An unconventional News Portal.

SPECIAL SERIES
  ...
  punyakoti-rakshane-cover
  SPECIAL SERIES

  ‘ಗೋ ರಾಜಕೀಯ’- ಭಾಗ 5: ಗೋವು ಎಂಬ ಭಾವನಾತ್ಮಕ ಸಂಗತಿ ಮತ್ತು ನಿಷೇಧ ಎಂಬ ‘ಬ್ರಾಂಡಿಂಗ್’!

  ತಾನೇ ಆಡಿ ಬೆಳೆಸಿದ ಕೂಸು ಈಗ ತನಗೇ ಮುಳುವಾಗಿದೆ ಎಂಬ ಮಾತು ಈ ಸಂದರ್ಭದಲ್ಲಿ ಬಿಜೆಪಿಗೆ ಸರಿಯಾಗಿ ಒಪ್ಪುತ್ತದೆ. ಒಂದು ಕಾಲದಲ್ಲಿ ಗೋ ರಕ್ಷಣೆಯ ಅಮಲನ್ನು ಯುವಕರ ತಲೆಯಲ್ಲಿ ತುಂಬಿ, ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡಿತು. ಇವತ್ತು ಅದೇ ‘ಗೋ ರಕ್ಷಕರು’ ಪ್ರಧಾನಿ ನರೇಂದ್ರ ಮೋದಿ ಮಾತಾಗಲಿ, ಸಂಘ ಪರಿವಾರದ ಮಾತನ್ನಾಗಲಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಯಾವ ಮೂಲೆಯಲ್ಲಿ? ಯಾರು? ಯಾವಾಗ? ಯಾರಿಗೆ? ಹೊಡೆಯುತ್ತಾರೆ ಎಂಬುದು ಯಾವ ನಾಯಕನಿಗೂ ತಿಳಿಯದ ಸ್ಥಿತಿಗೆ ಅದು ಬಂದು ನಿಂತಿದೆ. ಭಜರಂಗದಳದ..

  August 18, 2016
  ...
  Punyakoti Cow collage
  SPECIAL SERIES

  ‘ಗೋ ರಾಜಕೀಯ’- ಭಾಗ 4: ‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!

  ದೇಶದಲ್ಲಿ ಗೋ ಮಾಂಸ ವಿಚಾರವಾಗಿ ಮುಸ್ಲಿಮರ ಮೇಲೆ ಪದೇ ಪದೇ ದಾಳಿಗಳು ನಡೆಯತ್ತಿರುತ್ತವೆ. ಆದರೆ ಗೋ ಮಾಂಸ ರಫ್ತಿನ ಹಿಂದಿರುವವರು ಯಾರು ಎಂದು ಹುಡುಕುತ್ತಾ ಹೋದರೆ ಸಿಗುವುದು ಹಿಂದೂಗಳೇ. ದೇಶದ ಬೃಹತ್ ಬೀಫ್ ರಫ್ತು ಕಂಪೆನಿಗಳಲ್ಲಿ ಒಂದೋ ಹಿಂದೂಗಳು ಪಾಲುದಾರರಾಗಿದ್ದಾರೆ; ಇಲ್ಲವೇ ಮಾಲಿಕರಾಗಿದ್ದಾರೆ. ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಒಡೆತನಕ್ಕೆ ಸೇರಿದ ಹಿಂದ್ ಆಗ್ರೋ ಇಂಡಸ್ಟ್ರೀಸ್, ಸುನೀಲ್ ಸೂದ್ ಪಾಲುದಾರಿಕೆಯ ಅಲ್ ನೂರ್ ಎಕ್ಸ್‌ಪೋರ್ಟ್ಗಳು ಬೀಫ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿವೆ. ಇನ್ನು ದೇಶದಲ್ಲಿ ಬೀಫ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ..

  August 16, 2016
  ...
  April_flavour-027
  SPECIAL SERIES

  ‘ಗೋ ರಾಜಕೀಯ’- ಭಾಗ 3: ಗೋ ರಕ್ಷಣೆಗೂ ಮುನ್ನ ಬೀಫ್ ರಫ್ತು ಉದ್ಯಮದ ಅಂತರಾಳಕ್ಕೆ ಕಾಲಿಟ್ಟು ನೋಡಿ!

