An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ಫೋಕಸ್

    ರೈಲು ಬೋಗಿಯ ಮೇಲೆ ಸುಸಜ್ಜಿತ ಆಸ್ಪತ್ರೆ: ದೇಶದ ಜನಾರೋಗ್ಯದ ಜತೆ ಅಂತ್ಯಗೊಂಡ 25ವರ್ಷಗಳ ಪಯಣ!

    ಮನೆಬಾಗಿಲಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಕಲ್ಪನೆಯೊಂದು ಸಾಕಾರವಾಗಿದೆ. ‘ಲೈಫ್ ಲೈನ್ ಎಕ್ಸ್‌ಪ್ರೆಸ್‌’ ಎಂಬ ರೈಲು, 25 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ ಆರೋಗ್ಯ ಸೇವೆ ನೀಡಿದೆ. ಆರ್ಥಿಕವಾಗಿ ಕಷ್ಟದಲ್ಲಿ ಇರುವವರಿಗೆ ಶಸ್ತ್ರ ಚಿಕಿತ್ಸೆ, ಔಷಧೋಪಚಾರ, ಡಯಗ್ನಾಸ್ಟಿಕ್ಸ್ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಎರಡೂವರೆ ದಶಕಗಳ ಕಾಲ ನೀಡಿದ ಕೀರ್ತಿ ಇದರದ್ದು. ‘ಇಂಪ್ಯಾಕ್ಟ್ ಇಂಡಿಯಾ ಫೌಂಡೇಷನ್’ ಹಾಗೂ ರೈಲ್ವೆ ಇಲಾಖೆ ಸಹಯೋಗದಲ್ಲಿ ರೈಲು ಹಳಿಗಳ ಮೇಲೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆ ಬೋಗಿಗಳ ಕಲ್ಪನೆ ಇದು. ಇದಕ್ಕೆ ಆರೋಗ್ಯ..

    August 2, 2016
    ...
    ಫೋಕಸ್

    ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

    ಮಳೆ, ಪ್ರವಾಹ, ಟ್ರಾಫಿಕ್ ಜಾಂ… ಕೆರೆ ಕಟ್ಟೆ ಒಡೆದು ರಸ್ತೆಗೆ ನುಗ್ಗಿದ ನೀರು, ಮೀನು ಹಿಡಿದ ಜನ… ಹೀಗೆ ಶುಕ್ರವಾರ ದಿನ ಪೂರ್ತಿ ಬೆಂಗಳೂರಿನಲ್ಲಿ ಮಳೆಯದ್ದೇ ಸದ್ದು. ನಗರದಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಮಳೆಯ ಪ್ರಮಾಣ ಮಾತ್ರ ಚಿಲ್ಲರೆ 2. 47 ಸೆಂಟಿ ಮೀಟರ್ ಎಂಬುದು ಸೋಜಿಗದ ವಿಚಾರ. ಇಷ್ಟು ಸಣ್ಣ ಮಳೆಗೆ ಬೆಂಗಳೂರು ಹೀಗಾಗಿದ್ದೇಕೆ? ಕಾರಣ ಅವೈಜ್ಞಾನಿಕ ‘ನಗರ ಯೋಜನೆ’ ನೀತಿಗಳನ್ನು ಬಿಟ್ಟು ಬೇರೇನೂ ಅಲ್ಲ. ಹಾಗೆ ನೋಡಿದರೆ “ಬೆಂಗಳೂರು ಗುಡ್ಡ ಪ್ರದೇಶದಲ್ಲಿದೆ. ಇಲ್ಲಿ ನೀರು..

    July 29, 2016
    ...
    ಫೋಕಸ್

    ಇದು ‘ಪತಿ- ಪತ್ನಿ’ ಸಂಬಂಧ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿ ಮರುಕಳಿಸಿದ ಅನುಬಂಧ!

    ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣ ನಿಧಾನವಾಗಿ ಕಾವೇರುತ್ತಿದೆ. ಬಲಾಢ್ಯ ರಾಷ್ಟ್ರದ ಮೊದಲ ಅಧ್ಯಕ್ಷೆಯಾಗಲು ಹೊರಟಿರುವ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಖಾಡಕ್ಕಿಳಿದಿದ್ದಾರೆ. ಪತಿ-ಪತ್ನಿಯರ ಜುಗಲ್ ಬಂದಿ ಪ್ರಚಾರ ಅಮೆರಿಕಾದಲ್ಲೀಗ ಸದ್ದು ಮಾಡುತ್ತಿದೆ. ಚುನಾವಣೆ ಸಮೀಪಿಸುತ್ತಿದೆ. ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ಪ್ರಚಾರಕ್ಕಿಳಿದಿದ್ದರೆ, ಆಡಳಿತರೂಢ ಡೆಮಾಕ್ರಾಟಿಕ್ ಪಕ್ಷದ ಪರವಾಗಿ ಹಿಲರಿ ಕ್ಲಿಂಟನ್ ಕಣಕ್ಕಿಳಿದ್ದಿದ್ದಾರೆ. ತಮ್ಮ ಸಹೋದ್ಯೋಗಿ ಪರ ಪ್ರಚಾರಕ್ಕೆ ಸ್ವತಃ ಅಧ್ಯಕ್ಷ ಬರಾಕ್ ಒಬಾಮ ಪ್ರಚಾರಕ್ಕಿಳಿದಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಸುದ್ದಿಯಾಗುತ್ತಿರುವುದು..

