An unconventional News Portal.

ಭಾರತ, ಡಿಜಿಟಲ್ ಪತ್ರಿಕೋದ್ಯಮ ಮತ್ತು ಸಂಚಲನ ಮೂಡಿಸುತ್ತಿರುವ ಸ್ಟಾರ್ಟ್ ಅಪ್ಸ್!

ಭಾರತ, ಡಿಜಿಟಲ್ ಪತ್ರಿಕೋದ್ಯಮ ಮತ್ತು ಸಂಚಲನ ಮೂಡಿಸುತ್ತಿರುವ ಸ್ಟಾರ್ಟ್ ಅಪ್ಸ್!

‘ರಾಯಟರ್ಸ್ ಇನ್ಸಿಟ್ಯೂಟ್  ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ’ ಇತ್ತೀಚೆಗೆ ‘ಡಿಜಿಟಲ್ ಜರ್ನಲಿಸಂ ಸ್ಟಾರ್ಟ್ ಅಪ್ಸ್ ಇನ್ ಇಂಡಿಯಾ’ (Digital Journalism Startups in India) ಎಂಬ ವಿಷಯದ ಕುರಿತು ಅಧ್ಯಯನ ವರದಿಯೊಂದನ್ನು ಹೊರತಂದಿದೆ. ಸಾಕಷ್ಟು ಒಳನೋಟಗಳನ್ನು ತೆರೆದಿಡುವ ವರದಿಯ ಆಯ್ದ ಭಾಗಗಳು ಇಲ್ಲಿವೆ.

64ocjtxsಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಇಂಡಿಯಾ ಟುಡೇ ವಿಶ್ವದಲ್ಲೇ ವೇಗವಾಗಿ ಅಂತರ್ಜಾಲ ಬಳಕೆದಾರರನ್ನು ಪಡೆಯುತ್ತಿರುವ ಮಾಧ್ಯಮಗಳಲ್ಲಿ ಮೊದಲ ಸಾಲಿನಲ್ಲಿದೆ ಎಂದು ವರದಿ ಹೇಳಿದೆ. ಇದಕ್ಕೆ ಅದು ಕಾರಣಗಳನ್ನೂ ಮುಂದಿಟ್ಟಿದೆ. ಮುದ್ರಣ ಮತ್ತು ಬ್ರಾಡ್ಕಾಸ್ಟ್ ಎರಡೂ ವಿಭಾಗಗಳಲ್ಲಿ ಹೆಸರು ಮಾಡಿರುವ ಇಂಡಿಯಾ ಟುಡೇ ತುಂಬಾ ಸ್ಪಂದನಶೀಲವಾದ ಮತ್ತು ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ಬೇರೆ ಮಾಧ್ಯಮಗಳಂತೆ, ತಕ್ಷಣದ ಲಾಭದತ್ತ ಯೋಚನೆ, ವೃತ್ತಿಪರ ನೈತಿಕತೆಗಳ ಅಭಾವ, ಪತ್ರಕರ್ತರ ಮೇಲೆ ಬಾಹ್ಯ ಒತ್ತಡ, ಮಾಲಕರ ಸ್ವ ಹಿತಾಸಕ್ತಿ, ಲಾಭಕೋರತನ ಮತ್ತು ರಾಜಕೀಯ ಚಟುವಟಿಕೆಯ ಲಗಾಮಿನಿಂದ ಹೊರತಾದ ಮುಂದಾಲೋಚನೆಯೇ ಈ ಯಶಸ್ಸಿಗೆ ಕಾರಣ ಅಂತ ವರದಿ ಷರಾ ಬರೆದಿದೆ.

