An unconventional News Portal.

‘ಒನ್ ಇಂಡಿಯಾ’ದಲ್ಲಿ ‘ಡೈಲಿಹಂಟ್’ ಹೂಡಿಕೆ: ಏನಿದು ಆನ್ಲೈನ್ ಲೆಕ್ಕಾಚಾರ?

‘ಒನ್ ಇಂಡಿಯಾ’ದಲ್ಲಿ ‘ಡೈಲಿಹಂಟ್’ ಹೂಡಿಕೆ: ಏನಿದು ಆನ್ಲೈನ್ ಲೆಕ್ಕಾಚಾರ?

ದೇಶದಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ದಿಗ್ಗಜ ಕಂಪೆನಿಗಳೆರಡು ಕೈ ಜೋಡಿಸಿವೆ. ಆ್ಯಪ್ಗಳಲ್ಲಿ ಸುದ್ದಿ ನೀಡುವಲ್ಲಿ ನಿಸ್ಸೀಮವಾಗಿರುವ ಡೈಲಿಹಂಟ್, ಕರ್ನಾಟಕ ಮೂಲದ ಆನ್‌ಲೈನ್‌ ಲೀಡಿಂಗ್ ಕಂಪೆನಿ ‘ಒನ್ ಇಂಡಿಯಾ’ದಲ್ಲಿ ಹೂಡಿಕೆ ಮಾಡಿದೆ. ಸದ್ಯ ಆನ್‌ಲೈನಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಕನ್ನಡ ಸೇರಿದಂತೆ ಭಾರತದ ಪತ್ರಿಕೋದ್ಯಮ ಭವಿಷ್ಯದ ಬಗ್ಗೆ ಮುನ್ನೋಟ ನೀಡುತ್ತಿವೆ.

ಕಳೆದೊಂದು ವರ್ಷದಿಂದ ದೇಶದಲ್ಲಿ ಹೊಸ ಹೊಸ ನ್ಯೂಸ್ ಪೋರ್ಟಲ್ಗಳು ಯಶಸ್ಸಿನತ್ತ ಮುನ್ನಡೆಯುತ್ತಿವೆ. ಈ ಕುರಿತು ರಾಯಟರ್ಸ್ ನಡೆಸಿದ ಸಂಶೋಧನೆ ಕುರಿತಾದ ಲೇಖನವೊಂದನ್ನು ಈ ಹಿಂದೆ ‘ಸಮಾಚಾರ’ ಪ್ರಕಟಿಸಿತ್ತು. ಇದೀಗ ಆನ್‌ಲೈನ್‌ ಸುದ್ದಿ ಮಾರುಕಟ್ಟೆಯತ್ತ ಭರಪೂರ ಹೂಡಿಕೆಗಳೂ ಹರಿದು ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕ ಸುದ್ದಿಗಳನ್ನು ನೀಡುತ್ತಾ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿರುವ ಡೈಲಿಹಂಟ್ (ಹಿಂದಿನ ನ್ಯೂಸ್ ಹಂಟ್) ಸ್ಥಳೀಯ ಭಾಷೆಗಳಲ್ಲಿ ವೆಬ್ ಸೈಟ್ ನಡೆಸುತ್ತಿರುವ ಒನ್ ಇಂಡಿಯಾದಲ್ಲಿ 15 ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಒನ್ ಇಂಡಿಯಾದಲ್ಲಿ ಸಣ್ಣ ಪ್ರಮಾಣದ ಷೇರು ತನ್ನದಾಗಿಸಿಕೊಂಡಿದೆ.

