An unconventional News Portal.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಇನ್ನೂ ಮೂವರ ಬಂಧನ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಇನ್ನೂ ಮೂವರ ಬಂಧನ

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಪೊಲೀಸರು ಬುಧವಾರ ಮೂವರನ್ನು ಬಂಧಿಸಿದ್ದಾರೆ.

ಪಿಡಬ್ಲ್ಯೂಡಿ ಕೇಂದ್ರ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಆಗಿರುವ ಕೆ. ಎಸ್. ರಂಗನಾಥ್, ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಅನಿಲ್ ಕುಮಾರ್ ಹಾಗೂ ಖಾಸಗಿ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಮುರಳೀಧರ್ ಕೆ. ಎಂ ಬಂಧನಕ್ಕೆ ಒಳಗಾದವರು.

ಸರಕಾರಿ ನೌಕರರಾಗಿರುವ ಕೆ. ಎಸ್. ರಂಗನಾಥ್, ಪ್ರಕರಣದ ಆರೋಪಿಗಳಾದ ರುದ್ರಪ್ಪ ಹಾಗೂ ಕುಮಾರಸ್ವಾಮಿಗಳಿಂದ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಸಿಐಡಿ ಹೇಳಿಕೆಯಲ್ಲಿ ತಿಳಿಸಿದೆ. ಅನಿಲ್ ಕುಮಾರ್ ಕೂಡ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಖಾಸಗಿ ಕೋಚಿಂಗ್ ಸೆಂಟರ್ ನಡೆಸುತ್ತಿರುವ ಮುರಳೀಧರ್, ಪ್ರಶ್ನೆ ಪತ್ರಿಕೆಗೆ ಉತ್ತರವನ್ನು ಸಿದ್ಧಪಡಿಸಲು ಆರೋಪಿ ಶಿವಕುಮಾರ್ಗೆ ಸಹಾಯ ಮಾಡಿದ್ದಾಗಿ ಸಿಐಡಿ ಪೊಲೀಸರು ತಿಳಿದ್ದಾರೆ.

ಈ ಮೂಲಕ ಈವರೆಗೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾದವರ ಸಂಖ್ಯೆ 8 ಕ್ಕೇರಿದೆ.

 

 

Top