An unconventional News Portal.

ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

  ...
  ಫೋಕಸ್

  ‘ರಜನೀಕಾಂತ್ ರಾಜಕೀಯ ಎಂಟ್ರಿ’: ತಮಿಳುನಾಡು ಪಾಲಿಟಿಕ್ಸ್‌ ಮತ್ತು ಬಸ್‌ ಕಂಡಕ್ಟರ್‌ ಗಾಯಕ್‌ವಾಡ್

  ನಟ ರಜನೀಕಾಂತ್ ಏನು ಮಾಡಿದರೂ ಸುದ್ದಿಯಲ್ಲಿರುತ್ತಾರೆ.ಅವರೊಂದು ಸಿನಿಮಾ ಮಾಡುತ್ತಾರೆಂದರೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ತಮ್ಮ ವಿಚಿತ್ರ ಮ್ಯಾನರಿಸಂನ ಮೂಲಕವೇ ಚಿತ್ರರಂಗದಲ್ಲಿ ಮನೆಮಾತಾಗಿರುವ ರಜನೀಕಾಂತ್‍ಗಿರುವಷ್ಟು ದಂತಕತೆಗಳೂ ಮತ್ತೊಬ್ಬ ನಟನಿಗೆ ಇಲ್ಲ. ನಟ, ಪಂಚಿಂಗ್ ಡೈಲಾಗ್, ವಿಚಿತ್ರ ಸ್ಟೈಲ್‌ಗಳ ಮೂಲಕ ತಮಿಳುನಾಡು ಮಾತ್ರವಲ್ಲದೇ, ಇಡೀ ಭಾರತೀಯ ಚಿತ್ರರಂಗದಲ್ಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಜನೀಕಾಂತ್ ಅವರ ಲೇಟೆಸ್ಟ್ ನ್ಯೂಸ್ ರಾಜಕೀಯ ಪ್ರವೇಶ. ಬಹುದಿನಗಳ ವದಂತಿಯನ್ನು ನಿಜ ಮಾಡಿದ ರಜನೀಕಾಂತ್, ಯಾಕಾಗಿ ತಾನು ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. “ಕಳೆದ..

  January 2, 2018
  ...
  ಫೋಕಸ್

  ಕೊರೆಗಾಂವ್ ದಲಿತ ಯೋಧರ ಹೋರಾಟಕ್ಕೆ 2 ಶತಮಾನ: ವಿಜಯೋತ್ಸವ ನರಬಲಿಯಲ್ಲಿ ಅವಸಾನ

  ಭೀಮಾ ಕೋರೆಂಗಾವ್ ಯುದ್ಧಕ್ಕೆ 200 ವರ್ಷಗಳಾದ ಸ್ಮರಣಾರ್ಥ, ಲಕ್ಷಾಂತರ ಜನ ದಲಿತರು ನಿನ್ನೆ ಕೋರೆಂಗಾವ್‌ನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾಗ, ದಲಿತರ ಮೇಲೆ ಮರಾಠಾ ಗುಂಪುಗಳು ದಾಳಿ ನಡೆಸಿದದ್ದು, ರಾಹುಲ್ ಎಂಬ 28 ವರ್ಷವ ಯುವಕನನ್ನು ಈ ಗಲಭೆ ಬಲಿ ತೆಗೆದುಕೊಂಡಿದೆ. ಹಲವಾರು ಜನ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟಕ್ಕೆ ಸುಮಾರು 50 ವಾಹನಗಳು ಜಖಂಗೊಂಡಿದ್ದು, ಈ ಬಾರಿ ವಿಜಯ ದಿವಸದ ಆಚರಣೆಯು ಕಿಡಿಗೇಡಿಗಳ ಅಟ್ಟಹಾಸದಿಂದ ನರಬಲಿಯಲ್ಲಿ ಅವಸಾನಗೊಂಡಿದೆ. “ಕೊರೆಗಾಂವ್ ನಗರದಲ್ಲಿ ಸ್ಥಾಪಿಸಲಾಗಿರುವ ಜಯ ಸ್ತಂಭದ ಬಳಿ ವಾತಾವರಣ..

