An unconventional News Portal.

  ...

  ಬಾಹ್ಯಾಕಾಶ ನಿಲ್ದಾಣಕ್ಕೆ ಚೀನಿಯರ ಲಗ್ಗೆ: ಅಮೆರಿಕಾ ವಿರುದ್ದ ಸಡ್ಡು ಹೊಡೆಯಲು ಹೊಸ ಸಾಹಸ!

  ಚೀನಾ ಇದೇ ಮೊದಲ ಬಾರಿಗೆ ಇಬ್ಬರು ಅಂತರಿಕ್ಷಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ‘ಶೆಂಜೂ 11’ ಹೆಸರಿನ ಬಾಹ್ಯಾಕಾಶ ನೌಕೆ ಇಬ್ಬರು ಗಗನಯಾನಿಗಳನ್ನು ಹೊತ್ತು ಉತ್ತರ ಚೀನಾದ ‘ಜಿಕ್ವನ್ ಉಪಗ್ರಹ ಉಡಾವಣಾ ಕೇಂದ್ರ’ದಿಂದ ನಭಕ್ಕೆ ಚಿಮ್ಮಿತು. ಸೋಮವಾರ ಮುಂಜಾನೆ ಸ್ಥಳೀಯ ಕಾಲಮಾನ 7:30ಕ್ಕೆ ‘ಲಾಂಗ್ ಮಾರ್ಸ್-2ಎಫ್’ ಹೆಸರಿನ ರಾಕೆಟ್ ಶೇಂಜೂ 11ನ್ನು ಹೊತ್ತೊಯ್ಯಿತು. ಈ ಇಬ್ಬರ ಗಗನಯಾನಿಗಳು ಚೀನಾದ ‘ತಿಯಾಂಗಾಂಗ್ ಬಾಹ್ಯಾಕಾಶ ಕೇಂದ್ರ’ದಲ್ಲಿ ಮೂವತ್ತು ದಿನ ಕಳೆದು ವಾಪಸ್ಸು ಬರಲಿದ್ದಾರೆ. ಇದು ಚೀನಾದ ಅಂತರಿಕ್ಷಯಾನಿಗಳ ಸುದೀರ್ಘ ಗಗನಯಾತ್ರೆಯಾಗಲಿದೆ. ಭವಿಷ್ಯದಲ್ಲಿ ಚಂದ್ರ […]

  October 17, 2016
  ...

  ಮಂಗಳನ ಮೇಲೆ ಮತ್ತೊಂದು ‘ಲ್ಯಾಂಡರ್’; ಕೆಂಪು ಗ್ರಹದ ಅಧಿಪತ್ಯಕ್ಕೆ ಹೆಚ್ಚಿದ ಪೈಪೋಟಿ!

  ಐತಿಹಾಸಿಕ ಸಾಧನೆಗೆ ವಿಶ್ವದ ಪ್ರಮುಖ ಎರಡು ಬಾಹ್ಯಾಕಾಶ ಸಂಸ್ಥೆಗಳು ಸಿದ್ಧವಾಗಿವೆ. ಯುರೋಪ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಮುಂದಿನ ವಾರ ಮಂಗಳ ಗ್ರಹದ ಮೇಲೆ ತಮ್ಮ ಲ್ಯಾಂಡರ್ಗಳನ್ನು ಇಳಿಸಲಿವೆ. ಈ ಮೂಲಕ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ನಂತರ ಈ ಸಾಧನೆ ಮಾಡಿದ ಮೊದಲ ಬಾಹ್ಯಾಕಾಶ ಸಂಸ್ಥೆಗಳು ಎಂಬ ಹಿರಿಮೆಗೆ ಇವು ಪಾತ್ರವಾಗಲಿವೆ. ‘ರಾಸ್ಕಾಸ್ಮೋಸ್ ಮಿಷನ್’ ಹೆಸರಲ್ಲಿ ಅಕ್ಟೋಬರ್ 19ರ ಬುಧವಾರ ಈ ಎರಡು ಬಾಹ್ಯಾಕಾಶ ಸಂಸ್ಥೆಗಳು ಲ್ಯಾಂಡರನ್ನು ಇಳಿಸಲಿವೆ. ಒಮ್ಮೆ ಲ್ಯಾಂಡರ್ ಕೆಂಪುಗ್ರಹದ ಮೇಲೆ […]

  October 12, 2016
  ...

