An unconventional News Portal.

ಸಮಾಚಾರ +ಪಾಸಿಟಿವ್
    ...
    vande-mataram-2
    ಪಾಸಿಟಿವ್

    ಯೂ-ಟ್ಯೂಬ್ ಸರ್ಚ್‌: ವಂದೇ ಮಾತರಂ…’ದೇಶ ಪ್ರೇಮ’ಕ್ಕೆ ಹೀಗೊಂದು ವ್ಯಾಖ್ಯಾನ!

    ‘ದೇಶ ಪ್ರೇಮ’ಕ್ಕೆ ವ್ಯಾಖ್ಯಾನಗಳನ್ನು ನೀಡಲು ನಾ ಮುಂದೆ, ನೀ ಮುಂದೆ ಎಂದು ಜಂಗುಳಿ ನಿರ್ಮಾಣವಾಗಿರುವ ದಿನಗಳಿವು. ಈ ಸಮಯದಲ್ಲಿ, ಕನ್ನಡ ಸಿನೆಮಾ ಲೋಕದಲ್ಲಿ ಕೃಷಿಯನ್ನು ಆರಂಭಿಸಿರುವ ಯುವಕ, ಭದ್ರಾವತಿ ಮೂಲದ ಚೇತನ್ ಮಂಜುನಾಥ್, ಬಂಕಿಮ ಚಂದ್ರ ಚಟರ್ಜಿ ಅವರ ‘ವಂದೇ ಮಾತರಂ’ ಗೀತೆಗೆ ದೃಶ್ಯ ಸಂಯೋಜನೆ ಮಾಡಿದ್ದಾರೆ. ಅದೀಗ ಯೂ- ಟ್ಯೂಬ್‌ನಲ್ಲಿ ಲಭ್ಯವಿದೆ. 5 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ‘ವಂದೇ ಮಾತರಂ’ ಗೀತೆಯನ್ನು ಇಟ್ಟುಕೊಂಡು ದೃಶ್ಯ ಸಂಯೋಜನೆ ಮಾಡಿದ ಹಲವು ವಿಡಿಯೋಗಳು ಯೂ-ಟ್ಯೂಬ್‌ನಲ್ಲಿಯೇ ಲಭ್ಯ ಇವೆ…

    September 5, 2017
    ...
    banwari-devi-1
    ಪಾಸಿಟಿವ್

    ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಜಾರಿ ಹಿಂದಿರುವ ಭನ್ವಾರಿದೇವಿಯ ಭಯಾನಕ ಕತೆ

    ಇದು ಅತ್ಯಾಚಾರದ ಅವಮಾನವನ್ನ ಮೆಟ್ಟಿ ನಿಂತು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಧೀರ ಮಹಿಳೆಯ ಯಶೋಗಾಥೆ. ಗುಜ್ಜರ್ ಸಮುದಾಯದ ದಬ್ಬಾಳಿಕೆ ಮಿತಿ ಮೀರಿರುವ ರಾಜಸ್ಥಾನದ ಹಳ್ಳಿಯೊಂದರಲ್ಲಿ ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತುತ್ತಿರುವ ಗಟ್ಟಿಗಿತ್ತಿಯ ಸ್ಫೂರ್ತಿಯ ಕತೆ. ಮಹಿಳೆಯೊಬ್ಬರು ತಮ್ಮ ಜೀವನವನ್ನೇ ಹೋರಾಟದ ಅಸ್ತ್ರವಾಗಿಸಿಕೊಂಡು, ದೇಶದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ ಜಾರಿಯಾಗುವಂತೆ ಮಾಡಿದ ಸಾಹಸ ಕತೆ ಕೂಡ. ಈ ನಿಜ ಜೀವನದ ಕತೆಯ ನಾಯಕಿ ರಾಜಸ್ಥಾನದ ಭನ್ವಾರಿದೇವಿ. ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿ, ನಮ್ಮ ನಿಧಾನಗತಿಯ ಕಾನೂನು ವ್ಯವಸ್ಥೆಯಲ್ಲಿ..

    March 28, 2017
    ...
    winny-masthikatte-final-cover
    ಪಾಸಿಟಿವ್

    ‘ಮಾದರಿ ತಾಯಿ’: ಮೆಡಿಕಲ್ ಓದಿದ ಮಕ್ಕಳನ್ನು ‘ಹಳ್ಳಿ ಸೇವೆ’ಗೆ ಕರೆತಂದವರು ವಿನ್ನಿ ಸಿಸ್ಟರ್!