  January 1, 2018
  ...
  ಫೋಕಸ್

  ನಿರಾಶ್ರಿತರ ಶಿಬಿರದಲ್ಲಿ ನಡೀತು ‘ನಿಖ್ಹಾ’; ಜಗತ್ತಿನ ಗಮನ ಸೆಳೆಯಿತು ರೋಹಿಂಗ್ಯಾ ಜೋಡಿಯ ಹೊಸ ಹೆಜ್ಜೆ

  ಮದುವೆ ಅನ್ನೋದು ಎರಡು ಜೀವಗಳನ್ನ ಬೆಸೆಯುವ ಮಧುರ ಸಂಬಂಧ ಅಂತಾ ಸಮಾಜ ನಂಬಿದೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾ ನಂಬುವವರೂ ಇದ್ದಾರೆ. ಜನ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾಗ ಮದುವೆ ಅನ್ನೋ ಬಂಧನಕ್ಕೆ ಒಳಗಾಗೋದು ಸಾಮಾನ್ಯ. ಮದುವೆ ಆಗಬೇಕು ಅಂದರೆ ಉತ್ತಮ ನೌಕರಿ ಸಿಗಬೇಕು ಅಂತಾ ಕಾಯುವವರೂ ಇದ್ದಾರೆ. ಆದರೆ, ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ನಡೆದ ಈ ಮದುವೆ ಎಲ್ಲರಿಗೂ ಅಚ್ಚರಿ ತಂದಿದೆ. ಬದುಕಿನ ಅಸ್ತಿತ್ವವೇ ಅಲುಗಾಡುತ್ತಿರುವ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ ವಿಶ್ವದ ಕುತೂಹಲದ ಕೇಂದ್ರವಾಗಿದೆ. ಸೀರೆಗಳಿಂದ ಸುತ್ತುವರಿದಿರುವ ಪುಟ್ಟ..

  December 31, 2017
  ...
  ಫೋಕಸ್

  ‘ರುಸಾರಿ’ ಉಸಾಬರಿ ಸಾಕಿನ್ನು…: ಇರಾನ್ ಮಹಿಳೆಯರಿಗೆ ಅಧ್ಯಕ್ಷರ ನ್ಯೂ ಇಯರ್ ಗಿಫ್ಟ್‌

  ಇರಾನಿನ ಸುಧಾರಣಾವಾದಿ ಮನಸ್ಥಿತಿಯ ಅಧ್ಯಕ್ಷ ಹಸ್ಸನ್ ರೌಹಾನಿ ಕೈಗೊಂಡಿರುವ ನಿರ್ಧಾರ ವಿಶ್ವದೆಲ್ಲೆಡೆ ಅಚ್ಚರಿ ಕಾರಣವಾಗಿದೆ. ದೇಶದಲ್ಲಿ ಮಹಿಳೆಯರ ಉಡುಪುಗಳ ಮೇಲಿದ್ದ ನಿರ್ಧಾರವನ್ನು ಸಡಿಲಿಸಿರುವ ರೌಹಾನಿ, ಲಿಂಗ ಸಮಾನ ವಸ್ತ್ರ ಸಂಹಿತೆ ಕಡೆಗೆ ಹೆಜ್ಜೆ ಮುಂದಿಟ್ಟಿದ್ದಾರೆ. ಸದ್ಯ ಇರಾನ್‌ ಒಳಗೆ ನಡೆಯುತ್ತಿರುವ ಆಂತರಿಕ ಪ್ರತಿರೋಧ, ಪ್ರತಿಭಟನೆಗಳ ನಡುವೆ, ವರ್ಷದ ಕೊನೆಯಲ್ಲಿ ಅರಬ್‌ ದೇಶವೊಂದರಿಂದ ಸಂತಸದ ಸುದ್ದಿ ಬೀಳಲು ಕಾರಣರಾಗಿದ್ದಾರೆ. ಇರಾನಿನಲ್ಲಿದ್ದ ವಸ್ತ್ರಸಂಹಿತೆಯ ಪ್ರಕಾರ ಮಹಿಳೆಯರು ಮನೆಯಿಂದ ಹೊರಬರುವ ಮುನ್ನ ‘ರುಸಾರಿ’ ಎಂಬ ಹಿಜಾಬ್ ತರಹದ ಬಟ್ಟೆಯನ್ನು, ‘ಮಂಟಾವು’ ಹೆಸರಿನ ಉದ್ದ..

