An unconventional News Portal.

ಸೊಳ್ಳೆ ಕಾಟಕ್ಕೆ ತತ್ತರಿಸಿದ ದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಚಿಕುನ್ ಗುನ್ಯಾ ರುದ್ರ ನರ್ತನ

ಸೊಳ್ಳೆ ಕಾಟಕ್ಕೆ ತತ್ತರಿಸಿದ ದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಚಿಕುನ್ ಗುನ್ಯಾ ರುದ್ರ ನರ್ತನ

ಸೊಳ್ಳೆ ಕಾಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದೆ. ಇಲ್ಲಿನ ಹೊರವಲಯದ ಕರ್ಕಾರಧೂಮ ಪ್ರದೇಶದಲ್ಲಿ ಚಿಕುನ್ ಗುನ್ಯಾಗೆ ಸಾವಿನ ಸರಣಿ ಆರಂಭವಾಗಿದೆ.

ಸ್ಥಳೀಯ ವೈದರ ಬಳಿ ಒಬ್ಬೊಬ್ಬರಾಗಿ ಬಂದು ಗಂಟು ನೋವು, ತಲೆ ನೋವು, ಜ್ವರ ಮತ್ತು ಅಸ್ವಸ್ಥತೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವೆಲ್ಲಾ ಸೊಳ್ಳೆ ಮೂಲಕ ಹರಡುವ ಚಿಕುನ್ ಗುನ್ಯಾದ ಗುಣ ಲಕ್ಷಣಗಳಾಗಿವೆ.

“ನಾನು ಪಕ್ಕದ ಆಸ್ಪತ್ರೆಗೆ ಹೋಗಿ ಪ್ಯಾರಾಸೆಟಮೋಲ್ ಮಾತ್ರ ತೆಗೆದುಕೊಳ್ಳುವಂತೆ ಹೇಳಿದೆ. ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ,” ಎನ್ನುತ್ತಾರೆ 65 ವರ್ಷದ ಲೀಲಾ ವಾಟಿ. ಜ್ವರಕ್ಕಾಗಿ ವೈದ್ಯರ ಚಿಕಿತ್ಸೆಗೆ ಹೋಗಿದ್ದ ಮಗಳನ್ನು ಅವರು ಕ್ಲಿನಿಕ್ ಹೊರಗೆ ಕಾಯುತ್ತಾ ನಿಂತಿದ್ದರು. ಹೀಗೆ ಅಲ್ಲಿನ ಹೆಚ್ಚಿನವರು ಇದೇ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ದೆಹಲಿಯ ಈಶಾನ್ಯ ಭಾಗದಲ್ಲಿ ಬರುವ ಕಾರ್ಕರ್ದೂಮ ಇದೀಗ ಚಿಕುನ್ ಗುನ್ಯಾ ಹುಟ್ಟುವ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿದೆ. ರಾಜಧಾನಿಯಲ್ಲಿ ಈ ಬಾರಿ ಪರಿಸ್ಥತಿ ಚಿಂತಾಜನಕವಾಗಿದ್ದು, ಚಿಕುನ್ ಗುನ್ಯಾದ ಹಾವಳಿ ಹಿಂದೆಂದೂ ಇಲ್ಲದಷ್ಟು ಜೋರಾಗಿದೆ.

ಈವರೆಗೆ ದೆಹಲಿಯಾದ್ಯಂತ 1000ಕ್ಕೂ ಹೆಚ್ಚಿನ ಚಿಕುನ್ ಗುನ್ಯಾ ಪ್ರಕರಣಗಳು ದಾಖಲಾಗಿವೆ. ಈಗಾಗಲೇ 11 ಜನರು ಸಾವಿಗೀಡಾಗಿದ್ದಾರೆ. ಆದರೆ ಇವರೆಲ್ಲಾ ಚಿಕುನ್ ಗುನ್ಯಾದಿಂದಲೇ ಸತ್ತಿದ್ದಾರೆ ಎಂದು ಋಜುವಾತಾಗಿಲ್ಲ. ಒಟ್ಟಾರೆ ಆಗಸ್ಟ್ ವೇಳೆಗೆ ದೇಶದಾದ್ಯಂತ ಚಿಕುನ್ ಗುನ್ಯಾದ 12,250 ಪ್ರಕರಣಗಳು ದಾಖಲಾಗಿವೆ ಎನ್ನುತ್ತವೆ ‘ರೋಗ ನಿಯಂತ್ರಣ ಕಾರ್ಯಕ್ರಮ’ದ ದಾಖಲೆಗಳು.

