An unconventional News Portal.

ಕರ್ನಾಟಕವನ್ನೂ ಹಾದು ಹೋಗಲಿರುವ ವಾರ್ದಾ ಚಂಡಮಾರುತ: 10 ಪ್ರಮುಖ ಬೆಳವಣಿಗೆಗಳು

ಕರ್ನಾಟಕವನ್ನೂ ಹಾದು ಹೋಗಲಿರುವ ವಾರ್ದಾ ಚಂಡಮಾರುತ: 10 ಪ್ರಮುಖ ಬೆಳವಣಿಗೆಗಳು

ತಮಿಳುನಾಡು ರಾಜಧಾನಿ ಚೆನ್ನೈನಿಂದ 15 ಕಿ. ಮೀ ದೂರದಲ್ಲಿ ಅಪ್ಪಳಿಸಿರುವ ವಾರ್ದಾ ಚಂಡಮಾರುತಕ್ಕೆ ಈವರೆಗೆ 10 ಜನರ ಬಲಿಯಾಗಿದೆ.

ಸೋಮವಾರ ಗಂಟೆಗೆ 90- 100 ಕಿ. ಮೀ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತದ ಬಿರುಗಾಳಿಯ ವೇಗ 120- 130 ಕಿ. ಮೀ ಪ್ರತಿ ಗಂಟೆಗೆ ಹೆಚ್ಚಿದೆ. ಆದರೆ ಮಾರುತಗಳ ತೀವ್ರತೆ ತಗ್ಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜತೆಗೆ ಭಾರಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಚಂಡಮಾರುತ ಹಾದು ಹೋಗುವ ಹಾದಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮುಂದಿನ 12 ಗಂಟೆಗಳ ಅವಧಿಗೆ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಸರಕಾರಿ ಕಚೇರಿಗಳಿಗೂ ರಜೆ ನೀಡಲಾಗಿದೆ.

vardah-cyclone-chennai-1

ವಾರ್ದಾ ಚಂಡಮಾರುತ: ಈವರೆಗಿನ ಪ್ರಮುಖ 10 ಬೆಳವಣಿಗೆಗಳು:


  1. ಪ್ರಧಾನಿ ನರೇಂದ್ರ ಮೋದಿ ಸರಣಿಯೋಪಾದಿಯಲ್ಲಿ ಟ್ವೀಟ್ ಮಾಡುತ್ತಿದ್ದು, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಜನರಿಗೆ ಸೂಕ್ತ ನೆರವು ನೀಡುವುದಾಗಿ ತಿಳಿಸಿದ್ದಾರೆ. ಜನರ ಸುರಕ್ಷತೆ ಪ್ರಮುಖ ವಿಚಾರ ಎಂದವರು ಹೇಳಿದ್ದಾರೆ.

  2. ತಮಿಳುನಾಡಿನ ಕಾಂಜೀಪುರಂ, ತಿರುವೆಲ್ಲೂರು ಹಾಗೂ ಆಂಧ್ರ ಪ್ರದೇಶದ ನಾಗಪಟ್ನಂ ಸೇರಿದಂತೆ ಚಂಡಮಾರುತ ಹಾದು ಹೋಗುವ ಭೂ ಭಾಗಗಳಲ್ಲಿ ಸುಮಾರು 10 ಜನರ ಬಲಿಯಾಗಿದೆ. ಭಾರಿ ಪ್ರಮಾಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಜನರ ನೈಸರ್ಗಿಕ ವಿಕೋಪಕ್ಕೆ ಸಾವನ್ನಪ್ಪಿದ್ದಾರೆ.

  3. ನೆಲ್ಲೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದ್ದು, ಜನ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.

  4. ತಮಿಳುನಾಡು ಸಿಎಂ ಓ. ಪನ್ನೀರ್ ಸೆಲ್ವಂ ಪರಿಸ್ಥಿತಿಯ ಕುರಿತು ನಿಗಾ ವಹಿಸಿದ್ದಾರೆ. ವಾರ್ದಾ ಚಂಡಮಾರುತಕ್ಕೆ ಬಲಿಯಾದವರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಹಣವನ್ನು ಘೋಷಿಸಿದ್ದಾರೆ. ಈವರೆಗೆ ತಮಿಳುನಾಡಿನ ಬಂದರು ಪ್ರದೇಶಗಳಿಂದ ಸುಮಾರು 10 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ 9, 400 ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