  ರಾಜಕೀಯ ತಂತ್ರವೊಂದು ಸಾಮಾನ್ಯ ಜನರನ್ನು ಹೇಗೆ ಹಾದಿ ತಪ್ಪಿಸಬಹುದು ಎಂಬುದಕ್ಕೆ ಇದಕ್ಕಿಂದ ಉತ್ತಮ ಉದಾಹರಣೆ ಬೇಕಾಗಿಲ್ಲ. ದೇಶದ 22 ರಾಜ್ಯಗಳಲ್ಲಿ ಗೋ ಹತ್ಯೆಗೆ ನಿಷೇಧವಿದೆ. ಹೀಗಿದ್ದೂ ಜಾಗತಿಕವಾಗಿ ಬೀಫ್ ಉತ್ಪಾದನೆಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ದೇಶದ ಬೀಫ್ ಉತ್ಪಾದನೆಯಲ್ಲಿ ಕೋಣ ಮತ್ತು ಎಮ್ಮೆಯ ಮಾಂಸ ಮಾತ್ರ ಸೇರಿದೆ ಎನ್ನುವ ಮಾಹಿತಿ ನೀಡುತ್ತದೆ, ‘ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ (ಅಪೆದ). ಆದರೆ ಇದು ಸುಳ್ಳು ಎಂಬುದು ಎಲ್ಲರಿಗೂ ಗೊತ್ತಿದೆ. “ಮುದಿಯಾದ, ಗೊಡ್ಡು ದನಗಳನ್ನು ಕಸಾಯಿ..

  August 15, 2016
  ...
  cow image
  SPECIAL SERIES

  ‘ಗೋ ರಾಜಕೀಯ’- ಭಾಗ 2: ಗೋ ಹತ್ಯೆ ನಿಷೇಧ ಕಾನೂನು ಜಾರಿ ಹಿಂದೆ ‘ಅಜೆಂಡಾ’ಗಳ ವಾಸನೆ!

  ಹುಲಿ ಕಡವೆಯನ್ನು ಬೇಟೆಯಾಡುತ್ತದೆ; ಚಿರತೆ ಜಿಂಕೆಯನ್ನು ಬೇಟೆಯಾಡುತ್ತದೆ. ಇದು ಆಯಾ ಪ್ರಾಣಿಗಳ ಆಹಾರ ಕ್ರಮ; ನೈಸರ್ಗಿಕ ನಿಯಮ. ಜಗತ್ತಿನ ಬಹುತೇಕರು ಮಾಂಸವನ್ನು ಆಹಾರವಾಗಿ ಬಳಸುತ್ತಾರೆ. ಭಾರತದಲ್ಲಿ ಮೀನು, ಮಾಂಸವನ್ನು ಪೌಷ್ಠಿಕಾಂಶದ ಮೂಲವಾಗಿ ಬಳಸುವವರು ಸಂಖ್ಯೆಯೇ ಶೇ. 70ಕ್ಕೂ ಹೆಚ್ಚಿದೆ. ಮಾಂಸಾಹಾರ ಎಂಬುದು ಆರೋಗ್ಯ ಅಥವಾ ರುಚಿಯ ಕಾರಣಕ್ಕೆ ಇರಬಹುದು. ಒಟ್ಟಾರೆ, ನಾಗರೀಕತೆಯ ಬೆಳವಣಿಗೆಯಲ್ಲಿ ಮಾಂಸಾಹಾರ ಎಂಬುದು ಒಂದು ಜನ ಸಂಸ್ಕೃತಿಯಾಗಿ ಬೆಳೆದಿದೆ. ಹಾಗಿದ್ದು ಗೋವುಗಳನ್ನು ಕೊಯ್ದು, ಸಂಸ್ಕರಿಸಿ ತಿನ್ನುವುದು ಹತ್ಯೆಯಾಗಿ ಹೇಗೆ ಬದಲಾಯಿತು? ಹಿಂದೂಗಳನ್ನು ಮೆಚ್ಚಿಸಲು ಮೊಘಲರು ಹೂಡಿದ ತಂತ್ರ..

  August 12, 2016
  ...
  Punyakoti copy
  SPECIAL SERIES

  ‘ಗೋ ರಾಜಕೀಯ’- ಭಾಗ 1: ಪುರಾಣದ ‘ಕಾಮಧೇನು’; ಕ್ಷೀರ ಕ್ರಾಂತಿಯ ‘ಜೆರ್ಸಿ’ ಮತ್ತು ಗೋ ರಾಜಕೀಯಕ್ಕೆ ಮುನ್ನುಡಿ!