  ‘ಮಾರ್ಟಿಯನ್ ಗಾರ್ಡನ್’: ಮಂಗಳನ ಮೇಲೊಂದು ಮನೆಯ ಮಾಡಿ; ತರಕಾರಿ ಬೆಳೆಯಲು ಹೊರಟರು!

  ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿ ಕೊಂಡಾತ ಕೊನೆಗೆ ಅಲ್ಲಿಯೇ ಆಲೂಗಡ್ಡೆ ಬೆಳೆಯುವ ಕತೆಯನ್ನು ಹೊಂದಿದ್ದ ‘ದಿ ಮಾರ್ಟಿಯನ್’ ಎಂಬ ಹಾಲಿವುಡ್ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಆ ರೀಲ್ ಕತೆಯಂತೆಯೇ ರಿಯಲ್ ಲೈಫಿನಲ್ಲಿ ಅಂಥಹದ್ದೊಂದು ಸಾಧ್ಯತೆ ನಿಜವಾಗಿಸಲು ವಿಜ್ಞಾನಿಗಳೀಗ ಹೊರಟಿದ್ದಾರೆ. ಮುಂದಿನ 10-15 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಉದ್ಯಮಿ ಎಲೊನ್ ಮಸ್ಕ್ ಯೋಜನೆ ರೂಪಿಸಿದ್ದಾರೆ. ಹಾಗೆ ಕಳುಹಿಸಿದವರು ವಾಪಾಸ್ ಬರುವ ಮಾತೇ ಇಲ್ಲ. ಅದಕ್ಕಾಗಿ ಆಹಾರ ವಿಜ್ಞಾನಿಗಳೀಗ ಅಂತರಿಕ್ಷಯಾನಿಗಳು ಕೆಂಪು ಗ್ರಹದಲ್ಲಿ ಏನೇನು ಬೆಳೆಯಬಹುದು ಎಂಬ ಪಟ್ಟಿ […]

  October 10, 2016
  ...

  ಅಮೆರಿಕಾ ಅಧ್ಯಕ್ಷ ಪಟ್ಟಕ್ಕೆ ಹರಿಯುತ್ತಿರುವ ಹಣದ ಹೊಳೆ ಮತ್ತು ಟಿವಿ ರೇಟಿಂಗ್!

  ವಿಶ್ವದ ಅತಿ ಹೆಚ್ಚು ಅಧಿಕಾರ ಹೊಂದಿರುವ ಕಚೇರಿ ಎಂದು ಕರೆಸಿಕೊಳ್ಳುವ ಅಮೆರಿಕಾ ಅಧ್ಯಕ್ಷೀಯ ಪಟ್ಟಕ್ಕಾಗಿ ನಡೆಯುತ್ತಿರುವ ಚುನಾವಣಾ ಪೂರ್ವ ಪ್ರಚಾರದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಸದ್ಯದ ಅಂತಾರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ಈವರೆಗೆ 70.8 ಕೋಟಿ ರೂಪಾಯಿಗಳನ್ನು ಅಧ್ಯಕ್ಷೀಯ ಚುನಾವಣೆಯ ಮುಂಚೂಣಿಯಲ್ಲಿರುವ ಇಬ್ಬರು ಅಭ್ಯರ್ಥಿಗಳು ಚಂದಾ ರೂಪದಲ್ಲಿ ಸಂಗ್ರಹಿಸಿದ್ದಾರೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ಡೋನಾಲ್ಡ್ ಟ್ರಂಪ್ ಎಂಬ ಶ್ರೀಮಂತ ಕಲೆ ಹಾಕಿರುವ ಚಂದಾ ಹಣದ ಮೊತ್ತ 18. 2 ಕೋಟಿ ರೂಪಾಯಿಗಳು. ರಿಪಬ್ಲಿಕನ್ ಪಕ್ಷದ ಹಿಲರಿ ಕ್ಲಿಂಟನ್ […]

  October 3, 2016
  ...

  ‘ಸೃಷ್ಠಿಯ ಕೌತುಕ’: ಒಬ್ಬ ತಂದೆ, ಇಬ್ಬರು ತಾಯಂದಿರಿಗೆ ಹುಟ್ಟಿದ ಜಗತ್ತಿನ ಮೊದಲ ಮಗು!