ಈ ವರದಿಯಲ್ಲಿ ಭಾರತದ ಡಿಜಿಟಲ್ ಪತ್ರಿಕೋದ್ಯಮದ ಸ್ಟಾರ್ಟ್ ಅಪ್’ಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲಾಗಿದೆ. ಭಾರತದ ಅಂತರ್ಜಾಲ ಮಾರುಕಟ್ಟೆ ವಿಸ್ತರಣೆಯಲ್ಲಿ ವಿದೇಶಿ ತಂತ್ರಜ್ಞಾನ ಸಂಸ್ಥೆಗಳು ಮತ್ತು ಪರಂಪರಾಗತ ಮಾಧ್ಯಮಗಳ ಪಾತ್ರ ಅಪಾರವಾದುದು. ಇನ್ನೊಂದು ಕಡೆ ಸ್ಟಾರ್ಟ್ ಅಪ್ಗಳು ಆರ್ಥಿಕ, ವೃತ್ತಿಪರ, ರಾಜಕೀಯ ಒತ್ತಡಗಳು ಮತ್ತು ಮಾಲೀಕರ ಹಂಗನ್ನು ತೊರೆಯಲು ಪತ್ರಕರ್ತರಿಗೆ ನೆರವಾಗಿದೆ ಅಂತ ವಿಶ್ಲೇಷಣೆ ಮಾಡಿದೆ.

ದಿ ಕ್ವಿಂಟ್, ಸ್ಕ್ರಾಲ್, ಇನ್’ಶಾರ್ಟ್, ದಿ ಡೈಲಿ ಹಂಟ್, ದಿ ವೈರ್, ಖಬರ್ ಲಹೆರ್ಯಾ ಭಾರತದಲ್ಲಿ ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ನೀಡಿವೆಯಂತೆ. ವಿಷಯಗಳ ಆಯ್ಕೆ, ಅವುಗಳನ್ನು ಜನರಿಗೆ ತಲುಪಿಸಲು ಬಳಸುವ ತಂತ್ರಗಳು, ಲಾಭ ಮತ್ತು ಲಾಭರಹಿತ ಸಂಸ್ಥೆಗಳು ಎಂಬ ಎರಡು ಪ್ರತ್ಯೇಕ ಉದ್ಯಮ ಮಾದರಿಗಳನ್ನು ಇವು ಹುಟ್ಟು ಹಾಕಿರುವುದು ವಿಭಿನ್ನ ನಡೆ ಎಂದು ವರದಿ ಉಲ್ಲೇಖಿಸಿದೆ. ಹೊಸ ರೀತಿಯಲ್ಲಿ ಹೊಸಬರಿಂದ ಭಾರತದಲ್ಲಿ ಅಂತರ್ಜಾಲ ಪತ್ರಿಕೋದ್ಯಮ ಹೇಗೆ ನಡೆಸಬಹುದು ಎನ್ನುವುದಕ್ಕೆ ಇವುಗಳು ಮಾದರಿಯಾಗಿವೆ. ಇವುಗಳ ಜೊತೆಗೆ ಹಿಂದಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲೂ ಹೊಸ ಮಾದರಿಯ ವೆಬ್ ತಾಣಗಳು ಹುಟ್ಟಿಕೊಳ್ಳುತ್ತಿವೆ ಎಂಬ ಮಾಹಿತಿಯನ್ನು ವರದಿ ಕಲೆ ಹಾಕಿದೆ.

ಇದೆಲ್ಲಾ ಭಾರತದ ಮಾಧ್ಯಮಗಳ ಕಥೆಯಾದರೆ ಅಮೆರಿಕಾ ಮಾಧ್ಯಮ ದೈತ್ಯರಾದ ನ್ಯೂಯಾರ್ಕ್ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್, ಹಫಿಂಗ್ಟನ್ ಪೋಸ್ಟ್, ಬಜ್’ಫಿಡ್ ಭಾರತದಲ್ಲಿ ಅಸ್ತಿತ್ವಕ್ಕಾಗಿ ಬಡಿದಾಡುತ್ತಿವೆ. ಭಾರತದಲ್ಲಿ ಅಂತರ್ಜಾಲ ಇವತ್ತಿಗೆ ದುಬಾರಿಯಾಗಿದೆ. ಅದೇ ಸಾಂಪ್ರದಾಯಿಕ ಮಾಧ್ಯಮಗಳಾದ ಟಿವಿ, ಪತ್ರಿಕೆಗಳ ವೆಚ್ಚ ತುಂಬಾ ಕಡಿಮೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅಂತರ್ಜಾಲ ಅಗ್ಗದ ಸೇವೆಯಾದ ಕಾರಣ ಅಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಅಂತರ್ಜಾಲ ಬಳಕೆ ಹೆಚ್ಚಾಗಿದೆ. ಸದ್ಯ ಭಾರತದಲ್ಲೂ ಇಂಟರ್ನೆಟ್ ದರ ಕುಸಿಯುತ್ತಿದ್ದು ಬಳಕೆದಾರರ ಸಂಖ್ಯೆ ನಿಧಾನವಾಗಿಯಾದರೂ ಬೆಳವಣಿಗೆ ಹೊಂದುತ್ತಿದೆ. ಇದು ಆಶಾದಾಯಕ ಬೆಳವಣಿಗೆ.