  December 30, 2017
  ...
  ಫೋಕಸ್

  ‘ಕೂಲಿಗೆ ಟಾಂಗ್ ಕೊಟ್ಟ ಟ್ರಾಲಿ’: ಸಿಟಿ ರೈಲ್ವೆ ಸ್ಟೇಷನ್ ಕೂಲಿಗಳ ಬಗ್ಗೆ ನಿಮಗೆಷ್ಟು ಗೊತ್ತು?

  “ಬೆಂಗಳೂರಿಗೆ ಬಂದು ಹೋಗುವ ರೈಲುಗಳ ಸಂಖ್ಯೆ ಹೆಚ್ಚಾಗಿವೆ. ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಜೊತೆಗೆ ರೈಲ್ವೆ ವಿಭಾಗದ ಆದಾಯ ಹೆಚ್ಚಾಗಿದೆ. ಹೀಗಾಗಿ ನಮ್ಮ ಕೆಲಸವೂ ಹೆಚ್ಚಾಗಿ, ಆದಾಯವೂ ಹೆಚ್ಚಾಗಿರಬೇಕು ಅಂದುಕೊಳ್ಳಬೇಡಿ. ನಮ್ಮ ಆದಾಯ ಮೊದಲಿಗಿಂತಲೂ ಈಗ ಕಡಿಮೆ ಆಗಿದೆ,” ಅಂದರು ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಕೂಲಿ ಮಾಡುವ ಪೆದ್ದಣ್ಣ. ಬೃಹತ್ ನಗರವಾಗಿ ಬೆಳೆದಿರುವ ಬೆಂಗಳೂರು ನಾನಾ ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಪ್ರದೇಶಗಳ ಜನರಿಗೆ ಇಂದು ನೆಲೆ ನೀಡಿದೆ. ಕೋಟಿ ಮೀರಿರುವ ಇಲ್ಲಿನ ಜನರಿಗೆ ತಮ್ಮ ಬೇರುಗಳಿಗೆ..

  December 25, 2017
  ...
  ಫೋಕಸ್

  ಕಣ್ಣು ಕಳೆದುಕೊಂಡ ಮಗುವಿನ ಚಿತ್ರ ವೈರಲ್; ಸಿರಿಯಾದ ಅಮಾಯಕರ ಬಲಿಗೆ ಕೊನೆ ಎಂದು?

  ಸಿರಿಯಾದ ಮಗುವಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾವಿಗೀಡಾದ ತನ್ನ ತಾಯಿ ಮತ್ತುಎಡಗಣ್ಣನ್ನು ಕಳೆದುಕೊಂಡ ಮಗುವಿನ ಚಿತ್ರವು ವಿಶ್ವದಾದ್ಯಂತ ಜನರ ಗಮನವನ್ನು ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಮಗುವಿನ ಹೆಸರು ಕರೀಮ್. ಕೇವಲ ಮೂರು ತಿಂಗಳ ಈ ಮಗು ತನ್ನ ಎಡಗಣ್ಣನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲದೆ ಅದರ ತಲೆ ಬುರುಡೆಗೆ ಗಾಯಗಳಾಗಿವೆ. ಕಳೆದ ತಿಂಗಳು ಡಮಾಸ್ಕಸ್ ಉಪನಗರ ಪೂರ್ವ ಗೌಟಾದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ತಾಯಿ ಸಾವಿಗೀಡಾಗಿದ್ದು ಮಗು ಕಣ್ಣನ್ನು ಕಳೆದುಕೊಂಡಿದೆ…