    ಮಕ್ಕಳು ಚೆನ್ನಾಗಿ ಓದಬೇಕು; ಡಿಗ್ರಿ ಸಂಪಾದಿಸಬೇಕು; ಫಾರಿನ್‌ಗೆ ಹೋಗಬೇಕು; ಕೈ ತುಂಬಾ ಹಣ ದುಡಿಯಬೇಕು…ಇವು ಎಲ್ಲಾ ಕಾಲಕ್ಕೂ ಬಹುತೇಕ ತಂದೆ ತಾಯಿಗಳು ಮಕ್ಕಳ ಎಡೆಗೆ ಕಟ್ಟಿಕೊಂಡಿರುವ ಕನಸುಗಳು. ಆದರೆ, ಕಷ್ಟದಲ್ಲಿಯೇ ಬದುಕು ಕಟ್ಟಿಕೊಂಡು, ಇಬ್ಬರು ಗಂಡು ಮಕ್ಕಳನ್ನು ಮೆಡಿಕಲ್ ಓದಿಸಿ, ಅವರ ಫಾರಿನ್‌ ಕನಸುಗಳನ್ನು ಬದಿಗಿರಿಸಿ, ಹುಟ್ಟಿದ ಊರಿನ ಜನರಿಗೆ ಸೇವೆ ಸಲ್ಲಿಸುವಂತೆ ಹೇಳುವ ತಾಯಂದಿರೂ ಇವತ್ತಿಗೂ ಇದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಬೇಕು. ಯಾಕೆಂದರೆ, ಬದುಕಿನ ಬಗ್ಗೆ ಪ್ರೀತಿಯನ್ನು ಹುಟ್ಟಿಸುವಂತಹ ನಿರ್ಧಾರವೊಂದನ್ನು ತೆಗೆದುಕೊಂಡ ತಾಯಿಯೊಬ್ಬರನ್ನು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇವೆ; ಮೀಟ್ ಮಿಸ್..

    March 25, 2017
    ...
    why-do-we-smoke
    ಪಾಸಿಟಿವ್

    ‘SMOKING KILLS’ ಅಂತ ಗೊತ್ತಿದ್ದೂ ಜನ ಯಾಕೆ ಸಿಗರೇಟು ಸೇದುತ್ತಾರೆ?

    ಇವತ್ತಿಗೆ ಭಾರತ ಬಿಡಿ, ಇಡೀ ಪ್ರಪಂಚದಾದ್ಯಂತ ಇದೊಂದು ಕ್ಲೀಷೆಯಾಗಿ ಮಾರ್ಪಾಟಾಗಿದೆ. ‘ಸ್ಮೋಕಿಂಗ್ ಕಿಲ್ಸ್’, ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಘೋಷಣೆಗಳು, ಜಾಹೀರಾತುಗಳು, ಸೈನ್ ಬೋರ್ಡುಗಳು, ಸೆಲೆಬ್ರಿಟಿಗಳ ಉವಾಚಗಳು ಹೀಗೆ ಕಂಡಕಂಡಲ್ಲಿ ಧೂಮಪಾನದ ವಿರುದ್ಧ ಪ್ರಚಾರ ಕಾರ್ಯ ನಡೆಯುತ್ತಲೇ ಇದೆ. ಮಾಲ್ಗೆ ಹೋಗಿ, ಸಿನಿಮಾ ಥಿಯೇಟಗೆ ಹೋಗಿ, ಇಲ್ಲವೇ ಸಿಗರೇಟು ಪ್ಯಾಕ್ ಒಂದನ್ನು ಕೊಂಡುಕೊಳ್ಳಿ, ಎಲ್ಲಾ ಕಡೆಗಳಲ್ಲೂ ‘ಸ್ಮೋಕಿಂಗ್ ಕಿಲ್ಸ್’ ಎಂಬ ಕಲುಷಿತಗೊಂಡ ಶ್ವಾಸಕೋಶದ ಚಿತ್ರಗಳು ರಾರಾಜಿಸುತ್ತವೆ. ಹೀಗಿದ್ದೂ, ಒಂದು 1980ರಲ್ಲಿ ಇದ್ದ ಪ್ರಪಂಚದ ಧೂಮಪಾನಿಗಳ ಸಂಖ್ಯೆ 72. 01..