ಅಕ್ಟೋಬರ್ 2015ರಿಂದ ಫೆಬ್ರವರಿ 2016ರವರೆಗೆ ದೇಶದಲ್ಲಿ 20 ಸ್ಟಾರ್ಟ್ಆಪ್ಗಳ ಜೊತೆ ಸಂದರ್ಶನಗಳನ್ನು ನಡೆಸಿ ಈ ವರದಿ ಸಿದ್ದಪಡಿಸಲಾಗಿದೆ. ಇದರ ಜತೆಗೆ ಹೊರಗಿನ ವಿಶ್ಲೇಷಕರು ಮತ್ತು ಪರಂಪರಾಗತ ಮಾಧ್ಯಮಗಳ ತಜ್ಞರ ಜತೆಯೂ ಚರ್ಚೆ ನಡೆಸಲಾಗಿದೆ. ವರದಿಯ ಪೂರ್ಣ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ವಿಭಿನ್ನ ನೆಲೆಯಲ್ಲಿ ‘ಸ್ಟಾರ್ಟ್ ಅಪ್’ ಪ್ರಯತ್ನಗಳು ಕನ್ನಡದಲ್ಲೂ ಶುರುವಾಗಿವೆ. ‘ಸಮಾಚಾರ’ ಸೇರಿದಂತೆ ಕೆಲವು ಸಿದ್ದ ಮಾದರಿಯನ್ನು ಒಡೆಯುವಂತಹ ಪ್ರಯೋಗಗಳು ಕನ್ನಡ ವೆಬ್ ಪತ್ರಿಕೋದ್ಯಮದಲ್ಲಿ ನಡೆಯಲು ಶುರುವಾಗಿವೆ. ಸಾಕಷ್ಟು ವೆಬ್ ಸೈಟ್’ಗಳು ಹುಟ್ಟಿಕೊಳ್ಳುತ್ತಿದ್ದರೂ, ತಂತ್ರಜ್ಞಾನ ಮತ್ತು ಪತ್ರಿಕೋದ್ಯಮದ ನಡುವೆ ಕೊಂಡಿ ಬೆಸೆಯುವಲ್ಲಿಯೇ ಸೋತು ಹೋಗುತ್ತಿವೆ. ಜತೆಗೆ ವೃತ್ತಿಪರತೆಯ ಕೊರತೆಯೂ ಎದ್ದು ಕಾಣುತ್ತಿದೆ. ಬಂಡವಾಳದ ಹೂಡಿಕೆ ಸುದ್ದಿ ವಾಹಿನಿಗಳ ಕಡೆಗೆ ಜೋರಾಗಿ ಹರಿಯುತ್ತಿರುವ ಹೊತ್ತಿನಲ್ಲಿ, ಸದ್ದಿಲ್ಲದೆ ವೆಬ್ ಮೀಡಿಯಾದ ಸ್ಟಾರ್ಟ್ ಅಪ್ ಗಳು ಹೊಸತೊಂದು ಪಲ್ಲಟವನ್ನು ರೂಪಿಸುವ ಹಾದಿಯಲ್ಲಿವೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top