  ಒಂದು ಮಗುವಿಗೆ ಒಬ್ಬ ತಂದೆ, ಒಬ್ಬರು ತಾಯಿ ಇರ್ತಾರೆ. ಆದರೆ ಈ ಮಗುವಿಗೆ ಮೂವರು ತಂದೆ- ತಾಯಿ ಇರಲು ಸಾಧ್ಯನಾ? ಹೀಗೊಂದು ಸಾಧ್ಯತೆಯನ್ನು ವಿಜ್ಞಾನ ನಿಜವಾಗಿಸಿದೆ. ತಂದೆ- ತಾಯಿ ಹಾಗೂ ಮತ್ತೊಬ್ಬರ ಜೆನೆಟಿಕ್ ಕೋಡ್ (ಅನುವಂಶೀಯ) ಬಳಸಿಕೊಂಡು ಜಗತ್ತಿನ ಮೊದಲ ಮಗು ಜನ್ಮ ತಾಳಿದೆ. ಅದಕ್ಕೀಗ ಐದು ತಿಂಗಳು. ಜೋರ್ಡಾನ್ ಮೂಲದ ಈ ಮಗುವಿನ ತಾಯಿಯ ಜೀನ್ಸ್’ನಲ್ಲಿ ರೋಗದ ಲಕ್ಷಣಗಳಿದ್ದವು. ಇದರಿಂದಾಗಿ ವಿಶೇಷ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಿಕೊಂಡು ಮಗುವಿನ ಭ್ರೂಣವನ್ನು ಸೃಷ್ಟಿಸಲಾಗಿತ್ತು. ಇದಕ್ಕಾಗಿ ತಂದೆ, ತಾಯಿ ಅಲ್ಲದೆ ಮತ್ತೊಬ್ಬರ ಡಿಎನ್ಎಯನ್ನು […]

  September 28, 2016
  ...

  ‘ಹಂಟಿಂಗ್ ಏಲಿಯನ್ಸ್’: ಅನ್ಯಗ್ರಹ ಜೀವಿಗಳ ಪತ್ತೆಗೆ ಚೀನಾ ಹೊಸ ಸಾಹಸ!

  ತಾನು ಮಾಡಿದ್ದನ್ನು ಜಗತ್ತಿನಲ್ಲಿರುವ ಯಾರೂ ಮಾಡಿರಬಾರದು; ಇದು ಚೀನಾದ ಪಾಲಿಸಿ. ಇದೇ ಚೀನಾ ಈ ಬಾರಿ ಏಲಿಯನ್ಗಳ ಹುಡುಕಾಟಕ್ಕೆ ಕೈ ಹಾಕಿದೆ. ಅದಕ್ಕಾಗಿ ಬಾಣಲೆಯಾಕಾರದ ಬೃಹತ್ ‘ರೇಡಿಯೋ ಟೆಲಿಸ್ಕೋಪ್’ ನಿರ್ಮಾಣ ಮಾಡಿದೆ. ಅನ್ಯಗ್ರಹಗಳಿಂದ ಬರಬಹುದಾದ ರೇಡಿಯೋ ತರಂಗಗಳ ರೂಪದ ಸಂದೇಶವನ್ನು ಸ್ವೀಕರಿಸುವುದು ಈ ಟೆಲಿಸ್ಕೋಪಿನ ಕೆಲಸ. ಭಾನುವಾರ ಈ ರೇಡಿಯೋ ಟೆಲಿಸ್ಕೋಪಿಗೆ ಚಾಲನೆ ನೀಡಲಾಯಿತು. ನೈರುತ್ಯ ಚೀನಾದ ಗುಯ್ಚೋ ಪ್ರಾಂತ್ಯದ ದಟ್ಟ ಕಾಡಿನ ಮಧ್ಯೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ರೇಡಿಯೋ ಟೆಲಿಸ್ಕೋಪ್ ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಚೀನಾದ ಬಾಹ್ಕಾಕಾಶ ಸಂಸ್ಥೆಯ […]

  September 26, 2016
  ...

  ಜಿಯೋ ‘ಸೈಡ್ ಎಫೆಕ್ಟ್ಸ್’: ಹ್ಯಾಂಡ್ ಸೆಟ್ ಮಾರಾಟ ಬಿಡಿ; ಸರ್ವಿಸ್ ಕ್ಷೇತ್ರವೂ ಉಳಿಯುವುದು ಕಷ್ಟ!