    September 10, 2016
    ...
    shoot acid sunny
    ಪಾಸಿಟಿವ್

    ‘ಶೂಟ್ ಆ್ಯಸಿಡ್’ ಆಂದೋಲನ: ‘ನ್ಯೂಯಾರ್ಕ್ ಫ್ಯಾಷನ್ ವೀಕ್’ನಲ್ಲಿ ಸನ್ನಿ ಜೊತೆ ಸಂತ್ರಸ್ತೆ ಹೆಜ್ಜೆ!

    ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದವರು ‘ಶೂಟ್ ಆ್ಯಸಿಡ್’ ಹೆಸರಿನಲ್ಲಿ ಆ್ಯಸಿಡ್ ದಾಳಿಗಳ ವಿರುದ್ಧ ಸಮರ ಸಾರಿದ್ದಾರೆ. ಇದೇ ವೇಳೆ, ಆಶಾದಾಯಕ ಬೆಳವಣಿಗೆಯೊಂದರಲ್ಲಿ ರೇಷ್ಮಾ ಖುರೇಶಿ ಎಂದ ಆ್ಯಸಿಡ್ ಸಂತ್ರಸ್ತೆ ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಅಂದ ಹಾಗೆ ಇದೇ ಫ್ರಾಷನ್ ಶೋನಲ್ಲಿ ಸನ್ನಿ ಲಿಯೋನ್ ಕೂಡಾ ಕ್ಯಾಟ್ ವಾಕ್ ಮಾಡಲಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್ ಮಾರಾಟ ತಡೆಗಟ್ಟಲು ಆ್ಯಸಿಡ್ ದಾಳಿಯಿಂದ ಬದುಕುಳಿದವರು ಉತ್ತರ ಪ್ರದೇಶದಿಂದ ಆಂದೋಲನ ಆರಂಭಿಸಿದ್ದಾರೆ. ತಾವೇ ನೇರವಾಗಿ ಮಾರುಕಟ್ಟೆ ಪ್ರದೇಶಗಳಿಗೆ ನುಗ್ಗಿ..

    September 6, 2016
    ...
    solar impulse 2
    ಪಾಸಿಟಿವ್

    ಹನಿ ಪೆಟ್ರೋಲ್ ಬಳಸದೆ ವಿಮಾನ ಓಡಿಸಿದರು; ವಿಶ್ವಕ್ಕೆ ಸಂದೇಶ ಸಾರಿದರು!

    ಬಹುನಿರೀಕ್ಷಿತ ‘ಸೋಲಾರ್ ಇಂಪಲ್ಸ್’ ಮಂಗಳವಾರ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ವಿಶಿಷ್ಟ ದಾಖಲೆಯೊಂದು ನಿರ್ಮಾಣವಾಯಿತು. ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್ ಹನಿ ಪಟ್ರೋಲನ್ನೂ ಬಳಸದೆ, ಕೇವಲ ಸೂರ್ಯನ ಶಕ್ತಿಯ ಬಳಸಿ ವಿಮಾನದಲ್ಲಿ ವಿಶ್ವಪರ್ಯಟನೆ ಮಾಡಿ ಹುಬ್ಬೇರಿಸುವ ಸಾಧನೆ ಮಾಡಿದರು. 500ಕ್ಕೂ ಹೆಚ್ಚು ದಿನಗಳ 35,400 ಕಿಲೋಮೀಟರುಗಳ ಅವರ ಪಯಣದ ಕತೆ ಇದು. ಸೂರ್ಯನ ಬೆಳಕಿನಲ್ಲಿ ಕಾರು, ಆಟೋ ರಿಕ್ಷಾಗಳು ಓಡುವುದಾದರೆ; ವಿಮಾನ ಯಾಕೆ ಓಡಾಡಬಾರದು ಎಂದು ಪ್ರಶ್ನೆ ಹಾಕಿಕೊಂಡವರು ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್. ಬಾರ್ಶ್‍ಬರ್ಗ್ ಸ್ವಿಡ್ಜರ್ಲಾಂಡಿನ ಖ್ಯಾತ ಉದ್ಯಮಿ..

    July 27, 2016
    ...
    stress-less_t_nv
    ಪಾಸಿಟಿವ್

    ಕುಂಟು ನೆಪ ಬಿಟ್ಟು ಒತ್ತಡವಿಲ್ಲದೆ ಬದುಕಲು ಎಂಟು ದಾರಿಗಳು!