    July 27, 2016
    ...
    ಫೋಕಸ್

    ಸೇನಾಧಿಕಾರಿಗೆ ಕಾಶ್ಮೀರಿ ಯುವಕನ ಪ್ರತ್ಯುತ್ತರ: ‘ಮಕ್ಕಳನ್ನು ಕೊಲ್ಲುವುದು ದೇಶಭಕ್ತಿ ಅಲ್ಲ’!

    ಕಾಶ್ಮೀರದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿಯನ್ನು ಸೇನಾಪಡೆಗಳು ಹತ್ಯೆ ಮಾಡಿದ ನಂತರ ಕಣಿವೆಯಲ್ಲಿ ಮತ್ತೆ ಹಿಂಸೆ ಭುಗಿಲೆದ್ದಿದೆ. ಈ ಸಂದರ್ಭದಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಗೌರವ್ ಆರ್ಯ ಅವರು ಸತ್ತ ಬುರ್ಹನ್ ವನಿ ಅವರಿಗೆ ಒಂದು ಪತ್ರ ಬರೆದಿದ್ದರು. ಅದು ಅನೇಕರ ಪ್ರಶಂಸೆಗೆ ಒಳಗಾಗಿತ್ತು. ಈ ಪತ್ರವನ್ನು ಓದಿದ್ದ ಮುಂಬೈನಲ್ಲಿ ವಾಸಿಸುವ ಕಾಶ್ಮೀರಿ ಯುವಕ ವಸೀಂ ಖಾನ್ ಪತ್ರ ಬರೆದಿದ್ದ ಅಧಿಕಾರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾನೆ. ಅದರ ಪೂರ್ಣಪಾಠದ ಕನ್ನಡಾನುವಾದ ಇಲ್ಲಿದೆ… ಕನ್ನಡಕ್ಕೆ:..

    July 21, 2016
    ...
    ಫೋಕಸ್

    ಫ್ರಾನ್ಸ್ ವಿರುದ್ಧ ‘ಯುರೋ – 2016’ ಯುದ್ಧ ಗೆದ್ದ ಪೊರ್ಚುಗಲ್

    ಬಹು ನಿರೀಕ್ಷಿತ ‘ಯುರೋ ಕಪ್ -2016’ ಪೊರ್ಚುಗಲ್ ಪಾಲಾಗಿದೆ. ಭಾನುವಾರ (ಫ್ರಾನ್ಸ್ ಕಾಲಮಾನ) ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ನೇತೃತ್ವದ ಪೊರ್ಚುಗಲ್ ಅತಿಥೇಯ ಫ್ರಾನ್ಸ್ ವಿರುದ್ಧ 1-0 ಗೋಲ್ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿತು. ಈ ಮೂಲಕ ಯುರೋಪಿಯನ್ ಫೂಟ್ಬಾಲ್ ಜಗತ್ತಿನ ಹೊಸ ಅಧಿಪತಿಯಾಗಿ ಪೊರ್ಚುಗಲ್ ಮೂಡಿ ಬಂತು. ಪ್ಯಾರಿಸ್ನ ‘ಸ್ಟೇಡ್ ಡೆ ಫ್ರಾನ್ಸ್’ ಮೈದಾನದಲ್ಲಿ ಫೂಟ್ಬಾಲ್ ಫೈನಲ್ ಆರಂಭವಾಗಿತ್ತು. ಎಲ್ಲರ ಕಣ್ಣು ಇದ್ದಿದ್ದು ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೋ ರೊನಾಲ್ಡೋ ಮೇಲೆ; ಸ್ಟಾರ್..

    July 11, 2016
    ...
    ಫೋಕಸ್

    ವಿಮಾನದಲ್ಲಿಯೇ ರೋಚಕ ದರೋಡೆಯೊಂದನ್ನು ನಡೆಸಿದ ಆತ ಇವತ್ತಿಗೂ ನಿಗೂಢವಾಗಿಯೇ ಉಳಿದು ಹೋದ!

