An unconventional News Portal.

ಇವರ ಪ್ರವಾಸ ಕಥನದಲ್ಲಿ ಅವನು, ಅವಳು ಮತ್ತು ಇವನ್ನೊಬ್ಬ!

ಇವರ ಪ್ರವಾಸ ಕಥನದಲ್ಲಿ ಅವನು, ಅವಳು ಮತ್ತು ಇವನ್ನೊಬ್ಬ!

ಮನುಷ್ಯ ಜೀವಿಯ ಉಗಮದ ಜತೆ ಜತೆಗೇ ಆತನಿಗೆ ಅಂಟಿಕೊಂಡ ಹವ್ಯಾಸಗಳ ಪೈಕಿ ಸುತ್ತಾಟ ಕೂಡ ಒಂದು. ಇವತ್ತಿಗೆ ಅದೇ ದೊಡ್ಡ ಉದ್ಯಮವಾಗಿ, ಪ್ರವಾಸ ಎಂಬುದು ಫ್ಯಾಷನ್ ಆಗಿರುವ ಕಾಲ. ಅಷ್ಟಕ್ಕೂ ಒಬ್ಬಂಟಿಯಾಗಿ ಪ್ರವಾಸ ಹೋಗುವುದರಲ್ಲಿ ಅಷ್ಟೇನು ಮಜಾ ಇರಲ್ಲ. ಜತೆಗೆ ಯಾರಾರದರು ಇದ್ದರೆ, ಪ್ರಯಾಣದ ಕಳೆಯೇ ಬೇರೆ ಇರುತ್ತದೆ. ಆ ಜತೆಗಾರರು ಸಂಗಾತಿಯೇ ಆಗಿರಬೇಕು ಎಂದು ಬಯಸುವವರು ನಾವು. ಆದರೆ ಮನೆಯಲ್ಲಿ ಸಾಕುವ ಮುದ್ದು ನಾಯಿಯನ್ನೂ ತಮ್ಮ ಪ್ರವಾಸದ ಜತೆಗಾತಿಯಾಗಿ ಮಾಡಿಕೊಂಡರೆ ಹೇಗಿರುತ್ತೆ? ಯೋಚನೆ ಬಿಡಿ, ಈಗಾಗಲೇ ಕೆನಡಾ ಮೂಲದ ಈ ದಂಪತಿ, ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಿದ್ದಾರೆ. ಅಷ್ಟೆ ಅಲ್ಲಾ, ಅದನ್ನು ಈ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಯಶಸ್ವಿಯಾಗಿ ಮಾರ್ಕೆಟ್ ಕೂಡ ಮಾಡಿದ್ದಾರೆ.

ಇವತ್ತು ನಾವು ಹೇಳಲು ಹೊರಟಿರೋದು ಕೆನಡಾದ ಹಂಟರ್ ಲಾರೆನ್ಸ್ ಮತ್ತು ಸರಾ ಲಾರೆನ್ಸ್ ದಂಪತಿಗಳ ಕತೆ. ಇವರಿಬ್ಬರು ಕಾಲಿ ಚಕ್ರ ಕಟ್ಟಿಕೊಂಡಂತೆ ಸುತ್ತುವ ದಂಪತಿಗಳ ಸಾಲಿನ ಮತ್ತೊಂದು ಜೋಡಿ. ವಿಶೇಷ ಅಂದರೆ, ಇವರ ಜತೆಗೆ ಇವರ ಮುದ್ದು ನಾಯಿ, ಆಸ್ಪೆನ್ ಕೂಡ ಜಗತ್ತು ಸುತ್ತುತ್ತಿದ್ದಾನೆ.

7_Aspen-the-mountain-pup-copy

ಇದು ಲಾರೆನ್ಸ್ ದಂಪತಿ ಪ್ರವಾಸದ ಸಮಯದಲ್ಲಿ ಸೆರೆ ಹಿಡಿದ ಚಿತ್ರ. ಇದು ಸಾಮಾನ್ಯ ಚಿತ್ರವಾಗಿ ಅವರ ಮನೆಯ ಗೋಡೆಯಲ್ಲಿ ನೆನಪಾಗಿ ಉಳಿದು ಬಿಡುತ್ತಿತ್ತೇನೊ. ಆದರೆ, ದಂಪತಿ ಸಾಮಾಜಿಕ ಜಾಲತಾಣ ‘ಇನ್ಸ್ಟಾಗ್ರಾಂ’ನಲ್ಲಿ ತಮ್ಮ ಮುದ್ದಿನ ನಾಯಿ ಹೆಸರಿನಲ್ಲಿ ಖಾತೆಯೊಂದನ್ನು ತೆರೆದಿದ್ದಾರೆ. ಅದಕ್ಕೀಗಾಗಲೇ 1.60 ಲಕ್ಷ ಹಿಂಬಾಲಕರಿದ್ದಾರೆ.

ಅಲ್ಲಿ ಆಸ್ಪೆನ್ ಪ್ರವಾಸದ ಸಮಯದಲ್ಲಿ ನೀಡುವ ಇಂತಹ ಸಾವಿರಾರು ಪೋಸುಗಳನ್ನು ಹಾಕಲಾಗುತ್ತಿದೆ. ತಮ್ಮದೇ ಜಂಜಡಗಳಲ್ಲಿ ಮುಳುಗಿ ಹೋಗಿರುವವರಿಗೆ ಪ್ರವಾಸ ಹೋಗಬೇಕು ಎಂಬ ಮನಸ್ಸಿನಾಳದ ಭಾವ ಕಾಡುತ್ತಿರುತ್ತದೆ. ಈ ಸಮಯದಲ್ಲಿ ತಮಗೆ ಇಲ್ಲದ ಭಾಗ್ಯ ಆಸ್ಪಿನ್ಗೆ ಸಿಗುತ್ತಿರುವುದನ್ನು ಕಂಡು ಖುಷಿಯೋ, ಅಸೂಯೆಯೋ ಪಟ್ಟುಕೊಳ್ಳುತ್ತಿದ್ದಾರೆ.

2012ರಲ್ಲಿ ಶುರುವಾದ ಈ ಅಪರೂಪದ ಪ್ರವಾಸ ಕಥನ ಮುಂದುವರಿಯುತ್ತಲೇ ಇದೆ. ಮುಂದೊಂದು ದಿನ ಇದೇ ವಿಷಯವನ್ನು ಇಟ್ಟುಕೊಂಡು ಹಾಲಿವುಡ್ ಸಿನಿಮಾ ತೆರೆ ಕಂಡರೂ ಅಚ್ಚರಿ ಏನಿಲ್ಲ. ಅವತ್ತು ಕಂಪ್ಯೂಟರ್ ಪರದೆಯನ್ನು ಆವರಿಸಿದರುವ ಆಸ್ಪೆನ್ ಬೆಳ್ಳಿ ತೆರೆಯಲ್ಲಿ ರಾರಾಜಿಸಬಹುದು. ನಾವು, ಹೀಗೆ ಆತನ ಬಗ್ಗೆ ಇನ್ನೊಂದಿಷ್ಟು ರಂಜನೀಯ ಕತೆಗಳನ್ನು ಓದುತ್ತಾ, ಕಾಲ ಕಳೆಯುತ್ತೇವೆ, ಅಷ್ಟೆ.

Top