    ಆಧುನಿಕ ಯುಗದಲ್ಲಿ ಕಾಲದ ಜೊತೆ ಓಟಕ್ಕಿಳಿದಿರುವ ಮನುಷ್ಯ ವಿಪರೀತ ಒತ್ತಡಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಸ್ಪರ್ಧಾತ್ಮಕವಾಗಿರುವ ಈ ಸಮಯದಲ್ಲಿ ಪ್ರತಿಯೊಬ್ಬರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಇದು ಅನಿವಾರ್ಯ ಕೂಡ. ಇವತ್ತು ಖಾಸಗೀ ಜೀವನಕ್ಕೂ ಸಮಯವನ್ನು ನೀಡಲಾಗದ ಪರಿಸ್ಥಿತಿಯಿದೆ. ಇದರಿಂದಾಗಿ ಮಾನಸಿಕ ಒತ್ತಡಗಳು ಸಹಜವಾಗಿಯೇ ಹೆಚ್ಚಾಗುತ್ತಿವೆ. ಇದರ ಪರಿಣಾಮ ದೈಹಿಕ ಆರೋಗ್ಯದ ಮೇಲೂ ಬೀಳುತ್ತದೆ. ಹೀಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ಒಂದಷ್ಟು ಟಿಪ್ಸ್ ಇಲ್ಲಿದೆ. ಆರೋಗ್ಯಪೂರ್ಣ ಆಹಾರ ಸೇವನೆ: ಆಹಾರಕ್ಕೆ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಿದೆ. ದೈಹಿಕ..

    July 9, 2016
    ...
    tatto-artist-1
    ಪಾಸಿಟಿವ್

    ಹಚ್ಚೆ ಬಿಡಿಸಲು ಕೃತಕ ಕೈ: ವಿಜ್ಞಾನ ಮತ್ತು ಕಲೆಯ ಸಂಕರದ ಫಲ ಇದು!

    ‘ಹಚ್ಚೆ’ ಎಂದರೆ ನಿಮಗೆ ಹಳೆಯದೆಲ್ಲಾ ನೆನಪಾಗಬಹುದು. ಆಗ ಹಳ್ಳಿ ಹಳ್ಳಿಗೆ, ಮನೆ ಮನೆಗೆ ಬಗಲಿಗೊಂದು ಬಟ್ಟೆಯ ಚೀಲವನ್ನು ನೇತು ಹಾಕಿಕೊಂಡು ಬರುತ್ತಿದ್ದ ಕಲಾಕಾರರು ನಮ್ಮ ಹಿರಿಯರ ಚರ್ಮದ ಮೇಲೆ ಚಿತ್ರವನ್ನು ಬಿಡಿಸಿದ್ದನ್ನು ನೀವು ನೋಡಿರಲೂ ಸಾಕು. ಇದೇ ಈಗ ಆಧುನಿಕ ಮಾರುಕಟ್ಟೆಯಲ್ಲಿ ಟ್ಯಾಟೂ ಎಂದು ಕರೆಸಿಕೊಳ್ಳುತ್ತಿದೆ. ಇವತ್ತಿಗೆ ಹಚ್ಚೆ ಹಾಕುವ ಪ್ರಕ್ರಿಯೆ ಹಿಂದಿಗಿಂತಲೂ ಅಪ್ ಡೇಟ್ ಆಗಿದೆ. ಹಚ್ಚೆ ಹಾಕಿಸಿಕೊಳ್ಳುವುದು ಫ್ಯಾಷನ್ ಅನ್ನಿಸಿಕೊಂಡಿದೆ. ಮಾನಸಿಕ ಹಿಂಸೆಯಿಂದ ದೂರ ಆಗಲು ಟ್ಯಾಟೂ ನೆರವಾಗುತ್ತದೆ ಎಂಬ ನಂಬಿಕೆಗಳಿವೆ. ಅದೇನೆ ಇರಲಿ, ಇಲ್ಲಿ..

    June 10, 2016
    ...
    neetu1-1458555522-800
    ಪಾಸಿಟಿವ್

    ಬದುಕಿನ ಎಲ್ಲಾ ಆಯಾಮಗಳಲ್ಲಿ ‘ಕುಸ್ತಿ’ ಮಾಡುತ್ತಲೇ ಸಮಸ್ಯೆಗಳನ್ನು ಮೆಟ್ಟಿ ನಿಂತಾಕೆ ಸರ್ಕಾರ್!