  ಜಿಯೋ ಆಗಮನ ದೇಶದಾದ್ಯಂತ ಡೇಟಾ ಕ್ಷೇತ್ರದಲ್ಲಿ ಒಂದಷ್ಟು ಪರಿಣಾಮಗಳನ್ನು ಮೂಡಿಸುತ್ತಿದೆ. ಉಚಿತ ಡಾಟಾ ಸಹಜವಾಗಿಯೇ 4ಜಿ ಮೊಬೈಲ್ಗಳಿಗೆ ಶುಕ್ರ ದೆಸೆ ಕುದುರಿದೆ. ಹ್ಯಾಂಡ್ ಸೆಟ್ಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಅದರ ಆಳ ಅಗಲಗಳನ್ನು ತಿಳಿದುಕೊಳ್ಳಲು ‘ಸಮಾಚಾರ’ ಬೆಂಗಳೂರಿನ ಪ್ರಖ್ಯಾತ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ರಸ್ತೆ ‘ಎಸ್.ಪಿ ರೋಡ್’ಗೆ ಭೇಟಿ ನೀಡಿದಾಗ ಸಿಕ್ಕ ಮಾಹಿತಿಗಳಿವು. ಆಗಿನ್ನೂ ಬೆಳಗ್ಗೆ 10 ಗಂಟೆ. ಅಂಗಡಿಗಳ ಶಟರು ಮೇಲೇರುತ್ತಿತ್ತಷ್ಟೇ. ನಿಂತಿದ್ದ ಬೈಕ್ ಮೇಲಿನ ಹುಡುಗ “ಯಾವುದು ಬೇಕು.. 4ಜಿ.. 3ಜಿ.. ರಿಪೇರಿ…” ಎಂದು ಕರೆಯುತ್ತಿದ್ದ. ದಯಾಳ್ […]

  September 25, 2016
  ...

  ‘ನನ್ನ ಮೊದಲ ಕರ್ಫ್ಯೂ’: ಬಿಕೋ ಎಂದ ಬೆಂಗಳೂರನ್ನು ನೋಡಿದ್ದು ಇದೇ ಮೊದಲು!

  ರವಿಕುಮಾರ್, ಶಿವಮೊಗ್ಗ ಬೆಂಗಳೂರಿಗೆ ಬಂದು ಒಂದು ದಶಕದ ನಂತರ ‘ಕರ್ಫ್ಯೂ’ ಎಂದರೆ ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗುತ್ತಿದ್ದೇನೆ. ನಾನು ಬೆಂಗಳೂರಿಗೆ ಬಂದ ದಿನದಿಂದಲೂ ಹೆಚ್ಚು ಒಡನಾಟ ಒಟ್ಟುಕೊಂಡ ಏರಿಯಾಗಳೀಗ ಹೊತ್ತಿ ಉರಿಯುತ್ತಿವೆ. ಅಲ್ಲೆಲ್ಲಾ ‘ಕಂಡಲ್ಲಿ ಗುಂಡು’ ಜಾರಿಯಾಗಿದೆ. ಲಗ್ಗೆರೆಯ ರಿಂಗ್ ರೋಡಿನಲ್ಲಿ ಮೊದಲ ಬಾರಿಗೆ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಚಿತ್ರಣ ಕಾಣಿಸುತ್ತಿದೆ. ರಸ್ತೆಯ ಡಿವೈಡರ್ ಮೇಲೆ ನೀಟಾಗಿ ಜೋಡಿಸಿಟ್ಟಿದ್ದ ಹೂವಿನ ಕುಂಡಗಳು ಮಧ್ಯೆದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸುಟ್ಟು ಕರಕಲಾದ ಬಸ್ಗಳು, ಅಗ್ನಿ ಶಾಮಕ ದಳದ ವಾಹನಗಳು ಪಳಯುಳಿಕೆಗಳಂತೆ ಇನ್ನೂ ಅಲ್ಲಿಯೇ ನಿಂತಿವೆ. ಅಂಗಡಿ […]

  September 13, 2016
  ...

  ‘ಡಾಗ್ ಮೈ ಲವ್’: ಪ್ರಪಂಚ ಮರೆಸಿದ್ದ ಶ್ವಾನ ಪ್ರೇಮ ಮತ್ತು ನೋವಿನ ನಿರ್ಗಮನ!