  December 21, 2017
  ...
  ಫೋಕಸ್

  ಮಾನವೀಯತೆ ಮರೆತ ಸರಕಾರ; 73 ವಸಂತಗಳ ನಂತರ ಪ್ರತ್ಯೇಕಗೊಂಡ ಅಪೂರ್ವ ದಂಪತಿ

  ಅವರಿಬ್ಬರು ಅಪರೂಪದ ಅಮರ ಪ್ರೇಮಿಗಳು. ಕಳೆದ 73 ವರ್ಷಗಳಿಂದ ಮದುವೆಯಾಗಿ ಜತೆಯಾಗಿದ್ದರು. ಗಂಡ 91 ವರ್ಷದ ಹರ್ಬರ್ಟ್ ಗುಡೈನ್ ಮತ್ತು 89 ವರ್ಷ ಅವರ ಪತ್ನಿ ಅಡ್ರೆ ಗುಡೈನ್ ದೀರ್ಘ ಕಾಲದಿಂದ ಕೆನಡಾದ ಪಾಲನಾ ಕೇಂದ್ರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಅವರೀಗ ತಮ್ಮ 73 ವರ್ಷಗಳ ಸುದೀರ್ಘ ದಾಂಪತ್ಯ ಜೀವನದ ನಂತರ ಪ್ರತ್ಯೇಕಗೊಳ್ಳುತ್ತಿದ್ದಾರೆ. ಅವರನ್ನು ಹೀಗೆ ಪ್ರತ್ಯೇಕಗೊಳಿಸುತ್ತಿರುವುದು ಬೇರೆ ಯಾರೂ ಅಲ್ಲ; ಕೆನಡಾದ ಸರಕಾರ. 73 ವರ್ಷಗಳ ನಂತರ ಬೇರೆ ಬೇರೆಯಾಗುತ್ತಿದ್ದೇವೆ ಎಂಬುದನ್ನು ಈ ಜೋಡಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ…

  December 20, 2017
  ...
  ಫೋಕಸ್

  ಕರಿ ಕೋಟಿಗೆ ಕಾರುಣ್ಯ ತುಂಬಿದ ಕಪಿಲಾ ಹಿಂಗೊರಾನಿ: ದೇಶ ಕಂಡ ಅಪರೂಪದ ವಕೀಲೆಯ ಪರಿಚಯ

  ಪುಷ್ಪಾ ಕಪಿಲಾ ಹಿಂಗೊರಾನಿ… ದೇಶ ಕಂಡ ಅಪರೂಪದ ವಕೀಲೆ. ಅವರ ಭಾವಚಿತ್ರವೊಂದನ್ನು ಸುಪ್ರಿಂ ಕೋರ್ಟ್‌ನ ಗ್ರಂಥಾಲಯದಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು. ಇದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ವಕೀಲೆಯೊಬ್ಬರಿಗೆ ಸಿಕ್ಕಿರುವ ಅಪರೂಪದ ಹಾಗೂ ಅನನ್ಯ ಗೌರವ. ಇಷ್ಟಕ್ಕೂ ಹಿಂಗೊರಾನಿ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (Mother of Public Interest Litigation)ಗಳ ತಾಯಿ ಎಂದೇ ಕರೆಯಲ್ಪಡುವ ಪುಷ್ಪಾ ಕಪಿಲಾ ಹಿಂಗೊರಾನಿ ನೊಂದ ಕೈದಿಗಳ ಕಣ್ಣೀರೊರೆಸಿದ ಮಹಾತಾಯಿ. ವಕೀಲೆಯಾಗಿ ಸುಮಾರು 50 ವರ್ಷಗಳ..