  ಗೋವು ಅಂದರೇನೇ ಹಾಗೆ. ಅದು ಎಲ್ಲರನ್ನೂ ಸಲಹುವ ಕಾಮಧೇನು. ರೈತರಿಗೆ ಉಪ ಕಸುಬಾಗಿ, ಹೈನುಗಾರರಿಗೆ ಉದ್ಯೋಗವಾಗಿ, ಆಹಾರ ಪ್ರಿಯರಿಗೆ ಖಾದ್ಯವಾಗಿ, ಚರ್ಮೋದ್ಯಮದ ಪಾಲಿಗೆ ‘ಪಕ್ಕಾ ಲೆದರ್’ ಆಗಿ, ರಾಜಕಾರಣಿಗಳಿಗೆ ಓಟ್ ಬ್ಯಾಂಕ್ ಗಿಟ್ಟಿಸುವ ‘ಭಾವನಾತ್ಮಕ ವಸ್ತು’ವಾಗಿ ಗೋಮಾತೆ ಎಲ್ಲರನ್ನೂ ಸಲಹುತ್ತಾ ಬಂದಿದ್ದಾಳೆ. ಈ ದಿಕ್ಕಿನಲ್ಲಿ ಪುಣ್ಯಕೋಟಿಯ ಕೊಡುಗೆ ಅಪರಿಮಿತ. ಕಳೆದೊಂದು ವರ್ಷದಿಂದ ದೇಶದ ಪ್ರಮುಖ ಚರ್ಚೆಗಳೆಲ್ಲಾ ಈ ಗೋವಿನ ಸುತ್ತ-ಮುತ್ತಲೇ ಗಿರಕಿ ಹೊಡೆಯುತ್ತಿವೆ. ಉತ್ತರ ಪ್ರದೇಶದ ದಾದ್ರಿಯ ಮಹಮ್ಮದ್ ಇಕ್ಲಾಖ್ ಹತ್ಯೆಯಿಂದ ಆರಂಭವಾಗಿ ತೀರಾ ಇತ್ತೀಚೆಗೆ ಗುಜರಾತಿನ..

  August 11, 2016
  ...
  modi-photoshop-1
  SPECIAL SERIES

  ‘ಮೋದಿ ಸವೆಸಿದ ಹಾದಿ’-5: ಹರೇನ್ ಪಾಂಡ್ಯ ಹತ್ಯೆ ನೆನಪಿನಲ್ಲಿ ಗುಜರಾತಿನ ಗದ್ದುಗೆ ಕತೆಗೆ ಉಪಸಂಹಾರ!

  ‘ಮೋದಿ ಸವೆಸಿದ ಹಾದಿ’ಯ ಕೊನೆಯ ಭಾಗಕ್ಕೆ ಬಂದು ನಿಂತಿದ್ದೇವೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ಮೋದಿ, ಆರ್ ಎಸ್ಎಸ್ ಸಂಘಟನೆ ಮೂಲಕ ವಿಚಾರಗಳನ್ನು ಬೆಳೆಸಿಕೊಂಡು, ಉತ್ತಮ ಸಂಘಟಕ ಎನ್ನಿಸಿಕೊಂಡು, ನಂತರ ಬಿಜೆಪಿ ಪ್ರವೇಶಿಸಿ, ಪಕ್ಷದ ಹುದ್ದೆಗಳಲ್ಲಿ ಹಂತಹಂತವಾಗಿ ಏರುವ ಮೂಲಕ ಗುಜರಾತ್ ಮುಖ್ಯಮಂತ್ರಿಯಾಗಿ, ನಂತರ ದೇಶದ ಪ್ರಧಾನಿಯಾಗಿ ಎರಡು ವರ್ಷಗಳ ಆಡಳಿತವನ್ನು ಪೂರೈಸಿದ್ದಾರೆ. ಇದು ವ್ಯಕ್ತಿಯೊಬ್ಬನ ಬದುಕಿನಲ್ಲಿ ಸುದೀರ್ಘ ಪ್ರಯಾಣದ ಹಾದಿ. ಅವೆಲ್ಲವನ್ನೂ ಸಮಗ್ರವಾಗಿ ಐದು ಸಂಚಿಕೆಗಳ ಮಿತಿಯಲ್ಲಿ ನಿರೂಪಿಸುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ‘ಸಮಾಚಾರ’..