  5. ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಮಂಗಳವಾರವೂ ಸ್ಥಗಿತಗೊಳಿಸಲಾಗಿದೆ. ಮೊದಲು ಸೋಮವಾರ ಸಂಜೆವರೆಗೆ ವಿಮಾನ ಹಾರಾಟವನ್ನು ನಿಲ್ಲಿಸಲಾಗಿತ್ತು. ನಂತರ ರಾತ್ರಿವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಮಳೆಯ ಪ್ರಮಾಣ ಹಾಗೂ ಭಾರಿ ಗಾಳಿಯ ಹಿನ್ನೆಲೆಯಲ್ಲಿ ಮಂಗಳವಾರವೂ ಚೆನ್ನೈ ವಿಮಾನ ನಿಲ್ದಾಣದಲ್ಲಿ ಯಾವುದೇ ಚಟುವಟಿಕೆ ಇಲ್ಲವಾಗಿದೆ.

  6. ಚೆನ್ನೈ ನಗರದಲ್ಲಿ ದೊಡ್ಡ ಸಂಖ್ಯೆಯ ಮರಗಳು ಧರೆಗೆ ಉರುಳಿವೆ. ರಸ್ತೆ ಪಕ್ಕದಲ್ಲಿ ಹಾಕಿದ್ದ ಹೋರ್ಡಿಂಗ್ಗಳು ಗಾಳಿಗೆ ಹಾರಿ ಹೋಗಿವೆ. ವಿದ್ಯುತ್ ಕಂಗಳು ಬುಡಮೇಲಾಗಿರುವುದಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಪಂಚತಾರಾ ಹೋಟೆಲ್ ಗಾಜುಗಳು ಪುಡಿಪುಡಿಯಾಗಿವೆ. ಆಂಧ್ರ ಪ್ರದೇಶದಲ್ಲಿ ಆಯಿಲ್ ಟ್ಯಾಂಕರ್ ಒಂದು ಹೆದ್ದಾರಿಯಲ್ಲಿ ಅಡಿಮೇಲಾಗಿದೆ.

  7. ಕರ್ನಾಟಕದ ಭೂಭಾಗದಲ್ಲಿಯೂ ಚಂಡಮಾರುತ ಮಂಗಳವಾರದ ಹೊತ್ತಿಗೆ ಹಾದುಹೋಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದೆ. ರಸ್ತೆಗಳು ನೀರುಗುಂಡಿಗಳಾಗಿ ಬದಲಾಗಿವೆ. ಇಡೀ ದಿನ ಇನ್ನಷ್ಟು ಮಳೆಯ ನಿರೀಕ್ಷೆ ಇದೆ.

  8. ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸರಕಾರಿಗಳಿಗೆ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.

  9. ಸೇನಾ ಪಡೆಗಳು ಮತ್ತು ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ 16 ತಂಡಗಳು ಕಳೆದ 48 ಗಂಟೆಗಳಿಂದ ಕಾರ್ಯಪ್ರವೃತ್ತವಾಗಿವೆ. ನೌಕಾ ಪಡೆಯ ಎರಡು ಹಡಗುಗಳು ವೈದ್ಯರು, ಆಹಾರಗಳ ಜತೆ ಕಡಲ ಕಿನಾರೆಯಲ್ಲಿ ಲಂಗರು ಹಾಕಿವೆ. ಕನಿಷ್ಟ 5 ಸಾವಿರ ಜನರಿಗೆ ಅಗತ್ಯ ನೆರವನ್ನು ಏಕಕಾಲಕ್ಕೆ ನೀಡಲು ಸೇನಾ ಪಡೆಗಳು ಸನ್ನದ್ಧವಾಗಿವೆ.

  10. ಮಂಗಳವಾರ ಹೊತ್ತಿಗೆ ಇನ್ನಷ್ಟು ಮಳೆಯ ಪ್ರಮಾಣ ಹೆಚ್ಚುವುದರಿಂದ ಸರಕಾರ ಮತ್ತು ಸೇನಾ ಪಡೆಗಳು ತುರ್ತು ಸೇನೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಚಂಡಮಾರುತದ ಬೀಸುತ್ತಿರುವ ಕಡೆಗಳಲ್ಲಿ ಇನ್ನಷ್ಟು ವಿಕೋಪಗಳನ್ನು ನಿರೀಕ್ಷಿಸಲಾಗಿದೆ. ದಕ್ಷಿಣ ಗೋವಾದಲ್ಲಿಯೂ ಮಳೆ ಶುರುವಾಗಿದೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top