An unconventional News Portal.

ಕಾಂಗ್ರೆಸ್ v/s ಬಿಜೆಪಿ: ‘ಸೇವ್ ಡೆಮಾಕ್ರಸಿ’ ಅಬ್ಬರದಲ್ಲಿ ಬಚಾವಾಗಿದ್ದು ಮಾತ್ರ ಆಗಸ್ಟಾ, ಫಿನ್ಮೆಸಾನಿಕಾ!

ಕಾಂಗ್ರೆಸ್ v/s ಬಿಜೆಪಿ: ‘ಸೇವ್ ಡೆಮಾಕ್ರಸಿ’ ಅಬ್ಬರದಲ್ಲಿ ಬಚಾವಾಗಿದ್ದು ಮಾತ್ರ ಆಗಸ್ಟಾ, ಫಿನ್ಮೆಸಾನಿಕಾ!

ದಿಲ್ಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಬೀದಿ ಹೋರಾಟಕ್ಕೆ ಇಳಿಯುವ ಮೂಲಕ ತಮ್ಮ ಅಸ್ಥಿತ್ವವನ್ನು ದೇಶಕ್ಕೆ ಸಾರುವ ಪ್ರಯತ್ನವನ್ನು ಶುಕ್ರವಾರ ಪ್ರದರ್ಶಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ ಎರಡೂವರೆ ವರ್ಷಗಳ ಅಂತರದಲ್ಲಿ ಲೋಕಸಭೆಯ ಒಳಗೆ ಹಾಗೂ ಹೊರಗೆ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಅದರ ನಾಯಕರನ್ನು ಮೂಲೆಗುಂಪು ಮಾಡುತ್ತಲೇ ಬಂದಿತ್ತು. ಪ್ರತಿ ಬಾರಿ ಅಧಿವೇಶನ ಶುರುವಾಗುತ್ತಿದ್ದಂತೆ, ಪ್ರತಿಪಕ್ಷದ ಒಂದಿಲ್ಲೊಂದು ಹಗರಣವನ್ನು ಮುಂದಿಟ್ಟು, ಆಡಳಿತ ಪಕ್ಷವೇ ಒಂದು ಹೆಜ್ಜೆ ಮುಂದೆ ಹೋಗಿ ಆರೋಪಗಳ ಸುರಿಮಳೆ ಸುರಿಸತೊಡಗುತ್ತಿತ್ತು.

ಈ ಬಾರಿಯೂ, ಬಜೆಟ್ ಮುಂದುವರಿದ ಅಧಿವೇಶನ ಆರಂಭಕ್ಕೂ ಮುನ್ನವೇ ಉತ್ತರಖಾಂಡ್ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ವಿಚಾರವನ್ನು ಇಟ್ಟುಕೊಂಡು ಆಡಳಿತ ಪಕ್ಷವನ್ನು ಹಣಿಯಲು ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಅಧಿವೇಶನದ ಹಿಂದಿನ ದಿನ ಆಡಳಿತ ಪಕ್ಷ ಬಿಜೆಪಿ, ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸೋನಿಯಾ ಹೆಸರು ಇಟಲಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ ಎಂಬ ಆರೋಪವನ್ನು ತೇಲಿ ಬಿಟ್ಟಿತ್ತು.