    ಧೂಮ್ ಸರಣಿ ಚಿತ್ರಗಳನ್ನು ನೋಡುತ್ತಿರುವ ತಲೆಮಾರು ಇದು. ಹೈಟೆಕ್ ಆಗಿ ದರೋಡೆ ಮಾಡುವುದು, ಕನ್ನ ಹಾಕುವುದು ಹಾಗೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡು ಹೋಗುವುದನ್ನು ರೋಚಕವಾಗಿ ತೋರಿಸಿದ ಚಿತ್ರಗಳವು. ಈ ಸಮಯದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವತ್ತಿಗೂ ತನಿಖಾ ಸಂಸ್ಥೆಗಳಿಗೆ ತಲೆಬಿಸಿ ಮಾಡುತ್ತಿರುವ, ನಾಲ್ಕು ದಶಕಗಳ ಹಿಂದೆಯೇ ಭಿನ್ನ ರೀತಿಯ ದರೋಡೆ ನಡೆಸಿದ ಒಬ್ಬ ವ್ಯಕ್ತಿ ಧೂಮ್ ಸಿನೆಮಾ ಚಿತ್ರಕತೆಯನ್ನೂ ಮೀರಿಸುವಂತಹ ನೈಜ ಕತೆಯೊಂದನ್ನು ಜಾಗತಿಕ ಅಪರಾಧಗಳ ಪಟ್ಟಿಯಲ್ಲಿ ಉಳಿಸಿ ಹೋಗಿದ್ದಾನೆ. ಆತನ ಹೆಸರು ಡ್ಯಾನ್ ಕೂಪರ್. ಮಾಧ್ಯಮಗಳ ವರದಿಯಿಂದಾಗಿ..

    May 30, 2016
    ...
    ಫೋಕಸ್

    ಬರೊಬ್ಬರಿ 256 ವರ್ಷ ಬದುಕಿದ ಈತ ಸಾಯುವ ಮುನ್ನ ಬಿಚ್ಚಿಟ್ಟಿದ್ದ ಆಯಸ್ಸಿನ ಸಿಕ್ರೇಟ್ !

    ಜಗತ್ತಿನಲ್ಲಿ ಮನುಷ್ಯರು ಅತೀ ಹೆಚ್ಚು ಅಂದರೆ ಎಷ್ಟು ವರ್ಷ ಬದುಕಬಹುದು? 110, 115… ಅಲ್ಲಾ.. ನಾವಿವತ್ತು ನಿಮಗೆ 256 ವರ್ಷ ಜೀವನ ಮಾಡಿದ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಸ್ತೀವಿ. ಅಂದಾಗೆ ಈತ ಪುರಾಣದ ಕಥೆಯ ಪಾತ್ರವಲ್ಲ ಅಥವಾ ಕಟ್ಟು ಕಥೆಯ ನಾಯಕ ಅಲ್ವೇ ಅಲ್ಲ. ಚೀನಾದ ಅತೀ ದೀರ್ಘ ಕಾಲ ಬದುಕಿದ ವ್ಯಕ್ತಿಯೊಬ್ಬನ ನೈಜ ಕಥೆ ಇದು. ಹೀಗೆ 256 ವರ್ಷಗಳ ಕಾಲ ಬದುಕಿದ ವ್ಯಕ್ತಿಯ ಹೆಸರು ಲಿ ಚಿಂಗ್ ಯೆನ್. 1930 ರಲ್ಲಿ ಚೀನಾದ ಚೆಂಗಾಡು ಯುನಿವರ್ಸಿಟಿಯ ಪ್ರೊಫೆಸರ್ ವು ಚುಂಗ್..

    May 27, 2016
    ...
    ಫೋಕಸ್

    ನಾವು ‘ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್’ ಅನ್ನುವ ಹೊತ್ತಿಗೆ ಅವರು ಚಾಲಕರಿಲ್ಲದ ಕಾರುಗಳ ಗುಂಗಿನಲ್ಲಿದ್ದಾರೆ!

    ಇಂದು ಬೆಂಗಳೂರಿನಲ್ಲಿ ಬಿಎಂಟಿಸಿ ನೇತೃತ್ವದಲ್ಲಿ ‘ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಂ’ ಜಾರಿಗೆ ತರಲು ಹೊರಟಿದೆ ಸರಕಾರ. ಹಾಗೆ ನೋಡಿದರೆ, ನಗರ ಸಾರಿಗೆ ಬಸ್ಗಳ ಪ್ರಯಾಣದ ವಿವರಗಳನ್ನು ಜನರಿಗೆ ನೀಡುವ ಈ ಯೋಜನೆ ‘ಐಟಿಎಸ್’ ಮೂಲ ಪರಿಕಲ್ಪನೆಯಲ್ಲಿ ಚಿಕ್ಕದೊಂದು ಭಾಗ ಅಷ್ಟೆ. ನಿಜಕ್ಕೂ ಐಟಿಎಸ್ ಎಂದರೇನು? ಇದರಿಂದ ಜನರಿಗೆ ಆಗುವ ಅನುಕೂಲಗಳೇನು ಎಂಬುದು ಬೇರೆಯದೇ ಕತೆ. ಸದ್ಯ ನಗರ ಸಾರಿಗೆ ವಿಚಾರದಲ್ಲಿ ವಿದೇಶಗಳಲ್ಲಿ ನಡೆಯುತ್ತಿರುವ ಹಲವು ಸಂಶೋಧನೆಗಳ ಪೈಕಿ ದುಬೈನ ಈ ಪ್ರಯೋಗದ ಕುರಿತು ಮಾಹಿತಿ ನೀಡುವುದು ಈ ವರದಿಯ ಉದ್ದೇಶ…

