುಂದುವರಿದ ಅಧ್ಯಾಯ, ಆಶಯಾತ್ಮಕ ವಿಚಾರ.

ಚಂತವಿಪಾ ಅಪಿಸುಕ್ ಥಾಯ್ ದೇಶದ ಲೈಂಗಿಕ ಕಾರ್ಯಕರ್ತೆಯನ್ನು ಕೇಂದ್ರವಾಗಿಟ್ಟುಕೊಂಡು ‘ಎಂಪವರ್’ ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿದ್ದಾರೆ. ಅನಿವಾರ್ಯ ಕಾರಣಗಳಿಗಾಗಿ, ತಮ್ಮನ್ನು ತಾವು ಮಾರಿಕೊಳ್ಳುವ ಜಾಲಕ್ಕೆ ಬಿದ್ದ ಯುವತಿಯರಿಗೆ ಅರಿವು ಮೂಡಿಸುವುದು, ಅದರನ್ನು ಲೈಂಗಿಕ ದಂಧೆಯಿಂದ ನಿಧಾನವಾಗಿ ಹೊರತರುವುದು ಈ ಸಂಘಟನೆಯ ಉದ್ದೇಶ. ಕಳೆದ 30 ವರ್ಷಗಳಿಂದ ಕ್ರೀಯಾಶೀಲವಾಗಿರುವ ‘ಎಂಪವರ್’ ಲೈಂಗಿಕ ಕಾರ್ಯಕರ್ತೆಯರಿಗೂ ಸಮಾಜದಲ್ಲಿ ಗೌರವಯುತ ಸ್ಥಾನ ಸಿಗಬೇಕು ಎಂದು ಹೋರಾಟ ನಡೆಸುತ್ತಿದೆ.

empower-university-2

ದಶಕದ ಹಿಂದೆ ರಾಕ್ ಫಿಲ್ಲರ್ ಫೌಂಡೇಶನ್ ಸಹಯೋಗದೊಂದಿಗೆ ‘ಎಂಪವರ್’ ಸಂಘಟನೆಯನ್ನು ‘ಎಂಪವರ್ ಯೂನಿವರ್ಸಿಟಿ’ಯಾಗಿ ಬದಲಾಯಿಸಲಾಗಿದೆ. ಅಂದರೆ, ಇದು ಜಗತ್ತಿನಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ತೆರೆದ ಮೊದಲ ವಿಶ್ವವಿದ್ಯಾನಿಲಯ ಇದು. ಈಗಾಗಲೇ ಥಾಯ್ ದೇಶದ 9 ಕಡೆಗಳಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ಗಳು ತಲೆ ಎತ್ತಿವೆ. ಇಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿಯೇ ವಿಶೇಷವಾಗಿ ತಯಾರಿಸಿದ ಪಠ್ಯಕ್ರಮಗಳನ್ನು ಬೋಧಿಸಲಾಗುತ್ತಿದೆ.

ಈ ವಿಶ್ವವಿದ್ಯಾನಿಲಯದಲ್ಲಿರುವ ವಿಶೇಷವಾದ ಗ್ರಂಥಾಲಯದಲ್ಲಿ ಜಗತ್ತಿನ ಎಲ್ಲಾ ದೇಶಗಳ ಲೈಂಗಿಕ ಕಾರ್ಯಕರ್ತೆಯರು, ಅವರ ಸುತ್ತ ನಡೆಯುತ್ತಿರುವ ಉದ್ಯಮದ ಕುರಿತು ಸಮಗ್ರ ಮಾಹಿತಿ ಲಭ್ಯವಿದೆ. ಜತೆಗೆ, ಈ ಕುರಿತು ಬರುವ ಮಾಸಿಕಗಳು, ನಿಯತಕಾಲಿಕೆಗಳು ಇಲ್ಲಿ ಓದಿಗೆ ಸಿಗುತ್ತವೆ. ಆಸಕ್ತರಿಗೆ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ‘ದೂರ ಶಿಕ್ಷಣ’ವನ್ನೂ ನೀಡುತ್ತಿದೆ ‘ಎಂಪವರ್ ಯೂನಿವರ್ಸಿಟಿ’.

 

“ಲೈಂಗಿಕ ವೃತ್ತಿಯನ್ನು ನೈತಿಕತೆ ವಿಚಾರಗಳ ಅಡಿಯಲ್ಲಿ ಜಗತ್ತು ಗುರುತಿಸುತ್ತದೆ. ಅದೊಂದು ಅಪರಾಧ ಎಂಬಂತೆ ಕಾನೂನು ನೋಡುತ್ತದೆ. ಹೀಗಿದ್ದೂ, ಪ್ರತಿ ವರ್ಷ ಜಗತ್ತಿನಾದ್ಯಂತ 640 ಕೋಟಿ ಆದಾಯ ತರುವ ಉದ್ಯಮವಾಗಿ ಇಂದು ಬೆಳೆದಿದೆ. ಪತ್ರಕರ್ತರು ಕೂಡ ಲೈಂಗಿಕ ಕಾರ್ಯಕರ್ತೆಯರನ್ನು ಟ್ಯಾಬೂ ರೀತಿ ಚಿತ್ರಿಸುತ್ತಿರುವುದು ದೊಡ್ಡ ಸಮಸ್ಯೆ,” ಎನ್ನುತ್ತಾರೆ ವಿಶ್ವವಿದ್ಯಾನಿಲಯದ ಸಂಸ್ಥಾಪಕಿ ಅಪಿಸುಕ್.

 

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top