ತೆರೆದ ಚರಂಡಿಗಳೇ ಆಸ್ಥಾನ:

ಕರ್ಕಾರ್ದೂಮದ 7,000 ನಿವಾಸಿಗಳು ಚಿಕುನ್ ಗುನ್ಯಾದ ಗುಣಲಕ್ಷಣಗಳ ಬಗ್ಗೆ ಸ್ಥಳೀಯ ಆರೋಗ್ಯ ಅಧಿಕಾರಿ ಬನ್ವರ್ ಸಿಂಗ್ ಜನ್ವರ್ ಬಳಿ ಹೇಳಿಕೊಂಡಿದ್ದಾರೆ.

ಇಲ್ಲಿನ ಪಕ್ಕದ ಡಾ. ಹೆಡ್ಗೆವಾರ್ ಆರೋಗ್ಯ ಸಂಸ್ಥಾನ್ ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ, “ದಿನಕ್ಕೆ 800- 1000 ಜನ ಚಿಕಿತ್ಸೆಗಾಗಿ ಬರುತ್ತಾರೆ. ಇವರಲ್ಲಿ 18-20 ಜನಕ್ಕೆ ಚಿಕುನ್ ಗುನ್ಯಾ ರೋಗಗಳಿರುತ್ತವೆ,” ಎಂದು ಪಿಟಿಐಗೆ ತಿಳಿಸಿದ್ದಾರೆ.

ಕರ್ಕರ್ದೂಮದ ಗಲ್ಲಿಗಳ ಚರಂಡಿಗಳು ತೆರೆದುಕೊಂಡಿದ್ದು, ರೋಗ ಹರಡಲು ಸುಲಭ ಕಾರಣವಾಗಿವೆ. ಇದರಿಂದಾಗಿ ಇಷ್ಟು ದೊಡ್ಡ ಮಟ್ಟಕ್ಕೆ ಚಿಕುನ್ ಗುನ್ಯಾ ಹರಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಲ್ಲದೇ ಈ ಬಾರಿ ದೆಹಲಿಯಲ್ಲಿ ಪದೇ ಪದೇ ಪ್ರವಾಹ ಬಂದಿದ್ದು, ಹೆಚ್ಚಿನ ಕಡೆಗಳಲ್ಲಿ ನೀರು ನಿಂತಿದ್ದೇ ರೋಗ ಉಲ್ಬಣಿಸಲು ಕಾರಣ ಎನ್ನುತ್ತಾರೆ ಇಲ್ಲಿನ ವೈದ್ಯರು. ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸೊಳ್ಳೆಗಳ ಸಂತತಿ ಹೆಚ್ಚುತ್ತಿರುವುದರಿಂದ ಚಿಕುನ್ ಗುನ್ಯಾ, ಡೆಂಗ್ಯೂ ಮತ್ತು ಕಾಮಾಲೆ ರೋಗ ವೇಗವಾಗಿ ಹರಡುತ್ತಿವೆ.

‘ಸರ್ವರಿಗೂ ತಟ್ಟಿದ ರೋಗ’:

“ಇಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹೊಗೆ (ಫಾಗ್) ಹಾಕುವುದನ್ನು ನಿಲ್ಲಿಸಿದ್ದಾರೆ,” ಎಂದು ದೂರುತ್ತಾರೆ ಜನ್ವಾರ್. “ಕುಟುಂಬದಿಂದ ಕುಟುಂಬಕ್ಕೆ, ಮನೆಯಿಂದ ಮನೆಗೆ, ಇಲ್ಲಿ ಎಲ್ಲರೂ ಈ ರೋಗಕ್ಕೆ ತುತ್ತಾದವರೇ,” ಎನ್ನುತ್ತಾರೆ ಜನ್ವಾರ್. ಸದ್ಯ ಇವರೂ ರೋಗಕ್ಕೆ ತುತ್ತಾಗಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ರೋಗದಿಂದಾಗಿ ಇಲ್ಲಿನ ಜನರು ತಮ್ಮ ದಿನನಿತ್ಯದ ಬದುಕನ್ನೇ ಸಂಕಷ್ಟದಲ್ಲಿ ದೂಡುವ ಪರಿಸ್ಥಿತಿ ಸೃಷ್ಟಿಯಾಗಿದೆ. “ಹೆಚ್ಚಿನ ಕುಟುಂಬ ಸದಸ್ಯರು ಅನಾರೋಗ್ಯ ಪೀಡಿತರಾಗಿದ್ದಾರೆ. ದುಡಿಯಲು ಯಾರೂ ಇಲ್ಲ,”ಎನ್ನುತ್ತಾರೆ ಇಲ್ಲಿನ ನಿವಾಸಿಯೊಬ್ಬರು.