ಅಧಿವೇಶನದ ಆರಂಭದ ಮೂರು ದಿನಗಳು ಉತ್ತರಖಾಂಡ್ ರಾಜ್ಯದ ಬೆಳವಣಿಗೆಗಳ ಸುತ್ತಲೇ ಸುತ್ತಿತ್ತಾದರೂ, ನಂತರ ಆಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿ ಹಗರಣ ಮುಖ್ಯ ಭೂಮಿಕೆಗೆ ಬಂದು ನಿಂತಿತು. ಬಿಜೆಪಿ ಇನ್ನೇನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೇಲಿರುವ ಆರೋಪವನ್ನು ಸಾಕ್ಷಿ ಸಮೇತ ಸದಸದಲ್ಲಿ ಮುಂದಿಡುತ್ತದೆ ಎಂಬ ವಾತಾವರಣ ಸೃಷ್ಟಿಯಾಯಿತು. ಆದರೆ, ಕೊನೆಯಲ್ಲಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹಾಗೂ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರ ಭಾಷಣದ ಮೂಲಕ ನೈತಿಕವಾಗಿ ಪ್ರತಿಪಕ್ಷ ಕಾಂಗ್ರೆಸ್ ನಾಯಕರನ್ನು ಸೋಲಿಸುವ ತಂತ್ರಗಾರಿಕೆಯನ್ನು ಬಿಜೆಪಿ ಮೆರೆಯಿತು. ಆರೋಪಗಳು ಹಾಗೆಯೇ ಡಬ್ಬದಲ್ಲಿ ಉಳಿದು ಹೋದವು.

ದಿಲ್ಲಿಯಲ್ಲಿ ಶುಕ್ರವಾರ ಕಾಂಗ್ರೆಸ್ ಆಯೋಜಿಸಿದ್ದ 'ಪ್ರಜಾಪ್ರಭುತ್ವ ಉಳಿಸಿ' ಮೆರವಣಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್.

ದಿಲ್ಲಿಯಲ್ಲಿ ಶುಕ್ರವಾರ ಕಾಂಗ್ರೆಸ್ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್.

ಇದೀಗ, ಕಾಂಗ್ರೆಸ್ ಅದನ್ನು ವಾಪಾಸ್ ಕೊಡುವ ಪ್ರಯತ್ನದಲ್ಲಿದೆ. ದಿಲ್ಲಿಯ ಜಂತರ್ ಮಂತರ್ನಲ್ಲಿ ಭಾರಿ ಪ್ರತಿಭಟನೆಯನ್ನು ಆಯೋಜಿಸುವ ಮೂಲಕ ಸದನಗಳ ಹೊರಗಡೆ ತಮ್ಮ ಅಸ್ತಿತ್ವ ಇನ್ನೂ ಉಳಿದುಕೊಂಡಿದೆ ಎಂಬ ಸಂದೇಶವನ್ನು ಪ್ರಧಾನಿ ಸಚಿವಾಲಯಕ್ಕೆ ಕಳುಹಿಸುವ ಪ್ರಯತ್ನದ ಭಾಗವಾಗಿ ಶುಕ್ರವಾರ ನಡೆದ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆ ನಡೆಸಲಾಗಿದೆ.

ದಿಲ್ಲಿಯ ಜಂತರ್ ಮಂತರ್ನಿಂದ ಪಾರ್ಲಿಮೆಂಟ್ ಕಡೆಗೆ ಮೆರವಣಿಗೆ ಹೊರಟಿದ್ದ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಅಷ್ಟರ ಮಟ್ಟಿಗೆ ಸಾಂಕೇತಿಕ ಪ್ರಯತ್ನವೊಂದು ದಾಖಲಾಗಿದೆ.

ಈ ನಡುವೆ, ಆಗಸ್ಟಾ ವೆಸ್ಟ್ ಲ್ಯಾಂಡ್ ಹಾಗೂ ಅದರ ಮಾತೃ ಸಂಸ್ಥೆ ಫಿನ್ಮೆಸಾನಿಕ ಕಂಪನಿಗಳನ್ನು ನಿಷೇಧಿಸುವ ವಿಚಾರ ಚರ್ಚೆಗೆ ಬಂದಷ್ಟೆ ವೇಗವಾಗಿ ಮರೆಯಾಗಿವೆ. ಯಾಕೆ ಎಂಬುದನ್ನು ‘ಸಮಾಚಾರ’ ಹಿಂದೆಯೇ ನಿರೂಪಿಸಿತ್ತು. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top