  May 29, 2016
  ...
  modi-india-today-1
  SPECIAL SERIES

  ‘ಮೋದಿ ಸವೆಸಿದ ಹಾದಿ-4’: ಎರಡು ವರ್ಷಗಳ ಸಾಧನೆ ಸುದ್ದಿಗಳನ್ನು ಓದುತ್ತಿರುವ ಈ ಹೊತ್ತಿನಲ್ಲಿ ಗಮನಿಸಬೇಕಿರುವ ಪಿಆರ್ ಏಜೆನ್ಸಿ ‘ಸತ್ಯ’ಗಳು!

  ನರೇಂದ್ರ ಮೋದಿ ದೇಶದ ಪ್ರಧಾನಿ ಆಗುವುದಕ್ಕೆ ಬಳಸಿಕೊಂಡ ಹಲವು ಮೆಟ್ಟಿಲುಗಳಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಸ್ಥಾನ ಪ್ರಮುಖವಾದುದು. ಇವತ್ತಿಗೆ ಮೋದಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳು ಕಳೆಯುತ್ತಿವೆ. ಈ ಸಮಯದಲ್ಲಿ ದೇಶದ ಜನ ಎರಡು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎನ್ನುವುದಕ್ಕಿಂತ ನರೇಂದ್ರ ಮೋದಿ ಎಂಬ ‘ವಿಕಾಸ್ ಪುರುಷ’ ದೇಶವನ್ನು ಬದಲಿಸಬಲ್ಲ ಎಂಬ ಅದಮ್ಯ ಭರವಸೆಯಿಂದ ಮತ ಹಾಕಲು ಕಾರಣವಾದ ಅಂಶಗಳೇನು ಎಂಬುದನ್ನು ಗಮನಿಸಬೇಕಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ನಡೆಸಿದ ಅಭಿವೃದ್ಧಿ ಯೋಜನೆಗಳ ಫಲ..

  May 26, 2016
  ...
  modi-vaj-1
  SPECIAL SERIES

  ‘ಮೋದಿ ಸವೆಸಿದ ಹಾದಿ’-3: ಗುಜರಾತ್ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ವಾಜಪೇಯಿ ಹೆಗಲ ಮೇಲೆ ಬಂದೂಕಿಟ್ಟ ಮೋದಿ!

  ರಾಜಕೀಯ ಅಖಾಡದಲ್ಲಿ ಮೋದಿ ಬೆಳೆದ ಕತೆಯನ್ನು ಹೇಳುವುದು ಅಂದರೆ, 1970ರ ದಶಕದಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಹಿಂದುತ್ವದ ಪ್ರಯೋಗಗಳನ್ನು, ಪಡೆದ ಅಧಿಕಾರವನ್ನು, ಅದನ್ನು ಅನುಭವಿಸಲು ಮೂರು ನಾಯಕರು ನಡೆಸಿದ ಭಿನ್ನ ತಂತ್ರಗಳನ್ನು ಹೇಳಿದಂತೆ. ಸ್ವಾತಂತ್ರ್ಯ ನಂತರ ನಡೆಸಿದ ಗಾಂಧಿ ಹತ್ಯೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿಷೇಧ ಹೇರಲಾಯಿತು. ಈ ಸಮಯದಲ್ಲಿ ಸಂಘದ ಬಹುತೇಕ ನಾಯಕರು ಭೂಗತರಾದರು, ಇಲ್ಲವೇ ತಮ್ಮನ್ನು ತಾವು ತೆರೆಮರೆಯಲ್ಲಿ ಉಳಿಸಿಕೊಂಡು ಕೆಲಸ ಮಾಡತೊಡಗಿದರು. ಹೆಚ್ಚು ಕಡಿಮೆ ಮುಗಿದೇ ಹೋಯಿತು ಎಂಬಂತಾಗಿದ್ದ ಸಂಘಪರಿವಾರದ..