    ಆಕೆಗೆ ಆಗ ಹದಿನೈದು ವರ್ಷ. ಆ ಪುಟ್ಟ ವಯಸ್ಸನಲ್ಲಿ ಆಕೆ ಎರಡೆರಡು ಮದುವೆಗಳನ್ನು ನೋಡಬೇಕಾಯಿತು. ಮಾತ್ರವಲ್ಲ ಆ ವಯಸ್ಸಿಗಾಗಲೇ ಆಕೆ ಎರಡು ಮಕ್ಕಳನ್ನು ಹೆತ್ತಿದ್ದರಿಂದ ಅವರನ್ನು ಸಾಕುವ ಜವಾಬ್ದಾರಿಯೂ ಆಕೆಯ ಹೆಗಲೇರಿತ್ತು. ಅಷ್ಟಾಗಿದ್ದರೆ ಇಲ್ಲಿ ನಾವಿವತ್ತು ಈ ಸ್ಟೋರಿಯನ್ನು ನಿಮ್ಮ ಮುಂದಿಡಲು ಕಾರಣಗಳೇ ಇರುತ್ತಿರಲಿಲ್ಲ. ಆ ಛಲಗಾತಿ ಬಳಿಕ ತೆಗೆದುಕೊಂಡ ನಿರ್ಧಾರ ಹಾಗೂ ನಂತರ ಸಾಧಿಸಿದ ಮೈಲಿಗಲ್ಲು ಬಾಕ್ಸಿಂಗ್ ಲೋಕದ ‘ದಿ ಗ್ರೆಟೆಸ್ಟ್’ ಮಹಮದ್ ಅಲಿ ನಮ್ಮನ್ನಗಲಿದ ಈ ಸಮಯದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವಂತದ್ದು. ಆಕೆಯ ಹೆಸರು ನೀತು ಸರ್ಕಾರ್. ಊರು..

    June 6, 2016
    ...
    3-people-relationship-1
    ಪಾಸಿಟಿವ್

    ಚಟ್ಟ ಹೊರೋಕೆ ಯಾರಿದ್ದರೇನು?; ಬದುಕು ನೀಗೋಕೆ ಈ ಮೂವರಿದ್ದರೆ ಸಾಕು!

    “ನಿಮಗೆ ಸ್ನೇಹಿತರೆಷ್ಟಿದ್ದಾರೆ?” “5000 ಫೇಸ್ ಬುಕ್ಕಿನಲ್ಲಿ… ಹೊರಗೆ ಒಂದಷ್ಟು ಜನರಿರಬಹುದು…” ಇಂತಹ ಸಂಭಾಷಣೆಗಳು ಸಾಮಾನ್ಯ ಎಂಬಂತಾಗಿರುವ ಕಾಲದಲ್ಲಿ ಸಂಬಂಧಗಳನ್ನು ವ್ಯಾಖ್ಯಾನಿಸುವುದು ಮತ್ತು ಅವುಗಳನ್ನು ಅರ್ಥ ಮಾಡಕೊಳ್ಳುವುದು ದೊಡ್ಡ ಸವಾಲು. ಮನುಷ್ಯ ಎಷ್ಟೇ ಅಂತಮುರ್ಖಿ, ಸ್ವಾರ್ಥಿ ಅನ್ನಿಸಿಕೊಂಡರೂ, ಆಕೆ ಅಥವಾ ಆತ ಸಂಘ ಜೀವಿ. ಸಂಬಂಧಗಳು ಮನುಷ್ಯನನ್ನು ಇನ್ನಷ್ಟು ಆಳಕ್ಕೆ, ವಿಸ್ತಾರದ ನೆಲೆಗೆ ಕೊಂಡೊಯ್ಯುತ್ತವೆ. ಎಲ್ಲಾ ಸಂಬಂಧಗಳು ಬದುಕನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಕೆಲವು ಸಂಬಂಧಗಳು ಮಾತ್ರ ವಿಶೇಷ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ. ನಿಮಗೆ ಎಷ್ಟೇ ರಕ್ತ ಸಂಬಂಧಗಳಿರಲಿ, ಸ್ನೇಹ ಬಂಧಗಳಿರಲಿ,..

    June 1, 2016
  • 1
  • 2

Top