    May 25, 2016
    ...
    ಫೋಕಸ್

    ಹಿತ್ತಲಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಈ ಕಾರಣಗಳಿಗಾದರೂ ಮಿಸ್ ಮಾಡ್ಕೊಬೇಡಿ!

    ರಾಜ್ಯದಲ್ಲಿ ಬಿರುಬಿಸಿಲಿನ ಬರದ ಛಾಯೆ ನಿಧಾನಕ್ಕೆ ಕರಗುತ್ತಿದೆ. ಬಿದ್ದ ಮಳೆ ಹನಿಗಳು ಧರೆಯನ್ನು ತಂಪಾಗಿಸುವ ಪ್ರಯತ್ನದಲ್ಲಿವೆ. ಪ್ರಕೃತಿಯಲ್ಲಿ ನವ ಚೈತನ್ಯ ಗೋಚರವಾಗುತ್ತಿದೆ. ಚಿಗುರೆಲೆಗಳ ಹಸಿರು ಹೂವುಗಳ ಸೊಬಗು ಪ್ರಕೃತಿಯ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಪ್ರಕೃತಿಯ  ಈ ಚೆಲುವಿಗೆ ಮಾದಕ ಕಳೆಕೊಟ್ಟಿದ್ದು ಮಾತ್ರ ಮಾವು ಹಾಗೂ ಹಲಸಿನ ಹಣ್ಣುಗಳು. ಹಣ್ಣುಗಳ ರಾಜ ಎಂಬ  ಹೆಗ್ಗಳಿಕೆ ಮಾವಿನ ಹಣ್ಣಿನದ್ದು. ಆದರೆ ಬಡವರ ಪಾಲಿಗೆ ಪೋಷಕಾಂಶಗಳ ಕಣಜವಾಗಿರುವುದು ಮಾತ್ರ ಹಲಸಿನ ಹಣ್ಣು. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಈ ಹಲಸು ಹಸಿದವರ ಪಾಲಿಗೆ ನಿಜವಾದ..

    May 23, 2016
    ...
    ಫೋಕಸ್

    ಆ ಹೃದಯ ಬಡಿತ ನಿಲ್ಲಿಸಿದ್ದು ನಿಮಗಾಗಿ..!

    ಲೆದರ್ ಬ್ಯಾಗ್, ಲೆದರ್ ಬೆಲ್ಟ್, ಲೆದರ್ ಜಾಕೇಟ್, ಶೂಸ್ ಹೀಗೆ ಚರ್ಮದಿಂದ ತಯಾರಿಸಿರುವ ವಸ್ತುಗಳೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ. ಅದರಲ್ಲೂ ಇತ್ತೀಚೆಗಂತೂ ಚರ್ಮದ ವಸ್ತುಗಳೆಂದರೆ ಒಂದು ರೀತಿಯ ಟ್ರೆಂಡ್ ಆಗಿ ಬಿಟ್ಟಿದೆ. ಹೀಗಾಗಿ ಮಾರುಕಟ್ಟೆಯಲ್ಲೂ ಈ ರೀತಿಯ ಚರ್ಮದಿಂದ ತಯಾರಿಸಿರುವ ವಸ್ತುಗಳಿಗೆ ಭಾರಿ ಬೇಡಿಕೆ ಇದೆ.   ಚರ್ಮದಿಂದ ತಯಾರಿಸಿರುವ ವಸ್ತುಗಳಿಗೆ ಬೇಡಿಕೇನೋ ಇರುವುದು ನಿಜ. ಆದರೆ ಆ ಸುಂದರವಾದ ಬ್ಯಾಗುಗಳು, ಬೆಲ್ಟ್’ಗಳು ತಯಾರಾಗುವ ಬಗೆಯನ್ನು ನಾವು ಯೋಚನೆ ಮಾಡುವುದಿಲ್ಲ. ಯಾಕೆಂದರೆ ನಮ್ಮ ಸೌಂದರ್ಯಕ್ಕೆ ಭೂಷಣವಾಗುವ ಈ ಎಲ್ಲಾ ವಸ್ತುಗಳಿಗಾಗಿ..

    May 13, 2016

FOOT PRINT

Top