ಭಾರತದಲ್ಲಿ ಜೂನಿನಿಂದ ಸೆಪ್ಟೆಂಬರ್ ನಡುವೆ ಮಳೆಗಾಲದಲ್ಲಿ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ರೋಗ ಉಲ್ಭಣಿಸುವುದನ್ನು ನಾವು ಕಾಣಬಹುದು. ಇವತ್ತು ವೈದ್ಯಲೋಕದಲ್ಲಿ ಕಾಮಾಲೆ ರೋಗಕ್ಕೆ ಔಷಧಿ ಇದೆ. ಆದರೆ ಚಿಕುನ್ ಗುನ್ಯಾ ಮತ್ತು ಡೆಂಗ್ಯೂಗೆ ಇಲ್ಲ. ಈ ಕಾರಣದಿಂದ ಈ ಎರಡೂ ರೋಗಳು ಬಂದಾಗ ಜನ ಸಹಜವಾಗಿ ಆತಂಕಕ್ಕೆ ಒಳಗಾಗುತ್ತಾರೆ.

‘ಸರಕಾರದ ಸರ್ವ ಪರ್ಯತ್ನ’:

ರೋಗ ನಿಯಂತ್ರಣಕ್ಕಾಗಿ ಸರಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಾಹೀರಾತುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. “ಜ್ವರ ಬಂದರೆ ನಿರ್ಲಕ್ಷ್ಯ ಮಾಡಬೇಡಿ,” ಎಂದು ಜನರಿಗೆ ಪದೇ ಪದೇ ಎಚ್ಚರಿಕೆಗಳನ್ನು ಸರಕಾರ ನೀಡುತ್ತಿದೆ.

ಸರಕಾರದ ಹೇಳಿಕೆ ಪ್ರಕಾರ, ಚಿಕುನ್ ಗುನ್ಯಾ, ಡೆಂಗ್ಯೂ ಮತ್ತು ಮಲೇರಿಯಾ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಆಸ್ಪತ್ರೆಗಳಲ್ಲಿವೆ. ರೋಗಿಗಳಿಗೆ ಸೇವೆ ನೀಡಲೆಂದೇ 355 ಆಸ್ಪತ್ರಗಳಿವೆ. ಈಗಾಗಲೇ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ರಜೆಯನ್ನೂ ಕ್ಯಾನ್ಸಲ್ ಮಾಡಲಾಗಿದೆ ಎಂದು ಸರಕಾರದ ಮೂಲಗಳು ಮಾಹಿತಿ ನೀಡುತ್ತವೆ.

ಆದರೆ ಇಷ್ಟೆಲ್ಲಾ ಸೌಲಭ್ಯಗಳನ್ನು ನೀಡಿದರೂ ಕೆಲವರಿಗೆ ದೂರದ ಸರಕಾರಿ ಆಸ್ಪತ್ರೆಗೆ ತೆರಳಲು ಸಾಧ್ಯವಿಲ್ಲದ ಕಾರಣ ಖಾಸಗಿ ಆಸ್ಪತ್ರಗೆಳ ಮೊರೆ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಚಿಕುನ್ ಗುನ್ಯಾ ಎಂಬ ಮಾರಿ:

ಸೊಳ್ಳೆಗಳ ಮೂಲಕ ಹರಡುವ ಸಾಂಕ್ರಾಮಿಕ ರೋಗ ಚಿಕುನ್ ಗುನ್ಯಾ. ಆದರೆ ಇದು ಮನುಷ್ಯರಿಂದ ಮನುಷ್ಯರಿಗೇನೂ ಹರಡುವುದಿಲ್ಲ. ತೀವ್ರ ಜ್ವರ ಏರುವುದು, ಗಂಟು ನೋವು, ಅದರಲ್ಲೂ ಪ್ರಮುಖವಾಗಿ ಕೈ ಗಂಟು, ಸೊಂಟ, ಮೊಣ ಕಾಲು, ಪಾದದ ನೋವು ಇದರ ಲಕ್ಷಣಗಳಾಗಿವೆ.

ಹೆಚ್ಚಿನ ರೋಗಿಗಳು ಕೆಲವೇ ದಿನಗಳ ಚಿಕಿತ್ಸೆಯಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವು ರೋಗಿಗಳಿಗೆ ಗಂಟು ನೋವು ವಾರ, ತಿಂಗಳು ಅದಕ್ಕಿಂತಲೂ ಹೆಚ್ಚು ಮುಂದುವರಿಯುವುದಿದೆ.

ಕೃಪೆ: ಬಿಬಿಸಿ

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top