An unconventional News Portal.

ನಾಡಿಗೆ ಕಾಲಿಟ್ಟ ‘ನಾಡಾ’ ಚಂಡಮಾರುತ: ಸಿಲಿಕಾನ್ ಸಿಟಿಯಲ್ಲೂ ಮಳೆಯ ಸಿಂಚನ

ನಾಡಿಗೆ ಕಾಲಿಟ್ಟ ‘ನಾಡಾ’ ಚಂಡಮಾರುತ: ಸಿಲಿಕಾನ್ ಸಿಟಿಯಲ್ಲೂ ಮಳೆಯ ಸಿಂಚನ

ದಿನದ ಆರಂಭದಲ್ಲಿಯೇ ಮಳೆಯ ಸಿಂಚನ, ತಂಪಾದ ವಾತಾವರಣ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ, ತಮಿಳುನಾಡು ಮತ್ತುಆಂಧ್ರದಲ್ಲಿ ಭಾರಿ ಮಳೆಯ ಸಾದ್ಯತೆ, ಬೆಂಗಳೂರಿಗೂ ತಟ್ಟಲಿರುವ ಹವಾಮಾನ ಬದಲಾವಣೆಯ ಪರಿಣಾಮಗಳು.

ಇದು ಶುಕ್ರವಾರ ಮುಂಜಾನೆಯ ವೆದರ್ ರಿಪೋರ್ಟ್. ಗುರುವಾರ ರಾತ್ರಿ ವೇಳೆಗೆ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನ ಕೆಲವೆಡೆ ತುಂತುರು ಮಳೆ ಬಿದ್ದಿತ್ತು. ಚಳಿಯ ವಾತಾವರಣದಲ್ಲಿ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ‘ನಾಡಾ ಚಂಡಮಾರುತ’.

ಶುಕ್ರವಾರ ನಸುಕಿನಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನಾಗಪಟ್ನಂ ಬಂದರಿನ ಸಮೀಪ ನಾಡಾ ಹೆಸರಿನ ಚಂಡಮಾರುತ ಕಾಲಿಟ್ಟಿದೆ. ಅಲ್ಲಿಂದ ಪಶ್ಚಿಮ ದಿಕ್ಕಿಗೆ ಚಲಿಸುತ್ತಿರುವ ಚಂಡಮಾರುತವು ಗಂಟೆಗೆ 10 ಕಿ. ಮೀ ವೇಗದಲ್ಲಿ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ. ಈಗಾಗಲೇ ಬಂದರು ಪ್ರದೇಶವನ್ನು ದಾಟಿದ್ದು, ಭೂ ಭಾಗವನ್ನು ಚಂಡಮಾರುತ ಪ್ರವೇಶಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಬೆಳಗ್ಗೆ ಐದು ಗಂಟೆ ಸುಮಾರಿಗೆ ಪುದುಚೇರಿಯನ್ನು ನಾಡಾ ಚಂಡಮಾರುತ ಹಾದು ಹೋಗಿದೆ. ಹೆಚ್ಚಿನ ಹಾನಿ ಸಂಭವಿಸಿಲ್ಲ.

ಈಗಾಗಲೇ ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆ ಸ್ಥಳದಲ್ಲಿ ಮೊಕ್ಕಾಂ ಹೂಡಿವೆ. “ಈಗಾಗಲೇ 41 ಕಡೆಗಳಲ್ಲಿ ಜನರಿಗಾಗಿ ತಾತ್ಕಾಲಿಕ ನೆಲೆಗಳನ್ನು ನಿರ್ಮಿಸಲಾಗಿದೆ ಎಂದು ಕುಡ್ಲೂರು ಜಿಲ್ಲಾಧಿಕಾರಿ ಎಎನ್ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ತಮಿಳುನಾಡಿನ ಬಂದರು ಸಮೀಪದ ನಗರಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಮಳೆಯನ್ನು ನಿರೀಕ್ಷಿಸಲಾಗುತ್ತದೆ.

ಮುಂದಿನ ಮೂರು ದಿನಗಳಲ್ಲಿ ಆಂಧ್ರ ಪ್ರದೇಶದಲ್ಲಿವೂ ಭಾರಿ ಮಳೆಗೆ ಸಾಕ್ಷಿಯಾಗಲಿದೆ. ಜತೆಗೆ ಬೆಂಗಳೂರಿನಲ್ಲಿಯೂ ಮಳೆಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಚೆನೈ ಹವಾಮಾನ:

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಕಳೆದ ಒಂದು ವರ್ಷದ ಅಂತದಲ್ಲಿ ಪಕ್ಕದ ರಾಜ್ಯ ತಮಿಳುನಾಡಿನ ರಾಜಧಾನಿ ಹವಾಮಾನ ವೈಪರೀತ್ಯಗಳಿಗೆ ಸಾಕ್ಷಿಯಾಗುತ್ತಿದೆ. 2015ರ ಡಿಸೆಂಬರ್ ತಿಂಗಳಿನಲ್ಲಿ ಭಾರಿ ಪ್ರವಾಹದಿಂದಾಗಿ ಇಡೀ ಚೆನೈ ನಗರ ನೀರಿನಿಂದ ಆವೃತವಾಗಿತ್ತು. ಈ ಸಮಯದಲ್ಲಿ ಸುಮಾರು 270 ಜನ ಸಾವನ್ನಪ್ಪಿದ್ದರು.

ಗುರುವಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಚಂಡಮಾರುತ ಏಳಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಹಿಂದಿನ ಬೀಕರ ಪರಿಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಆಸ್ಪತ್ರೆಗಳು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಜತೆಗೆ, ನಗರಗಳ ಒಳಚರಂಡಿ ವ್ಯವಸ್ಥೆಯನ್ನು ಹಾಗೂ ಮೂಲಸೌಕರ್ಯಗಳನ್ನು ಸುಸ್ಥಿತಿಯಲ್ಲಿ ಇಡುವ ಕೆಲಸವನ್ನು ಆರಂಭಿಸಲಾಗಿತ್ತು. ಇವುಗಳು ಕಳಪೆಯಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಿರುವಾಗಲೇ ಮಳೆ ಶುರುವಾಗಿದೆ. ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಸ್ಥಳೀಯ ಆಡಳಿತ ಜನರಿಗೆ ನೆರವಾಗಲು ಸಿದ್ಧವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top