  May 25, 2016
  ...
  Narendra_Modi-1
  SPECIAL SERIES

  ‘ಮೋದಿ ಸವೆಸಿದ ಹಾದಿ- 2’: ದೇಶ ಗೆಲ್ಲುವ ಮುನ್ನವೇ ಉದ್ಯಮಪತಿಗಳನ್ನು ಮಣಿಸಲು ರಣತಂತ್ರ!

  ಗುಜರಾತ್ ರಾಜ್ಯಕ್ಕೂ ಉದ್ಯಮಕ್ಕೂ ಪುರಾತನ ಸಂಬಂಧವೊಂದಿದೆ. ಹೀಗಾಗಿಯೇ ಗುಜರಾತಿಗಳ ವ್ಯಾಪಾರಿ ಮನೋಭಾವದ ಕುರಿತು ಹಲವು ದಂತಕತೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ 1498ರ ಸುಮಾರಿಗೆ ಭಾರತಕ್ಕೆ ಬಂದಿಳಿದ ವಾಸ್ಕೋ-ಡ-ಗಾಮನಿಗೆ ಆಫ್ರಿಕಾದಿಂದ ಭಾರತಕ್ಕೆ ಸಮುದ್ರ ಮಾರ್ಗವನ್ನು ತೋರಿಸಿದವನು ಗುಜರಾತ್ ಮೂಲದ ವ್ಯಾಪಾರಿ ಕಾಂಜಿ ಮಲಾಮ್ ಎಂಬುದು ಒಂದು. ಇವತ್ತು ಗುಜರಾತ್ ಇತಿಹಾಸವನ್ನು ಹುಡುಕಿಕೊಂಡು ಹೊರಟರೆ ಇಂತಹ ಹಲವು ಕತೆಗಳು ಸಿಗುತ್ತವೆ. ಈ ವಿಚಾರ ಇಲ್ಲಿ ಯಾಕೆ ಎಂದರೆ, ಇವತ್ತಿಗೆ ಐದು ವರ್ಷಗಳ ಹಿಂದೆ ಮೋದಿ ಇಟ್ಟ ನಡೆಯನ್ನು ಅರ್ಥಮಾಡಿಕೊಳ್ಳಲು ಇದು ಅಗತ್ಯ. ಅದು 2011ರ..

  May 24, 2016
  ...
  modi-cover-1
  SPECIAL SERIES

  ‘ಮೋದಿ ಸವೆಸಿದ ಹಾದಿ-1’: ಜಯಭೇರಿ ಬಾರಿಸಿದ ಬಿಜೆಪಿ ಮತ್ತು ಪ್ರಧಾನಿಯಾದ ಪೂರ್ಣಾವಧಿ ಪ್ರಚಾರಕ!

  ಮೇ. 26, 2014. ಸ್ವತಂತ್ರ ಭಾರತದಲ್ಲಿ ನಡೆದ 16ನೇ ಲೋಕಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ದಿನವಿದು. 2014ರ ಏಪ್ರಿಲ್ ಮೊದಲ ವಾರದಿಂದ ಶುರುವಾದ ಚುನಾವಣೆ ಒಟ್ಟು 9 ಹಂತಗಳಲ್ಲಿ ನಡೆದಿತ್ತು. ದೇಶ ಕಂಡ ಸುದೀರ್ಘ ಚುನಾವಣೆ ಇದು ಎನ್ನಿಸಿಕೊಂಡಿತ್ತು. ಹಿಂದೆಂದೂ ಕಾಣದಷ್ಟು ದೊಡ್ಡ ಮೊತ್ತವನ್ನು ಈ ಚುನಾವಣೆಗಾಗಿ ನಾನಾ ರಾಜಕೀಯ ಪಕ್ಷಗಳು ಹೂಡಿದ್ದವು. ಒಂದು ಅಂದಾಜಿನ ಪ್ರಕಾರ ಒಟ್ಟು 30 ಸಾವಿರ ಕೋಟಿ ರೂಪಾಯಿಗಳ ಭಾರಿ ಮೊತ್ತ. ಸಾಮಾಜಿಕ ಜಾಲತಾಣಗಳು ಬೆಳೆಯುತ್ತಿದ್ದ ಸಮಯವದು. ಜನರನ್ನು ತಲುಪಲು ಸಾಂಪ್ರದಾಯಿಕ ಪ್ರಚಾರ ತಂತ್ರಗಳ..

  May 23, 2016

Top