An unconventional News Portal.

ಮಳೆಯ ಮಾರುತಗಳ ನಿರೀಕ್ಷೆಯಲ್ಲಿ ನೆರೆ ರಾಜ್ಯಗಳು: ಸೈಕ್ಲೋನ್ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಮಳೆಯ ಮಾರುತಗಳ ನಿರೀಕ್ಷೆಯಲ್ಲಿ ನೆರೆ ರಾಜ್ಯಗಳು: ಸೈಕ್ಲೋನ್ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

ರಾಜ್ಯದ ನಾನಾ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಇದೇ ವೇಳೆ, ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಸೈಕ್ಲೋನ್ ಸಾಧ್ಯತೆಯನ್ನು ಮುಂದಿಟ್ಟಿರುವ ಹವಾಮಾನ ಇಲಾಖೆ ರಾಜ್ಯ ಸರಕಾರಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸಂದೇಶ ರವಾನಿಸಿದೆ.

ಚೆನ್ನೈನಿಂದ 90 ಕಿ.ಮೀ ಪೂರ್ವ ಭಾಗದ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಮಾರುತಗಳು ಎದ್ದಿವೆ. ಮುಂದಿನ 24 ಅಥವಾ 48 ಗಂಟೆಯೊಳಗೆ ಮಳೆಯ ಮಾರುತಗಳು ತಮಿಳುನಾಡು ಹಾಗೂ ಆಂಧ್ರಪ್ರದೇಶದ ಸಮುದ್ರ ತೀರವನ್ನು ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಳೆಯ ಮಾರುತಗಳಿಂದಾಗಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಇದೆ. ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯುವುದನ್ನು ನಿಷೇಧಿಸಲಾಗಿದೆ. ಸಮುದ್ರ ತೀರದ ಹಳ್ಳಿಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೇಳಲಾಗಿದೆ. ಭಾರಿ ಮಳೆಯಿಂದಾಗಿ ಸಂಭವಿಸುವ ಹಾನಿಯ ಪ್ರಮಾಣವನ್ನು ಅಂದಾಜಿಸಿರುವ ಇಲಾಖೆ, ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದೆ.

 

ರಾಜ್ಯದ ಪರಿಸ್ಥಿತಿ: 

ರಾಜ್ಯದಲ್ಲಿ ಕಳೆದ ಎರಡು ದಿನಗಳಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ಬಿಟ್ಟು ಬಿಟ್ಟು ಮಳೆ ಬೀಳುತ್ತಿದ್ದು, ಹವಾಮಾನ ಇಲಾಖೆ ಮಳೆಗಾಲದ ಮುನ್ಸೂಚನೆಯನ್ನು ನೀಡಿದೆ. ಹುಬ್ಬಳ್ಳಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿಯೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಸದ್ಯ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಸೈಕ್ಲೂನ್ ಮುನ್ನೆಚರಿಕೆ ನೀಡಿರುವುದರಿಂದ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ಮುಂದಿನ 24 ಗಂಟೆಯಲ್ಲಿ ಮಳೆಯಾಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

15 ದಿನಗಳ ಹಿಂದೆ ವಾಡಿಕೆ ಮಳೆ ಜೂನ್ ಮೊದಲ ವಾರದಲ್ಲಿ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಕಳೆದ ವಾರ ಮಳೆಗಾಲ ಕೊಂಚ ತಡವಾಗಿ ಅಂದರೆ ಜೂನ್ 15ರ ಸುಮಾರಿಗೆ ಶುರುವಾಗಲಿದೆ ಎಂದು ಮನ್ಸೂಚನೆ ನೀಡಲಾಗಿತ್ತು. ಇದೀಗ ಸೈಕ್ಲೂನ್ ಸಾಧ್ಯತೆಯನ್ನು ಮುಂದಿಟ್ಟಿರುವ ಇಲಾಖೆ ನೆರೆಯ ರಾಜ್ಯಗಳಲ್ಲಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದೆ.

ನಿರೀಕ್ಷೆ ಮೀರಿ ಮಳೆಗಾಲ ಮೇ ಅಂತ್ಯದೊಳಗೆ ಶುರುವಾಗಬಹುದು ಎಂಬುದು ಸದ್ಯದ ಲೆಕ್ಕಾಚಾರ.

Top