  ಮಂಜುಳಾ ಮಾಸ್ತಿಕಟ್ಟೆ ಸಣ್ಣವಳಿದ್ದಾಗಲಿಂದಲೂ ಹಾಗೆ; ನಾಯಿ ಮರಿ ಅಂದರೆ ಅದೇನೋ ಪ್ರೀತಿ. ಎಲ್ಲೇ ನಾಯಿ ಮರಿ ಕಂಡರೂ ಮನೆಗೆ ತರುತ್ತಿದ್ದೆವು. ಅಮ್ಮ ಬೈದರೂ ಪರವಾಗಿಲ್ಲ, ಸಿಕ್ಕ ನಾಯಿಯಂತೂ ಮನೆ ತನಕ ಬರುತ್ತಿತ್ತು. ಅವುಗಳ ಜೊತೆಯೇ ಆಟ, ಕುಸ್ತಿ ಎಲ್ಲವೂ ನಡೀತಿತ್ತು. ಹಾಗೆ ನಾವೊಂತರ ಬೆಳೆದಿದ್ದೇ, ಬಾಲ್ಯದಲ್ಲಿ ಗಟ್ಟಿಯಾದ ಸಂಬಂಧವೊಂದನ್ನು ಬೆಳೆಸಿಕೊಂಡಿದ್ದು ನಾಯಿಗಳ ಜೊತೆಯಲ್ಲಿ. ನಮ್ಮೂರಲ್ಲಿ ಪ್ರತಿ ವರ್ಷ ನಾಯಿ ಸಾಯಿಸುವವರು ಬರುತ್ತಿದ್ದರು, ಅವರಿಗೆ ನಾವು ಹಾಕದೇ ಇರೋ ಶಾಪವೇ ಇಲ್ಲ. ಒಮ್ಮೆ ನನ್ನ ಪ್ರೀತಿಯ ಟೈಗರ್ ಅವರ ಬಲೆಗೆ […]

  September 10, 2016
  ...

  ಮದುವೆಗೆ ಹಣ ಹೊಂದಿಸಲು ಹೊಸ ಐಡಿಯಾ: ಸಿಲಿಕಾನ್ ಸಿಟಿಯಲ್ಲಿ ಹುಟ್ಟಿಕೊಂಡ ‘ವೆಡ್ಡಿಂಗ್ ಟೂರಿಸಂ’!

  ಮದುವೆ ಎಂಬುದು ಖಾಸಗಿ ವಿಚಾರ; ಅತ್ಯಂತ ವೈಯುಕ್ತಿಕವಾದುದ್ದು. ಪ್ರತಿಯೊಬ್ಬರಿಗೂ ಅವರ ಮದುವೆಯನ್ನು ಹೇಗೆ ಆಗಬೇಕು ಎಂಬ ಕುರಿತು ಅವರದ್ದೇ ಆದ ಆಲೋಚನೆಗಳು ಇರುತ್ತದೆ. ಈ ಆಲೋಚನೆಗಳು ಹುಟ್ಟುವುದು ಸಾಮಾಜಿಕ ಪರಿಸರ ಹೇರುವ ಒತ್ತಡಗಳಿಂದ ಎಂಬುದನ್ನು ಗಮನಿಸಬೇಕಿದೆ. ಹೀಗಾಗಿಯೇ, ಅದ್ದೂರಿ ಮದುವೆಗಳು ಇಷ್ಟವಿದ್ದೋ, ಸಾಮರ್ಥ್ಯವಿದ್ದೋ ಆಯೋಜನೆಗೊಳ್ಳುತ್ತವೆ ಎನ್ನುವಂತಿಲ್ಲ. ಹೀಗೆ, ಆಗುವ ಮದುವೆಗಳಿಗೆ ಹಣ ಹೊಂದಿಸುವುದಕ್ಕಾಗಿಯೇ ಹೊಸ ಐಡಿಯಾ ಒಂದು ಹುಟ್ಟಿಕೊಂಡಿದೆ. ಅದು ಮದುವೆಯ ಟಿಕೆಟುಗಳನ್ನು ಮಾರುವ ಯೋಜನೆ! ಹೌದು, ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಮದುವೆಗೂ ಟಿಕೆಟ್ ಇಟ್ಟು, ಅದನ್ನು ಮಾರುವ ಮೂಲಕ ನೀವು […]

  September 10, 2016

Top