  December 6, 2017
  ...
  ಫೋಕಸ್

  ‘ಬೌದ್ಧ ದೇಶದ ಅಲ್ಪಸಂಖ್ಯಾತರು’: ರೋಹಿಂಗ್ಯಾ ಮುಸ್ಲಿಂರು, ಧರ್ಮ ಮತ್ತು ಮಿತಿ ಮೀರಿದ ದಾಳಿಗಳು…

  1920-40ರಲ್ಲಿ ದೇಶಗಳ ನಡುವೆ ಯುದ್ಧಗಳು ನಡೆದು ಮಹಾಸಮರಗಳು ನಡೆದು ಹೋಗಿದ್ದವು. ಆದರೆ ಇವತ್ತು ದೇಶಗಳ ಗಡಿಯನ್ನು ಮೀರಿ ಮನುಷ್ಯನ ನಡುವೆ ನಡೆಯುತ್ತಿರುವ ಯುದ್ಧಗಳು ಧಾರ್ಮಿಕ ನೆಲೆಗೆ ಅಪ್ಪಿಕೊಳ್ಳುತ್ತಿವೆ. ಸದ್ಯ ವಿಶ್ವದಲ್ಲಿ ನಡೆಯುತ್ತಿರುವುದು ಜನಾಂಗಗಳ ನಡುವಿನ ಯುದ್ಧ. ಅದು ಹಿಂದೂ ವರ್ಸಸ್ ಮುಸ್ಲಿಂ ಇರಬಹುದು, ಮುಸ್ಲಿಂ ವರ್ಸಸ್ ಕ್ರಿಶ್ಚಿಯನ್ ಇರಬಹುದು ಅಥವಾ ನಮ್ಮದೇ ಪಕ್ಕದ ದೇಶ ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಬೌದ್ಧಿಸ್ಟ್ ವರ್ಸಸ್ ರೊಹಿಂಗ್ಯಾ ಇರಬಹುದು. ನಿಲ್ಲದ ರೊಹಿಂಗ್ಯಾ ಮುಸ್ಲಿಮರ ಮೇಲಿನ ದಾಳಿ… ಮಯನ್ಮಾರ್ ಭೇಟಿ ವೇಳೆ ರೋಹಿಂಗ್ಯಾ ವಿಷಯ ಪ್ರಸ್ತಾಪಿಸಲಿರುವ..

  September 4, 2017
  ...
  ಫೋಕಸ್

  70ರ ದಶಕದಲ್ಲಿ ‘ಬಿಗ್ ಬಿ’ಯನ್ನು ಸರಿಗಟ್ಟುವ ತಾಕತ್ತಿದ್ದ ಏಕೈಕ ನಟ ವಿನೋದ್ ಖನ್ನಾ…

  ಮಧು ಚಂದ್ರಪ್ಪ ಅದು 70ರ ದಶಕ. ಹಿಂದಿ ಸಿನೆಮಾ ರಂಗದಲ್ಲಿ ಭರವಸೆ ಮೂಡಿದ್ದ ಇಬ್ಬರು ನಟರ ಪೈಕಿ ಒಬ್ಬರು ಅಮಿತಾಬ್ ಬಚ್ಚನ್; ಇನ್ನೊಬ್ಬರು ವಿನೋದ್ ಖನ್ನಾ. ಅವತ್ತಿಗೆ ಅಮಿತಾಬ್‌ ಅವರಿಗೆ ವೃತ್ತಿರಂಗದಲ್ಲಿ ಪೈಪೋಟಿ ನೀಡುವ ಸಾಧ್ಯತೆ ಇದ್ದ ಏಕೈಕ ನಟ ಖನ್ನಾ. ಗಡಸು ದನಿ, ಸುಂದರ ದೇಹ ಸೌಂದರ್ಯ, ನಟನೆಯ ಕೌಶಲ್ಯ ಹೀಗೆ ಒಬ್ಬ ಯಶಸ್ವಿ ನಟನಾಗಲು ಏನೇನು ಬೇಕಿದ್ದವೋ ಎಲ್ಲವೂ ವಿನೋದ್‌ ಖನ್ನಾ ಅವರಿಗಿತ್ತು. ಜನ ಅವರನ್ನು ಮೆಚ್ಚಿಕೊಂಡಿದ್ದರು; ಅದಕ್ಕಿಂತ ಹೆಚ್ಚಾಗಿ ನಿರ್ಮಾಪಕರು ಅವರನ್ನು ಇಷ್ಟ ಪಡುತ್ತಿದ್ದರು…

  April 27, 2017

FOOT PRINT

Top