ಡೈಲಿಹಂಟ್ ಹೂಡಿಕೆಯ ಹಣ ಮಲ್ಟಿಮೀಡಿಯಾ (ಆಡಿಯೋ ಮತ್ತು ವೀಡಿಯೋ) ಕಂಟೆಂಟ್ ತಯಾರಿಕೆಗೆ ಬಳಕೆಯಾಗಲಿದೆ. ಈ ಹೂಡಿಕೆಯ ಬೆನ್ನಲ್ಲೇ ಒನ್ ಇಂಡಿಯಾ ಮುನ್ನಡೆಸುತ್ತಿರುವ ‘ಗ್ರೆಯ್ನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್’ ಕಂಪೆನಿಯ ನಿರ್ದೇಶಕರಾಗಿಯೂ ‘ಡೈಲಿಹಂಟ್’ ಸಿಇಒ ವೀರೇಂದ್ರ ಗುಪ್ತಾ ಆಗಮಿಸಲಿದ್ದಾರೆ.

ಸದ್ಯ ಶಾರ್ಟ್ ನ್ಯೂಸ್ಗಳನ್ನು ಆ್ಯಪ್ ಮೂಲಕ ನೀಡುವಲ್ಲಿ ಡೈಲಿಹಂಟ್ ಯಶಸ್ವಿಯಾಗಿದ್ದರೆ, ಒನ್ ಇಂಡಿಯಾ ಕೂಡಾ ‘60 ಸೆಕೆಂಡ್ಸ್ ನೌ’ ಎಂಬ ಆ್ಯಪ್ನಲ್ಲಿ 60-70 ಶಬ್ದಗಳ ಸುದ್ದಿ ನೀಡುತ್ತಿದೆ. ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಚಾಲ್ತಿಯಲ್ಲಿರುವ ಈ ಆ್ಯಪ್ ಡೈಲಿಹಂಟ್ ಹೂಡಿಕೆಯ ನಂತರವೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.

‘ಸದ್ಯ ಹೂಡಿಕೆಯ ಹಣವನ್ನು ವಿಡಿಯೋ ಮತ್ತು ಆಡಿಯೋ ನಿರ್ಮಾಣಕ್ಕೆ ಬಳಸಲಾಗುವುದು’ ಎಂದು ಒನ್ ಇಂಡಿಯಾ ಸಂಸ್ಥಾಪಕ ಬಿಜಿ ಮಹೇಶ್ ಮೀಡಿಯಾನಾಮಾಗೆ ತಿಳಿಸಿದ್ದಾರೆ.

ಸದ್ಯ ಒನ್ ಇಂಡಿಯಾದಲ್ಲಿ 10 ಜನರ ವೀಡಿಯೋ ನಿರ್ಮಾಣದ ತಂಡವಿದ್ದು ಮುಂದಿನ ದಿನಗಳಲ್ಲಿ ಇದರ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಆರಂಭದಲ್ಲಿ ನ್ಯೂಸ್ ಹೊರತಾದ ವೀಡಿಯೋ ತಯಾರಿಸಿ ‘ಡೈಲಿಹಂಟ್’ ಮತ್ತು ಒನ್ ಇಂಡಿಯಾ ಯೂಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಸದ್ಯ ಒನ್ ಇಂಡಿಯಾ ಇನ್ನೂ ಹಲವು ವೆಬ್ಸೈಟ್ಗಳನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಸುಸ್ಥಿರವಾಗಿದೆ. ಆದರೆ ಇದೇ ಒನ್ ಇಂಡಿಯಾ ಮೂಲಕ ಡೈಲಿಹಂಟ್ ಸ್ಥಳೀಯ ಭಾಷೆಗಳಲ್ಲಿ ಹೆಚ್ಚು ಜಪ್ರಿಯವಾಗುವ ಉದ್ದೇಶದಿಂದ ಈ ಡೀಲ್ ಕುದುರಿಸಿದೆ.

ಇದಕ್ಕೂ ಮೊದಲು 2010ರಲ್ಲಿ ರಾಜೇಶ್ ಜೈನ್ ಒಡೆತನಕ್ಕೆ ಸೇರಿದ ‘ನೆಟ್ ಕೋರ್’ ಕಂಪೆನಿ ಇದೇ ಗ್ರೇಯ್ನಿಯಂ ಕಂಪೆನಿಯಲ್ಲಿ ಹೂಡಿಕೆ ಮಾಡಿತ್ತು. ಹೂಡಿಕೆಮೊತ್ತವನ್ನು ಗುಪ್ತವಾಗಿಡಲಾಗಿದೆ. ಇದಕ್ಕೂ ಮೊದಲು 2006ರಲ್ಲೂ ಜೈನ್ ಒನ್ ಇಂಡಿಯಾದಲ್ಲಿ ಹೂಡಿಕೆ ಮಾಡಿದ್ದರು. ಅದೇ ವರ್ಷ ಕಂಪೆನಿಯನ್ನು ಬಿಜಿ ಮಹೇಶ್ ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು.

ಶ್ರೀನಿವಾಸ್ ರಗೋತ್ತಮ್ (ಚಿತ್ರ: ಎಫ್ಬಿ)

ಶ್ರೀನಿವಾಸ್ ರಗೋತ್ತಮ್ (ಚಿತ್ರ: ಎಫ್ಬಿ)

ಸದ್ಯ ಡೈಲಿಹಂಟ್ ಉದಯವಾಣಿ, ಪ್ರಜಾವಾಣಿ, ವಾರ್ತಾಭಾರತಿ, ಬಿಸಿ ಸುದ್ದಿ ಸೇರಿದಂತೆ ಕನ್ನಡದ ಬೇರೆ ಬೇರೆ ವೆಬ್ಸೈಟುಳಿಂದ ಸುದ್ದಿಗಳನ್ನು ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಒನ್ ಇಂಡಿಯಾದಿಂದಲೂ ಸುದ್ದಿ ಸಂಪಾದಿಸಲಿದೆ. ಆದರೆ ಕನ್ನಡದ ವಬ್ಸೈಟುಗಳು ವೀಡಿಯೋ ನಿರ್ಮಾಣದಲ್ಲಿ ಇಲ್ಲದಿರುವುದರಿಂದ ಡೈಲಿಹಂಟ್ ಒನ್ ಇಂಡಿಯಾದಲ್ಲಿ ಹೂಡಿಕೆ ಮಾಡಿ ವೀಡಿಯೋ ನಿರ್ಮಾಣಕ್ಕೆ ಕೈ ಹಾಕಿದೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲಿ ಕಂಟೆಂಟ್ ವಿಚಾರದಲ್ಲಿ ಸೋಮಾರಿಯಾಗಿದ್ದಒನ್ ಇಂಡಿಯಾ ನಿಧಾನಕ್ಕೆ ಎಚ್ಚೆತ್ತುಕೊಳ್ಳುತ್ತಿದೆ. ಇದರ ಭಾಗವಾಗಿ ಇಂಗ್ಲೀಷ್ ವಿಭಾಗಕ್ಕೆ ‘ಡೆಕ್ಕನ್ ಕ್ರಾನಿಕಲ್’ನ ಹಿರಿಯ ಸಂಪಾದಕ ಶ್ರೀನಿವಾಸ ರಗೋತ್ತಮ್ ರನ್ನು ಕರೆತರಲಾಗಿದೆ. ಈ ನಡೆ ‘ಒನ್ ಇಂಡಿಯಾ’ 16 ವರ್ಷಗಳ ನಂತರವೂ ಸಿಗದ ವಸ್ತುನಿಷ್ಟತೆ ಮತ್ತು ಗಂಭೀರತೆಯನ್ನು ತರುವ ಪ್ರಯತ್ನವಾ? ಕಾದುನೋಡಬೇಕು.

ಸದ್ಯ ಡೈಲಿಹಂಟ್ ಮತ್ತು ಒನ್ ಇಂಡಿಯಾ ಹೂಡಿಕೆಯ ಕನ್ನಡ ಆನ್‌ಲೈನ್ ಜಗತ್ತಿನಲ್ಲಿ ಪೈಪೋಟಿ ಎಬ್ಬಿಸುವ ಎಲ್ಲಾ ಸೂಚನೆಗಳನ್ನೂ ನೀಡುತ್ತಿದೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top